Thursday, March 26, 2026

Nanondu Teera, Neenondu Teera (ನಾನೊಂದು ತೀರ ನೀನೊಂದು ತೀರ)

Movie: Arunaraaga (1986)

Singers: K J Yesudas, Chitra

Song link: Click Here


Naanondu teera, neenondu teera,

Manasu manasu dura, preeti hrudaya bhara ||


Hoovu cheluvagi arali, dumbi seleyodu sahaja,

Hennu sogasagi beledu, ganda bayasodu sahaja,

Heegeke ninage ekangi baduku,

Sangati irade balella baridu ||


Bhumi aakasha seri, kaletu kudodu unte,

Kadalu taanage haridu, nadige serodu unte,

Churada hrudaya mattomme mididu,

Jeevanta baduki, sambandha taradu ||


ಚಿತ್ರಗೀತೆ 


ನಾನೊಂದು ತೀರ, ನೀನೊಂದು ತೀರ,

ಮನಸು ಮನಸು ದೂರ, ಪ್ರೀತಿ ಹೃದಯ ಭಾರ ।।ಪ।।


ಹೂವು ಚೆಲುವಾಗಿ ಅರಳಿ, ದುಂಬಿ ಸೆಳೆಯೋದು ಸಹಜ,

ಹೆಣ್ಣು ಸೊಗಸಾಗಿ ಬೆಳೆದು, ಗಂಡ ಬಯಸೋದು ಸಹಜ,

ಹೀಗೇಕೆ ನಿನಗೆ ಏಕಾಂಗಿ ಬದುಕು,

ಸಂಗಾತಿ ಇರದೆ ಬಾಳೆಲ್ಲ ಬರಿದು ।।೧।।


ಭೂಮಿ ಆಕಾಶ ಸೇರಿ, ಕಲೆತು ಕೂಡೋದು ಉಂಟೆ,

ಕಡಲು ತಾನಾಗೆ ಹರಿದು, ನದಿಗೆ ಸೇರೋದು ಉಂಟೆ,

ಚೂರಾದ ಹೃದಯ ಮತ್ತೊಮ್ಮೆ ಮಿಡಿದು,

ಜೀವಂತ ಬದುಕಿ, ಸಂಬಂಧ ತರದು ।।೨।।

  

Monday, March 23, 2026

Kunkumaviruvude Hanegagi (ಕುಂಕುಮವಿರುವುದೆ ಹಣೆಗಾಗಿ)

Movie: Naniruvude Ninagagi (1980)

Singer: SPB

Song link: Click Here


Kunkumaviruvude hanegagi, aralida hoovu mudigagi,

Shubha dina kaadide namagagi,

Neeniruve nanagagi, naniruvude ninagagi ||


Kai jaarida, muttondu, kai seritu, ta bandu,

Hosa harusha prati nimisha, shanti needitu nanagindu,

Ninagasare naanagi, nanna kai sere neenagi,

Kanasugalu nanasagi, baalu honnina kadalagi,

Hosatana kaanuva haayagi ||


Nannaseya hoovagi, nannolavina jenagi,

Jotheyalli ondagi, endu neeniru sukhavagi,

Naa noduva kannagi, naa haaduva haadagi,

Balinali belakagi, seru nannali hitavagi,

Hosatana kaanuva haayagi ||


ಚಿತ್ರಗೀತೆ 


ಕುಂಕುಮವಿರುವುದೆ ಹಣೆಗಾಗಿ, ಅರಳಿದ ಹೂವು ಮುಡಿಗಾಗಿ,

ಶುಭ ದಿನ ಕಾದಿದೆ ನಮಗಾಗಿ,

ನೀನಿರುವೆ ನನಗಾಗಿ, ನಾನಿರುವುದೇ ನಿನಗಾಗಿ ।।ಪ।।


ಕೈ ಜಾರಿದ, ಮುತ್ತೊಂದು, ಕೈ ಸೇರಿತು, ತಾ ಬಂದು,

ಹೊಸ ಹರುಷ ಪ್ರತಿ ನಿಮಿಷ, ಶಾಂತಿ ನೀಡಿತು ನನಗಿಂದು,

ನಿನಗಾಸರೆ ನಾನಾಗಿ, ನನ್ನ ಕೈ ಸೆರೆ ನೀನಾಗಿ,

ಕನಸುಗಳು ನನಸಾಗಿ, ಬಾಳು ಹೊನ್ನಿನ ಕಡಲಾಗಿ,

ಹೊಸತನ ಕಾಣುವ ಹಾಯಾಗಿ ।।೧।।


ನನ್ನಾಸೆಯಾ ಹೂವಾಗಿ, ನನ್ನೊಲವಿನಾ ಜೇನಾಗಿ,

ಜೊತೆಯಲ್ಲಿ ಒಂದಾಗಿ, ಎಂದು ನೀನಿರು ಸುಖವಾಗಿ,

ನಾ ನೋಡುವಾ ಕಣ್ಣಾಗಿ, ನಾ ಹಾಡುವಾ ಹಾಡಾಗಿ,

ಬಾಳಿನಲಿ ಬೆಳಕಾಗಿ, ಸೇರು ನನ್ನಲಿ ಹಿತವಾಗಿ,

ಹೊಸತನ ಕಾಣುವ ಹಾಯಾಗಿ ।।೨।।

Na Nodi Naliyuva Karavara (ನಾ ನೋಡಿ ನಲಿಯುವ ಕಾರವಾರ)

