Thursday, October 31, 2024

Baanigondu Elle Ellide (ಬಾನಿಗೊಂದು ಎಲ್ಲೆ ಎಲ್ಲಿದೆ)

Movie: Premada Kaanike (1976)

Singer: Dr. Rajkumar

Song link: Click Here


Baanigondu elle ellide, ninnasegelli kone ide

Eke kanasu kaanuve, nidhanisu nidhanisu ||


Aase emba bisilu kudure eke eruve

Maralu gaadinalli summaneke aleyuve

Avana niyama meeri illi enu saagadu

Naavu nenesidante baalalenu nadeyadu

Vishadavagali vinodavagali

Adene aagali avane karana, baanigondu elle ellide ||


Huttu saavu balinalli eradu konegalu

Bayasidaaga kaanadiruva eradu mukhagalu

Harushavonde yaariguntu helu jagadali

Hoovu mullu eradu untu baala lateyali

Durase etake, nirase etake, 

Adene bandaru avana kaanike, baanigondu elle ellide ||


ಚಿತ್ರಗೀತೆ 


ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ 

ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು ।।ಪ।।


ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ 

ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ 

ಅವನ ನಿಯಮ ಮೀರಿ ಇಲ್ಲಿ ಏನು ಸಾಗದು 

ನಾವು ನೆನೆಸಿದಂತೆ ಬಾಳಲೇನು ನಡೆಯದು 

ವಿಷಾದವಾಗಲಿ ವಿನೋದವಾಗಲಿ 

ಅದೇನೆ ಆಗಲಿ ಅವನೆ ಕಾರಣ, ಬಾನಿಗೊಂದು ಎಲ್ಲೆ ಎಲ್ಲಿದೆ 

।।೧।।


ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು 

ಬಯಸಿದಾಗ ಕಾಣದಿರುವ ಎರಡು ಮುಖಗಳು 

ಹರುಷವೊಂದೆ ಯಾರಿಗುಂಟು ಹೇಳು ಜಗದಲಿ 

ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ 

ದುರಾಸೆ ಏತಕೆ, ನಿರಾಸೆ ಏತಕೆ

ಅದೇನೆ ಬಂದರೂ ಅವನ ಕಾಣಿಕೆ, ಬಾನಿಗೊಂದು ಎಲ್ಲೆ ಎಲ್ಲಿದೆ 

।।೨।।

                               

Kannadada Kulatilaka (ಕನ್ನಡದ ಕುಲತಿಲಕ)

Movie: Immadi Pulikeshi (1967)

Singer: S Janaki

Song link: Click Here


Kannadada kulatilaka parameshwara

Kannmaniye chalukya makuteshwara

Kannadada kulatilaka parameshwara ||


Neenobbane emma ekaika veera (2)

Ee naada punyada pulakeshi rajendra

Karunaada punyada pulakeshi rajendra

Satyashraya, sahityashraya (2)

Sarvadharmashraya sakalabhuvanashraya

Vijayavadu ninagolidu barutirali

Naraharane siri olidu chiravirali

Kannadada kulatilaka parameshwara ||


Dakshina digvijaya.. pradakshina ..aa..

Dakshinaapateshwara visheshana

Pruthvi vallabha parama bhattraka

Sakala sanmangalane gunadya

Kannadada kulatilaka parameshwara ||


Kallinali kavyagala odalitte

Kaligalige kaliyagi neene ninte (2)

Khadga hididaru shantidutanaade (2)

Vatsalya premagala mane devaraade 

Kannadada kulatilaka parameshwara ||

            

ಚಿತ್ರಗೀತೆ 


ಕನ್ನಡದ ಕುಲತಿಲಕ ಪರಮೇಶ್ವರಾ 

ಕಣ್ಮಣಿಯೆ ಚಾಲುಕ್ಯ ಮುಕುಟೇಶ್ವರಾ 

ಕನ್ನಡದ ಕುಲತಿಲಕ ಪರಮೇಶ್ವರಾ  ।।ಪ।।


ನೀನೊಬ್ಬನೆ ಎಮ್ಮ ಏಕೈಕ ವೀರ (೨) 

