Tuesday, October 15, 2024

Jagave Ondu Ranaranga (ಜಗವೇ ಒಂದು ರಣರಂಗ)

Movie: Ranaranga (1988)

Singer: Dr. Rajkumar

Song link: Click Here


Jagave ondu ranaranga, dhairya irali nina sanga

Baaro, baaro nana raja, ninage, neene maharaja

Hidiyo, atma baladastra, aduve, jayada mahamantra

Ninna daariyalli, ellu sole illa

Baala yuddadalli, ninna gellorilla

Chalave, balavo, munde nuggi nuggi baa ||


Tirugo bhumiyalli, nadeva baalinalli, enu nilladamma raja

Janana embudilli, marana embudanna, endu gelladamma raja

Jana iruva golavo idu, dina kaleva jaalavo idu

Jaya bhayada chinte maadade, senesaado rangavo idu

Illi daanavara, ketta maayavide

Illi maanavara, sutta gayavide

Iddare, geddare, nyayavannu ulisu baa ||


Dehi ennuvaga, nidde maaduvaga, kathi ettabeda raja

Shatru beeluvaga, yuddha maaduvaga, karune katti idu raja

Bhumeeli hutti bandare, aa rhunava kattabedave

Anyaya gellutiddare, sidideddu nillabedave

Illi kruratana, attadalli ide, ninna jaanatana, mettuvalli ide

Mettu baa, attu baa, ditta hejje ittu baa ||


ಚಿತ್ರಗೀತೆ 


ಜಗವೇ, ಒಂದು ರಣರಂಗ, ಧೈರ್ಯ, ಇರಲಿ ನಿನ ಸಂಗ 

ಬಾರೋ, ಬಾರೋ ನನ ರಾಜಾ, ನಿನಗೆ, ನೀನೇ ಮಹಾರಾಜಾ 

ಹಿಡಿಯೋ, ಆತ್ಮ ಬಲದಸ್ತ್ರ, ಅದುವೇ, ಜಯದ ಮಹಾಮಂತ್ರ 

ನಿನ್ನ ದಾರಿಯಲ್ಲಿ, ಎಲ್ಲೂ ಸೋಲೇ ಇಲ್ಲ 

ಬಾಳ ಯುದ್ಧದಲ್ಲಿ, ನಿನ್ನ ಗೆಲ್ಲೋರಿಲ್ಲ 

ಛಲವೇ, ಬಲವೊ, ಮುಂದೆ ನುಗ್ಗಿ ನುಗ್ಗಿ ಬಾ ।।ಪ।।


ತಿರುಗೋ ಭೂಮಿಯಲ್ಲಿ, ನಡೆವ ಬಾಳಿನಲ್ಲಿ, ಏನೂ ನಿಲ್ಲದಮ್ಮ ರಾಜಾ 

ಜನನ ಎಂಬುದಿಲ್ಲಿ, ಮರಣ ಎಂಬುದನ್ನ, ಎಂದೂ ಗೆಲ್ಲದಮ್ಮ ರಾಜಾ 

ಜನ ಇರುವ ಗೋಲವೋ ಇದು, ದಿನ ಕಳೆವ ಜಾಲವೋ ಇದು 

ಜಯ ಭಯದ ಚಿಂತೆ ಮಾಡದೆ, ಸೆಣೆಸಾಡೋ ರಂಗವೋ ಇದು 

ಇಲ್ಲಿ ದಾನವರ, ಕೆಟ್ಟ ಮಾಯವಿದೆ 

ಇಲ್ಲಿ ಮಾನವರ, ಸುಟ್ಟ ಗಾಯವಿದೆ 

ಇದ್ದರೆ, ಗೆದ್ದರೆ, ನ್ಯಾಯವನ್ನು ಉಳಿಸು ಬಾ ।।೧।।


ದೇಹಿ ಎನ್ನುವಾಗ, ನಿದ್ದೆ ಮಾಡುವಾಗ, ಕತ್ತಿ ಎತ್ತಬೇಡ ರಾಜಾ 

ಶತ್ರು ಬೀಳುವಾಗ, ಯುದ್ಧ ಮಾಡುವಾಗ, ಕರುಣೆ ಕಟ್ಟಿ ಇಡು ರಾಜಾ 

ಭೂಮೀಲಿ ಹುಟ್ಟಿ ಬಂದರೆ, ಆ ಋಣವಾ ಕಟ್ಟಬೇಡವೆ 

ಅನ್ಯಾಯ ಗೆಲ್ಲುತ್ತಿದ್ದರೆ, ಸಿಡಿದೆದ್ದು ನಿಲ್ಲಬೇಡವೆ 

ಇಲ್ಲಿ ಕ್ರೂರತನ, ಅಟ್ಟದಲ್ಲಿ ಇದೆ, ನಿನ್ನ ಜಾಣತನ, ಮೆಟ್ಟುವಲ್ಲಿ  ಇದೆ 

ಮೆಟ್ಟು ಬಾ, ಅಟ್ಟು ಬಾ, ದಿಟ್ಟ ಹೆಜ್ಜೆ ಇಟ್ಟು ಬಾ ।।೨।।

                    

Ee Bhumi Bannada Buguri (ಈ ಭೂಮಿ ಬಣ್ಣದ ಬುಗುರಿ)

Movie: Maha Kshatriya (1984)

Singer: SPB

Song link: Click Here


O oho oho, O oho oho!

Ee bhumi bannada buguri, aa shivane chati kano

Ee baalu sundara nagari, neenidara meti kano