Movie: Mahadi Mane (1971)

Singer: P B Srinivas

Song link: Click Here


Ivale nanna janmadaate, kannada maate!

Na nodi naliyuva karavara, o karavara kadalina teera,

Na nodi naliyuva karavara ||


Kannada naadige idu kashmira, kaana bayasihe aasha teera,

Naada chariteya chinnada gopura, karuneya hrudayada amrutadhara ||


Janiside ninnaya madilinali, doddavanade vatsalyadali,

Nanelliddaru nenesuve ninna, sundara naadina banasiriyanna ||


Sodara preetiya haraduvenu, kalitana keertiya belesuvenu,

Nischala snehava tilisuvenu, huttida naadina hesarulisuvenu ||


ಚಿತ್ರಗೀತೆ 


ಇವಳೇ ನನ್ನ ಜನ್ಮದಾತೆ, ಕನ್ನಡ ಮಾತೆ !

ನಾ ನೋಡಿ ನಲಿಯುವ ಕಾರವಾರ, ಓ ಕಾರವಾರ ಕಡಲಿನ ತೀರ,

ನಾ ನೋಡಿ ನಲಿಯುವ ಕಾರವಾರ ।।ಪ।।


ಕನ್ನಡ ನಾಡಿಗೆ ಇದು ಕಶ್ಮೀರ, ಕಾಣ ಬಯಸಿಹೆ ಆಶಾತೀರ,

ನಾಡ ಚರಿತೆಯ ಚಿನ್ನದ ಗೋಪುರ, ಕರುಣೆಯ ಹೃದಯದ ಅಮೃತಧಾರ ।।೧।।


ಜನಿಸಿದೆ ನಿನ್ನಯ ಮಡಿಲಿನಲಿ, ದೊಡ್ಡವನಾದೆ ವಾತ್ಸಲ್ಯದಲಿ,

ನಾನೆಲ್ಲಿದ್ದರೂ ನೆನೆಸುವೆ ನಿನ್ನ, ಸುಂದರ ನಾಡಿನ ಬನಸಿರಿಯನ್ನ 

।।೨।।


ಸೋದರ ಪ್ರೀತಿಯ ಹರಡುವೆನು, ಕಲಿತನ ಕೀರ್ತಿಯ ಬೆಳೆಸುವೆನು,

ನಿಶ್ಚಲ ಸ್ನೇಹವ ತಿಳಿಸುವೆನು, ಹುಟ್ಟಿದ ನಾಡಿನ ಹೆಸರುಳಿಸುವೆನು

 ।।೩।।

Thursday, March 12, 2026

Nannalle Tampa Divyanukampa (ನನ್ನಲ್ಲೆ ತಂಪ ದಿವ್ಯಾನುಕಂಪ)

Bhavageete

Sahitya: K S Nisar Ahmed

Song link: Click Here


Nannalle tampa, divyanukampa,

Irisiralu satata neenu,

Shokiyendu, ekaakiyendu

Goladaleke naanu?


Kaanadavara kangombe neenu,

Aarambha bimba neenu,

Nambadavara nambugeya bhavana-

Daalamba kamba neenu.


Suratadalli, mai maretadalli,

Mumbaruva arivu neenu,

Vismarana hrudayadaavaranadalli,

Tumbiruva nenavu neenu.


Tiliyaagi kannu naa kaanabeku

Nannalle ninna irava,

Hulu jambavulidu naa nambabeku,

Bilalante tanna marava.


ಭಾವಗೀತೆ 


ನನ್ನಲ್ಲೆ ತಂಪ, ದಿವ್ಯಾನುಕಂಪ 

ಇರಿಸಿರಲು ಸತತ ನೀನು,

ಶೋಕಿಯೆಂದು, ಏಕಾಕಿಯೆಂದು,

ಗೋಳಾಡಲೇಕೆ ನಾನು?


ಕಾಣದವರ ಕಣ್ಗೊ೦ಬೆ ನೀನು,

ಆರಂಭ ಬಿಂಬ ನೀನು,

ನಂಬದವರ ನಂಬುಗೆಯ ಭವನ-

ದಾಲಂಬ ಕಂಬ ನೀನು.


