Saturday, June 28, 2025

Sankastahara Ganapati (ಸಂಕಷ್ಟಹರ ಗಣಪತಿ)

Bhaktigeete

Singer: Dr. Rajkumar

Song link: Click Here


Sankastahara ganapati, needuva baalina pragati,

Sankastahara ganapati, galiside ganapana preeti,

Jeevanadali sukha shanti..!

Sankastahara ganapati, needuva baalina pragati,

Sankastahara ganapati -ganapati ||

Jai ganesha jai ganesha..jai ganeasha jai ganesha!


Shravana krishnada nalkane divasa, aarambisi maadalu upavaasa,

Ee vrata maadalu prati maasa, taruvudu benakage balu santosha,

Sankastahara ganapati -ganapati ||

Gananatha jai jai gananatha, gananatha jai jai gananatha!


Bedida varagala kai needi koduvanu, ganapanu krupe maadi,

Ella sankastavu ododi, baruvudu sukhavu kaigudi,

Sankastahara ganapati -ganapati ||

Jai ganesha jai ganesha..jai ganeasha jai ganesha!


Jeevanavella nagu nagutiralu aasegaella puraisiralu,

Benakana raksheye bengavalu aa..aa..aaaa,

Benakana raksheye bengavalu, benakane harasali yaavagalu ||


ಭಕ್ತಿಗೀತೆ 


ಸಂಕಷ್ಟಹರ ಗಣಪತಿ, ನೀಡುವ ಬಾಳಿನ ಪ್ರಗತಿ,

ಸಂಕಷ್ಟಹರ ಗಣಪತಿ, ಗಳಿಸಿದೆ ಗಣಪನ ಪ್ರೀತಿ,

ಜೀವನದಲಿ ಸುಖ ಶಾಂತಿ .. !

ಸಂಕಷ್ಟಹರ ಗಣಪತಿ, ನೀಡುವ ಬಾಳಿನ ಪ್ರಗತಿ,

ಸಂಕಷ್ಟಹರ ಗಣಪತಿ, - ಗಣಪತಿ ।।ಪ।।

ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ !


ಶ್ರಾವಣ ಕೃಷ್ಣದ ನಾಲ್ಕನೆ ದಿವಸ, ಆರಂಭಿಸಿ ಮಾಡಲು ಉಪವಾಸ,

ಈ ವ್ರತ ಮಾಡಲು ಪ್ರತಿ ಮಾಸ, ತರುವುದು ಬೆನಕಗೆ ಬಲು ಸಂತೋಷ,

ಸಂಕಷ್ಟಹರ ಗಣಪತಿ, - ಗಣಪತಿ ।।

ಗಣನಾಥ ಜೈ ಜೈ ಗಣನಾಥ, ಗಣನಾಥ ಜೈ ಜೈ ಗಣನಾಥ!


ಬೇಡಿದ ವರಗಳ ಕೈ ನೀಡಿ ಕೊಡುವನು, ಗಣಪನು ಕೃಪೆ ಮಾಡಿ,

ಎಲ್ಲ ಸಂಕಷ್ಟವು ಓಡೋಡಿ, ಬರುವುದು ಸುಖವು ಕೈಗೂಡಿ,

ಸಂಕಷ್ಟಹರ ಗಣಪತಿ, - ಗಣಪತಿ ।।

ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ !


ಜೀವನವೆಲ್ಲ ನಗು ನಗುತಿರಲು, ಆಸೆಗಳೆಲ್ಲ ಪೂರೈಸಿರಲು,

ಬೆನಕನ ರಕ್ಷೆಯೆ ಬೆಂಗಾವಲು ಆ .. ಆ ಆ .. ಆ ಆ ಆ ಆ,

ಬೆನಕನ ರಕ್ಷೆಯೆ ಬೆಂಗಾವಲು, ಬೆನಕನೆ ಹರಸಲಿ 

ಯಾವಾಗಲೂ ।।

                                 

Mamateya Totada Malligeye (ಮಮತೆಯ ತೋಟದ ಮಲ್ಲಿಗೆಯೇ)

Movie: Chaduranga (1968)

