Tuesday, March 10, 2026

Ellellu Neene (ಎಲ್ಲೆಲ್ಲು ನೀನೇ)

Movie: Magiya Kanasu (1977)

Singer: SPB

Song link: Click Here


Ellellu neene, elliruve jaane,

Karunaada siridevi, isiriya sone ||


Hasirodedu usiraadi, nagutiruva madilalli,

Kaveri maidori, belediruvalu, aha..,

Kavalodeda javaligalu, odalaadi edeyalli,

Tunge bhadreya, seri nalidiruvalu,

Navaroopa taalida, gaalige samanendu,

Godavari maneya tumbiruvalu ||


Mugileri muttiduva aagasada aachege,

Girisaalu saalagi meredaadide, aha..,

Kogileya incharada impannu hanchutta,

Saalagi tarulateyu kare kugide,

Cheluvina rashiya geluvanu saaralu,

Malenaada maisiriyu nele nintide ||


ಚಿತ್ರಗೀತೆ 


ಎಲ್ಲೆಲ್ಲು ನೀನೇ, ಎಲ್ಲಿರುವೆ ಜಾಣೆ,

ಕರುನಾಡ ಸಿರಿದೇವಿ, ಐಸಿರಿಯ ಸೋನೆ ।।ಪ।।


ಹಸಿರೊಡೆದು ಉಸಿರಾಡಿ, ನಗುತಿರುವ ಮಡಿಲಲ್ಲಿ, 

ಕಾವೇರಿ ಮೈದೋರಿ, ಬೆಳೆದಿರುವಳು, ಆಹಾ ..,

ಕವಲೊಡೆದ ಜವಳಿಗಳು, ಒಡಲಾಡಿ ಎದೆಯಲ್ಲಿ,

ತುಂಗೆ ಭದ್ರೆಯ, ಸೇರಿ ನಲಿದಿರುವಳು,

ನವರೂಪ ತಾಳಿದ, ಗಾಳಿಗೆ ಸಮನೆಂದು,

ಗೋದಾವರಿ ಮನೆಯ ತುಂಬಿರುವಳು ।।೧।।


ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ,

ಗಿರಿಸಾಲು ಸಾಲಾಗಿ ಮೆರೆದಾಡಿದೆ, ಆಹಾ ..,

ಕೋಗಿಲೆಯ ಇಂಚರದ ಇಂಪನ್ನು ಹಂಚುತ್ತಾ,

ಸಾಲಾಗಿ ತರುಲತೆಯು ಕರೆ ಕೂಗಿದೆ,

ಚೆಲುವಿನ ರಾಶಿಯ ಗೆಲುವನ್ನು ಸಾರಲು,

ಮಲೆನಾಡ ಮೈಸಿರಿಯು ನೆಲೆ ನಿಂತಿದೆ ।।೨।।

                  

Elladaru Hogu (ಎಲ್ಲಾದರೂ ಹೋಗು)

Movie: Bandhavya (1971)

Singer: SPB

Song link: Click Here


Elladaru hogu, mareyagu, more hogu,

Ninnanu bidadu bandhavya, bidado mamateya bandhavya ||


Ello tappide, ello oppide, ello sididide aghata,

Entene irali teeralu ee kathe, biduvude karulina seleta ||


Bhayadurulu kai beesi hidiyalide, tay karulu kaapade kaiyoddide,

Vatsalyada pasha baa endide, tale kayaliruve nanendide,

Taayige usirilla, karulige saavilla, mugidide adara kartavya ||


Elladaru hogu, hogu, hogu...!