ಸುರತದಲ್ಲಿ , ಮೈ ಮರೆತದಲ್ಲಿ,

ಮುಂಬರುವ ಅರಿವು ನೀನು,

ವಿಸ್ಮರಣ ಹೃದಯದಾವರಣದಲ್ಲಿ,

ತುಂಬಿರುವ ನೆನವು ನೀನು.


ತಿಳಿಯಾಗಿ ಕಣ್ಣು ನಾ ಕಾಣಬೇಕು,

ನನ್ನಲ್ಲೆ ನಿನ್ನ ಇರವ,

ಹುಲು ಜಂಬವುಳಿದು ನಾ ನಂಬಬೇಕು,

ಬಿಳಲಂತೆ ತನ್ನ ಮರವ.

Neenurisida Hombelakina (ನೀನುರಿಸಿದ ಹೊಂಬೆಳಕಿನ)

Bhavageete

Sahitya:K S Nisar Ahmed

Song link: Click Here


Neenurisida hombelakina kidi aralide illi,

Kudi chachide illi ||

Nee surisida rasa tailada gudi haaride illi,

Gadi meeride illi ||


Nee bittida daye habbide manu santatiyalli,

Jana sammatiyalli,

Neenettida tanu saagide bhavonnatiyalli,

Nava sadgatiyalli ||


Ninnade nela, ninnade mane, ninnadeyo udaara,

Naanuligakiruvalpanu- nee varasudaara,

Belebeleyali ninnade ghana mahimankura olage,

Belabelagali birudaavali, namankita halage ||


ಭಾವಗೀತೆ 


ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ,

ಕುಡಿ ಚಾಚಿದೆ ಇಲ್ಲಿ,

ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ,

ಗಡಿ ಮೀರಿದೆ ಇಲ್ಲಿ ।।ಪ।।


ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ,

ಜನ ಸಮ್ಮತಿಯಲ್ಲಿ,

ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ,

ನವ ಸದ್ಗತಿಯಲ್ಲಿ ।।೧।।


ನಿನ್ನದೆ ನೆಲ, ನಿನ್ನದೇ ಮನೆ, ನಿನ್ನೆದೆಯೊ ಉದಾರ,

ನಾನೊಳಿಗಕಿರುವಲ್ಪನು - ನೀ ವಾರಸುದಾರ,

ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ,

ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ ।।೨।।

       

Nanna Tota (ನನ್ನ ತೋಟ)