ಈ ನಾಡ ಪುಣ್ಯದ ಪುಲಕೇಶಿ ರಾಜೇಂದ್ರ 

ಕರುನಾಡ ಪುಣ್ಯದ ಪುಲಕೇಶಿ ರಾಜೇಂದ್ರ 

ಸತ್ಯಾಶ್ರಯ, ಸಾಹಿತ್ಯಾಶ್ರಯ (೨)

ಸರ್ವಧರ್ಮಾಶ್ರಯ ಸಕಲಭುವನಾಶ್ರಯ 

ವಿಜಯವದು ನಿನಗೊಲಿದು ಬರುತಿರಲಿ 

ನರಹರನೇ ಸಿರಿ ಒಲಿದು ಚಿರವಿರಲಿ 

ಕನ್ನಡದ ಕುಲತಿಲಕ ಪರಮೇಶ್ವರಾ ।।೧।।


ದಕ್ಷಿಣ ದಿಗ್ವಿಜಯಾ ಪ್ರದಕ್ಷಿಣ ..ಆ .. ಆ 

ದಕ್ಷಿಣಾಪತೇಶ್ವರ ವಿಶೇಷಣ 

ಪೃಥ್ವಿ ವಲ್ಲಭ ಪರಮ ಭಟ್ಟಾರಕ 

ಸಕಲ ಸನ್ಮ೦ಗಳನೇ ಗುಣಾಡ್ಯ 

ಕನ್ನಡದ ಕುಲತಿಲಕ ಪರಮೇಶ್ವರಾ ।।೨।।


ಕಲ್ಲಿನಲಿ ಕಾವ್ಯಗಳ ಓದಲಿತ್ತೆ 

ಕಲಿಗಳಿಗೆ ಕಲಿಯಾಗಿ ನೀನೆ ನಿಂತೆ (೨)

ಖಡ್ಗ ಹಿಡಿದರು ಶಾಂತಿದೂತನಾದೆ (೨)

ವಾತ್ಸಲ್ಯ ಪ್ರೇಮಗಳ ಮನೆ ದೇವರಾದೆ 

ಕನ್ನಡದ ಕುಲತಿಲಕ ಪರಮೇಶ್ವರಾ ।।೩।।

             

Jayatu Jaya Vittala (ಜಯತು ಜಯ ವಿಠ್ಠಲಾ)

Movie: Santa Tukaram (1963)

Singer: P B Srinivas

Song link: Click Here


Jayatu jayatu vittala...!

Panduranga, pundarinatha..aa..!


Jayatu jaya vittala, ninna namavu shanti dhamavu

Soukyadarama.. jayatu jaua vittala ||


Paavananga pandarinatha, paadaseva punyavaneeta (2)

Karunisi baarayya darushana taarayya

Nee enna bhagyavayya, panduranga, pandurangayya..aa ||


Kanasu manasina jeevavu neene

Antaratmana bhavavu neene, anyavu illayya ellavu neenayya

Tuka enda maatidayya, panduranga , pandurangayya..aa ||


ಚಿತ್ರಗೀತೆ 


ಜಯತು ಜಯ ವಿಠ್ಠಲಾ .. !

ಪಾಂಡುರಂಗಾ, ಪುಂಡರಿನಾಥ .. ಆ !


ಜಯತು ಜಯ ವಿಠ್ಠಲಾ, ನಿನ್ನ ನಾಮವು ಶಾಂತಿ ಧಾಮವು 

ಸೌಖ್ಯದಾರಾಮಾ, ಜಯತು ಜಯತು ವಿಠ್ಠಲಾ.. ।।ಪ।।


ಪಾವಾನಾಂಗ ಪಂಢರಿನಾಥ, ಪಾದಸೇವಾ ಪುಣ್ಯವನೀತ (೨)

ಕರುಣಿಸಿ ಬಾರಯ್ಯ ದರುಶನ ತಾರಯ್ಯ 

ನೀ ಎನ್ನ ಭಾಗ್ಯವಯ್ಯಾ, ಪಾಂಡುರಂಗಾ, ಪಾಂಡುರಂಗಯ್ಯಾ ಆ..  