ಚಿತ್ರಗೀತೆ 


ಎಲ್ಲಾದರೂ ಹೋಗು, ಮರೆಯಾಗು, ಮೊರೆ ಹೋಗು,

ನಿನ್ನನು ಬಿಡದು ಬಾಂಧವ್ಯ, ಬಿಡದೊ ಮಮತೆಯ ಬಾಂಧವ್ಯ ।।ಪ।।


ಎಲ್ಲೋ ತಪ್ಪಿದೆ, ಎಲ್ಲೋ ಒಪ್ಪಿದೆ, ಎಲ್ಲೋ ಸಿಡಿದಿದೆ ಆಘಾತ,

ಎಂತೇನೇ ಇರಲಿ ತೀರಲು ಈ ಕಥೆ, ಬಿಡುವುದೆ ಕರುಳಿನ ಸೆಳೆತ ।।೧।।


ಭಯದುರುಳು ಕೈ ಬೀಸಿ ಹಿಡಿಯಲಿದೆ, ತಾಯ್ ಕರುಳು ಕಾಪಾಡೆ ಕೈಯೊಡ್ಡಿದೆ,

ವಾತ್ಸಲ್ಯದ ಪಾಶ ಬಾ ಎಂದಿದೆ, ತಲೆ ಕಾಯಲಿರುವೆ ನಾನೆಂದಿದೆ,

ತಾಯಿಗೆ ಉಸಿರಿಲ್ಲ, ಕರುಳಿಗೆ ಸಾವಿಲ್ಲ, ಮುಗಿದಿದೆ ಅದರ ಕರ್ತವ್ಯ 

।।೨।।


ಎಲ್ಲಾದರೂ ಹೋಗು, ಹೋಗು, ಹೋಗು !

       

Sunday, March 8, 2026

Elliruve Manava Kaaduva (ಎಲ್ಲಿರುವೆ ಮನವ ಕಾಡುವ)

Movie: Bayalu Daari (1976)

Singer: SPB

Song link: Click Here


Elliruve manava kaaduva roopasiye,

Bayakeya, balliya, naguva hoovada preyasiye,

Neenu elliruve..manava kaaduva roopasiye ||


Teluva ee modada mele, nee ninta haagide,

Nasu naguta, nalinalidu nanna kugidantide,

Seruva ba aagasadalli endu helidantide,

Tanuvella haguraagi teladuvantide, aaduvantide,

Cheluve elliruve, manava kaaduva roopasiye ||


Kannalle olavina geete, neenu haadidantide,

Ninnase atiyaagi, turaduvantide,

Hagalallu chandrana kaano, bhagya nannadagide,

Chandrikeya, cheluvinda, baalu bhavyavagide, bhavyavagide,

Nalle elliruve, manava kaaduva roopasiye ||


ಚಿತ್ರಗೀತೆ 


ಎಲ್ಲಿರುವೆ ಮನವ ಕಾಡುವ ರೂಪಸಿಯೇ,

ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿಯೇ,

ನೀನು ಎಲ್ಲಿರುವೇ ..ಮನವ ಕಾಡುವ ರೂಪಸಿಯೇ ।।ಪ।।


ತೇಲುವ ಈ ಮೋಡದ ಮೇಲೆ, ನೀ ನಿಂತ ಹಾಗಿದೆ,

ನಸು ನಗುತ, ನಲಿನಲಿದು ನನ್ನ ಕೂಗಿದಂತಿದೆ,

ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ,

ತನುವೆಲ್ಲ ಹಗುರಾಗಿ ತೇಲಾಡುವಂತಿದೆ, ಆಡುವಂತಿದೆ,

ಚೆಲುವೆ ಎಲ್ಲಿರುವೆ, ಮನವ ಕಾಡುವ ರೂಪಸಿಯೇ ।।೧।।


ಕಣ್ಣಲ್ಲೇ ಒಲವಿನ ಗೀತೆ, ನೀನು ಹಾಡಿದಂತಿದೆ,

ನಿನ್ನಾಸೆ ಅತಿಯಾಗಿ, ತೂರಾಡುವಂತಿದೆ,

ಹಗಲಲ್ಲೂ ಚಂದ್ರನ ಕಾಣೋ, ಭಾಗ್ಯ ನನ್ನದಾಗಿದೆ,

ಚಂದ್ರಿಕೆಯ, ಚೆಲುವಿಂದ, ಬಾಳು ಭವ್ಯವಾಗಿದೆ, ಭವ್ಯವಾಗಿದೆ,

ನಲ್ಲೆ ಎಲ್ಲಿರುವೆ, ಮನವ ಕಾಡುವ ರೂಪಸಿಯೇ ।।೨।।

                             

Ekantavagi Maatade (ಏಕಾಂತವಾಗಿ ಮಾತಾಡೆ)

Movie: Beedi Basavanna (1967)

Singer: P B Srinivas, S Janaki

Song link: Click Here


Ekantavagi maatade, bande naanu,

Ninninda nanendu bere agenu, ekantavagi..||


Ninagagi mudipada bidi hoovanu,

Berobba bekendu keli bandanu,

Ododi adakaage na bandenu,

Innenu bhayavilla ninne kandenu,

Ekantavagi ||


Kaigombe hennendu ee aatave,

Ee gandentha bele endu gottayite,

Soteega naa ninna mana gelluve,

Geddaga sotaga nav ondallave, 

Ekantavagi ||


ಚಿತ್ರಗೀತೆ 


ಏಕಾಂತವಾಗಿ ಮಾತಾಡೆ, ಬಂದೆ ನಾನೂ,

ನಿನ್ನಿಂದ ನಾನೆಂದು ಬೇರೆ ಆಗೆನೂ ।।ಪ।।

ಏಕಾಂತವಾಗಿ..!