Singers: S Janaki, P Susheela

Song link: Click Here


Mamateya totada malligeye, maruguve etake nee nudiye,

Devara hoovvidu baadihudu, poojege hosa hoo bekihudu ||


Veene halatu aadarenu, hommuva naada halatenu,

Tanti kadida veeneyolage, manjula naada bahudeno ||


Mellane gaali beesidarenu, teluva nouke muluguvude,

Saavira harake hottarenu, mulugida nouke teluvude ||


Devanu olidu nelasalu banda, mandiravallave ne munna,

Aa devana gudiya mangala belake, aaralu bidenu naninna ||


ಚಿತ್ರಗೀತೆ 


ಮಮತೆಯ ತೋಟದ ಮಲ್ಲಿಗೆಯೇ, ಮರುಗುವೆ ಏತಕೆ ನೀ ನುಡಿಯೇ,

ದೇವರ ಹೂವ್ವಿದು ಬಾಡಿಹುದು, ಪೂಜೆಗೆ ಹೊಸ ಹೂ ಬೇಕಿಹುದು 

।।ಪ।।


ವೀಣೆ ಹಳತು ಆದರೇನು, ಹೊಮ್ಮುವ ನಾದ ಹಳತೇನು,

ತಂತಿ ಕಡಿದಾ ವೀಣೆಯೊಳಗೆ, ಮಂಜುಳ ನಾದಾ ಬಹುದೇನೊ ।।೧।।


ಮೆಲ್ಲನೆ ಗಾಳಿ ಬೀಸಿದರೇನು, ತೇಲುವ ನೌಕೆ ಮುಳುಗುವುದೇ,

ಸಾವಿರ ಹರಕೆ ಹೊತ್ತರೆನೂ, ಮುಳುಗಿದ ನೌಕೆ ತೇಲುವುದೇ ।।೨।।


ದೇವನು ಒಲಿದು ನೆಲಸಲು ಬಂದಾ, ಮಂದಿರವಲ್ಲವೇ ನೀ ಮುನ್ನಾ,

ಆ ದೇವನ ಗುಡಿಯಾ ಮಂಗಳ ಬೆಳಕೆ, ಆರಲು ಬಿಡೆನು ನಾನಿನ್ನಾ 

।।೨।।

                                             

Oduveya Haaduveya (ಓಡುವೆಯಾ ಹಾಡುವೆಯಾ)

Movie: Rangmahal Rahasya (1970)

Singer: P Susheela

Song link: Click Here


Oduveya haaduveya, jothegaagi noduveya,

Nanagaagi kaadiheya ||


Nillu nillu tangali beesadiru,

Onti henna nee heege kaadadiru,

Seregeleve aa..aa, muddisuve aa..aa,

Nanagaase tandiruve....ammo!

Maiyella bisiyaagide, hosadeno bekendide ||


Hakkiyante haarado manasaagide,

Nakku nakku kunidaade sukhavagide,

Malaguveno aa..aa, uruluveno aa..aa,

Nanagella haayagide, ha..!

Indeke heegagide, mai arali hoovagide ||


ಚಿತ್ರಗೀತೆ 


ಓಡುವೆಯಾ ಹಾಡುವೆಯಾ, ಜೊತೆಗಾಗಿ ನೋಡುವೆಯಾ,

ನನಗಾಗಿ ಕಾದಿಹೆಯಾ ।।ಪ।।


ನಿಲ್ಲು ನಿಲ್ಲು ತಂಗಾಳಿ ಬೀಸದಿರು,

ಒಂಟಿ ಹೆಣ್ಣ ನೀ ಹೀಗೆ ಕಾಡದಿರು,

ಸೆರಗೆಳೆವೆ ಆ ಆ, ಮುದ್ದಿಸುವೆ ಆ ಆ,

ನನಗಾಸೆ ತಂದಿರುವೆ .... ಅಮ್ಮೋ !

ಮೈಯೆಲ್ಲಾ ಬಿಸಿಯಾಗಿದೆ, ಹೊಸದೇನೂ ಬೇಕೆಂದಿದೆ ।।೧।।


ಹಕ್ಕಿಯಂತೆ ಹಾರಾಡೊ ಮನಸಾಗಿದೆ,

ನಕ್ಕು ನಕ್ಕು ಕುಣಿದಾಡೆ ಸುಖವಾಗಿದೆ,

ಮಲಗುವೆನೋ ಆ ಆ, ಉರುಳುವೆನೋ ಆ ಆ,

ನನಗೆಲ್ಲ ಹಾಯಾಗಿದೆ ... ಹಾ !