Nintaga buguriya aata, ellaru onde ota

Kaala kshanika kano ||


Maribeda taayiya runava, maribeda tandeya olava

Hadedavare daiva kano

Sukhavada basheya kaliso, sariyada daarige nadeso

Samskrutiye guruvu kano

Maretaga jeevana pata, kodutane chatiya yeta

Kaala kshanika kano ||


Maribeda maguvina naguva, kalibeda naguvina sukhava

Bharavaseye maguvu kane

Kalabeda kollallu beda, nee haadu shantiya haada

Jeevanave preeti kano

Nintaga buguriya aata, ellaru onde ota

Kaala kshanika kano ||


ಚಿತ್ರಗೀತೆ 


ಓ ಒಹೋ ಒಹೋ, ಓ ಒಹೋ ಒಹೋ 

ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ 

ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ 

ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ  ಓಟ 

ಕಾಲ ಕ್ಷಣಿಕ ಕಣೋ, ಓ .. ಓ  ।।ಪ।।


ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ 

ಹಡೆದವರೇ ದೈವ ಕಣೋ 

ಸುಖವಾದ ಭಾಷೆಯ ಕಲಿಸೊ, ಸರಿಯಾದ ದಾರಿಗೆ ನಡೆಸೊ 

ಸಂಸ್ಕೃತಿಯೇ ಗುರುವು ಕಣೋ 

ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ 

ಕಾಲ ಕ್ಷಣಿಕ ಕಣೋ, ಓ .. ಓ  ।।೧।।


ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವಾ 

ಭರವಸೆಯೇ ಮಗುವು ಕಣೇ 

ಕಳಬೇಡ ಕೊಲ್ಲಲ್ಲು ಬೇಡ, ನೀ ಹಾಡು ಶಾಂತಿಯ ಹಾಡ 

ಜೀವನವೇ ಪ್ರೀತಿ ಕಣೋ 

ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ 

ಕಾಲ ಕ್ಷಣಿಕ ಕಣೋ, ಓ .. ಓ ।।೨।।

                   


Jaggadu Jaggadu Yaarigu Jaggadu (ಜಗ್ಗದು ಜಗ್ಗದು ಯಾರಿಗೂ ಜಗ್ಗದು)

Movie: Hagalu Vesha (2000)

Singer: Dr. Rajkumar

Song link: Click Here


India India namma India (2)

Bevarina belakina betta India

Dudimeya hirimeya ditta India

Jaggadu jaggadu yaarigu jaggadu India

Aggada arasarigendigu kuggadu India

Namm India bevarina India ||


Bande bandeya mele gandu aralida leele

Gundu hodeyo dandu onagi ninta bendu

Bidugadeya belakanu chello.. o ..o (2)

Bandayada gundige, jaggadu jaggadu ||


CHO: India India namma India (2)

Kote kottala kaada koti deepada hanate

Naadige dinavu dudida kooli kumbali janate

Swatantryada hakkanu keli..o..o (2)

Eddu ninta chirate, jaggadu jaggadu ||


Haale haaleya mele minchu maatina naale

Janapadara koralalli bidugadeya ranakahale

Mooru bannada baavuta hidida..aa..aa..o..o (2)

Sidila moggina maale, jaggadu jaggadu ||


ಚಿತ್ರಗೀತೆ 


ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ (೨)

