Saturday, June 14, 2025

Jhal Jhal Jhal Jhal (ಝಲ್ ಝಲ್ ಝಲ್ ಝಲ್)

Movie: Madhura Milana (1969)

Singer: S Janaki

Song link: Click Here


Jhal jhal jhal jhal mai kamana billu,

Ellu ellu ellu aa premada sollu ||


Rasa nimisha baralu nishe tumbutiralu,

Hosa huyilo huyilu huyilu huyilu ||


Kannancha minchinalle aa sanne sanchinalle,

Madhumaasa haasadalle nachihudu nachihudu nemadalle ||


Modalu modalu kodukoluva adalu badalu,

Mai manada solu solu, solallu paalu paalu ||


Aa nenape sudheya dhare bedenage swarga bere,

Avarinda sukhada sure avararo helalare ||


ಚಿತ್ರಗೀತೆ 


ಝಲ್ ಝಲ್ ಝಲ್ ಮೈ ಕಾಮನ ಬಿಲ್ಲು,

ಎಲ್ಲು ಎಲ್ಲು ಎಲ್ಲು ಆ ಪ್ರೇಮದ ಸೊಲ್ಲು ।।ಪ।।


ರಸ ನಿಮಿಷ ಬರಲು ನಿಶೆ ತುಂಬುತಿರಲು,

ಹೊಸ ಹುಯಿಲೋ ಹುಯಿಲು ಹುಯಿಲು ಹುಯಿಲು ।।೧।।


ಕಣ್ಣಂಚ ಮಿಂಚಿನಲ್ಲೇ ಆ ಸನ್ನೆ ಸಂಚಿನಲ್ಲೇ,

ಮಧುಮಾಸ ಹಾಸದಲ್ಲೆ ನಾಚಿಹುದು ನಾಚಿಹುದು ನೆಮದಲ್ಲೇ 

।।೨।।


ಮೊದಲು ಮೊದಲು ಕೊಡು ಕೊಳುವ ಅದಲುಬದಲು,

ಮೈ ಮನದ ಸೋಲು, ಸೋಲಲ್ಲು ಪಾಲು ಪಾಲು ।।೩।।


ಆ ನೆನಪೆ ಸುಧೆಯ ಧಾರೆ ಬೇಡೆನಗೆ ಸ್ವರ್ಗ ಬೇರೆ,

ಅವರಿಂದ ಸುಖದ ಸೂರೆ ಅವರಾರೋ ಹೇಳಲಾರೆ ।।೪।।

                              

Friday, June 6, 2025

Deepavali Deepavali Mahanandakara (ದೀಪಾವಳಿ ದೀಪಾವಳಿ ಮಹಾನಂದಕರ)

Movie: Madhura Milana (1969)

Singer: S Janaki


Deepavali deepavali, mahaanandakara deepavali,

Mahadaana nidhi mahaabali, avana punya dina deepavali ||


Rangavalliya chaluva chitravali, shubhashayangala uliva patravali,

Aliya devarige olumeya baluvali,lakshmi poojeya deepavali,

Dhanalakshmi poojeya deepavali ||


Saalu deepagala hombelakalli, jebugalla bhava maidunarhavali,

Hoobana birusu sidimaddina dhali, marali marali barali deepavali ||


ಚಿತ್ರಗೀತೆ 


ದೀಪಾವಳಿ ದೀಪಾವಳಿ, ಮಹಾನಂದಕರ ದೀಪಾವಳಿ,

ಮಹಾದಾನನಿಧಿ ಮಹಾಬಲಿ, ಅವನ ಪುಣ್ಯದಿನ ದೀಪಾವಳಿ ।।ಪ।।


ರಂಗವಲ್ಲಿಯ ಚಲುವ ಚಿತ್ರಾವಳಿ, ಶುಭಾಶಯಂಗಳ ಉಲಿವ ಪತ್ರಾವಳಿ,

ಅಳಿಯದೇವರಿಗೆ ಒಲುಮೆಯ ಬಳುವಳಿ, ಲಕ್ಷ್ಮೀ ಪೂಜೆಯ ದೀಪಾವಳಿ,

ಧನಲಕ್ಷ್ಮೀ ಪೂಜೆಯ ದೀಪಾವಳಿ ।।೧।।


ಸಾಲು ದೀಪಗಳ ಹೊಂಬೆಳಕಲ್ಲಿ, ಜೇಬುಗಳ್ಳ ಭಾವ ಮೈದುನರ್ಹಾವಳಿ,

ಹೂಬಾಣ ಬಿರುಸು ಸಿಡಿಮದ್ದಿನ ಧಾಳಿ, ಮರಳಿ ಮರಳಿ ಬರಲಿ ದೀಪಾವಳಿ  ।।೨।। 

                             

