Monday, September 9, 2024

Gaganavu Ello Bhumiyu Ello (ಗಗನವು ಎಲ್ಲೋ ಭೂಮಿಯು ಎಲ್ಲೋ)

Movie: Gejje Pooje (1970)

Singer: S Janaki

Song link: Click Here


Gaganavu ello, bhumiyu ello, ondu ariye naa

Enage nee needida, vachanava keli, teli teli hode naa

Gaganavu ello, bhumiyu ello, ondu ariye naa ||


Nutana jagada, bagilu tereyitu, manavanu kavida tereyu sariyitu

Kangalu olavina, katheya bareyitu, kalgalu harushadi kuni kunidaaditu ||



Prema vasantada raagavu midiyitu, asha gaanada pallavi haaditu

Nava jeevanada jyothiyu belagitu, ullasadi mana nali nalidaaditu ||


ಚಿತ್ರಗೀತೆ 


ಗಗನವು ಎಲ್ಲೋ, ಭೂಮಿಯು ಎಲ್ಲೋ, ಒಂದೂ ಅರಿಯೇ ನಾ 

ಎನಗೆ ನೀ ನೀಡಿದ, ವಚನವ ಕೇಳಿ, ತೇಲಿ ತೇಲಿ ಹೋದೆ ನಾ 

ಗಗನವು ಎಲ್ಲೋ, ಭೂಮಿಯು ಎಲ್ಲೋ, ಒಂದೂ ಅರಿಯೇ ನಾ

 ।।ಪ ।।


ನೂತನ ಜಗದಾ ಬಾಗಿಲು ತೆರೆಯಿತು, ಮನವನು ಕವಿದ ತೆರೆಯು ಸರಿಯಿತು 

ಕಂಗಳು ಒಲವಿನ ಕಥೆಯಾ ಬರೆಯಿತು, ಕಾಲ್ಗಳು ಹರುಷದಿ ಕುಣಿ ಕುಣಿದಾಡಿತು ।।೧।।


ಪ್ರೇಮ ವಸಂತದ ರಾಗವು ಮಿಡಿಯಿತು, ಆಶಾ ಗಾನದ ಪಲ್ಲವಿ ಹಾಡಿತು 

ನವ ಜೀವನದ ಜ್ಯೋತಿಯು ಬೆಳಗಿತು, ಉಲ್ಲಾಸದಿ ಮನ ನಲಿ ನಲಿದಾಡಿತು ।।೨।।

                             

Gopura Kandu Hogalu (ಗೋಪುರ ಕಂಡು ಹೋಗಲು)

Movie: Arishina Kunkuma (1970)

Singer: P B Srinivas

Song link: Click Here


Gopura kandu hogalu gudiyolu, devare, illave

Kaanuvanendu kannanu teredare belake illave

Gopura kandu hogalu gudiyolu devare illave ||


Mamateya maate premada tande, preetiya toruva bandhugalu

Ellaru iddu iradantaayite, ontiye indee baalinolu

Gopura kandu hogalu gudiyolu devare illave ||


Harushada naguvu iniyana olavu, chimmida cheluvina maneyandu

Hagetanadusiru, bisi kanniru, nelesida novina maneyindu

Gopura kandu hogalu gudiyolu devare illave ||


Hoovanu esedaru eleyane esedaru, kallina devaru oliyuvanu

Kambaniyalle paadava toledaru, nallanu kallantagihanu

Gopura kandu hogalu gudiyolu devare illave ||


ಚಿತ್ರಗೀತೆ 


ಗೋಪುರ ಕಂಡು ಹೋಗಲು ಗುಡಿಯೊಳು, ದೇವರೇ, ಇಲ್ಲವೇ 

ಕಾಣುವೆನೆಂದು ಕಣ್ಣನು ತೆರೆದರೆ ಬೆಳಕೇ ಇಲ್ಲವೇ 

ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ  ।।ಪ।।


ಮಮತೆಯ ಮಾತೆ ಪ್ರೇಮದ ತಂದೆ, ಪ್ರೀತಿಯ ತೋರುವ ಬಂಧುಗಳು 

ಎಲ್ಲರೂ ಇದ್ದು ಇರದಂತಾಯಿತೆ ಒಂಟಿಯೇ ಇಂದೀ ಬಾಳಿನೊಳು 

ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ  ।।೧।।


ಹರುಷದ ನಗುವೂ ಇನಿಯನ ಒಲವೂ, ಚಿಮ್ಮಿದ ಚೆಲುವಿನ ಮನೆಯಂದು 

ಹಗೆತನದುಸಿರು ಬಿಸಿ ಕಣ್ಣೀರು, ನೆಲೆಸಿದ ನೋವಿನಾ ಮನೆಯಿಂದು 

ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ ।।೨।।


ಹೂವನು ಎಸೆದರೂ ಎಲೆಯನೆ ಎಸೆದರೂ, ಕಲ್ಲಿನ ದೇವರು ಒಲಿಯುವನು

ಕಂಬನಿಯಲ್ಲೇ ಪಾದವ ತೊಳೆದರೂ, ನಲ್ಲನು ಕಲ್ಲಂತಾಗಿಹನು 

ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ ।।೩।।      

                                              


