Monday, January 5, 2026

Enendu Naa Helali (ಏನೆಂದು ನಾ ಹೇಳಲಿ)

Movie: Girikanye (1977)

Singer: Dr. Rajkumar

Song link: Click Here


Enendu naa helali, maanavanasege kone elli,

Kaanodella beku emba hathadalli, olledella beku emaba chaladalli,

Yaarannu preetisanu manadalli, enenondu baalisanu jagadalli ||


Jenugalella, aleyuta haari, kaadella, kaadella, kaadella,

Hani hani jenu, serisalenu, beku endaaga tanadennuvaa,

Kesarina hoovu, vishada haavu, bhayavilla, bhayavilla, bhayavilla,

Cheluvinadella ruchisuvudella, kandu bandaaga bekennuva,

Enendu naa helali aa, maanavanasege kone elli ||


Pranigalenu, gidamaravenu, bidalaara, bidalaara, bidalaara,

Balusuvanella, ulisuvudilla, tanna hitakaagi horaaduva,

Nudiyuvudondu, nadeyuvudondu endendu, endendu, endendu,

Padeyuvudondu, koduvudu ondu, swarthi taanaagi meredaaduva ||


ಚಿತ್ರಗೀತೆ 


ಏನೆಂದು ನಾ ಹೇಳಲಿ, ಮಾನವನಾಸೆಗೆ ಕೊನೆ ಎಲ್ಲಿ,

ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ, ಒಳ್ಳೆದೆಲ್ಲ ಬೇಕು ಎಂಬ ಛಲದಲ್ಲಿ,

ಯಾರನ್ನು ಪ್ರೀತಿಸನು ಮನದಲ್ಲಿ, ಓ ಏನೊಂದು ಬಾಳಿಸನು ಜಗದಲ್ಲಿ ।।ಪ।।


ಜೇನುಗಳೆಲ್ಲ, ಅಲೆಯುತ ಹಾರಿ, ಕಾಡೆಲ್ಲ, ಕಾಡೆಲ್ಲ, ಕಾಡೆಲ್ಲ .. ,

ಹನಿ ಹನಿ ಜೇನು, ಸೇರಿಸಲೇನು, ಬೇಕು ಎಂದಾಗ ತನದೆನ್ನುವಾ,

ಕೆಸರಿನ ಹೂವು, ವಿಷದ ಹಾವು, ಭಯವಿಲ್ಲ, ಭಯವಿಲ್ಲ, 

ಭಯವಿಲ್ಲ,

ಚೆಲುವಿನದೆಲ್ಲ ರುಚಿಸುವುದೆಲ್ಲ, ಕಂಡು ಬಂದಾಗ ಬೇಕೆನ್ನುವ ।।೧।।


ಪ್ರಾಣಿಗಳೇನು, ಗಿಡಮರವೇನು, ಬಿಡಲಾರ, ಬಿಡಲಾರ, ಬಿಡಲಾರ,

ಬಳಸುವನೆಲ್ಲಾ, ಉಳಿಸುವುದಿಲ್ಲಾ, ತನ್ನ ಹಿತಕಾಗಿ ಹೋರಾಡುವ,

ನುಡಿಯುವುದೊಂದು, ನಡೆಯುವುದೊಂದು, ಎಂದೆಂದು, 

ಎಂದೆಂದು, ಎಂದೆಂದು,

ಪಡೆಯುವುದೊಂದು, ಕೊಡುವುದು ಒಂದು, ಸ್ವಾರ್ಥಿ ತಾನಾಗಿ ಮೆರೆದಾಡುವ ।।೨।।

                                 

Thursday, January 1, 2026

Talme (ತಾಳ್ಮೆ)