 ಪದ್ಯ 

ಸಾಹಿತ್ಯ: ಕಂಚ್ಯಾಣಿ ಶರಣಪ್ಪ 


ನನ್ನ ಮನೆಯ ಹಿತ್ತಲಲ್ಲಿ 

ನನ್ನ ಪುಟ್ಟ ತೋಟವು 

ನನ್ನ ತೋಟ ಎಂಥ ಮಾಟ 

ಇಲ್ಲ ಇದಕೆ ಸಾಟಿಯು ।।


ಬೇಲಿ ತುಂಬ ಹರಡಿಕೊಂಡ 

ಹಸಿರು ಹಾಲುಗುಂಬಳ 

ಎಲೆಯ ಹಾಸಿ ಕುಡಿಯ ಚಾಚಿ 

ಸೆಳೆಯುತಿಹುದು ಕಂಗಳ ।।


ಚಳ್ಳವರೆಯ ಚೆಲ್ಲುವರಿದು 

ಅಂದವಾಗಿ ಹರಡಿದೆ 

ತಂಗಿ ಗೊಂಬೆ ಮದುವೆಯಾಗಿ 

ಹಸಿರು ಹಂದರಾಗಿದೆ ।।


ತಾಯಿ ತೊಡೆಯ ಮೇಲೆ ಕುಳಿತು 

ನಗುವ ತೆರದಿ ಮಕ್ಕಳು 

ಚಿಕ್ಕ ಚಿಕ್ಕ ಮಡಿಗಳಲ್ಲಿ 

ಪುಟ್ಟ ಪುಟ್ಟ ಸಸಿಗಳು ।।


ಮಲ್ಲೆ ಜಾಜಿ ಚೆಂಗುಲಾಬಿ 

ಎಷ್ಟು ಬಗೆಯ ಹೂಗಳು 

ಚೆಂದವಾಗಿ ಅರಳಿ ಗಂಧ 

ಬೀರಿ ನಗುತಲಿರುವವು ।।


ಅವರೆ ಹೀರೆ ಚವಳೆ ಬೆಂಡೆ 

ಎಳೆಯ ಸವತೆ ಕಾಯ್ಗಳು 

ಅಮ್ಮ ಬಂದು ಕೊಯ್ದುಕೊಂಡು 

ಬುಟ್ಟಿ ತುಂಬ ಒಯ್ದಳು ।।


ಅಪ್ಪ ಊಟ ಮಾಡಿ ಬಂದು 

ಅತ್ತ ಇತ್ತ ನಡೆವನು 

ಕೆಲಸ ಮಾಡಿ ದುಡಿವ ದಣಿವ 

ಇಲ್ಲಿ ಕಳೆದುಕೊಳುವನು ।।


ನನ್ನ ತೋಟ ಚನ್ನ ತೋಟ 

ನೋಡಲೆಂದು ಚಂದ್ರನು 

ಚಿಕ್ಕ ಬಳಗದೊಡನೆ ಕೂಡಿ 

ಬಾನಿನಲ್ಲಿ ಬರುವನು ।।


Padya


Nanna maneya hittalalli

Nanna putta totavu

Nanna tota entha maata

Illa idake Saatiyu ||


Beli tumba haradikonda

Hasiru Haalugumbala

Eleya haasi kudiya chachi

Seleyutihudu kangala ||


Challavareya chelluvaridu

Andavaagi haradide

Tangi gombe maduveyaagi

Hasiru handaraagide ||


Taayi todeya mele kulitu

Naguva teradi makkalu

Chikka chikka madigalalli

Putta putta sasigalu ||


Malle jaaji chengulabi

Estu bageya hoogalu

Chendavaagi arali gandha

Beeri nagutaliruvavu ||


Avare heere chavale bende

Eleya savate kaigalu

Amma bandu koidukondu

Butti tumba oidalu ||


Appa oota maadi bandu

Atta itta nadevanu

Kelasa maadi dudida daniva

Illi kaledukoluvanu ||


Nanna tota chenna tota

Nodalendu chandranu

Chikka balagadodane koodi

Baninalli baruvanu ||

Tuesday, March 10, 2026

Jeeva Veene (ಜೀವ ವೀಣೆ)

Movie: Hombisilu (1978)

Singers: SPB, S Janaki

Song link: Click Here


Jeeva veene needu miditada sangeeta,

O..bhavageete baalinolumeya sanketa,

Indu milanada santosha, sukha santosha,

Shubha sandesha, sandesha sandeshavo ||


Midiyuva managalu eradu, miditada raagavu onde,

Minchuva kannanchina, sanchu indu onde,

Tapisuva hrudayagaleradu, taapada vegavu onde,

Seruva shubha samayadi, viraha iradu munde,

Bhavageete baalinolumeya sanketa..||


Olavina bayakeyu andu, milana mahotsavavindu,

Rachisuva naavanudina, mudada prema kavana,

Kanasina ratriyu kaledu, bandire nenesida hagalu,

Kaanuva hombisilina, sukhada surya kirana,

Bhavageete baalinolumeya sanketa..||


ಚಿತ್ರಗೀತೆ 


ಜೀವ ವೀಣೆ ನೀಡು ಮಿಡಿತದ ಸಂಗೀತ,

ಓ ..ಭಾವಗೀತೆ ಬಾಳಿನೊಲುಮೆಯ ಸಂಕೇತ,

ಇಂದು ಮಿಲನದ ಸಂತೋಷ, ಸುಖ ಸಂತೋಷ,

ಶುಭ ಸಂದೇಶ, ಸಂದೇಶ ಸಂದೇಶವೊ ।।ಪ।।


ಮಿಡಿಯುವ ಮನಗಳು ಎರಡು, ಮಿಡಿತದ ರಾಗವು ಒಂದೇ,

ಮಿಂಚುವ ಕಣ್ಣಂಚಿನ, ಸಂಚೂ ಇಂದು ಒಂದೇ,

ತಪಿಸುವ ಹೃದಯಗಳೆರಡು, ತಾಪದ ವೇಗವು ಒಂದೇ,

ಸೇರುವ ಶುಭ ಸಮಯದಿ, ವಿರಹ ಇಂದು ಮುಂದೇ,

ಭಾವಗೀತೆ ಬಾಳಿನೊಲುಮೆಯ ಸಂಕೇತ..।।೧।।


ಒಲವಿನ ಬಯಕೆಯು ಅಂದು, ಮಿಲನ ಮಹೋತ್ಸವವಿಂದು,

ರಚಿಸುವ ನಾವನುದಿನ, ಮುದದಾ ಪ್ರೇಮ ಕವನ,

ಕನಸಿನ ರಾತ್ರಿಯು ಕಳೆದು, ಬಂದಿರೆ ನೆನೆಸಿದ ಹಗಲು,

ಕಾಣುವ ಹೊಂಬಿಸಿಲಿನ, ಸುಖದ ಸೂರ್ಯ ಕಿರಣ,

ಭಾವಗೀತೆ ಬಾಳಿನೊಲುಮೆಯ ಸಂಕೇತ..।।೨।।