ಇಂದೇಕೆ ಹೀಗಾಗಿದೆ, ಮೈ ಅರಳಿ ಹೂವಾಗಿದೆ ।।೨।।

                               

Ee Kanne Kangalu (ಈ ಕನ್ನೆ ಕಂಗಳು)

Movie: Rangmahal Rahasya (1970)

Singer: L R Eshwari

Song link: Click Here


Ee kanne kangalu, ee tunta tutigalu,

Ida koodi, nee mane maadi, aa saggake mettalu ||


Rasada hoove maja, rasika maatu nija,

Arasi ta banda moja, nee ramisi haayagi raja,

Odi ba sangake, noduve sukha-sakha ||


Madhuvu taa mundide, mudake ee hennide,

Manake aananda honde, nina bayake puraisalende,

Prema sopanake, kugide nade-nade ||


ಚಿತ್ರಗೀತೆ 


ಈ ಕನ್ನೆ ಕಂಗಳು, ಈ ತುಂಟ ತುಟಿಗಳು,

ಇದ ಕೂಡಿ, ನೀ ಮನ ಮಾಡಿ, ಆ ಸಗ್ಗಕೆ ಮೆಟ್ಟಲು ।।ಪ।।


ರಸದಾ ಹೂವೇ ಮಜ, ರಸಿಕ ಮಾತು ನಿಜ,

ಅರಸಿ ತಾ ಬಂದ ಮೋಜ, ನೀ ರಮಿಸಿ ಹಾಯಾಗಿ ರಾಜ,

ಓಡಿ ಬಾ ಸಂಗಕೆ, ನೋಡುವೆ ಸುಖಾ-ಸಖಾ ।।೧।।


ಮಧುವು ತಾ ಮುಂದಿದೆ, ಮುದಕೆ ಈ ಹೆಣ್ಣಿದೆ,

ಮನಕೆ ಆನಂದ ಹೊಂದೆ, ನಿನ ಬಯಕೆ ಪೂರೈಸಲೆಂದೆ,

ಪ್ರೇಮ ಸೋಪಾನಕೆ, ಕೂಗಿದೆ ನಡೆ-ನಡೆ ।।೨।।

                                   

Wednesday, June 25, 2025

Alle Enu Illa (ಅಲ್ಲೇ ಏನೂ ಇಲ್ಲ)

Movie: Rangamahal Rahasya (1970)

Singers: S Janaki, L R Eshwari

Song link: Click Here


Sheela: Eaay alle enu illa,

Kamala: Aha elle iruvudella,

Sheela: Hoi ello hogi huduki,

Kamala: Aayasa paduve eko manke,

Both: Nodo toruve hoovonda, ha baaro needuve muttonda ||


Sheela: Ee heninalli aaseye tumbide,

Kamala: Ne helu ninna manasali enide? hai hai,

Sheela: Ninagende nanna sogasu,

Kamala: Balu chenda intha vayasu,

Both: Ba bega seri naliyona, aa aa..||


Kamala: Ee kanninalli helu nee enide?

Sheela: Ee maiya mutti nodu nee hegide?

Kamala: Kaiyinda nanna balasu,

Sheela: tutiyase bega salisu,

Both: Haayagi kaala kaleyona, aa aa..||


ಚಿತ್ರಗೀತೆ 


ಶೀಲಾ : ಏಯ್ ಅಲ್ಲೇ ಏನೂ ಇಲ್ಲ,

ಕಮಲ : ಆಹಾ ಇಲ್ಲೇ ಇರುವುದೆಲ್ಲ,

ಶೀಲಾ :  ಹೋಯ್ ಎಲ್ಲೋ ಹೋಗಿ ಹುಡುಕಿ,

ಕಮಲ :ಆಯಾಸ ಪಡುವೆ ಏಕೋ ಮಂಕೆ,

ಇಬ್ಬರೂ : ನೋಡೋ ತೋರುವೆ ಹೂವೊಂದ 

                  ಬಾರೋ ನೀಡುವೆ ಮುತ್ತೊಂದ !


ಶೀಲಾ : ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ,

ಕಮಲ : ನೀ ಹೇಳು ನಿನ್ನ ಮನಸಲಿ ಏನಿದೆ ? ಹಾಯ್ ಹಾಯ್ 

ಶೀಲಾ :  ನಿನಗೆಂದೆ ನನ್ನ ಸೊಗಸು,

ಕಮಲ : ಬಲು ಚೆಂದ ಇಂಥ ವಯಸು,

ಇಬ್ಬರೂ : ಬಾ ಬೇಗ ಸೇರಿ ನಲಿಯೋಣ ಆ ಆ ಆ ಆ !


ಶೀಲಾ : ಈ ಕಣ್ಣಿನಲ್ಲಿ ಹೇಳು ನೀ ಏನಿದೆ ?

ಕಮಲ : ಈ ಮೈಯ್ಯ ಮುಟ್ಟಿ ನೋಡು ನೀ ಹೇಗಿದೆ ?

ಶೀಲಾ :  ಕೈಯಿಂದ ನನ್ನ ಬಳಸು,

ಕಮಲ : ತುಟಿಯಾಸೆ ಬೇಗ ಸಲಿಸು,

ಇಬ್ಬರೂ : ಹಾಯಾಗಿ ಕಾಲ ಕಳೆಯೋಣ ಆ ಆ ಆ ಆ !