 ಪದ್ಯ 

ಸಾಹಿತ್ಯ: ಶ್ರೀ ವಾದಿರಾಜ 


ತಾಳುವಿಕೆಗಿಂತ ತಪವು ಇಲ್ಲ 

ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ।।ಪ।। 


ದುಷ್ಟಮನುಜರು ಪೇಳ್ವ ನಿಷ್ಠುರದ ನುಡಿತಾಳು 

ಕಷ್ಟ ಬಂದರೆ ತಾಳು ಕಂಗೆಡದೆ ತಾಳು 

ನೆಟ್ಟಸಸಿ ಫಲ ಬರುವ ತನಕ ಶಾಂತಿಯ ತಾಳು 

ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು ।।೧।।


ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು 

ಅಕ್ಕಸವ ಮಾಡುವರ ಅಕ್ಕರದಿ ತಾಳು 

ಉಕ್ಕೊ ಹಾಲಿಗೆ ನೀರು ಇಕ್ಕಿದಂದದಿ ತಾಳು 

ಪಕ್ಷೀಶ ಹಯವದನ ಶರಣೆಂದು ಬಾಳು ।।೨।।


Padya


Taaluvikeginta tapavu illa

Kelaballavarige heluvenu solla ||


Dushta manujaru pelva nishturada nuditaalu

Kashta bandare taalu kangedade taalu

Netta sasi phala baruva tanaka shantiyataalu

Kattu buttiya munde unaluntu taalu ||


Nakku nudivara munde mukkarisade taalu

Akkasava maaduvara akkaradi taalu

Ukko haalige neeru ikkidandadi taalu

Paksheesha hayavadana saranendu baalu ||

                     

        

Kannada (ಕನ್ನಡ)

ಪದ್ಯ 

ಸಾಹಿತ್ಯ: ಕುವೆಂಪು 


'ಕನ್ನಡ' ಎನೆ ಕುಣಿದಾಡುವುದೆನ್ನೆದೆ,

ಕನ್ನಡ ಎನೆ ಕಿವಿ ನಿಮಿರುವುದು !

ಕಾಮನ ಬಿಲ್ಲನು ಕಾಣುವ ಕಿವಿಯೊಲು 

ತೆಕ್ಕನೆ ಮನ ಮೈ ಮರೆಯುವುದು 


ಕನ್ನಡ! ಕನ್ನಡ! ಹಾ, ಸವಿಗನ್ನಡ!

ಕನ್ನಡದಲಿ ಹರಿ ಬರೆಯುವನು 

ಕನ್ನಡದಲಿ ಹರ ತಿರಿಯುವನು!

ಕನ್ನಡದಲ್ಲಿಯೆ ಬಿನ್ನಹಗೈದೊಡೆ   

ಹರಿ ವರಗಳ ಮಳೆ ಕರೆಯುವನು!

ಹರ ಮುರಿಯದೆ ತಾ ಪೊರೆಯುವನು!


ಬಾಳುವುದೇತಕೆ? ನುಡಿ ಎಲೆ ಜೀವ!

ಸಿರಿಗನ್ನಡದಲಿ ಕವಿತೆಯ ಹಾಡೆ!

ಸಿರಿಗನ್ನಡದೇಳಿಗೆಯನು ನೋಡಿ!

ಕನ್ನಡ ತಾಯಿಯ ಸೇವೆಯ ಮಾಡೆ!


Padya


'Kannada' ene kunidaaduvudennede,

Kannada ene kivi nimiruvudu!

Kaamana billanu kaanuva kiviyolu

Tekkane mana mai mareyuvudu.


Kannada! kannada! haa, savigannada!

Kannadadali hari bareyuvanu

Kannadadali hara tiriyuvanu!

Kannadadalliye binnahagaidode

Hari varagala male kareyuvanu!

Hara muriyade taa poreyuvanu!


Baaluvudetake? nudi, ele jeeva!

Sirigannadadali kaviteya haade!

Sirigannadadeligeyanu node!

Kannada taayiya seveya maade!  

             

Wednesday, December 17, 2025

Endu Ninna Noduve (ಎಂದು ನಿನ್ನ ನೋಡುವೆ)

Movie: Eradu Kanasu (1974)

