Tuesday, January 27, 2026

Kallinali Kettidanu (ಕಲ್ಲಿನಲಿ ಕೆತ್ತಿದನು)

Bhavageete

Sahitya: Kuvempu

Song link: Click Here


Kallinali kettidanu shilpiyava shivana,

Deguladi kudidanu vaidikanu avana,

Karunaalu shivanavanu kalladaneke,

Manadalle iruvavage mane bere beke ||


Iruvondu daivakke nooru hesarittu,

Avanhecchu ivanhecchu ennuta bobbittu,

Keluvudu ondu, maaduvudu mattondu,

Shiva bedari nodidanu idanella nintu ||


Brahmananu bandaaga janivaaravitte,

Shivabhakta bandaaga shivadaara vitte,

Pratiyobba maanavanu bettaleye bandu,

Aamele kittata melu keelendu ||


Holeya ninnaya manadi shivanu taaniralu,

Addi maadidaru nee degulakke baralu,

Keelendu alabeda, shivana maga neenu,

Hrudayadali tumbirali bhaktiya jenu ||


ಭಾವಗೀತೆ 


ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನಾ,

ದೇಗುಲದಿ ಕೂಡಿದನು ವೈದಿಕನು ಅವನ, 

ಕರುಣಾಳು ಶಿವನವನು ಕಲ್ಲಾದನೇಕೆ,

ಮನದಲ್ಲೇ ಇರುವವಗೆ ಮನೆ ಬೇರೆ ಬೇಕೆ ।।ಪ।।


ಇರುವೊಂದು ದೈವಕ್ಕೆ ನೂರು ಹೆಸರಿಟ್ಟು,

ಅವನ್ಹೆಚ್ಚು ಇವನ್ಹೆಚ್ಚುಎನುತಾ ಬೊಬ್ಬಿಟ್ಟು,

ಕೇಳುವುದು ಒಂದು ಮಾಡುವುದು ಮತ್ತೊಂದು,

ಶಿವ ಬೆದರಿ ನೋಡಿದನು ಇದನೆಲ್ಲಾ ನಿಂತು ।।೧।।


ಬ್ರಾಹ್ಮಣನು ಬಂದಾಗ ಜನಿವಾರವಿತ್ತೆ,

ಶಿವಭಕ್ತ ಬಂದಾಗ ಶಿವದಾರವಿತ್ತೆ ,

ಪ್ರತಿಯೊಬ್ಬ ಮಾನವನು ಬೆತ್ತಲೆಯೇ ಬಂದು,

ಆಮೇಲೆ ಕಿತ್ತಾಟ ಮೇಲು ಕೀಳೆಂದು ।।೨।।


ಹೊಲೆಯ ನಿನ್ನಯ ಮನದಿ ಶಿವನು ತಾನಿರಲು,

ಅಡ್ಡಿ ಮಾಡಿದರು ನೀ ದೇಗುಲಕ್ಕೆ ಬರಲು,

ಕೀಳೆಂದು ಅಳಬೇಡ ಶಿವನ ಮಗ ನೀನು,

ಹೃದಯದಲಿ ತುಂಬಿರಲಿ ಭಕ್ತಿಯಾ ಜೇನು ।।೩।।  

                      

Brahma Ninge Jodisteeni (ಬ್ರಹ್ಮ ನಿಂಗೆ ಜೋಡಿಸ್ತೀನಿ)

Bhavageete

Sahitya: G P Rajaratnam

Song link: Click Here


Brahma ninge jodisteeni

Yenda muttid kaina!

Bhumi udku boggisteeni

Yenda tumkond maina!


Bur bur nore basiyovanta

Olle vuli yenda!

Kodteen nandu prartne kelu

Sarsotamman ganda!


Sarsotamma munskondoule

Neenar osi yolu,!

Kududbut addre todaltadanna

Nalge baala golu!


Muniyangara kashogtaiti

Yecchige yenda butre!

Sarsotammang yenhogtaite

Maat saleesag kotre!


Nange neenu laari aagi

Nan kesu gedgid kotre!

Madteenanna nin hottena

Vuli yendad potre!


Kamalad oovin kurchi mege

Jokaag kuntko neenu!

Naaku baigu naku bunde

Yenda tatten naanu!


Sarasotammang yolakilla

Neenen edarkobeda;

Kelid varaan vondeeskotre

Takko! yendad pheda!


ಭಾವಗೀತೆ 


ಬ್ರಹ್ಮ ನಿಂಗೆ ಜೋಡಿಸ್ತೀನಿ 

ಯೆಂಡ ಮುಟ್ಟಿದ್ ಕೈನ !

ಭೂಮಿ ಉದ್ಕು ಬೊಗ್ಗಿಸ್ತೀನಿ 

ಯೆಂಡ ತುಂಬ್ಕೊಂಡ್ ಮೈನ !


