Tuesday, October 14, 2025

Nee Iralu Jotheyalli (ನೀ ಇರಲು ಜೊತೆಯಲ್ಲಿ)

Movie: Guna Nodi Hennu Kodu (1982)

Singers: SPB, S Janaki

Song link: Click Here


Nee iralu jotheyalli, balella hasiradante,

Naguta nee karedare, manade santosha haadadante,

Nee iralu jotheyalli, balella hasiradante ||


Matalli eno hosatana, maguvannu holo hoo mana,

Rasakavya ninna youvvana, ede tumbi ninte prati kshana,

Halli mannalli, birida mallige, berete usiralli ondaadante,

Nee iralu jotheyalli, balella hasiradante ||


Ee neeli kanna belakali, maneyella endu belagali,

Nee tanda preeti lateyali, naguvemba hoovu aralali,

Agali ninnanu, balalaarenu, jeeva odalinda dooradante,

Nee iralu jotheyalli, balella hasiradante ||


ಚಿತ್ರಗೀತೆ 


ನೀ ಇರಲು ಜೊತೆಯಲ್ಲಿ, ಬಾಳೆಲ್ಲ ಹಸಿರಾದಂತೆ,

ನಗುತ ನೀ ಕರೆದರೆ, ಮನದೆ ಸಂತೋಷ ಹಾಡಾದಂತೆ,

ನೀ ಇರಲು ಜೊತೆಯಲ್ಲಿ, ಬಾಳೆಲ್ಲ ಹಸಿರಾದಂತೆ ।।ಪ।।


ಮಾತಲ್ಲಿ ಏನೋ ಹೊಸತನ, ಮಗುವನ್ನು ಹೋಲೋ ಹೂ ಮನ,

ರಸಕಾವ್ಯ ನಿನ್ನ ಯೌವ್ವನ, ಎದೆ ತುಂಬಿ ನಿಂತೆ ಪ್ರತಿ ಕ್ಷಣ,

ಹಳ್ಳಿ ಮಣ್ಣಲ್ಲಿ, ಬಿರಿದ ಮಲ್ಲಿಗೆ, ಬೆರೆತೆ ಉಸಿರಲ್ಲಿ ಒಂದಾದಂತೆ,

 ನೀ ಇರಲು ಜೊತೆಯಲ್ಲಿ, ಬಾಳೆಲ್ಲ ಹಸಿರಾದಂತೆ ।।೧।।


ಈ ನೀಲಿ ಕಣ್ಣ ಬೆಳಕಲಿ, ಮನೆಯೆಲ್ಲ ಎಂದೂ ಬೆಳಗಲಿ,

ನೀ ತಂದ ಪ್ರೀತಿ ಲತೆಯಲಿ, ನಗುವೆಂಬ ಹೂವು ಅರಳಲಿ,

ಅಗಲಿ ನಿನ್ನನ್ನು ಬಾಳಲಾರೆನು, ಜೀವ ಒಡಲಿಂದ ದೂರಾದಂತೆ,

ನೀ ಇರಲು ಜೊತೆಯಲ್ಲಿ, ಬಾಳೆಲ್ಲ ಹಸಿರಾದಂತೆ ।।೨।।

                                           

Aakashave Beelali Mele (ಆಕಾಶವೆ ಬೀಳಲಿ ಮೇಲೆ)

Movie: Nyayave Devaru (1971)

