Wednesday, April 8, 2026

Priyatama Karuneya Toreya (ಪ್ರಿಯತಮಾ ಕರುಣೆಯಾ ತೋರೆಯಾ)

Movie: Kaviratna Kalidasa (1983)

Singers: Dr. Rajkumar, Vani Jairam

Song link: Click Here


O..O.., priyatama.., 

Priyatama, Karuneya toreya..(3),

Sanihake baareya, teerisi bayakeya..,

Jeevava uliseya.., priyatama.., o..o.. priyatama..!


Hagalalee irulalee, kanasalee manasalee,

Balalide, becchide, nenapina suliyali,

Bevaruta chaliyali, bevaruta bhayadali,

Virahada uriyalee, bendenu..novali,

Yarige helali, enanu maadali,

Priyatama o..o.. priyatama..!


O ..o Priyatame! Karuneya toreya..(3),

Sanihake baareya, teerisi bayakeya..,

Jeevava uliseya.., priyatame.., o..o.. priyatame..!


Nodida kshanadale, ninte nee kannali,

Aaseya hoogala, chellide manadali,

Hrudayada veeneya, tantiya, meetuta,

Virahada geeteya, haadide kiviyali,

Nannade talamala, yaarige helali, 

Priyatame, o..o.. priyatame..!


ಚಿತ್ರಗೀತೆ 


ಓ ..ಓ ..! ಪ್ರಿಯತಮಾ ..,ಪ್ರಿಯತಮಾ,

ಕರುಣೆಯಾ ತೋರೆಯಾ ..(೩),

ಸನಿಹಕೆ ಬಾರೆಯಾ, ತೀರಿಸೀ ಬಯಕೆಯಾ ..,

ಜೀವವಾ ಉಳಿಸೆಯಾ .., ಪ್ರಿಯತಮಾ .., ಓ ..ಓ ..! ಪ್ರಿಯತಮಾ 

।।ಪ।।


ಹಗಲಲೀ ಇರುಳಲೀ, ಕನಸಲೀ ಮನಸಲೀ,

ಬಳಲಿದೆ, ಬೆಚ್ಚಿದೇ, ನೆನಪಿನ ಸುಳಿಯಲಿ,

ಬೆವರುತ ಛಳಿಯಲಿ, ಬೆವರುತ ಭಯದಲಿ,

ವಿರಹದಾ ..ಉರಿಯಲೀ, ಬೆಂದೆನೂ .., ನೋವಲಿ,

ಯಾರಿಗೆ ಹೇಳಲಿ, ಏನನು ಮಾಡಲಿ,

ಓ ..ಓ .., ಪ್ರಿಯತಮಾ !


ಓ ..ಓ .., ಪ್ರಿಯತಮೆ, ಕರುಣೆಯಾ ತೋರೆಯಾ ..(೩),

ಸನಿಹಕೆ ಬಾರೆಯಾ, ತೀರಿಸೀ ಬಯಕೆಯಾ ..,

ಜೀವವಾ ಉಳಿಸೆಯಾ .., ಪ್ರಿಯತಮೆ  .., ಓ ..ಓ ..! ಪ್ರಿಯತಮೆ ! 


ನೋಡಿದಾ ಕ್ಷಣದಲೇ, ನಿಂತೆ ನೀ ಕಣ್ಣಲಿ,

ಆಸೆಯ ಹೂಗಳ, ಚೆಲ್ಲಿದೆ ಮನದಲಿ,

ಹೃದಯದ, ವೀಣೆಯ, ತಂತಿಯ, ಮೀಟುತ,

ವಿರಹದಾ ಗೀತೆಯಾ, ಹಾಡಿದೆ ಕಿವಿಯಲಿ,

ನನ್ನೆದೆ ತಳಮಳ, ಯಾರಿಗೆ ಹೇಳಲಿ, 

ಪ್ರಿಯತಮೆ.., ಓ ..ಓ .., ಪ್ರಿಯತಮೆ !

O Nallane Savimatonda (ಓ ನಲ್ಲನೆ ಸವಿಮಾತೊಂದ)

Movie: Sahodarana Sawal (1977)

Singers: SPB, P Susheela

Song link: Click Here


O nallane savimatonda nudiveya..!