ಬುರ್ ಬುರ್ ನೊರೆ ಬಸಿಯೋವಂತ 

ಒಳ್ಳೆ ವುಳಿ ಯೆಂಡ! 

ಕೊಡ್ತೀನಿ ನನ್ದು ಪ್ರಾತ್ನೇ  ಕೇಳು 

ಸರಸೋತ್ತಮ್ಮನ್ ಗಂಡ !


ಸರಸೋತ್ತಮ್ಮ ಮುನಸ್ಕೊಂಡೌಳೆ 

ನೀನಾರ್ ಒಸಿ ಯೋಳು !

ಕುಡದ್ಭುಟ್  ಅಡ್ದ್ರೆ ತೋದಲ್ತಾದಣ್ಣ

ನಾಲ್ಗೆ ಬಾಳ ಗೋಳು !


ಮುನಿಯನ್ಗಾರ  ಕಾಸೋಗ್ ತೈತಿ 

ಯೆಚ್ಚಿಗೆ ಯೆಂಡ ಬುಟ್ರೆ !

ಸರಸೋತ್ತಮ್ಮನ್ಗೆ ಯೋನೋಗ್ ತೈತೆ  

ಮಾತ್ ಸಲೀಸಾಗ್ ಕೊಟ್ರೆ !


ನನ್ಗೆ ನೀನು ಲಾರಿ  ಆಗಿ 

ನನ್ ಕೇಸ್ ಗೆದ್ ಗಿದ್ ಕೊಟ್ರೆ !

ಮಾಡ್ತೀನಣ್ಣ ನಿನ್ ಹೊಟ್ಟೇನಾ 

ವುಳಿ ಯೆಂಡದ್ ಪೊಟ್ರೆ !


ಕಮಲದ್ ಊವಿನ್ ಕುರ್ಚಿ ಮೇಗೆ 

ಜೋಕಾಗ್ ಕುಂತ್ಕೊ ನೀನು !

ನಾಕೂ ಬಾಯ್ಗೂ ನಾಕು ಬುಂಡೆ 

ಯೆಂಡ ತತ್ತೀನ್ ನಾನು !


ಸರಸೋತ್ತಮ್ಮ೦ಗ್ ಯೋಳಾಕಿಲ್ಲ 

ನೀನೇನ್ ಎದರ್ಕೋಬೇಡ !

ಕೇಳಿದ್ ವರಾನ್ ವೊಂದೀಸ್ಕೊಟ್ರೆ 

ತಕ್ಕೊ ! ಯೆಂಡದ್ ಫೆಡ !

             

Friday, January 23, 2026

Kannadammana Devalaya (ಕನ್ನಡಮ್ಮನ ದೇವಾಲಯ)

Movie: Brammastra (1986)