Singer: P B Srinivas

Song link: Click Here


Aakashave beelali mele, nanendu ninnavanu,

Bhumiye bayi bidali ille, na ninna kai bidenu,

Neeniruvude nanagaagi, ee jeeva ninagaagi,

Aakashave beelali mele, nanendu ninnavanu ||


Hedarikeya notaveke, odanaadi naaniruve,

Hosa baalina haadiyalli, jategudi naa baruve,

Kallirali, mulle irali, naa modalu munnadeve,

Neenadiya iduvedeyalli, olavina hoo haasuve,

Ee maatige manave sakshi, ee bhashege devare sakshi,

Innadaru nanna nambi nageya chellu cheluve ||


Hasemaneyu namage indu, naavu ninta taanavu,

Tugaaduva hasireleye, shubha koruva toranavu,

Hakkigala chilipili gaana, mangalakara naadavu,

Ee nadiya kalaravave, mantragala ghoshavu,

Saptapadi ee nadeyaytu, sanje rangu aaratiyaytu,

Indeega eradu jeeva beretu swargavaytu ||


ಚಿತ್ರಗೀತೆ 


ಆಕಾಶವೆ ಬೀಳಲಿ ಮೇಲೆ, ನಾನೆಂದು ನಿನ್ನವನು,

ಭೂಮಿಯೆ ಬಾಯಿ ಬಿಡಲಿ ಇಲ್ಲೇ, ನಾ ನಿನ್ನ ಕೈ ಬಿಡೆನು,

ನೀನಿರುವುದೆ ನನಗಾಗಿ, ಈ ಜೀವ ನಿನಗಾಗಿ,

ಆಕಾಶವೆ ಬೀಳಲಿ ಮೇಲೆ, ನಾನೆಂದು ನಿನ್ನವನು ।।ಪ।।


ಹೆದರಿಕೆಯ ನೋಟವೇಕೆ, ಒಡನಾಡಿ ನಾನಿರುವೆ,

ಹೊಸ ಬಾಳಿನ ಹಾದಿಯಲ್ಲಿ, ಜತೆಗೂಡಿ ನಾ ಬರುವೆ,

ಕಲ್ಲಿರಲಿ ಮುಳ್ಳೇ ಇರಲಿ, ನಾ ಮೊದಲು ಮುನ್ನಡೆವೆ,

ನೀನಡಿಯ ಇಡುವೆಡೆಯಲ್ಲಿ, ಒಲವಿನ ಹೂ ಹಾಸುವೆ,

ಈ ಮಾತಿಗೆ ಮನವೇ ಸಾಕ್ಷಿ, ಈ ಭಾಷೆಗೆ ದೇವರೆ ಸಾಕ್ಷಿ,

ಇನ್ನಾದರೂ ನನ್ನಾ ನಂಬಿ ನಗೆಯಾ ಚೆಲ್ಲು ಚೆಲುವೆ ।।೧।।


ಹಸೆಮಣೆಯು ನಮಗೆ ಇಂದು, ನಾವು ನಿಂತ ತಾಣವು,

ತೂಗಾಡುವ ಹಸಿರೆಲೆಯೇ, ಶುಭ ಕೋರುವ ತೋರಣವು,

ಹಕ್ಕಿಗಳ ಚಿಲಿಪಿಲಿ ಗಾನಮ್ ಮಂಗಳಕರ ನಾದವು,

ಈ ನದಿಯ ಕಲರವವೇ, ಮಂತ್ರಗಳ ಘೋಷವು,

ಸಪ್ತಪದಿ ಈ ನಡೆಯಾಯ್ತು, ಸಂಜೆ ರಂಗು ಆರತಿಯಾಯ್ತು,

ಇಂದೀಗ ಎರಡೂ ಜೀವ  ಬೆರೆತೂ ಸ್ವರ್ಗವಾಯ್ತು ।।೨।। 

                              

Aakashadinda Dharegilida Rambhe (ಆಕಾಶದಿಂದ ಧರೆಗಿಳಿದ ರಂಭೆ)

Movie: Chendanada Gombe (1979)

