Naadageete
Sahitya: K Rajkumar
Swagatavu nimage, suswagatavu nimage,
Kecchede kaligale, honnada manigale,
Gandhada gudiyavare, sirigannada neladavare,
Banni, banni, banni, banni,
Kannadambe runava teerisalu banni ||
Karunaada kanakana kasturiyaagi,
Karimanna parimala kannadavaagi,
Kuvempu kavana Kaanada vaagi,
Swagata korihudu suswagata korihudu,
Taaya haala runava teerisalu banni ||
Kaveri alegala kalarava gaana,
Belura baaleya bedagina nartana,
Sahyadri maleya sumadhura taana,
Swagata korihudu suswagata korihudu,
Naadu-nudiya runava teerisalu banni ||
ನಾಡಗೀತೆ
ಸ್ವಾಗತವೂ ನಿಮಗೆ, ಸುಸ್ವಾಗತವೂ ನಿಮಗೆ,
ಕೆಚ್ಚೆದೆ ಕಲಿಗಳೆ, ಹೊನ್ನಾಡ ಮಣಿಗಳೆ,
ಗಂಧದ ಗುಡಿಯವರೇ, ಸಿರಿಗನ್ನಡ ನೆಲದವರೇ,
ಬನ್ನಿ ಬನ್ನಿ ಬನ್ನಿ ಬನ್ನಿ,
ಕನ್ನಡಾಂಬೆ ಋಣವಾ ತೀರಿಸಲೂ ಬನ್ನಿ ।।ಪ।।
ಕರುನಾಡ ಕಣಕಣ ಕಸ್ತೂರಿಯಾಗಿ,
ಕರಿಮಣ್ಣ ಪರಿಮಳ ಕನ್ನಡವಾಗಿ,
ಕುವೆಂಪು ಕವನ ಕಾನಡ ವಾಗಿ,
ಸ್ವಾಗತ ಕೋರಿಹುದೂ ಸುಸ್ವಾಗತ ಕೋರಿಹುದೂ,
ತಾಯ ಹಾಲ ಋಣವಾ ತೀರಿಸಲು ಬನ್ನಿ ।।೧।।
ಕಾವೇರಿ ಅಲೆಗಳ ಕಲರವ ಗಾನ,
ಬೇಲೂರ ಬಾಲೆಯ ಬೆಡಗಿನ ನರ್ತನ,
ಸಹ್ಯಾದ್ರಿ ಮಲೆಯ ಸುಮಧುರ ತಾಣ,
ಸ್ವಾಗತ ಕೋರಿಹುದೂ ಸುಸ್ವಾಗತ ಕೋರಿಹುದೂ,
ನಾಡು-ನುಡಿಯ ಋಣವಾ ತೀರಿಸಲು ಬನ್ನಿ ।।೨।।