 
    

Guttonda Heluve Putani Makkale (ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ)

Movie: Paropakaari (1970)

Singer: P B Srinivas

Song link: Click Here


Guttondu heluve putani makkale (2)

Kottiddu tanag bacchittiddu pararige

Guttondu heluve putani makkale ||


Hanavu helidante, neenendu kelabeda (2)

Dasanagi dhanake, neenendu balabeda (2)

Guttondu heluve putani makkale ||


Nijava kelu jagadi, anathararu illa

Tandeyagi mele, aa devaniruvanalla (3)

Guttondu heluve putani makkale ||


Devanobbaniruva, avanella nodutiruva (2)

Avana neralaliruva, navella onde enuva (2)

Guttondu heluve putani makkale ||


Neharu gandhiyante, nimmalli yaaru iharo

Jhansi rani lakshmi, kasturi baayi yaaro ||


ಚಿತ್ರಗೀತೆ   


ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ (೨)

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ 

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ ।।ಪ।।


ಹಣವು ಹೇಳಿದಂತೆ, ನೀನೆಂದು ಕೇಳಬೇಡ  (೨)

ದಾಸನಾಗಿ ಧನಕೆ, ನೀನೆಂದು ಬಾಳಬೇಡ  (೨)

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ ।।


ನಿಜವ ಕೇಳು ಜಗದಿ, ಅನಾಥರಾರು ಇಲ್ಲ 

ತಂದೆಯಾಗಿ ಮೇಲೆ, ಆ ದೇವನಿರುವನಲ್ಲ (೩)

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ ।।


ದೇವನೊಬ್ಬನಿರುವ, ಅವನೆಲ್ಲ ನೋಡುತಿರುವಾ (೨)

ಅವನ ನೆರಳಲಿರುವ, ನಾವೆಲ್ಲ ಒಂದೇ ಎನುವ 

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ ।।


ನೆಹರು ಗಾಂಧಿಯಂತೆ, ನಿಮ್ಮಲ್ಲಿ ಯಾರು ಇಹರೋ 

ಝಾನ್ಸಿ ರಾಣಿ ಲಕ್ಷ್ಮಿ, ಕಸ್ತೂರಿ ಬಾಯಿ ಯಾರೋ ।।

                      

Thursday, September 5, 2024

Haadu Baa Kogile (ಹಾಡು ಬಾ ಕೋಗಿಲೆ)

Movie: Veera Sankalpa (1964)

Singers: Pithapuram Nageshwara Rao, Satyavati

Song link: Click Here


Haadu baa kogile, nalidaadu baare navile

Sirigannadambeya jaya dwani molagale

Haadu baa kogile, nalidaadu baare navile ||


Kannada naadu namadendu, kannadigarigade gudi endu

Aa.. aa.aa.aa.aa..

Kannada naadu namadendu, kannadigarigade gudi endu

Kanda kandavara jadate neegisi, gandugaligala tandava belase ||


Hindina keertiya galisalu bandu, mundadiyiduta nadeyiro endu

Mardanigolale ninnaya swaravu, mugiligerale kannada dwajavu ||


ಚಿತ್ರಗೀತೆ 


ಹಾಡು ಬಾ ಕೋಗಿಲೆ, ನಲಿದಾಡು ಬಾರೆ ನವಿಲೇ 

ಸಿರಿಗನ್ನಡಾಂಬೆಯ ಜಯ ಧ್ವನಿ ಮೊಳಗಲೇ 

ಹಾಡು ಬಾ ಕೋಗಿಲೆ, ನಲಿದಾಡು ಬಾರೆ ನವಿಲೇ  ।।ಪ।।


ಕನ್ನಡ ನಾಡು ನಮದೆಂದು, ಕನ್ನಡಿಗರಿಗದೆ ಗುಡಿ ಎಂದು 

ಆ ಆ ಆ ಆ ..ಆ ಆ ಆ ಆ 

ಕನ್ನಡ ನಾಡು ನಮದೆಂದು, ಕನ್ನಡಿಗರಿಗದೆ ಗುಡಿ ಎಂದು 

ಕಂಡ ಕಂಡವರ ಜಡತೆ ನೀಗಿಸಿ, ಗಂಡು ಗಲಿಗಳ ತಂಡವ ಬೆಳಸೆ ।।೧।।


ಹಿಂದಿನ ಕೀರ್ತಿಯ ಗಳಿಸಲು ಬಂದು, ಮುಂದಡಿಯಿಡುತಾ  ನಡೆಯಿರೊ ಎಂದು 

ಮಾರ್ದನಿಗೊಳಲೆ ನಿನ್ನಯ ಸ್ವರವು, ಮುಗಿಲಿಗೇರಲೇ ಕನ್ನಡ ಧ್ವಜವೂ ।।೨।।

                              