Singer: SPB

Song link: Click Here


Aakashadinda dharegilida rambhe,

Ivale ivale chendanada gombe,

Cheluvaada gombe, chendanadaa gombe ||


Bangaaradinda bombeyanu maadida,

Chendirana kantiya tanuvalli tumbida,

Taavareya anda kannalli tandaa,

Ee sanje kempanu kenneyali tumbidaa,

Aa devare kaanike needida, nanna, jothe maadida aaha ||


Nadevaaga ninna maimaatavenu,

Aa hejje naadake mai maretu hodenu,

Kannalle nooru honganasu kandenu,

Aa kanasinalle naa karagi hodenu,

Aa hoo nage kandenu sotenu, ninna, sereyaadenu aaha ||


ಚಿತ್ರಗೀತೆ 


ಆಕಾಶದಿಂದ ಧರೆಗಿಳಿದ ರಂಭೆ,

ಇವಳೇ ಇವಳೇ ಚೆಂದನದ'ಗೊಂಬೆ,

ಚೆಲುವಾದ ಗೊಂಬೆ ಚೆಂದನದಾ ಗೊಂಬೆ ।।ಪ।।


ಬಂಗಾರದಿಂದ ಬೊಂಬೆಯನು ಮಾಡಿದ,

ಚೆಂದಿರನ ಕಾಂತಿಯ ತನುವಲ್ಲಿ ತುಂಬಿದ,

ತಾವರೆಯ ಅಂದ ಕೆಂಪನು ಕೆನ್ನೆಯಲಿ ತುಂಬಿದಾ,

ಆ ದೇವರೇ ಕಾಣಿಕೆ ನೀಡಿದಾ, ನನ್ನಾ ಜೊತೆ ಮಾಡಿದಾ ಆಹಾ 

।।೧।।


ನಡೆವಾಗ ನಿನ್ನಾ ಮೈಮಾಟವೇನು,

ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು,

ಕಣ್ಣಲ್ಲೆ ನೂರು ಹೊಂಗನಸು ಕಂಡೆನು,

ಆ ಕನಸಿನಲ್ಲೇ ನಾ ಕರಗಿ ಹೋದೆನು,

ಆ ಹೂ ನಗೆ ಕಂಡೆನೂ ಸೋತೆನೂ , ನಿನ್ನಾ ಸೆರೆಯಾದೆನು ಆಹಾ 

।।೨।।

                                     

Nee Bareda Olavina Ole (ನೀ ಬರೆದ ಒಲವಿನ ಓಲೆ)

Movie: Arunaraaga (1986)

Singer: S Janaki

Song link: Click Here


Nee bareda olavina ole (ole ole)

Needutide pulakada maale (maale maale)

Indenage nalivina vele (vele vele)

Tugide premada uyyale (hm hm..)

Nee bareda olavina ole ||


GaMaPa GaMaPa GaMaPa GaMaPa MaGaSaNiSa


Aruna kirana holeva haage, ninna mukhada hoo nage,

Chaitra ruthuvu baruva haage, harusha tande baalige,

Swati muttina haage, preeti chendaagi,

Roopu kanmana seledu, aase rangaagi,

Raaga taana kudo haage naanu ninna kudide ||


Ilege maleyu banda haage, neenu bande badukige,

Dharege swarga ilida haage, nalme kande ommege,

Sneha sambandha besedu, bandha ondaagi,

Moha daaha maretu, prema nantaagi,

Haalu jenu sero haage naanu ninna seride ||


ಚಿತ್ರಗೀತೆ 


ನೀ ಬರೆದ ಒಲವಿನ ಓಲೆ  (ಓಲೆ ಓಲೆ )

ನೀಡುತಿದೆ ಪುಳಕದ ಮಾಲೆ  (ಮಾಲೆ ಮಾಲೆ )

ಇಂದೆನಗೆ ನಲಿವಿನ ವೇಳೆ  (ವೇಳೆ ವೇಳೆ )

ತೂಗಿದೆ ಪ್ರೇಮದ ಉಯ್ಯಾಲೆ  (ಹೊಮ್  ಹೊಮ್.. )

ನೀ ಬರೆದ ಒಲವಿನ ಓಲೆ ।।ಪ।।


ಗಮಪ ಗಮಪ ಗಮಪ ಗಮಪ ಮಾಗಸನಿಸ 


ಅರುಣ ಕಿರಣ ಹೊಳೆವ ಹಾಗೆ, ನಿನ್ನ ಮುಖದ ಹೂ ನಗೆ,

ಚೈತ್ರ ಋತುವು ಬರುವ ಹಾಗೆ, ಹರುಷ ತಂದೆ ಬಾಳಿಗೆ,

ಸ್ವಾತಿ ಮುತ್ತಿನ ಹಾಗೆ, ಪ್ರೀತಿ ಚೆಂದಾಗಿ,

ರೂಪು ಕಣ್ಮನ ಸೆಳೆದು, ಆಸೆ ರಂಗಾಗಿ,

ರಾಗ ತಾನ ಕೂಡೋ ಹಾಗೆ ನಾನು ನಿನ್ನ ಕೂಡಿದೆ ।।೧।।


ಇಳೆಗೆ ಮಳೆಯು ಬಂದ ಹಾಗೆ, ನೀನು ಬಂದೆ ಬದುಕಿಗೆ,

ಧರೆಗೆ ಸ್ವರ್ಗ ಇಳಿದ ಹಾಗೆ, ನಲ್ಮೆ ಕಂಡೆ ಒಮ್ಮೆಗೆ,

ಸ್ನೇಹ'ಸಂಬಂಧ ಬೆಸೆದು, ಬಂಧ ಒಂದಾಗಿ,

ಮೋಹ ದಾಹ ಮರೆತು, ಪ್ರೇಮ ನಂಟಾಗಿ,

ಹಾಲು ಜೇನು ಸೇರೋ ಹಾಗೆ ನಾನು ನಿನ್ನ ಸೇರಿದೆ  ।।೨।।

                                     

Thursday, October 9, 2025

Gutuku (ಗುಟುಕು)

ಪದ್ಯ 

ಸಾಹಿತ್ಯ: ಟಿ. ಎಸ್. ನಾಗರಾಜ ಶೆಟ್ಟಿ 


ಬಾನಲಿ ಹಾರುವ 

ಹೊಳಪಿನ ಚುಕ್ಕಿ 

ಲಾಗಾ ಹೊಡೆಯಿತು 

ಗಾಳಿಯಲಿ. 