ನಿನಗಾಗಿ ಮುಡಿಪಾದ ಬಿಡಿ ಹೂವನು,

ಬೇರೊಬ್ಬ ಬೇಕೆಂದು ಕೇಳಿ ಬಂದನು,

ಓಡೋಡಿ ಅದಕಾಗೆ ನಾ ಬಂದೆನು,

ಇನ್ನೇನು ಭಯವಿಲ್ಲ ನಿನ್ನೇ ಕಂಡೆನು ।।೧।।

ಏಕಾಂತವಾಗಿ!


ಕೈಗೊಂಬೆ ಹೆಣ್ಣೆಂದು ಈ ಆಟವೆ,

ಈ ಗಂಡೆಂಥ ಬೆಲೆ ಎಂದು ಗೊತ್ತಾಯಿತೆ,

ಸೋತೀಗ ನಾ ನಿನ್ನ ಮನ ಗೆಲ್ಲುವೆ,

ಗೆದ್ದಾಗ ಸೋತಾಗ ನಾವ್ ಒಂದಲ್ಲವೆ ।।೨।।

ಏಕಾಂತವಾಗಿ!

  

Ushe Moodidaga (ಉಷೆ ಮೂಡಿದಾಗ)

Movie: Preeti Vatsaalya (1984)

Singer: SPB

Song link: Click Here



Aa aa.. ushe moodidaga, priya ninna kenneya,

Rangannu nodide, mai maretu haadide,

Aa megha minchalu, nage minchu ninnadu,

Nenapagi bandide, sihi nova tandide ||


Hoo arali ninta vele, kann munde banditalle,

Priye ninna kaadige kanna, aa notadandave,

Kare needi notadalli, nee ninte duradalli,

Bali bande bayasi ninna, nee hode kaanade,

Aa nenapu kaadide nanna, ee bege taalenu chinna ||


Kaveri neerinallu, kannadada kavyadallu,

Belura baleyallu, na kande ninnanu,

Ondondu bangiyallu, ondondu bhavadallu,

Ondondu maatinallu, nee selede nannanu,

Nee ninte kana kanadallu, nannedeya usiusirallu ||


ಚಿತ್ರಗೀತೆ 


ಆ ಆ.. ಉಷೆ ಮೂಡಿದಾಗ, ಪ್ರಿಯ ನಿನ್ನ ಕೆನ್ನೆಯಾ,

ರಂಗನ್ನು ನೋಡಿದೆ, ಮೈ ಮರೆತು ಹಾಡಿದೆ,

ಆ ಮೇಘ ಮಿಂಚಲು, ನಗೆ ಮಿಂಚು ನಿನ್ನದು,

ನೆನಪಾಗಿ ಬಂದಿದೆ, ಸಿಹಿ ನೋವ ತಂದಿದೆ ।।ಪ।।


ಹೂ ಅರಳಿ ನಿಂತ ವೇಳೆ, ಕಣ್ ಮುಂದೆ ಬಂದಿತಲ್ಲೆ,

ಪ್ರಿಯೆ ನಿನ್ನ ಕಾಡಿಗೆ ಕಣ್ಣ, ಆ ನೋಟದಂದವೇ,

ಕರೆ ನೀಡಿ ನೋಟದಲ್ಲಿ, ನೀ ನಿಂತೆ ದೂರದಲ್ಲಿ,

ಬಳಿ ಬಂದೆ ಬಯಸಿ ನಿನ್ನ, ನೀ ಹೋದೆ ಕಾಣದೆ,

ಆ ನೆನಪು ಕಾಡಿದೆ ನನ್ನ, ಈ ಬೇಗೆ ತಾಳೆನು ಚಿನ್ನ ।।೧।।


ಕಾವೇರಿ ನೀರಿನಲ್ಲೂ, ಕನ್ನಡದ ಕಾವ್ಯದಲ್ಲೂ,

ಬೇಲೂರ ಬಾಲೆಯಲ್ಲೂ, ನಾ ಕಂಡೆ ನಿನ್ನನು,

ಒಂದೊಂದು ಭಂಗಿಯಲ್ಲೂ, ಒಂದೊಂದು ಭಾವದಲ್ಲೂ,

ಒಂದೊಂದು ಮಾತಿನಲ್ಲೂ, ನೀ ಸೆಳೆದೆ ನನ್ನನೂ,

ನೀ ನಿಂತೆ ಕಣ ಕಣದಲ್ಲೂ, ನನ್ನೆದೆಯ  ಉಸಿಯುಸಿರಲ್ಲೂ 

।।೨।।

                       