Haavina Dwesha (ಹಾವಿನ ದ್ವೇಷ)

Movie: Nagara Haavu (1972)

Singer: SPB

Song link: Click Here


Haavina dwesha, hanneradu varusha (2)

Nanna rosha nooru varusha (2), 

Haavina dwesha, hanneradu varusha ||


Ee anjada edeyali nanje illa, bagguva aalalla, tale taggisi balolla

Aa lankeya sutta benki, yava kedanu maadilla, aadare sedanu bidalilla

Abhimaanava bidalolle, apamaanava sahisolle, anyayava madolle ||


Aa devaranendigu durodilla, nambike neegolla, naa daari tapolla

Naa ittare shapa, kottare vara, neetiya merolla, naa olidare kedilla

Aakroshada uri naanu.., aavegada vasha naanu

Aa premake olidenu..ha ha ||


Aa ramanu itta baanada guriyu endu tapilla, endendu tapilla

Ee ramacharin kenako gandu, innu huttilla, ha ha, aa gande huttilla

Aa bhimana baladavanu, chanikyana chaladavanu

Aa durgada huli ivanu.. ha ha ||


ಚಿತ್ರಗೀತೆ 


ಹಾವಿನ ದ್ವೇಷ, ಹನ್ನೆರಡು ವರುಷ (೨)

ನನ್ನ ರೋಷ ನೂರು ವರುಷ  (೨)

ಹಾವಿನ ದ್ವೇಷ, ಹನ್ನೆರಡು ವರುಷ ।।ಪ।।


ಈ ಅಂಜದ ಎದೆಯಲಿ ನಂಜೆ ಇಲ್ಲ, ಬಗ್ಗುವ ಆಳಲ್ಲಾ, ತಲೆ ತಗ್ಗಿಸಿ ಬಾಳೋಲ್ಲಾ 

ಆ ಲಂಕೆಯ ಸುಟ್ಟ ಬೆಂಕಿ, ಯಾವ ಕೇಡನು ಮಾಡಿಲ್ಲಾ, ಆದರೆ ಸೇಡನು ಬಿಡಲಿಲ್ಲಾ 

ಅಭಿಮಾನವ ಬಿಡಲೊಲ್ಲೆ, ಅಪಮಾನವ ಸಹಿಸೋಲ್ಲೆ 

ಅನ್ಯಾಯವ ಮಾಡೋಲ್ಲೆ ।।೧।।


ಆ ದೇವರನೆಂದು ದೂರೋದಿಲ್ಲ, ನಂಬಿಕೆ ನೀಗೋಲ್ಲಾ , ನಾ ದಾರಿ ತಪ್ಪೋಲ್ಲಾ 

ನಾ ಇಟ್ಟರೆ ಶಾಪ, ಕೊಟ್ಟರೆ ವರ, ನೀತಿಯ ಮೀರೋಲ್ಲಾ, ನಾ ಒಲಿದರೆ ಕೇಡಿಲ್ಲಾ 

ಆಕ್ರೋಶದ ಉರಿ ನಾನೂ .., ಆ ವೇಗದ ವಶ ನಾನೂ 

ಆ ಪ್ರೇಮಕೆ ಒಲಿದೇನೂ .. ಹ್ಹಹ್ಹ ।।೨।।


ಆ ರಾಮನು ಇಟ್ಟ ಬಾಣದ ಗುರಿಯು, ಎಂದೂ ತಪ್ಪಿಲ್ಲಾ , ಎಂದೆಂದೂ ತಪ್ಪಿಲ್ಲಾ 

ಈ ರಾಮಾಚಾರಿನ್ ಕೆಣಕೋ ಗಂಡು, ಇನ್ನೂ ಹುಟ್ಟಿಲ್ಲಾ, ಹ್ಹಹ್ಹ ಆ ಗಂಡೆ ಹುಟ್ಟಿಲ್ಲಾ 

ಆ ಭೀಮನ ಬಲದವನೂ, ಚಾಣಿಕ್ಯನ ಛಲದವನೂ 

ಈ ದುರ್ಗದ ಹುಲಿ ಇವನೂ .. ಹ್ಹಹ್ಹ ।।೩।।

                         

Male (ಮಳೆ)