 ।।೧।।


ಕನಸು ಮನಸಿನ ಜೀವವು ನೀನೇ 

ಅಂತರಾತ್ಮನ ಭಾವವು ನೀನೇ, ಅನ್ಯವು ಇಲ್ಲಯ್ಯಾ ಎಲ್ಲವು ನೀನಯ್ಯಾ 

ತುಕಾ ಎಂದ ಮಾತಿದಯ್ಯಾ ಪಾಂಡುರಂಗಾ, ಪಾಂಡುರಂಗಯ್ಯಾ ಆ..  ।।೨।। 

           

Jayate Jayate (ಜಯತೇ ಜಯತೇ)

Movie: Kalpavruksha(1969)

Singer: Mannad Dey

Song link: Click Here


Jayate.... (3) satya meva jayate.. (3) jayate.. (3) ||


Bevu bitti maavu beleva tavaka beda manava (2)

Belesi nova alisi naliva aagabeda daanava

Keduka bayase keduve khachita (2) padeve novu khandita

Satyavada ghanate, sole kaanadante

Jayate.... (3) satya meva jayate.. (3) ||


Madhuviginta madhuravaada maatu manasu kayaka (2)

Belasikondu banda narana baalu baduku daivika

Ulisikolli hiriya nadate.. (2) galisikolli manyate

Satyavada ghanate, sole kaanadante

Jayate.... (3) satya meva jayate.. (6) ||


ಚಿತ್ರಗೀತೆ 


ಜಯತೇ .. (೩) ಸತ್ಯ ಮೇವ ಜಯತೇ ..(೩) ಜಯತೇ (೩) ।।ಪ।।


ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವಾ (೨)

ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವಾ 

ಕೆಡುಕ ಬಯಸೆ ಕೆಡುವೆ ಖಚಿತಾ ..(೨) ಪಡೆವೆ ನೋವು ಖಂಡಿತಾ 

ಸತ್ಯವಾದ ಘನತೆ, ಸೋಲೆ ಕಾಣದಂತೆ 

ಜಯತೇ .. (೩) ಸತ್ಯ ಮೇವ ಜಯತೇ ..(೩) ।।೧।।


ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ (೨)

ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ 

ಉಳಿಸಿಕೊಳ್ಳಿ ಹಿರಿಯ ನಡತೆ (೨)ಗಳಿಸಿಕೊಳ್ಳಿ ಮಾನ್ಯತೆ 

ಸತ್ಯವಾದ ಘನತೆ, ಸೋಲೆ ಕಾಣದಂತೆ 

ಜಯತೇ .. (೩) ಸತ್ಯ ಮೇವ ಜಯತೇ ..(೬) ।।೨।।

                      

Wednesday, October 30, 2024

Benki Biddide Manege (ಬೆಂಕಿ ಬಿದ್ದಿದೆ ಮನೆಗೆ)

ಪದ್ಯ 

ಸಾಹಿತ್ಯ: ಕಯ್ಯಾರ ಕಿಇ್ಞಣ್ಣ  ರೈ 


ಬೆಂಕಿ ಬಿದ್ದಿದೆ ಮನೆಗೆ  ಓ ಬೇಗ ಬನ್ನಿ !

ಎಲ್ಲರೂ ಎದ್ದೆದ್ದು ಓಡಿ ಬನ್ನಿ !

ಕನ್ನಡದ ಗಡಿ ಕಾಯೆ,

ಗುಡಿ ಕಾಯೆ, ನುಡಿ ಕಾಯೆ 

ಕಾಯಲಾರೆನೆ ಸಾಯೆ !

ಓ ಬನ್ನಿ ಬನ್ನಿ !