Yaava Kanike Needali Ninage (ಯಾವ ಕಾಣಿಕೆ ನೀಡಲಿ ನಿನಗೆ)

Movie: Masanada Hoovu (1985)

Singer: SPB

Song link: Click Here


Yaava kanike needali ninage, o yenna preyasi ||


Malenada kanivegala hasiru banadinda,

Ninagaagi gili onda na taralaare,

Sagarada alegalali uyyale aadiruva,

Hamsa naveya, naa taralaare ||


Hakkigala jothege swaravetti paadiruva,

Mandanilada veeneya taralaare,

Nandanavanada mandara pushpava, 

Na ninage, taralaare ||


Halavu arasiyara hottu meresiruva,

Muttina pallakiya na taralaare,

Manninali neerinali badukane ittiruva,

Surya chandrara, na taralaare ||


ಚಿತ್ರಗೀತೆ 


ಯಾವ ಕಾಣಿಕೆ ನೀಡಲಿ ನಿನಗೆ, ಓ ಎನ್ನ ಪ್ರೇಯಸಿ ।।ಪ।।


ಮಲೆನಾಡ ಕಣಿವೆಗಳ ಹಸಿರು ಬನದಿಂದ,

ನಿನಗಾಗಿ ಗಿಳಿ ಒಂದ ನಾ ತರಲಾರೆ,

ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ,

ಹಂಸ ನಾವೆಯ, ನಾ ತರಲಾರೆ ।।೧।।


ಹಕ್ಕಿಗಳ ಜೊತೆಗೆ ಸ್ವರವೆತ್ತಿ ಪಾಡಿರುವ,

ಮಂದಾನಿಲದ ವೀಣೆಯ ತರಲಾರೆ,

ನಂದನವನದ ಮಂದಾರ ಪುಷ್ಪವ, 

ನಾ ನಿನಗೆ, ತರಲಾರೆ ।।೨।।


ಹಲವು ಅರಸಿಯರ ಹೊತ್ತು ಮೆರೆಸಿರುವ,

ಮುತ್ತಿನ ಪಲ್ಲಕಿಯ ನಾ ತರಲಾರೆ,

ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ,

ಸೂರ್ಯ ಚಂದ್ರರ, ನಾ ತರಲಾರೆ ।।೩।।

               

Saturday, February 28, 2026

Prarthane (ಪ್ರಾರ್ಥನೆ)

 ಪದ್ಯ 

ಸಾಹಿತ್ಯ :ಜಿ ಪಿ ರಾಜರತ್ನಂ 


ಮಲೆಗಳಲಿ ಕಲ್ಲುಂಟು 

ಹೊಲಗಳಲಿ ಹುಲ್ಲುಂಟು 

ಹೊಳೆಗಳಲಿ ಮೀನುಂಟು 

ಗೂಡಿನಲಿ ಜೇನುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ


ಬಾಳೆಯಲಿ ಫಲವುಂಟು 

ಚಂದ್ರನಲಿ ಮೊಲವುಂಟು 

ಹುತ್ತದಲಿ ಹಾವುಂಟು 

ಬೆಂಕಿಯಲಿ ಕಾವುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ


ದೀಪದಲಿ ಬೆಳಕುಂಟು 

ಕೋಪದಲಿ ಹುಳುಕುಂಟು 

ಸರುವ ಕಡೆ ನೀನುಂಟು 

ಇರುವ ಕಡೆ ನಾನುಂಟು 

ನೀನುಂಟು ಎಲ್ಲೆಲ್ಲೂ -ಓ ಶಿವ 

ನೀನುಂಟು ಎಲ್ಲೆಲ್ಲೂ.


Padya


Malegalali kalluntu

Holagalali hulluntu

Holegalali meenuntu

Gudinali jenuntu

Neenuntu ellellu- o shiva

Neenuntu ellellu


Baleyali phalavuntu

Chandranali molavuntu

Huttadali haavuntu

Benkiyali kaavuntu

Neenuntu ellellu- o shiva

Neenuntu ellellu


Deepadali belakuntu

Kopadali hulukuntu

Saruva kade neeruntu

Iruva kade naanuntu

Neenuntu ellellu- o shiva

Neenuntu ellellu.