Nanenanu nudiyali nalle tiliseya..!

Na ninna bidenu endigu.., nee nanna jeeva endigu ||


Haalujenu kaletante, manasu manasu kaletaytu,

Badukalli harusha tumbitu,

Nadigaleradu beretante, hrudayaveradu beretaytu,

Nee bandu baalu belagitu,

Navendendu heegondagi, iruvase tanditu ||


Prema jyothi belagutire, irula nungi beleyutire,

Baalige tantu harushava,

Aaradante jyothiyanu, kavalirisi kangalanu,

Balanne dhare ereyuva,

Navendendu, heegondagi aananda honduva ||


O aragini savi maatonda nudiveya,

Na ninna bidenu endigu !


ಚಿತ್ರಗೀತೆ 


ಓ ನಲ್ಲನೆ ಸವಿಮಾತೊಂದ ನುಡಿವೆಯಾ ..!

ನಾನೇನನು ನುಡಿಯಲಿ ನಲ್ಲೆ ತಿಳಿಸೆಯಾ ..!

ನಾ ನಿನ್ನ ಬಿಡೆನೂ ಎಂದಿಗೂ .., ನೀ ನನ್ನ ಜೀವಾ ಎಂದಿಗೂ

 ।।ಪ।।


ಹಾಲುಜೇನು ಕಲೆತಂತೆ, ಮನಸು ಮನಸು ಕಲೆತಾಯ್ತು,

ಬದುಕಲ್ಲಿ ಹರುಷಾ ತುಂಬಿತು,

ನದಿಗಳೆರಡು ಬೆರೆತಂತೆ, ಹೃದಯವೆರಡು ಬೆರೆತಾಯ್ತು,

ನೀ ಬಂದು ಬಾಳು ಬೆಳಗಿತೂ,

ನವೆಂದೆಂದು ಹೀಗೊಂದಾಗಿ, ಇರುವಾಸೆ ತಂದಿತೂ ।।೧।।


ಪ್ರೇಮ ಜ್ಯೋತಿ ಬೆಳಗುತಿರೆ, ಇರುಳ ನುಂಗಿ ಬೆಳೆಯುತಿರೆ,

ಬಾಳಿಗೆ ತಂತೂ ಹರುಷವಾ,

ಆರದಂತೆ ಜ್ಯೋತಿಯನು, ಕಾವಲಿರಿಸಿ ಕಂಗಳನು,

ಬಾಳನ್ನೇ ಧಾರೆ ಎರೆಯುವಾ,

 ನವೆಂದೆಂದು ಹೀಗೊಂದಾಗಿ, ಆನಂದಾ ಹೊಂದುವಾ ।।೨।।


ಓ ಅರಗಿಣಿ ಸವಿ ಮಾತೊಂದ ನುಡಿವೆಯಾ,

ನಾ ನಿನ್ನ ಬಿಡೆನೂ ಎಂದಿಗೂ !

O Premada Poojari (ಓ ಪ್ರೇಮದ ಪೂಜಾರಿ)

Movie: Nagapooja (1965)