ಹಾರೆ ಗುದ್ದಲಿ ಕೊಡಲಿ ನೊಗ  ನೇಗಿಲೆತ್ತುತಲಿ 

ನೆಲದಿಂದ ಹೊಲದಿಂದ ಹೊರಟು ಬನ್ನಿ !

ಕನ್ನಡದ ನಾಡಿಂದ 

ಕಾಡಿಂದ ಗೂಡಿಂದ 

ಕಡಲಿಂದ ಸಿಡಿಲಿಂದ 

ಗುಡುಗಿ ಬನ್ನಿ !


ಅಕ್ಕದಿರೆ ಅಣ್ಣದಿರೆ ತಂಗಿಯರೆ ತಮ್ಮದಿರೆ 

ಬೇಗೆಯನ್ನಾರಿಸಲು ಬೇಗ ಬನ್ನಿ !

ಕನ್ನಡದ ಛಲವೊಂದೆ,

ನೆಲವೊಂದೆ, ಬಲವೊಂದೆ,

ನಾಡನುಳಿಸುವೆವೆಂದೆ 

ಓಡಿ ಬನ್ನಿ!


ಕನ್ನಡದ ಕುಲಕೋಟಿಯೆಚ್ಚರೆಚ್ಚರವಿರಲಿ,

ಸಿಂಹ ಸ್ವಪ್ನವ ಬಿಟ್ಟು ಕೆರಳಿ ನಿಲಲಿ !

ಅನ್ನೆಯಕ್ಕೆಡೆಗೊಡದೆ,

ಅಂಗುಲ ನೆಲಂ  ಬಿಡದೆ,

ಅನ್ಯರಂ ತಡೆ ಹಿಡಿದೆ 

ನಾಡುಳಿಸಲಿ !


ಕೋಟೆಕೊತ್ತಲ ಕಟ್ಟಿ ಮಂದಿ ಮಾರ್ಬಲವಿಟ್ಟು 

ಗಡಿಯನ್ನು ಗುಡಿಯನ್ನು ಕಾದ ಭಟರು 

ಕನ್ನಡಿಗರೊಗ್ಗಟ್ಟು 

ಧೀರ ದೀಕ್ಷೆಯ ತೊಟ್ಟು 

ಪ್ರಾಣವನೆ ಪಣವಿಟ್ಟು 

ಕಣಕಿಳಿದರು  !


ಜಯತು ಭುವನೇಶ್ವರಿ, ರಾಜ ರಾಜೇಶ್ವರಿ 

ಸಿರಿಗನ್ನಡಂ ಗೆಲ್ಗೆ ಶಿವೆ ಶಂಕರೀ !

ಏಳ್ಗೆ ಕರ್ನಾಟಕಂ 

ಬಾಳ್ಗೆ ಕರ್ನಾಟಕಂ 

ಆಳ್ಗೆ ಕರ್ನಾಟಕಂ 

ಜಗದೀಶ್ವರೀ !


Padya


Benki biddide manege o bega banni!

Ellaru eddeddu odi banni!

Kannadada gadi kaaye,

Gudikaaye, nudikaaye

Kaayalarene saaye!

O banni banni! 


Haare guddali kodali noga negilettutali

Neladinda holadinda horatu banni!

Kannadada naadinda

Kaadinda gudinda

Kadalinda sidlinda

Gudugi banni!


Akkadire annadire tangiyare tammadire

Begeyannarisalu bega banni!

Kannadada chalavonde,

Nelavonde, balavonde,

Naadanulisuvevende

Odi banni! 


Kannadada kulakoti yecchareccharavirali,

Simhaswapnava bittu kerali nilali!

Anneyakkedegodade,

Angula nelam bidade,

Anyaram tade hidide

Naadulisali! 


Kote kottala katti mandi maarbalavittu

Gadiyannu gudiyannu kaada bhataru!

Kannadigaroggattu

Deera deeksheya tottu

Pranavane panavittu

Kanakilidaru !