Laalbag Gulabi Roja (ಲಾಲ್ ಬಾಗ್ ಗುಲಾಬಿ ರೋಜಾ)

Movie: Madhura Milana (1969)

Singer: L R Eswari

Song link: Click Here


Lalbag gulabi roja, kanteredu nodu raja,

Mudiyeri jaarilla tiliyo nija, o ho ho raja..ee roja ||


Cheluvina kathegala bareside, yuvakana youvana tiliside,

Mudukana manavanu kalakide, rasika hrudayagala nagisi nagutide,

O ho ho raja.. ee roja ||


Aaseya kannige silukade, kareyuva kaiyige nilukade,

Mullina gidadalu nalugade, madhura milanake meesalagide,

O ho ho raja.. ee roja ||


ಚಿತ್ರಗೀತೆ 


ಲಾಲ್ ಬಾಗ್ ಗುಲಾಬಿ ರೋಜಾ, ಕಣ್ತೆರೆದು ನೋಡು ರಾಜ,

ಮುಡಿಯೇರಿ ಜಾರಿಲ್ಲ ತಿಳಿಯೊ ನಿಜ, ಓಹೋಹೋ ರಾಜ ಈ ರೋಜಾ ।।ಪ।।


ಚೆಲುವಿನ ಕಥೆಗಳ ಬರೆಸಿದೆ, ಯುವಕನ ಯೌವನ ತಿಳಿಸಿದೆ,

ಮುದುಕನ ಮನವನು ಕಲಕಿದೆ, ರಸಿಕ ಹೃದಯಗಳ ನಗಿಸಿ ನಗುತಿದೆ,

ಓಹೋಹೋ ರಾಜ ಈ ರೋಜಾ ।।೧।।


ಆಸೆಯ ಕಣ್ಣಿಗೆ ಸಿಲುಕದೆ, ಕರೆಯುವಾ ಕೈಯಿಗೆ ನಿಲುಕದೆ,

ಮುಳ್ಳಿನ ಗಿಡದಲು  ನಲುಗದೆ, ಮಧುರ ಮಿಲನಕೆ ಮೀಸಲಾಗಿದೆ,

ಓಹೋಹೋ ರಾಜ ಈ ರೋಜಾ ।।೨।।

                     



Ramya Jeevana (ರಮ್ಯ ಜೀವನ)

Movie: Takka Bitre Sikka (1970)

Singer: P B Srinivas

Song link: Click Here


Ramya jeevana, sampoorna

Vidhiya kala vidhana

Krutiyalli kundilla, padevalli neenilla ||


Banda reeti, bettale, chali chali,

Hoguvaaga kattale tili tili,

Aaseyella ittale tore tore,

Aatananne ettalu kare kare ||


Jaaritalle ninneya nerehore,

Aatavella aayitu are bare,

Kelaraaru indina stiti gati,

Daivavonde mundina gati mati ||


ಚಿತ್ರಗೀತೆ 


ರಮ್ಯ ಜೀವನ ಸಂಪೂರ್ಣ,

ವಿಧಿಯ ಕಲಾ ವಿಧಾನ,

ಕೃತಿಯಲ್ಲಿ ಕುಂದಿಲ್ಲ, ಪಡೆವಲ್ಲಿ ನೀನಿಲ್ಲ ।।ಪ।।


ಬಂದ ರೀತಿ ಬೆತ್ತಲೆ, ಛಳಿ ಛಳಿ,

ಹೋಗುವಾಗ ಕತ್ತಲೆ, ತಿಳಿ ತಿಳಿ,

ಆಸೆಯೆಲ್ಲಾ ಇತ್ತಲೇ ತೊರೆ ತೊರೆ,

ಆತನನ್ನೇ ಎತ್ತಲೂ ಕರೆ ಕರೆ ।।೧।।


ಜಾರಿತಲ್ಲೇ ನಿನ್ನೆಯ ನೆರೆಹೊರೆ,

ಆಟವೆಲ್ಲ ಆಯಿತು ಅರೆ ಬರೆ,

ಕೇಳರಾರೂ ಇಂದಿನ ಸ್ಥಿತಿ ಗತಿ,

ದೈವವೊಂದೇ ಮುಂದಿನ ಗತಿ ಮತಿ ।।೨।।

                       

Monday, May 26, 2025

O Ho Ho Bhale Basava (ಓ ಹೋ ಹೋ ಭಲೇ ಬಸವಾ)

Movie: Bhale Basava (1969)