Singer: L R Eshwari

Song link: Click Here


O.., premada poojari,

Baa enna manasina sanchari,

Bandiralu andadali nindiha singari,

O.. premada pojaari ||


Aadisuva, oladisuva, moodisi kampana angadali,

Ore nota, aade aata, premalokada rangadali,

Nanna prana, neene jaana, haado hoo baana,

O..o premada poojari ||


O cheluva, nee bidu chalava,

Samukha sundari nintiralu,

Eke virasa, aadu sarasa, roopa rashiyu kandiralu,

Moha pasha, tore asha, kaanu santosha,

O..o premada poojari ||


ಚಿತ್ರಗೀತೆ 


ಓ.., ಪ್ರೇಮದ ಪೂಜಾರಿ,

ಬಾ ಎನ್ನ ಮನಸಿನ ಸಂಚಾರಿ,

ಬಂದಿರಲು ಅಂದದಲಿ ನಿಂದಿಹ ಸಿಂಗಾರಿ,

ಓ ಓ ಪ್ರೇಮದ ಪೂಜಾರಿ ।।ಪ।।


ಆಡಿಸುವಾ, ಓಲಾಡಿಸುವಾ, ಮೂಡಿಸಿ ಕಂಪನ ಅಂಗದಲಿ,

ಒರೆ ನೋಟ, ಆಡೆ ಆಟ, ಪ್ರೇಮಲೋಕದ ರಂಗದಲಿ,

ನನ್ನ ಪ್ರಾಣ, ನೀನೇ ಜಾಣ, ಹಾಡೋ ಹೂ ಬಾಣ,

ಓ ಓ ಪ್ರೇಮದ ಪೂಜಾರಿ ।।೧।।


ಓ ಚೆಲುವಾ, ನೀ ಬಿಡು ಛಲವಾ,

ಸಂಮುಖ ಸುಂದರಿ ನಿಂತಿರಲು,

ಏಕೆ ವಿರಸ, ಆಡು ಸರಸ, ರೂಪ ರಾಶಿಯು ಕಂಡಿರಲು,

ಮೋಹ ಪಾಶ, ತೋರೆ ಆಶಾ, ಕಾಣು ಸಂತೋಷ,

ಓ ಓ ಪ್ರೇಮದ ಪೂಜಾರಿ ।।೨।।

Saturday, April 4, 2026

Gandhada Bhuviyidu Kannada Naadu (ಗಂಧದ ಭುವಿಯಿದು ಕನ್ನಡ ನಾಡು)

Nadageete

Sahitya: Manasa

Song link: Click Here


Gandhada bhuviyidu kannada naadu,

Kavikogilegala sirinudi haadu,

Jnanapeethadali modalane saalu,

Bharatamaateya koralali nodu ||


Illi viraajipa nadivana kaanana,

Bharatamatege udyana,

Hariyuva nadigalu miruguva girigalu,

Vasudheya nosalige sopana ||


Kanaka purandara allama basavaru,

Kannada samskruti rakshakaru,

Nadoja pampa ranna ponnaru,

Vishwamanya kavipungavaru ||


Shanti sahanegidu modalane hesaru,

Hakka bukkaraalida karunaadu,

Muttu ratunagala aledu maarida,

Krishnadevarayana sirinaadu ||


ನಾಡಗೀತೆ 


ಗಂಧದ ಭುವಿಯಿದು ಕನ್ನಡ ನಾಡು,

ಕವಿಕೋಗಿಲೆಗಳ ಸಿರಿನುಡಿ ಹಾಡು,

ಜ್ಞಾನಪೀಠದಲಿ ಮೊದಲನೆ ಸಾಲು,

ಭಾರತ ಮಾತೆಯ ಕೊರಳಲಿ ನೋಡು ।।ಪ।।


ಇಲ್ಲಿ ವಿರಾಜಿಪ ನದಿವನ ಕಾನನ,

ಭಾರತ ಮಾತೆಗೆ ಉದ್ಯಾನ,

ಹರಿಯುವ ನದಿಗಳು ಮಿರುಗುವ ಗಿರಿಗಳು,

ವಸುಧೆಯ ನೊಸಲಿಗೆ ಸೋಪಾನ ।।೧।।


ಕನಕ ಪುರಂದರ ಅಲ್ಲಮ ಬಸವರು,

ಕನ್ನಡ ಸಂಸ್ಕೃತಿ ರಕ್ಷಕರು,

ನಾಡೋಜ ಪಂಪ ರನ್ನ ಪೊನ್ನರು,

ವಿಶ್ವ ಮಾನ್ಯ ಕವಿಪುಂಗವರು ।।೨।।


ಶಾಂತಿ ಸಹನೆಗಿದು ಮೊದಲನೆ ಹೆಸರು,

ಹಕ್ಕಬುಕ್ಕರಾಳಿದ ಕರುನಾಡು,

ಮುತ್ತು ರತುನಗಳ ಅಳೆದು ಮಾರಿದ,

ಕೃಷ್ಣದೇವರಾಯನ ಸಿರಿನಾಡು ।।೩।।

Jagadeesha Sarvesha (ಜಗದೀಶ ಸರ್ವೇಶ)

Movie: Baduku Bangaravayitu(1976)