ಪುರ್ರನೆ ಏರಿತು 

ಜರ್ರನೆ ಇಳಿಯಿತು 

ನಾರನು ತಂದಿತು 

ಕೊಕ್ಕಿನಲಿ. 


ಹಾರಿತು ಹುಡುಕಿತು 

ಆರಿಸಿ ಬಿಟ್ಟಿತು 

ಮುಳ್ಳಿನ ಮರವನು 

ಕೊಳದ ಬಳಿ. 


ಕೊಂಬೆಯ ತುದಿಯಲಿ 

ಎಟುಕದ ಅಂಚಲಿ 

ಗೂಡನು ಹೆಣೆಯಿತು 

ಚೆಲುವಿನಲಿ 


ತಳದಲಿ ತೆರೆದಿಹ 

ಬಾಯಿಯ ಬಾಗಿಲು 

ತುದಿಯಲಿ ಹೆಣೆದಿಹ 

ಗಂಟೇ ಕಾವಲು. 


ಕೆಲವೇ ದಿನದಲಿ 

ಮೊಟ್ಟೆಯನಿಟ್ಟಿತು 

ಬೆಳಕನು ಕಾಣದೆ 

ನಿಟ್ಟುಸಿರಿಟ್ಟಿತು. 


ಮಿನುಗುತ ಕುಣಿಯುತ 

ಮಿಂಚುಹುಳ 

ಹಾರುತ ಬಂದಿತು 

ಬೆಳಕು ಹುಳ. 


ಹಕ್ಕಿಯು ತಾನು 

ಕಂಡಿತು ಥಟ್ಟನೆ 

ಬಾಗುತ ಕೊಕ್ಕಲಿ 

ಹಿಡಿಯಿತು ಪಕ್ಕನೆ !


ಸಿಕ್ಕಿಕೊಂಡಿತು 

ಗೂಡಿನ ಒಳಗೆ 

ಕಾವನು ಕೊಟ್ಟಿತು 

ಬೆಳಕಲಿ ಮೊಟ್ಟೆಗೆ. 


ಮರಿಗಳು ಬರಲು 

ತೆವಳುತಲಿ 

ಗುಟುಕನು ನೀಡಿತು 

ಹರುಷದಲಿ. 


Padya


Baanali haaruva

Holapina chukki

Laagaa hodeyitu

Gaaliyali.


Purrane eritu

Jarrane iliyitu

Naaranu tanditu

Kokkinali.


Haaritu hudukitu

Aarisi bittitu

Mullina maravanu

Kolada bali.


Kombeya tudiyali

Etukada anchali

Gudanu heneyitu

Cheluvinali.


Taladali terediha

Baayiya baagilu

Tudiyali henediha

Gante kaavalu.


Kelave dinadali

Motteyanittitu

Belakanu kaanade

Nittusirittitu.


Minuguta kuniyuta

Minchuhula

Haaruta banditu

Belaku hula.


Hakkiyu taanu

Kanditu thattane

Baaguta kokkali

Hidiyitu pakkane!


Sikkikonditu

Gudina olage

Kaavanu kottitu

Belakali mottege.


Marigalu baralu

Tevalutali

Gutukanu needitu

Harushadali.

   

Baana Kusuma (ಬಾನ ಕುಸುಮ)

 ಪದ್ಯ 

ಸಾಹಿತ್ಯ: ಫ. ಗು. ಸಿದ್ದಾಪೂರ 


ಇರುಳಿನ ಕೆಸರಲಿ ಅರಳಿದ ತಾವರೆ 

ಚಂದಿರ ನಗುತಿಹನು. 

ಮಜ್ಜಿಗೆಯೊಳಗಿನ ಬೆಣ್ಣೆಯ ಹಾಗೆ 

ತೇಲುತ ಬರುತಿಹನು. 


ತಾರಾ ಬಳಗದಿ ತಾನೊಂದಾಗಿ 

ಬಾನಲಿ ನಲಿಯುವನು. 

ಓಡುವ ಮೋಡದ ಹಿಂಡೊಳಗಾಡುತ 

ಮಿರಿ ಮಿರಿ ಮಿನುಗುವನು. 