Singer: S Janaki

Song link: Click Here


O ho ho bhale basava, maatado beedi basava,

Ballekano kole basava, ninna manava ninna manava ||


Mooru aaneyante balava, hondiruva ee basava,

Chigurumeese jigijigisutta, theevi inda nadedu baruva,

Odillada jaananiva, maneyavara prananiva,

Hennendare doora doora, eke odi hoguva ||


Maradinda marake negeva, hanumantana sishyaniva,

Kallinanta maiyinava, belladantha manasinava,

Eke doora jaaruva, siduki siduki noduva,

Ee basava kaddiruva, nanna manava nanna manava ||


Bhudeviye nanna tayi, endu manadi nambiruva,

Negile devarendu poojeyannu maaduva,

Manninalle chinnava, beleva aase hondiha,

Eey gange kaiya hididare taane, phalava basava kaanuva ||


ಚಿತ್ರಗೀತೆ 


ಓ ಹೋ ಹೋ ಭಲೇ ಬಸವಾ, ಮಾತಾಡೋ ಬೀದೀ ಬಸವಾ,

ಬಲ್ಲೆ ಕಣೋ ಕೋಲೇ ಬಸವಾ, ನಿನ್ನಾ ಮನವಾ ನಿನ್ನ ಮನವಾ 

।।ಪ।।


ಮೂರು ಆನೆಯಂತೆ ಬಲವಾ, ಹೊಂದಿರುವ ಈ ಬಸವಾ,

ಚಿಗುರುಮೀಸೆ ಜಿಗಿಜಿಗಿಸುತ್ತಾ, ಠೀವಿಯಿಂದ ನಡೆದೂ ಬರುವಾ,

ಓದಿಲ್ಲದ ಜಾಣನಿವಾ, ಮನೆಯವರ ಪ್ರಾಣನಿವಾ,

ಹೆಣ್ಣೆಂದರೆ ದೂರ ದೂರ, ಏಕೆ ಓಡಿ ಹೋಗುವಾ ।।೧।।


ಮರದಿಂದ ಮರಕೆ ನೆಗೆವಾ, ಹನುಮಂತನ ಶಿಷ್ಯನಿವಾ,

ಕಲ್ಲಿನಂತ ಮೈಯಿನವಾ, ಬೆಲ್ಲದಂಥ ಮನಸಿನವಾ,

ಏಕೆ ದೂರ ಜಾರುವ, ಸಿಡುಕಿ ಸಿಡುಕಿ ನೋಡುವಾ,

ಈ ಬಸವಾ ಕದ್ದಿರುವಾ, ನನ್ನಾ ಮನವಾ ನನ್ನ ಮನವಾ ।।೨।।


ಭೂದೇವಿಯೆ ನನ್ನ ತಾಯಿ, ಎಂದು ಮನದಿ ನಂಬಿರುವ,

ನೇಗಿಲೇ ದೇವರೆಂದು ಪೂಜೆಯನ್ನು ಮಾಡುವಾ,

ಮಣ್ಣಿನಲ್ಲೇ ಚಿನ್ನವಾ, ಬೆಳೆವ ಆಸೆ ಹೊಂದಿಹಾ,

ಏಯ್ ಗಂಗೆ ಕೈಯ ಹಿಡಿದರೆ ತಾನೇ, ಫಲವಾ ಬಸವಾ ಕಾಣುವಾ 

।।೩।।

                               

Maiyige Maiyi (ಮೈಯಿಗೆ ಮೈಯಿ)

Movie: Bhale Basava (1969)