Singer: S Janaki

Song link: Click Here


Jagadeesha sarvesha mallesha gowreesha, 

Nuraaru hesaru shivaneege,

Nuraaru hesaru nanjundeshwaraneege,

Iruvanu nenedora manadaage ||


Mogalli kulitavne hoovalli nagutaane,

Mayavi haayagi malagavne, 

Mayavi haayagi malagavne madeva,

Manasittu kugalu barutane ||


Giliyalli hasiraagi, navilalli kannagi,

Kogile daniya impaagi,

Kogile daniya impaagi kelora,

Kelora manasige tandaane aananda ||


Kalalli, mullalli gaalili neeralli, 

Ellellu namma shivanuntu,

Ellellu namma shivanuntu jagadalli

Sharanarige kaano kannuntu ||


ಚಿತ್ರಗೀತೆ 


ಜಗದೀಶ ಸರ್ವೇಶ ಮಲ್ಲೇಶ ಗೌರೀಶ,

ನೂರಾರು ಹೆಸರು ಶಿವನಿಗೆ,

ನೂರಾರು ಹೆಸರು ನಂಜುಂಡೇಶ್ವರನೀಗೆ,

ಇರುವನು ನೆನೆದೋರ ಮನದಾಗೆ ।।ಪ।।


ಮೊಗಲ್ಲಿ ಕುಳಿತವ್ನೆ ಹೂವಲ್ಲಿ ನಗುತಾನೆ,

ಮಾಯಾವಿ ಹಾಯಾಗಿ ಮಲಗವ್ನೆ,

ಮಾಯಾವಿ ಹಾಯಾಗಿ ಮಲಗವ್ನೆ ಮಾದೇವ, 

ಮನಸಿಟ್ಟು ಕೂಗಲು ಬರುತಾನೆ ।।೧।।


ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ,

ಕೋಗಿಲೆ ದನಿಯ ಇಂಪಾಗಿ,

ಕೋಗಿಲೆ ದನಿಯ ಇಂಪಾಗಿ ಕೇಳೋರ, 

ಮನಸಿಗೆ ತಂದಾನೆ ಆನಂದ ।।೨।।


ಕಲ್ಲಲ್ಲಿ ಮುಳ್ಳಲ್ಲಿ ಗಾಳೀಲಿ ನೀರಲ್ಲಿ, 

ಎಲ್ಲೆಲ್ಲು ನಮ್ಮ ಶಿವನುಂಟು,

ಎಲ್ಲೆಲ್ಲು ನಮ್ಮ ಶಿವನುಂಟು ಜಗದಲ್ಲಿ, 

ಶರಣರಿಗೆ ಕಾಣೋ ಕಣ್ಣು೦ಟು ।।೩।।

Tuesday, March 31, 2026

Summane Etake Ninna Kanuva (ಸುಮ್ಮನೆ ಏತಕೆ ನಿನ್ನಾ ಕಾಣುವ)

Bhaktigeete

Singer: Dr. Rajkumar

Song link: Click Here


Swamiye..ayyapa..sharanam sharanam sharanam!

Summane etake ninna kanuva hambala tumbuveyo,

Kareduko sannidhige swami kareduko sannidhige,

Ayyappa sharanam sharanam ayyappa ||


Sukhavanu kaanade, nemmadi illade, nondiruva manake,

Shantiya needalu, vedane neegalu, kareduko sannidhige,

Nanna kareduko sannidhige ||


Kadalina neeranu, kudidare, dahavu teeruvuduntenu,

Ee samsarada sagaradall,i harushavu untenu,

Harushavu untenu ||


Hettavarenna, bittaru endu, tabbaliyagiruve,

Karuneya torade nee kai bittare, yaarali moreyiduve,

Naanu yaarali moreyiduve ||


ಭಕ್ತಿಗೀತೆ 


ಸ್ವಾಮಿಯೇ ..ಅಯ್ಯಪ್ಪ.. ಶರಣಂ ಶರಣಂ ಶರಣಂ!