ಬೆವರಿನ ಬೆಳಕಿನ ಬೆಟ್ಟ ಇಂಡಿಯಾ 

ದುಡಿಮೆಯ ಹಿರಿಮೆಯ ದಿಟ್ಟ ಇಂಡಿಯಾ 

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ 

ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ 

ನಮ್ಮಿ೦ಡಿಯಾ ಬೆವರಿನ ಇಂಡಿಯಾ ।।ಪ।।


ಬಂಡೆ ಬಂಡೆಯ ಮೇಲೆ ಗಂಡು ಅರಳಿದ ಲೀಲೆ 

ಗುಂಡು ಹೊಡೆಯೋ ದಂಡು ಒಣಗಿ ನಿಂತ ಬೆಂಡು 

ಬಿಡುಗಡೆಯ ಬೆಳಕನು ಚೆಲ್ಲೋ ..ಓ ..ಓ ..(೨)

ಬಂಡಾಯದ ಗುಂಡಿಗೆ, ಜಗ್ಗದು ಜಗ್ಗದು ।।೧।।


ಚೊ: ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ (೨)

ಕೋಟೆ ಕೊತ್ತಲ ಕಾದ ಕೋಟಿ ದೀಪದ ಹಣತೆ 

ನಾಡಿಗೆ ದಿನವೂ ದುಡಿದ ಕೂಲಿ ಕಂಬಲಿ ಜನತೆ 

ಸ್ವಾತಂತ್ರ್ಯದ ಹಕ್ಕನು ಕೇಳೀ ಓ ..ಓ  (೨)

ಎದ್ದು ನಿಂತ ಚಿರತೆ, ಜಗ್ಗದು ಜಗ್ಗದು ।।೨।।


ಹಾಳೆ ಹಾಳೆಯ ಮೇಲೆ ಮಿಂಚು ಮಾತಿನ ನಾಳೆ 

ಜನಪದರ ಕೊರಳಲ್ಲಿ ಬಿಡುಗಡೆಯ ರಣಕಹಳೆ 

ಮೂರು ಬಣ್ಣದ ಬಾವುಟ ಹಿಡಿದಾ ..ಆ ಆ..ಓ ..ಓ  (೨)

ಸಿಡಿಲ ಮೊಗ್ಗಿನ ಮಾಲೆ, ಜಗ್ಗದು ಜಗ್ಗದು ।।೩।।    

                           

Monday, October 7, 2024

Maguve Ninna Hoonage (ಮಗುವೇ ನಿನ್ನ ಹೂನಗೆ)

Movie: Gejje Pooje (1970)

Singer: S Janaki

Song link: Click Here


Maguve, ninna hoonage, odave nanna baalige

Tumbu enna jolige, maguve ||


Gangeyante bande neenu, nanna paapa toleyuve

Naanu padeda shapa ninna kaadadante tadeyuve

Ninna baala nandanadali naale ella naguve ||


Benda manada taapa ninage takadante kaayuve

Nanna edeyalirisi ninna edavadante kaayuve

Nalvarante nanyavada naari neenu enisuve ||


ಚಿತ್ರಗೀತೆ 


ಮಗುವೇ, ನಿನ್ನ ಹೂ ನಗೆ, ಒಡವೆ ನನ್ನ ಬಾಳಿಗೆ 

ತುಂಬು ಎನ್ನ ಜೋಳಿಗೆ, ಮಗುವೇ ।।ಪ।।


ಗಂಗೆಯಂತೆ ಬಂದೆ ನೀನು, ನನ್ನ ಪಾಪ ತೊಳೆಯುವೆ 

ನಾನು ಪಡೆದ ಶಾಪ ನಿನ್ನ ಕಾಡದಂತೆ ತಡೆಯುವೆ 

ನಿನ್ನ ಬಾಳ ನಂದನದಲಿ ನಾಳೆ ಎಲ್ಲ ನಗುವೆ ।।೧।।


ಬೆಂದ ಮನದ ತಾಪ ನಿನಗೆ ತಾಕದಂತೆ ಕಾಯುವೆ 

ನನ್ನ ಎದೆಯಲಿರಿಸಿ ನಿನ್ನ ಎಡವದಂತೆ ಕಾಯುವೆ 

ನಲ್ವರಂತೆ ನಾಣ್ಯವಾದ ನಾರಿ ನೀನು ಎನಿಸಿವೆ ।।೨।।

                 