ಹಾಲಿನ ಬೆಳಕನು ಚಲ್ಲುತ ಧರೆಗೆ 

ತಂಪನು ಹರಡುವನು. 

ಆಡುವ ಮಕ್ಕಳ ದೇಹಕೆ ಚೇತನ 

ಚಂದಿರ ನೀಡುವನು. 


ರಂಪವ ಮಾಡುವ ಕಂದನ ರಮಿಸಲು 

ಅಮ್ಮನು ತೋರುವಳು. 

ಚಂದಿರ ಕರೆಯುತ ಹಾಡನು ಹಾಡಿ 

ಅನ್ನವನುಣಿಸುವಳು. 


ತಿಂಗಳ ಬೆಳಕಲಿ ಅಂಗಳ ತುಂಬಾ 

ಎಳೆಯರು ಸೇರುವರು. 

ವಿಧವಿಧ ಆಟವ ಹಸುಳೆಗಳಾಡುತ 

ಮೈಮನ ಮರೆಯುವರು. 


Padya


Irulina kesarali aralida taavare

Chandira nagutihanu.

Majjigeyolagina benneya haage

Teluta barutihanu.


Taara balagadi taanondaagi

Baanali naliyuvanu.

Oduva modada hindolagaaduta

Miri miri minuguvanu.


Haalina belakanu challuta dharege

Tampanu haraduvanu.

Aaduva makkala dehake chetana

Chandira needuvanu.


Rampava maaduva kandana ramisalu

Ammanu toruvalu.

Chandira kareyuta haadanu haadi

Annavanunisuvalu.


Tingala belakali angala tumba

Eletaru seruvaru.

Vidhavidha aatava hasulegalaaduta

Maimana mareyuvaru.

              

Wednesday, October 8, 2025

Jaya Jaya Jaya Sri Raghavendra (ಜಯ ಜಯ ಜಯ, ಶ್ರೀ ರಾಘವೇಂದ್ರ)

Bhaktigeete

Singer: Vani Jairam

Song link: Click here


Jaya jaya jaya, sri raghavendra, jaya guru raaya yatirajendra,

Paavana naama, mangala dhama, tunga teerada punya theertha ||


Deena bandhu daivavu neene, satya dharmagala paalaka neene,

Tandeyu neene, taayiyu neene, sakala karyake poojita neene

Olidu baara, dayava tora, harasute nammanu kaayo baara ||


Neleside guruve mantralayadi, ajapita raamara naamava smarisute

Kaamita phalaveeva, kamadhenuve, rakshisu nammannu vishwatomukhane 

Muktidaayakane, parama pavitrane, shreepaada rajage namo namo||


ಭಕ್ತಿಗೀತೆ 


ಜಯ ಜಯ ಜಯ, ಶ್ರೀ ರಾಘವೇಂದ್ರ, ಜಯ ಗುರು ರಾಯ ಯತಿರಾಜೇಂದ್ರ, 

ಪಾವನನಾಮ, ಮಂಗಳಧಾಮ, ತುಂಗಾ ತೀರದಿ ಪುಣ್ಯ ತೀತ  

।।ಪ।।


ದೀನ ಬಂಧು ದೈವವು ನೀನೇ, ಸತ್ಯ ಧರ್ಮಗಳ ಪಾಲಕ ನೀನೇ, 

ತಂದೆಯು ನೀನೆ, ತಾಯಿಯು ನೀನೇ, ಸಕಲ ಕಾರ್ಯಕೆ ಪೂಜಿತ  ನೀನೆ 

ಒಲಿದು ಬಾರಾ, ದಯವ ತೋರಾ, ಹರಸುತೆ  ನಮ್ಮನು ಕಾಯೋ ಬಾರಾ ।।೧।।


ನೆಲೆಸಿದೆ ಗುರುವೇ ಮಂತ್ರಾಲಯದಿ, ಅಜಪಿತ ರಾಮರ ನಾಮವ ಸ್ಮರಿಸುತೆ,  

ಕಾಮಿತ ಫಲವೀವ, ಕಾಮಧೇನುವೆ, ರಕ್ಷಿಸು ನಮ್ಮನ್ನು ವಿಶ್ವತೋಮುಖನೆ, 

ಮುಕ್ತಿದಾಯಕನೇ, ಪರಮ ಪವಿತ್ರನೇ, ಶ್ರೀಪಾದ ರಾಜಗೆ ನಮೋ ನಮೋ ।।೨।।