ಸುಮ್ಮನೆ ಏತಕೆ ನಿನ್ನಾ ಕಾಣುವ ಹಂಬಲ ತುಂಬುವೆಯೋ,

ಕರೆದುಕೋ ಸನ್ನಿಧಿಗೆ ಸ್ವಾಮಿ ಕರೆದುಕೋ ಸನ್ನಿಧಿಗೆ,

ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ।।ಪ।।


ಸುಖವನು ಕಾಣದೆ, ನೆಮ್ಮದಿ ಇಲ್ಲದೆ, ನೊಂದಿರುವಾ ಮನಕೆ,

ಶಾಂತಿಯ ನೀಡಲು ವೇದನೆ ನೀಗಲು, ಕರೆದುಕೊ ಸನ್ನಿಧಿಗೆ,

ನನ್ನಾ ಕರೆದುಕೊ ಸನ್ನಿಧಿಗೆ ।।೧।।


ಕಡಲಿನ ನೀರನು ಕುಡಿದರೆ ದಾಹವು ತೀರುವುದುಂಟೇನು,

ಈ ಸಂಸಾರದ ಸಾಗರದಲ್ಲಿ ಹರುಷವು ಉಂಟೇನು ।।೨।।


ಹೆತ್ತವರೆನ್ನ  ಬಿಟ್ಟುರು  ಎಂದು, ತಬ್ಬಲಿಯಾಗಿರುವೆ,

ಕರುಣೆಯ ತೋರದೆ ನೀ ಕೈ ಬಿಟ್ಟರೆ, ಯಾರಲಿ ಮೊರೆಯಿಡುವೆ,

ನಾನು ಯಾರಲಿ ಮೊರೆಯಿಡುವೆ ।।೩।।

Hanuma Namma Taayi Tande (ಹನುಮ ನಮ್ಮ ತಾಯಿ-ತಂದೆ)

Bhaktigeete

Singers: P B Srinivas, Bengaluru Latha

Song link: Click Here


Hanuma namma taayi tande, hanuma namma bandhu balaga,

Hanuma namma guruvu daiva,

Samaradalli samayadalli sanjeevanava tandu jeevavitta deva hanuma, taayi hanuma ||


Hanuma namma annanahudu, hanuma namma taatanahudu,

Anumaanavillavayya, bandhu-balaga hanumanayya,

Taratamya matava tori, kori bhajipa bhakta janake,

Ghora shapaveeva hanuma, guruvu daiva veera hanuma ||


Hanumanillada ooru unte, hanumanantha devarunte,

Hanumananne marevudunte, ghanavu satya bheema vaani,

Jaana hanuma naane idake ||


ಭಕ್ತಿಗೀತೆ 


ಹನುಮ ನಮ್ಮ ತಾಯಿ-ತಂದೆ, ಹನುಮ ನಮ್ಮ ಬಂಧು-ಬಳಗ,

ಹನುಮ ನಮ್ಮ ಗುರುವು ದೈವ, 

ಸಮರದಲ್ಲಿ ಸಮಯದಲ್ಲಿ, ಸಂಜೀವನವ  ತಂದು, ಜೀವವಿತ್ತ ದೇವಾ ಹನುಮ, ತಾಯಿ ಹನುಮ ।।ಪ।।


ಹನುಮ ನಮ್ಮ ಅಣ್ಣನಹುದು, ಹನುಮ ನಮ್ಮ ತಾತನಹುದು,

ಅನುಮಾನವಿಲ್ಲವಯ್ಯ ಬಂಧು-ಬಳಗ ಹನುಮನಯ್ಯ,

ತಾರತಮ್ಯ ಮತವ ತೋರಿ, ಕೋರಿ, ಭಜಿಪ ಭಕ್ತ ಜನಕೆ, 

ಘೋರ ಶಾಪವೀವ ಹನುಮ, ಗುರುವು ದೈವ ವೀರ ಹನುಮ 

।।೧।।


ಹನುಮನಿಲ್ಲದ ಊರು ಉಂಟೆ, ಹನುಮನಂಥ ದೇವರುಂಟೆ,

ಹನುಮನನ್ನೆ ಮರೆವುದುಂಟೆ ಘನವು ಸತ್ಯ ಭೀಮವಾಣಿ,

ಜಾಣ ಹನುಮ ನಾಣೆ ಇದಕೆ ।।೨।।