Singer: P B Srinivas

Song link: Click Here


Endu ninna noduve, endu ninna seruve,

Nija helalenu, nanna jeeva neenu,

Nuraaru bayake, aatura tandide,

Nuraaru kanasu, kaatara tumbide,

Mugiligaagi baanu, dumbigaagi jenu,

Nanagaagi neenu, ninagaagi naanu ||


O..o.. tannane gaali, hita toradalla,

Kogile gaana, sukha needadalla,

Kaamana billigu, mana solalilla,

Ninnaya nenapalle sote naanu,

Nannase neenu, ninnase naanu ||


Kangala kanti neenagiruve,

Mai manavella nee tumbiruve,

Nannee baalige, belakaagiruve,

Januma januma jodi neenu,

Nanagaagi neenu, ninagaagi naanu ||


ಚಿತ್ರಗೀತೆ 


ಎಂದು ನಿನ್ನ ನೋಡುವೆ, ಎಂದು  ನಿನ್ನ ಸೇರುವೆ,

ನಿಜ ಹೇಳಲೇನು, ನನ್ನ ಜೀವ ನೀನು,

ನೂರಾರು ಬಯಕೆ, ಆತುರ ತಂದಿದೆ,

ನೂರಾರು ಕನಸೂ, ಕಾತರ ತುಂಬಿದೆ,

ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು,

ನನಗಾಗಿ ನೀನು, ನಿನಗಾಗಿ ನಾನು ।।ಪ।।


ಓ ಓ ತಣ್ಣನೇ ಗಾಳಿ, ಹಿತ ತೋರದಲ್ಲಾ,

ಕೋಗಿಲೆ ಗಾನಾ, ಸುಖ ನೀಡದಲ್ಲಾ,

ಕಾಮನ ಬಿಲ್ಲಿಗೂ, ಮನ ಸೋಲಲಿಲ್ಲ,

ನಿನ್ನಯ ನೆನಪಲ್ಲೆ ಸೋತೆ ನಾನು,

ನನ್ನಾಸೆ ನೀನು, ನಿನ್ನಾಸೆ ನಾನು ।।೧।।


ಕಂಗಳ ಕಾಂತಿ ನೀನಾಗಿರುವೆ, ಮೈ ಮನವೆಲ್ಲಾ ನೀ ತುಂಬಿರುವೆ,

ನನ್ನೀ ಬಾಳಿಗೆ, ಬೆಳಕಾಗಿರುವೆ,

ಜನುಮ ಜನುಮದ ಜೋಡಿ ನೀನು,

ನನಗಾಗಿ ನೀನು, ನಿನಗಾಗಿ ನಾನು ।।೨।।

                           

Yeri Mele Yeri (ಏರಿ ಮೇಲೆ ಏರಿ)

Movie: Jaga Mecchida Maga (1972)

Singers: SPB, L R Eshwari

Song link: Click Here


Ma Mma Mma Maavo..!

Yeri mele yeri, aha mele kelage haari,

Aha hakki bandu kuntaitallo, maava, hoi

Kaadaite, aha..sokkaite.., aha.. kobbaite ||


Gurr gutti nodi, gurr ennabeda,

Gurr gutti tola, tattalubeda,

Gummna haage, sumkira byada,

Gumpinalli kenakaadabyado,

Ahaa..! ahaa..!  maava ||


Malgidre mutti, ebbisi haaso,

Sogasidre ninna, chalaaku torso,

Jaaga nodi, seddu hodedu,

Mele biddu, guddadikollo,

Ahaa.., ahaa.., maava ||


ಚಿತ್ರಗೀತೆ 


ಮ ಮ್ಮ ಮ್ಮ ಮಾವೋ .. !

ಏರಿ ಮೇಲೆ ಏರಿ, ಅಹ ಮೇಲೆ ಕೆಳಗೆ ಹಾರಿ,

ಅಹ ಹಕ್ಕಿ ಬಂದು ಕುಂತೈತಲ್ಲೋ, ಮಾವಾ, ಹೋಯ್,

ಕಾದೈತೆ  ಆಹಾ .., ಸೊಕ್ಕೈತೆ .. , ಅಹ ಕೊಬ್ಬೈತೇ .. !


ಗುರ್ರ್ ಗುಟ್ಟಿ ನೋಡಿ, ಗುರ್ರ್ ಎನ್ನಬೇಡ,

ಗುರ್ರ್ ಗುಟ್ಟಿ ತೋಳ, ತಟ್ಟಲು ಬೇಡ,

ಗುಮ್ನ ಹಾಗೆ, ಸುಮ್ಕಿರ ಬ್ಯಾಡ,

ಗುಂಪಿನಲ್ಲಿ ಕೆಣಕಾಡಬ್ಯಾಡೊ,

ಆಹಾ .. ಆಹಾ .., ಮಾವಾ !


ಮಲ್ಗಿದ್ರೆ ಮುಟ್ಟಿ, ಎಬ್ಬಿಸಿ ಹಾಸೋ,

ಸೊಗಸಿದ್ರೆ ನಿನ್ನ, ಚಾಲಾಕು ತೋರ್ಸೋ,

ಜಾಗ ನೋಡಿ, ಸೆಡ್ಡು ಹೊಡೆದು,

ಮೇಲೆ ಬಿದ್ದು, ಗುದ್ದಾಡಿಕೊಳ್ಳೋ,

ಆಹಾ .. ಆಹಾ .., ಮಾವಾ !