Jayatu bhuvaneshwari, rajarajeshwari

Sirigannadam gelge shive shankari!

Elge karnatakam

Balge karnatakam

Aalge karnatakam

Jagadeeshwari!

     

Tuesday, October 29, 2024

Barede Neenu Ninna Hesara (ಬರೆದೆ ನೀನು ನಿನ್ನ ಹೆಸರ)

Movie: Seeta (1970)

Singer: P B Srinivas

Song link: Click Here


Barede neenu ninna hesara, nanna baala putadali

Adara madhura smrutiya naanu, hege taane alisali

Barede neenu ninna hesara, nanna baala putadali ||


Midide neenu, pranaya naada, hrudaya veene adarali (2)

Midida haadu mugiva munna, elli hode mareyali

Barede neenu ninna hesara, nanna baala putadali ||


Andu nanna teliside, ninna maata honalali (2)

Indu nanna mulugiside, kanna neera holeyali

Barede neenu ninna hesara, nanna baala putadali ||


ಚಿತ್ರಗೀತೆ  


ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ 

ಅದರ ಮಧುರ ಸ್ಮೃತಿಯ ನಾನು, ಹೇಗೆ ತಾನೆ ಅಳಿಸಲಿ 

ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ ।।ಪ।।


ಮಿಡಿದೆ ನೀನು, ಪ್ರಣಯ ನಾದ, ಹೃದಯ ವೀಣೆ ಅದರಲಿ (೨)

ಮಿಡಿದ ಹಾಡು ಮುಗಿವ ಮುನ್ನ, ಎಲ್ಲಿ ಹೋದೆ ಮರೆಯಲಿ 

ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ ।।೧।।


ಅಂದು ನನ್ನ ತೇಲಿಸಿದೆ, ನಿನ್ನ ಮಾತ ಹೊನಲಲಿ (೨)

ಇಂದು ನನ್ನ ಮುಳುಗಿಸಿದೆ, ಕಣ್ಣ ನೀರ ಹೊಳೆಯಲಿ 

ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ ।।೨।।

                    

Baare Baare Chendada Cheluvina Taare (ಬಾರೇ ಬಾರೇ ಚೆಂದದ ಚೆಲುವಿನ ತಾರೆ)

Movie: Nagarahaavu (1972)

Singer: P B Srinivas

Song link: Click Here


Baare baare chendada cheluvina taare

Baare baare olavina chilumeya dhare ||


Kannina sanneya swagata mareyalaare

Chenduti melina hoo nage mareyalaare

Andada hennina nachike mareyalaare

Mouna gouriya mohada kai bidalaare 

Baare baare..||


Kai bale naadada gunganu alisalaare

Maimana soluva mathanu mareyalaare

Rupasi rambheya sangava toreyalaare

Mouna gouriya mohada kai bidalaare

Baare baare.. ||


ಚಿತ್ರಗೀತೆ 


ಬಾರೇ ಬಾರೇ ಚೆಂದದ ಚೆಲುವಿನ ತಾರೆ 

ಬಾರೇ ಬಾರೇ ಒಲವಿನ ಚಿಲುಮೆಯ ಧಾರೆ ।।ಪ।।


ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ 

ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ 

ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ 

ಮೌನ ಗೌರಿಯ ಮೋಹದ ಕೈ ಬಿಡಲಾರೆ 

ಬಾರೇ ಬಾರೇ .. ।।೧।।


ಕೈ ಬಳೆ ನಾದದ ಗುಂಗನು ಅಳಿಸಲಾರೆ 

ಮೈಮನ ಸೋಲುವ ಮತ್ತನು ಮರೆಯಲಾರೆ 

ರೂಪಸಿ ರಂಭೆಯ ಸಂಗವ ತೊರೆಯಲಾರೆ 

ಮೌನ ಗೌರಿಯ ಮೋಹದ ಕೈ ಬಿಡಲಾರೆ 

ಬಾರೇ ಬಾರೇ .. ।।೨।।