ಪದ್ಯ 

ಸಾಹಿತ್ಯ : ಪಳಕಳ ಸೀತಾರಾಮ ಭಟ್ಟ 


ಬಿಸಿಲ ಝಳಕೆ ಕಡಲ ನೀರು 

ಆವಿಯಾಯಿತು ।

ಆವಿಯಾಗಿ ನೆಲದ ಕಡೆಗೆ 

ಬೀಸಿ ಬಂದಿತು ।।೧।। 


ನೆಲದ ಮೇಲೆ ಗುಡ್ಡ ಬೆಟ್ಟ 

ಅಡ್ಡವಾಯಿತು ।

ತಡೆದು ನಿಂತ ಮೋಡವೆಲ್ಲ 

ಮೇಲಕೇರಿತು ।।೨।।


ಘಳಿಗೆಯೊಳಗೆ ಬಾನು ತುಂಬ 

ಮೋಡ ಕವಿಯಿತು ।

ಮಿಂಚು ಮಿಂಚಿ ಜಗವು ಬೆಳಗಿ 

ಗುಡುಗು ಗುಡುಗಿತು ।।೩।।


ಮೋಡ ಮೇಲಕೇರಿದಾಗ 

ತಂಪು ತಗುಲಿತು ।

ಆವಿ ತಣಿದು ಭಾರವಾಗಿ 

ಕುಸಿಯತೊಡಗಿತು ।।೪।।


ಮುತ್ತಿನಂಥ ಮಳೆಯ ನೀರು 

ಕೆಳಗೆ ಸುರಿಯಿತು 

ಕೆರೆಯು ತೊರೆಯು ಹಳ್ಳ ಹೊಳೆಯು 

ತುಂಬಿ ಹರಿಯಿತು ।।೫।।


Padya


Bisila jhalake kadala neeru

Aaviyayitu |

Aaviyagi nelada kadege

Beesi banditu ||


Nelada mele gudda betta

Addavayitu |

Tadedu ninta modavella

Melakeritu ||


Ghaligeyolage baanu tumba

Moda kaviyitu |

Minchu minchi jagavu belagi

Gudugu gudugitu ||


Moda melakeridaaga

Tampu tagulitu |

Aavi tanidu bharavaagi

Kusiyatodagitu ||


Muttinantha maleya neeru

Kelage suriyitu |

Kereyu toreyu halla holeyu

Tumbi hariyitu ||

          


Monday, September 2, 2024

Preetige Elle Ellide Nalle (ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ)

Bhavageete

Sahitya: M N Vyasa Rao

Song link: Click Here


Preetige elle ellide nalle

Hoguve elle ninnede kalle

Olavinda naa ninna karede

Baalali kanda bhavada belake ||


Mohava tori minchuta bande

Mayada gaaya moodiside

Kavyada selege kannikeyaade

Manjina haage nee suride 

Kadaduva kanasina roopave

Novu nee needuve ||


Dahava tumbi doorave ninte

Daariga nanna nee danisi

Premada kaave kaamada hoove

Kaaduvudeke aavarisi

Koraguva manaside baadide

Baalu bendagide ||


ಭಾವಗೀತೆ 


ಪ್ರೀತಿಗೆ ಎಲ್ಲೆ ಎಲ್ಲಿದೆ ನಲ್ಲೆ 

ಹೋಗುವೆ ಎಲ್ಲೆ ನಿನ್ನೆದೆ ಕಲ್ಲೆ 

ಒಲವಿಂದ ನಾ ನಿನ್ನ ಕರೆದೆ 

ಬಾಳಲಿ ಕಂಡ ಭಾವದ ಬೆಳಕೆ ।।ಪ।।


ಮೋಹವ ತೋರಿ ಮಿಂಚುತ ಬಂದೆ 

ಮಾಯದ ಗಾಯ ಮೂಡಿಸಿದೆ 

ಕಾವ್ಯದ ಸೆಲೆಗೆ ಕನ್ನಿಕೆಯಾದೆ 

ಮಂಜಿನ ಹಾಗೆ ನೀ ಸುರಿದೆ 

ಕದಡುವ ಕನಸಿನ ರೂಪವೇ 

ನೋವು ನೀ ನೀಡುವೆ ।।೧।।


ದಾಹವ ತುಂಬಿ ದೂರವೆ ನಿಂತೆ 

ದಾರಿಗ ನನ್ನ ನೀ ದಣಿಸಿ 

ಪ್ರೇಮದ ಕಾವೆ ಕಾಮದ ಹೂವೆ 

ಕಾಡುವುದೇಕೆ ಆವರಿಸಿ 

ಕೊರಗುವ ಮನಸಿದು ಬಾಡಿದೆ 

ಬಾಳು ಬೆಂಡಾಗಿದೆ ।।೨।।