Cheluveya Andada Mogake (ಚೆಲುವೆಯ ಅಂದದ ಮೊಗಕೆ)

Movie: Devara Gudi (1975)

Singer: SPB

Song link: Click Here


Cheluveya andada mogake, kanne bhushana

Naliyuta baaluva manege, heene bhushana

Sukha samsaarake endu, satiye karana ||


Banige, endendigu, aa raviye bhushana

Balukuva latege, hennina mudide, hoove bhushana

Rajanige endendigu, aa shashiye bhushana

Aralida manake, havalada tutige, naguve bhushana

Novige.. nalivige (2), henne karana ||


Maduveya, anubandhavu, endu aliyadu

Kopada kidige, roshada urige, olavu baadadu

Dehavu duradaru, manasu mareyadu

Beretiha jeeva, virahada nova, endu sahisadu

Olavina.. jeevana (2), sukhake sadhana ||


ಚಿತ್ರಗೀತೆ 


ಚೆಲುವೆಯ ಅಂದದ ಮೊಗಕೆ, ಕಣ್ಣೇ ಭೂಷಣಾ 

ನಲಿಯುತ ಬಾಳುವ ಮನೆಗೆ, ಹೆಣ್ಣೇ ಭೂಷಣಾ 

ಸುಖ ಸಂಸಾರಕೆ ಎಂದೂ, ಸತಿಯೇ ಕಾರಣ ।।ಪ।।


ಬಾನಿಗೆ, ಎಂದೆಂದಿಗೂ, ಆ ರವಿಯೇ ಭೂಷಣಾ 

ಬಳುಕುವಾ ಲತೆಗೆ, ಹೆಣ್ಣಿನಾ ಮುಡಿಗೆ, ಹೂವೇ ಭೂಷಣಾ 

ರಜನಿಗೆ ಎಂದೆಂದಿಗೂ, ಆ ಶಶಿಯೇ ಭೂಷಣಾ 

ಅರಳಿದ ಮನಕೆ, ಹವಳದಾ ತುಟಿಗೆ, ನಗುವೇ ಭೂಷಣಾ 

ನೋವಿಗೇ .. ನಲಿವಿಗೆ (೨), ಹೆಣ್ಣೇ ಕಾರಣ ।।೧।।


ಮದುವೆಯ, ಅನುಬಂಧವು, ಎಂದೂ ಅಳಿಯದೂ 

ಕೋಪದ ಕಿಡಿಗೆ, ರೋಷದಾ ಉರಿಗೆ, ಒಲವೂ ಬಾಡದೂ 

ದೇಹವು, ದುರಾದರೂ, ಮನಸೂ ಮರೆಯದೂ 

ಬೆರೆತಿಹಾ ಜೀವ, ವಿರಹದಾ ನೋವ, ಎಂದೂ ಸಹಿಸದೂ 

ಒಲವಿನಾ ..ಜೀವನಾ  (೨) ಸುಖಕೆ ಸಾಧನಾ ।।೨।।

                     

Chengu Chengendu Haaruva (ಚೆಂಗು ಚೆಂಗೆಂದು ಹಾರುವ)

Movie: Katari Veera (1966)

Singer: P Susheela

Song link: Click Here


Chengu chengendu haaruva, rangu rangina ee jinke (2)

Sereyagi ninna jaalake (2), sogadinda bantu sandhanake

Chengu chengendu haaruva, rangu rangina ee jinke ||


Holeyuva ninnee mai matake, rasika naa sotu bande

Hareyada hennina kannotake, madana neenagi ninde

Baa inde haayada sambhrama (2) naale endare premake naama

Chengu chengendu haaruva, rangu rangina ee jinke ||


Moha taa gaida balege, kudi taa bantu ghalige

Kaadide maduveya chennatake, eruva manasina hoidatake

Baa inde haayada sambhrama (2), naale endare premake naama 

Chengu chengendu haaruva, rangu rangina ee jinke ||


ಚಿತ್ರಗೀತೆ 


ಚೆಂಗು ಚೆಂಗೆಂದು ಹಾರುವ, ರಂಗು ರಂಗಿನ ಈ ಜಿಂಕೆ (೨)