Singer: L R Eswari

Song link: Click Here


Maiyige maiyi sokododane,

Nannedeyalli jhill, adeko ariyenu naanu,

Jhill jhill jhill ariyrnu naanu ||


Tannane gaali sangeeta hitavagide, 

Hoovina gandha ullasadinda chelladide,

Ee hasiru baa endu kai chachide,

Namagagi ekanta illide nodu,

Jhill jhill jhill illide nodu ||


Uyyaleyantagi mana tugide,

Ninnaya tola sereyaase nanagagide,

Ba ba endu ninna kannu enna kugide,

Nanagondu hosabayake heluve kelu,

Jhill jhill jhill heluve kelu ||


Mallige balli maravannu taa balaside,

Maridumbi hoovalli manemaadide,

Mussanje sobagenna mana kaadide,

Chendutiya savijenu needuve ninage,

Jhill jhill jhill needuve ninage ||


ಚಿತ್ರಗೀತೆ 


ಮೈಯಿಗೆ ಮೈಯಿ ಸೋಕಿದೊಡನೆ,

ನನ್ನೆದೆಯಲ್ಲಿ ಝಿಲ್ , ಅದೇಕೋ ಅರಿಯೆನು ನಾನು,

ಝಿಲ್ ಝಿಲ್ ಝಿಲ್ ಅರಿಯೆನು ನಾನು ।।ಪ।।


ತಣ್ಣನೆ ಗಾಳಿ ಸಂಗೀತ ಹಿತವಾಗಿದೆ,

ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ,

ಈ ಹಸಿರು ಬಾ ಎಂದು ಕೈ ಚಾಚಿದೇ,

ನಮಗಾಗಿ ಏಕಾಂತ ಇಲ್ಲಿದೆ ನೋಡೂ, 

ಝಿಲ್ ಝಿಲ್ ಝಿಲ್ ಇಲ್ಲಿದೆ ನೋಡೂ ।।೧।।


ಉಯ್ಯಾಲೆಯಂತಾಗಿ ಮನ ತೂಗಿದೆ,

ನಿನ್ನಯ ತೋಳ  ಸೆರೆಯಾಸೆ ನನಗಾಗಿದೆ,

ಬಾ ಬಾ ಎಂದು ನಿನ್ನ ಕಣ್ಣು ಎನ್ನ ಕೂಗಿದೆ,

ನನಗೊಂದು ಹೊಸಬಯಕೆ ಹೇಳುವೆ ಕೇಳು,

ಝಿಲ್ ಝಿಲ್ ಝಿಲ್ ಹೇಳುವೆ ಕೇಳು ।।೨।।


ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ,

ಮರಿದುಂಬಿ ಹೂವಲ್ಲಿ ಮನೆಮಾಡಿದೇ,

ಮುಸ್ಸಂಜೆ ಸೊಬಗೆನ್ನ ಮನಕಾಡಿದೆ,

ಚೆಂದುಟಿಯ ಸವಿಜೇನು ನೀಡುವೆ ನಿನಗೆ,

ಝಿಲ್ ಝಿಲ್ ಝಿಲ್ ನೀಡುವೆ ನಿನಗೆ ।।೩।।

                       

Ba Ba Ba (ಬಾ ಬಾ ಬಾ)

Movie: Bhale Basava (1969)

Singer: L R Eswari

Song link: Click Here


Ba ba ba hattira hattira ba, ba ba ba nanna hattira ba,

Tha tha tha mettage mettage tha, tha tha tha ille mettage ta,

Suttamuttalu kattalagide, etta noduve he he he !


Ella illide, idella ninnade, sukhavu kaadide,

Doora nillade, odi hogade, eey he he ||


Ee henna nodu, bandu kudu, jotheyalaadu, seri haadu,

Ee kanna nodu, tutiya nodu, madhuva nodu, savidu nodu,

Yavvanavu tumbide, ninnanne kaadide,

Ellige..ahaha illige..ohoho, mellage ohoho.. mellage ohoho.. he ||


ಚಿತ್ರಗೀತೆ 


ಬಾ ಬಾ ಬಾ, ಹತ್ತಿರ ಹತ್ತಿರ ಬಾ, ಬಾ ಬಾ ಬಾ, ನನ್ನ ಹತ್ತಿರ ಬಾ,

ತಾ ತಾ ತಾ, ಮೆತ್ತಗೆ ಮೆತ್ತಗೆ ತಾ, ತಾ ತಾ ತಾ, ಇಲ್ಲೇ ಮೆತ್ತಗೆ ತಾ, 

ಸುತ್ತಮುತ್ತಲೂ ಕತ್ತಲಾಗಿದೆ, ಎತ್ತ ನೋಡುವೆ ಹೇ, ಹೇ ಹೇ 

।।ಪ।।


ಎಲ್ಲಾ ಇಲ್ಲಿದೇ, ಇದೆಲ್ಲಾ ನಿನ್ನದೇ, ಸುಖವು ಕಾದಿದೆ, ದೂರ ನಿಲ್ಲದೇ,

ಓಡಿ ಹೋಗದೇ, ಏಯ್, ಹೇ ಹೇ !


ಈ ಹೆಣ್ಣ ನೋಡೂ, ಬಂದು ಕುಡೂ, ಜೊತೆಯಲಾಡೂ, ಸೇರಿ ಹಾಡೂ,

ಈ ಕಣ್ಣ ನೋಡೂ, ತುಟಿಯ ನೋಡೂ, ಮಧುವ ನೋಡೂ, ಸವಿದು ನೋಡೂ,

ಯವ್ವನವು ತುಂಬಿದೇ, ನಿನ್ನನೇ ಕಾದಿದೇ, ಎಲ್ಲಿಗೇ .. ಅಹಹ ಇಲ್ಲಿಗೇ.. ಓಹೋಹೋ, ಮೆಲ್ಲಗೇ ಓಹೋಹೋ.. ಮೆಲ್ಲಗೇ ಓಹೋಹೋ.. ಹೇ !