Singers: SPB, S Janaki

Song link: Click Here


Kannadammana devalaya, kande hennina kangalali,

Kannada nadina chariteyane, kande aakeya hrudayadali,

Vandane, aa hennige, abhinandane, aa kannige..||


Kande avala maatinalli, sharadambe veeneya,

Avala nadeya lasyadalli, tunge aleya natyava,

Avala chalave kitturina mahime, avala sobage belurina pratime,

Ellede, aa rupave, mane belaguva, aa deepave.. ||


Sheela avala aabharana, preeti avala sindhura,

Tyaga avala usirante, avale baala aadhara, 

Taayi tangi manadanneyu avale, mamate karune pratibimbavu avale,

Avalige aaradhane, ee hrudayada, oupaasane ||


ಚಿತ್ರಗೀತೆ 


ಕನ್ನಡಮ್ಮನ ದೇವಾಲಯ, ಕಂಡೆ ಹೆಣ್ಣಿನ ಕಂಗಳಲಿ,

ಕನ್ನಡ ನಾಡಿನ ಚರಿತೆಯನೆ, ಕಂಡೆ ಆಕೆಯ ಹೃದಯದಲಿ,

ವಂದನೆ, ಆ ಹೆಣ್ಣಿಗೆ, ಅಭಿನಂದನೆ, ಆ ಕಣ್ಣಿಗೇ ...।।ಪ।।


ಕಂಡೆ ಅವಳ ಮಾತಿನಲ್ಲಿ, ಶಾರದಾಂಬೆ ವೀಣೆಯಾ,

ಅವಳ ನಡೆಯ ಲಾಸ್ಯದಲ್ಲಿ, ತುಂಗೆ ಅಲೆಯ ನಾಟ್ಯವಾ,

ಅವಳ ಛಲವೆ ಕಿತ್ತೂರಿನ ಮಹಿಮೆ, ಅವಳ ಸೊಬಗೆ ಬೇಲೂರಿನ ಪ್ರತಿಮೆ,

ಎಲ್ಲೆಡೆ, ಆ ರೂಪವೇ, ಮನೆ ಬೆಳಗುವ, ಆ ದೀಪವೇ ..।।೧।।


ಶೀಲ ಅವಳ ಆಭರಣಾ, ಪ್ರೀತಿ ಅವಳ ಸಿಂಧೂರಾ,

ತ್ಯಾಗ ಅವಳ ಉಸಿರಂತೆ, ಅವಳ ಬಾಳ ಆಧಾರ,

ತಾಯಿ ತಂಗಿ ಮನದನ್ನೆಯು ಅವಳೇ, ಮಮತೆ ಕರುಣೆ ಪ್ರತಿಬಿಂಬವು ಅವಳೇ,

ಅವಳಿಗೆ ಆರಾಧನೆ, ಈ ಹೃದಯದ, ಔಪಾಸನೆ ..।।೨।।

              

Kareye Kogile Madhavana (ಕರೆಯೇ ಕೋಗಿಲೆ ಮಾಧವನ)

Movie: Nava Jeevana (1964)

Singer: S Janaki

Song link: Click Here


Kareye kogile madhavana, kaatara tumbida ee nayana,

Kaanalu kaadide priyatamana, kareye kogile madhavana ||


Ee anuragada kareyanu tilise,veeneya nadake nee dani beresi,

Haade paade olavirisi, virahi radheya mana tanise ||


Munidihanene nee hele, manasina chinte naa tale,

Eko eno bhayavinde, iniyana kaanade naa nonde ||


ಚಿತ್ರಗೀತೆ 


ಕರೆಯೇ ಕೋಗಿಲೆ ಮಾಧವನ, ಕಾತರ ತುಂಬಿದ ಈ ನಯನ, 

ಕಾಣಲು ಕಾದಿದೆ ಪ್ರಿಯತಮನ, ಕರೆಯೇ ಕೋಗಿಲೆ ಮಾಧವನ ।।ಪ।।


ಈ ಅನುರಾಗದ ಕರೆಯನು ತಿಳಿಸೆ, ವೀಣೆಯ ನಾದಕೆ ನೀ ದನಿ ಬೆರೆಸಿ, 

ಹಾಡೇ ಪಾಡೇ ಒಲವಿರಿಸಿ, ವಿರಹಿ ರಾಧೆಯ ಮನ ತಣಿಸೇ ।।೧।।


ಮುನಿದಿಹನೇನೆ  ನೀ ಹೇಳೇ, ಮನಸಿನ ಚಿಂತೆ ನಾ ತಾಳೆ, 

ಏಕೋ ಏನೋ ಭಯವಿಂದೇ, ಇನಿಯನ ಕಾಣದೆ ನಾ ನೊಂದೇ ।।೨।।

                                         

Kaanada Devaru Oorige Nuru (ಕಾಣದ ದೇವರು ಊರಿಗೆ ನೂರು)

Movie: Suvarna Bhumi (1969)

Singers: P B Srinivas, K J Yesudas

Song link: Click Here


Kaanada devaru oorige nuru, hudukuvaraaru,

Kaanuva taaye parama guru, amma.. ||


Saavira kaalaga kaaduva dheera,

Naadanu nadugipa darodekora,

Gandara ganda ranabherunda,

Haakabeku paadake danda ||


Bethlehemina esukrista,

Makka nagarada guru paigambar,

Raghava yaadava ella daiva,

Taaya munde balakaravva ||


ಚಿತ್ರಗೀತೆ 


ಕಾಣದ ದೇವರು, ಊರಿಗೆ ನೂರು, ಹುಡುಕುವರಾರು,

ಕಾಣುವ ತಾಯೇ ಪರಮ ಗುರು, ಅಮ್ಮಾ ..।।ಪ।।


ಸಾವಿರ ಕಾಳಗ ಕಾಡುವ ಧೀರ,

ನಾಡನು ನಡುಗಿಪ ದರೋಡೆಕೋರ,

ಗಂಡರ ಗಂಡ ರಣಭೇರುಂಡ,

ಹಾಕಬೇಕು ಪಾದಕೆ ದಂಡ ।।೧।।


ಬೆಥ್ಲೆಹೇಮಿನ ಏಸುಕ್ರಿಸ್ತ,

ಮಕ್ಕಾ ನಗರದ ಗುರು ಪೈಗಂಬರ್,

ರಾಘವ ಯಾದವ ಎಲ್ಲಾ ದೈವ,

ತಾಯ ಮುಂದೆ ಬಾಲಕರವ್ವ ।।೨।।

           

Kannanchina Ee Maatali (ಕಣ್ಣಂಚಿನ ಈ ಮಾತಲಿ)

Movie: Daari Tappida Maga (1975)