            

Entha Soundarya Nodu (ಎಂಥಾ ಸೌಂದರ್ಯ ನೋಡು)

Movie: Maatu Tappada Maga (1978)

Singer: SPB

Song link: Click Here


 Entha soundarya nodu, namma karunaada beedu,

Gandhada gudidu, kalegala touridu,

Kannada naadidu, chinnada mannidu ||


Hariyuva neeru, hasurina pairu, ellede aa taaya siriye,

Hoogala kempu, maragala sompu, ellu aa taayi nageye,

Bharata maateya, ee tanujaateya,

Cheluvanu noduta, naliyuve, mareyuve naa..||


Elle irali, hege irali, nammura savinota chenda,

Saavira bhasheya, kalitaru manake, kannada nudi mutte anda,

Purvada punyavo, padediha bhagyavo,

Huttide paavana, kannada mannali naa..||


ಚಿತ್ರಗೀತೆ 


ಎಂಥಾ ಸೌಂದರ್ಯ ನೋಡು, ನಮ್ಮ ಕರುನಾಡ ಬೀಡು,

ಗಂಧದ ಗೂಡಿದು, ಕಲೆಗಳಾ ತೌರಿದು,

ಕನ್ನಡ ನಾಡಿದು, ಚಿನ್ನದಾ ಮಣ್ಣಿದು ।।ಪ।।


ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ,

ಹೂಗಳ ಕೆಂಪು, ಮರಗಳ ಸೊಂಪು, ಎಲ್ಲೂ ಆ ತಾಯಿ ನಗೆಯೇ,

ಭಾರತ ಮಾತೆಯಾ, ಈ ತನುಜಾತೆಯಾ,

ಚೆಲುವನು ನೋಡುತ, ನಲಿಯುವೆ, ಮರೆಯುವೆ ನಾ .. ।।೧।।


ಎಲ್ಲೇ ಇರಲಿ ಹೇಗೇ ಇರಲಿ, ನಮ್ಮೂರ ಸವಿನೋಟ ಚೆಂದಾ,

ಸಾವಿರ ಭಾಷೆಯ, ಕಲಿತರು ಮನಕೆ, ಕನ್ನಡ ನುಡಿ ಮುತ್ತೆ ಅಂದ,

ಪುರ್ವದ ಪುಣ್ಯವೋ, ಪಡೆದಿಹ ಭಾಗ್ಯವೋ,

ಹುಟ್ಟಿದೆ ಪಾವನ ಕನ್ನಡ ಮಣ್ಣಲಿ ನಾ .. ।।೨।।

                              

Saturday, December 13, 2025

Hinnudi (ಹಿನ್ನುಡಿ)

 ಪದ್ಯ 

ಸಾಹಿತ್ಯ : ದಿನಕರ ದೇಸಾಯಿ 


ನನ್ನ ಭಾವದ ಕವನ,

ನನ್ನ ಗಾನದ ತನನ,

ನನ್ನದೆಂಬುವ ಜಂಬ ಸಾಕು ದೇವಾ,

ನಿನ್ನ ಕೃಪೆಯಿಂದಲೇ 

ಬನ್ನಿ ಗಿಡ ಹೂ ಬಿಡಲು,

ನಿನ್ನ ಸೇವೆಗೆ ನೀನೆ ತಂದೆ ಹೂವ !


ಹಕ್ಕಿಗಳ ಇಂಚರವು,

ಚುಕ್ಕಿ ಮಿಂಚುವ ತೆರವು,

ಉಕ್ಕಿ ಮೊರೆಯುವ ತೆರೆಯು ನಿನ್ನ ಕವನ. 

ನನ್ನದೆಂಬುವ ಗೀತ 

ನಿನ್ನದೇ ಸಂಗೀತ,

ಎಲ್ಲೆಲ್ಲಿಯೂ ನಿನ್ನ ಭಾವ-ಪವನ. 


ನನ್ನ ಕನ್ನಡ ನುಡಿಗೆ 

ನಿನ್ನ ಹಿನ್ನುಡಿಯಿರಲು,

ನನ್ನದೆಂಬುದು ತಾನೆ ಕನ್ನಡಿಯ ಬಿಂಬ;

ಪೊಡವಿಯಲಿ ನಾಲ್ದೆಸೆಗೆ 

ನೀನೆ ಹಾಡುತಲಿರಲು,

ನಿನ್ನ ಭಾವನೆ ನನ್ನ ನುಡಿ-ಗುಡಿಯ ಕಂಬ! 


Padya


Nanna bhavada kavana,

Nanna gaanada tanana,

Nannadembuva jamba saaku deva.

Ninna krupeyindale

Banni gida hoo bidalu,

Ninna sevege neene tande hoova!


Hakkigala incharavu,

Chukki minchuva teravu,

Ukki moreyuva tereyu ninna kavana.

Nannadembuva geeta

Ninnade sangeeta,

Ellelliyu ninna bhava-pavana.


Nanna kannada nudige

Ninna hinnudiyiralu,

Nannadembudu taane kannadiya bimba;

Podaviyali naldesege

Neene haadutaliralu,

Ninna bhavane nanna nudi-gudiya kamba!