                                 

Kalli Haage Nota (ಕಳ್ಳೀ ಹಾಗೆ ನೋಟ)

Movie: Ranagamahal Rahasya (1970)

Singer: SPB

Song link: Click Here


Kalli haage nota, malli haage aata,

Ee kannge eno kaata, ninn ee mai maata ||


Ninagaagi ododi na bandene, olavinda kirukaanike tandene,

Nee bali bandare ille na koduvene, onde ondu saari,

Baare moha tori, hai hai hai hai hai,

Neenage nudive aaga, bhale brahmachari ||


Arerere.. vayassada gandemba chinte bidu, mai hannage ruchi tumba nenapallidu,

Ee muniseke baa ninna manassalidu, nota ninnallittu, ninna doora bittu,

Mai hege nadugideyamma, nee nodu baa muttu ||


ಚಿತ್ರಗೀತೆ 


ಕಳ್ಳೀ ಹಾಗೆ ನೋಟ, ಮಳ್ಳೀ ಹಾಗೆ ಆಟ,

ಈ ಕಣ್ಣ್ ಗೆ ಏನೋ ಕಾಟ, ನಿನ್ನೀ ಮೈ ಮಾಟ ।।ಪ।।


ನಿನಗಾಗಿ ಓಡೋಡಿ ನಾ ಬಂದೆನೆ, ಒಲವಿಂದ ಕಿರುಕಾಣಿಕೆ ತಂದೆನೆ,

ನೀ ಬಳಿ ಬಂದರೆ ಇಲ್ಲೇ ನಾ ಕೊಡುವೆನೆ, ಒಂದೇ ಒಂದು ಸಾರಿ,

ಬಾರೇ ಮೋಹ ತೋರಿ, ಹಾಯ್ ಹಾಯ್ ಹಾಯ್ ಹಾಯ್  ಹಾಯ್,

ನೀನಾಗೆ ನುಡಿವೆ ಆಗ, ಭಲೇ ಬ್ರಹ್ಮಚಾರಿ ।।೧।।


ಅರೆರೆರೆರೆ ವಯಸ್ಸಾದ ಗಂಡೆ೦ಬ ಚಿಂತೆ ಬಿಡು, ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು, 

ಈ ಮುನಿಸೇಕೆ ಬಾ ನಿನ್ನ ಮನಸ್ಸಲಿಡು, ನೋಟಾ ನಿನ್ನಲ್ಲಿಟ್ಟು, ನಿನ್ನಾ ದೂರ ಬಿಟ್ಟು,

ಮೈ ಹೇಗೆ ನಡುಗಿದೆಯಮ್ಮಾ, ನೀ ನೋಡು ಬಾ ಮುಟ್ಟು  ।।೨।।

                               

Olavina Taruniya (ಒಲವಿನ ತರುಣಿಯ)

Movie: Rangamahal Rahasya (1970)

Singer: S Janaki

Song link: Click Here


Olavina taruniya, manavi nee keleya,

Sudheya bedembeya, i love you, i love you ||


Minchondu lateyaagi hoo needide, adaranda makaranda ninagaagide,

O priyatama, madhu sambrama, sarasa bedembeya,

I love you, i love you ||


Aananda nandanada hoo baana, ede taake jhallemba hita kampana,

Hosa youvana rasa jeevana milana bedembeya,

I love you, i love you ||


ಚಿತ್ರಗೀತೆ 


ಒಲವಿನ ತರುಣಿಯ, ಮನವ ನೀ ಕೇಳೆಯ,

ಸುಧೆಯ ಬೇಡೆ೦ಬೆಯಾ, ಐ ಲವ್ ಯು,  ಐ ಲವ್ ಯು ।।ಪ।।


ಮಿಂಚೊ೦ದು ಲತೆಯಾಗಿ ಹೂ ನೀಡಿದೆ, ಅದರಂದ ಮಕರಂದ ನಿನಗಾಗಿದೆ,

ಓ ಪ್ರಿಯತಮಾ, ಮಧು ಸಂಭ್ರಮಾ, ಸರಸ ಬೇಡೆ೦ಬೆಯಾ,

ಐ ಲವ್ ಯು,  ಐ ಲವ್ ಯು ।।೧।।


ಆನಂದ ನಂದನದ ಹೂ ಬಾಣ, ಎದೆ ತಾಕೆ ಝಲ್ಲೆಂಬ ಹಿತ ಕಂಪನ,

ಹೊಸ ಯೌವ್ವನ ರಸ ಜೀವನ, ಮಿಲನ ಬೇಡೆ೦ಬೆಯಾ,

 ಐ ಲವ್ ಯು,  ಐ ಲವ್ ಯು ।।೨।।