Singer: P B Srinivas

Song link: Click Here


Kannanchina ee maatali, eneno tumbide,

Kavi kaanada, shrungarada, rasa kavya illide ||


Nava youvvana, honganasina, malebillu tandide,

Nasu nachute, hosa premada, kudi illi chiguride,

Nuraseya, neleyagide,

Madhuchandrada, madhu maitriya, nereekshe allide ||


Prati premiya, balalliyu, shubha ratri ondide,

Anuragada, aa velege, mana kaadu nintide,

Sari jodiya, kannaraside,

Hiri jodiyu, savi nenapali, jagavanne maretide ||


ಚಿತ್ರಗೀತೆ 


ಕಣ್ಣಂಚಿನ, ಈ ಮಾತಲಿ, ಏನೇನೋ ತುಂಬಿದೆ,

ಕವಿ ಕಾಣದ, ಶೃಂಗಾರದ, ರಸ ಕಾವ್ಯ ಇಲ್ಲಿದೆ ।।ಪ।।


ನವ ಯೌವ್ವನ, ಹೊಂಗನಸಿನ, ಮಳೆಬಿಲ್ಲು ತಂದಿದೆ,

ನಸು ನಾಚುತೆ, ಹೊಸ ಪ್ರೇಮದ, ಕುಡಿ ಇಲ್ಲಿ ಚಿಗುರಿದೆ,

ನೂರಾಸೆಯ, ನೆಲೆಯಾಗಿದೆ,

ಮಧುಚಂದ್ರದ, ಮಧು ಮೈತ್ರಿಯ, ನಿರೀಕ್ಷೆ ಅಲ್ಲಿದೆ ।।೧।।


ಪ್ರತಿ ಪ್ರೇಮಿಯ, ಬಾಳಲ್ಲಿಯು, ಶುಭರಾತ್ರಿ ಒಂದಿದೆ,

ಅನುರಾಗದ, ಆ ವೇಳೆಗೆ, ಮನ ಕಾದು ನಿಂತಿದೆ,

ಸರಿ ಜೋಡಿಯ, ಕಣ್ಣರಸಿದೆ,

ಹಿರಿ ಜೋಡಿಯು, ಸವಿ ನೆನಪಲಿ, ಜಗವನ್ನೇ ಮರೆತಿದೆ ।।೨।।

                            

Tuesday, January 20, 2026

Ide Ide Savi Baala Dina (ಇದೇ ಇದೇ ಸವಿ ಬಾಳ ದಿನ)

Movie: Navajeevana (1964)

Singers: P B Srinivas, S Janaki

Song link: Click Here


 Ide ide savi baala dina, kaadu kandite madhura mana,

Mai maresuva, mana tanisuva, prema milanada dina oho...||


Anuragada baalina gaana, nere hommi haade mana veena,

Navajeevana tumbida trana, nama premavinde paripurna,

Naavadi paadi, manasare noduva, sada naliva sadana aha..||


Olavondire nammaya munde, tanu mereva odave trunavende,

Mana hondire swargavu namade, badatanavu siriyu samavende,

Naavindu seri, nalivinda teluva, sudhe saviva sudina aha..||


ಚಿತ್ರಗೀತೆ 


ಇದೇ ಇದೇ ಸವಿ ಬಾಳ ದಿನ,ಕಾದು ಕಂಡಿತೇ ಮಧುರ ಮನ,

ಮೈ ಮರೆಸುವಾ, ಮನ ತಣಿಸುವಾ, ಪ್ರೇಮ ಮಿಲನದ ದಿನಾ ..ಒಹೋ ।।ಪ।।


ಅನುರಾಗದ ಬಾಳಿನ ಗಾನ, ನೆರೆ ಹೊಮ್ಮಿ ಹಾಡೆ ಮನ ವೀಣಾ,

ನವಜೀವನ ತುಂಬಿದ ತ್ರಾಣ, ನಮ ಪ್ರೇಮವಿಂದೇ ಪರಿಪೂರ್ಣ,

ನಾವಾಡಿ ಪಾಡಿ, ಮನಸಾರೆ ನೋಡುವಾ, ಸದಾ ನಲಿವ ಸದನಾ ..ಆಹಾ ।।೧।।


ಒಲವೊಂದಿರೆ ನಮ್ಮಯ ಮುಂದೆ, ತನು ಮರೆವ ಒಡವೆ ತೃಣವೆಂದೇ,

ಮನ ಹೊಂದಿರೆ ಸ್ವರ್ಗವು ನಮದೇ, ಬಡತನವು ಸಿರಿಯು ಸಮವೆಂದೇ,

ನಾವಿಂದು ಸೇರಿ ನಲಿವಿಂದ ತೇಲುವ, ಸುಧೆ ಸವಿವ, ಸುದಿನಾ.. ಆಹಾ ।।೨।।