ಸೆರೆಯಾಗಿ ನಿನ್ನಾ ಜಾಲಕೆ (೨), ಸೊಗದಿಂದ ಬಂತು ಸಂಧಾನಕೆ 

ಚೆಂಗು ಚೆಂಗೆಂದು ಹಾರುವ, ರಂಗು ರಂಗಿನ ಈ ಜಿಂಕೆ ।।ಪ।।


ಹೊಳೆಯುವ ನನ್ನೀ ಮೈ ಮಾಟಕೆ, ರಸಿಕ ನಾ ಸೋತು ಬಂದೆ 

ಹರೆಯದ ಹೆಣ್ಣಿನ ಕಣ್ಣೋಟಕೆ, ಮದನ ನೀನಾಗಿ ನಿಂದೆ 

ಬಾ ಇಂದೆ ಹಾಯಾದ ಸಂಭ್ರಮ (೨) ನಾಳೆ ಎಂದರೆ ಪ್ರೇಮಕೆ ನಾಮ 

ಚೆಂಗು ಚೆಂಗೆಂದು ಹಾರುವ, ರಂಗು ರಂಗಿನ ಈ ಜಿಂಕೆ ।।೧।।


ಮೋಹ ತಾ ಗೈದ ಬಲೆಗೆ, ಕೂಡಿ ತಾ ಬಂತು ಘಳಿಗೆ 

ಕಾದಿದೆ ಮದುವೆಯ ಚೆನ್ನಾಟಕೆ, ಏರುವ ಮನಸ್ಸಿನ ಹೊಯ್ದಾಟಕೆ 

ಬಾ ಇಂದೆ ಹಾಯಾದ ಸಂಭ್ರಮ (೨) ನಾಳೆ ಎಂದರೆ ಪ್ರೇಮಕೆ ನಾಮ

 ಚೆಂಗು ಚೆಂಗೆಂದು ಹಾರುವ, ರಂಗು ರಂಗಿನ ಈ ಜಿಂಕೆ ।।೨।।

                                 

Cheluvina Ganiyagi Nammuru (ಚೆಲುವಿನ ಗಣಿಯಾಗಿ ನಮ್ಮೂರು)

Movie: Namma Ooru (1968)

Singers: P B Srinivas, Renuka

Song link: Click Here


Cheluvina ganiyagi, nammuru sukhadali nindaytu

Nammura geletana balavaytu ||


Illilla badatana nadu katti banni

Negila badukali sukha kaana banni

Kaveri harivaaga namagenu korate

Kai needi koduvevu nurentu deshake ||


Mannalla janare idu swarna bhumi

Halli halligale ee matru bhumi

Annada kugadu nashavagali

Deshada janagalu nagutirali ||


Naadina hiriyaru hacchida deepa

Nalina badukige hosadondu roopa

Unnata bhavane seveyadagali

Bharata chariteyu belagirali ||


ಚಿತ್ರಗೀತೆ 


ಚೆಲುವಿನ ಗಣಿಯಾಗಿ, ನಮ್ಮೂರು ಸುಖದಲಿ ನಿಂದಾಯ್ತು 

ನಮ್ಮೂರ ಗೆಳೆತನ ಬಲವಾಯ್ತು ।।ಪ।।


ಇಲ್ಲಿಲ್ಲ ಬಡತನ ನಡು ಕಟ್ಟಿ ಬನ್ನಿ 

ನೇಗಿಲ ಬದುಕಲಿ ಸುಖ ಕಾಣ ಬನ್ನಿ 

ಕಾವೇರಿ ಹರಿವಾಗ ನಮಗೇನು ಕೊರತೆ, ಕೈ ನೀಡಿ ಕೊಡುವೆವು ನೂರೆಂಟು ದೇಶಕೆ ।।೧।।


ಮಣ್ಣಲ್ಲ ಜನರೇ ಇದು ಸ್ವರ್ಣ ಭೂಮಿ 

ಹಳ್ಳಿ ಹಳ್ಳಿಗಳೇ ಈ ಮಾತೃ ಭೂಮಿ 

ಅನ್ನದ ಕೂಗದು ನಾಶವಾಗಲಿ, ದೇಶದ ಜನಗಳು ನಗುತಿರಲಿ ।।೨।।


ನಾಡಿನ ಹಿರಿಯರು ಹಚ್ಚಿದ ದೀಪ

ನಾಳಿನ ಬದುಕಿಗೆ ಹೊಸದೊಂದು ರೂಪ 

ಉನ್ನತ ಭಾವನೆ ಸೇವೆಯದಾಗಲಿ, ಭಾರತ ಚರಿತೆಯು ಬೆಳಗಿರಲಿ 

।।೩।।