Saturday, August 17, 2024

Dwapara Daatuta (ದ್ವಾಪರ ದಾಟುತ)

Movie: Krishnam Pranaya Sakhi (2024)

Singer: Jaskaran Singh

Song link: Click Here


Dwapara daatuta nannane nodalu, nannane seralu, banda radhike

Haadali haadalu, maatali helalu, sadhyave illada raaga maalike

Sakhi sakhi nanna rupasi

Sukhi sukhi ninna mohisi

Neene.. nanna preyasi ||


Jena daniyole, meena kannole, sobage mai tumbide

Hamsa nadeyole, edege ilidole, jeeva jhaal endide

Bere daareenu, illa nanginnu, neenu sikkagide

Naanu hudukidda, nanna nildana, neene innenide

Niharika, akarshika, anamika, hesarene

Veronika, shiphalika, ivamshika neenene.. !


Aralada sumagala aralisuvavalu, kusumagalanta beralu,

Chemmaligeyantive beralu

Giligala balagake SaRiGaMa kalisuva, Inidani jinugo koralu,

Balu vismaya ninna koralu

Soundaryadalli gambhiryavante, aantharyadalli oudaryavante

Neene.. nanna preyasi ! 


Paada padyana bareda haagiruva, hejjeya mudreyu,

Ninna nade kandu, hinde barabahudu, tungeyu, bhadreyu

Naanu srikrishna, neene nana bhame, moodide preetiyu

Yestu janmagala daati bandaytu, ee ksha  a sakshiyu

Leelavati, sharavati, neelavati, hesarene

Gangavati, tungavati, netravati neenene !


Nee nakkare sakkare, arerere endu brahmanigunu beragu

Neenendare beragigu beragu

Baredare mugiyadu padadali sigadu ratiyariginta sobagu

Mai maatave mohaka sobagu

Lavanya nodi naa dhanyanaade, tarunya modi heegagi hode

Neene.. nanna preyasi.. !


Jena daniyole, meena kannole, sobage mai tumbide

Hamsa nadeyole, edege ilidole, jeeva jhaal endide

Bere daarinu, illa nanginnu, neene sikkagide

Naanu hudukidda, nanna nildana, neene innenide !


ಚಿತ್ರಗೀತೆ 


ದ್ವಾಪರ ದಾಟುತ, ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ,

ಹಾಡಲಿ ಹಾಡಲು, ಮಾತಲಿ ಹೇಳಲು, ಸಾಧ್ಯವೇ ಇಲ್ಲದ ರಾಗ ಮಾಲಿಕೆ,

ಸಖಿ ಸಖಿ ನನ್ನ ರೂಪಸಿ 

ಸುಖಿ ಸುಖಿ ನಿನ್ನ ಮೋಹಿಸಿ 

ನೀನೇ .. ನನ್ನ ಪ್ರೇಯಸಿ !


ಜೆನ ದನಿಯೊಳೆ, ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ 

ಹಂಸ ನಡೆಯೋಳೆ, ಎದೆಗೆ ಇಳಿದೊಳೆ, ಜೀವ ಝಲ್ ಎಂದಿದೆ 

ಬೇರೆ ದಾರೀನು, ಇಲ್ಲ ನನಗಿನ್ನು, ನೀನು ಸಿಕ್ಕಾಗಿದೆ 

ನಾನು ಹುಡುಕಿದ್ದ, ನನ್ನ ನಿಲ್ದಾಣ, ನೀನೆ ಇನ್ನೇನಿದೆ 

ನಿಹಾರಿಕಾ, ಆಕರ್ಷಿಕಾ, ಅನಾಮಿಕಾ, ಹೆಸರೇನೆ .. 

ವೆರೋನಿಕಾ, ಶಿಫಾಲಿಕಾ, ಇವಾಂಶಿಕಾ  ನೀನೇನೆ .. !


ಅರಳದ ಸುಮಗಳ ಅರಳಿಸುವವಳು, ಕುಸುಮಗಳಂತೆ ಬೆರಳು,

ಚೆ೦ಮ್ಮಲಿಗೆಯಂತಿವೆ  ಬೆರಳು,

ಗಿಳಿಗಳ ಬಳಗಕೆ ಸರಿಗಮ ಕಲಿಸುವ, ಇನಿದನಿ ಜಿನುಗೊ ಕೊರಳು

ಬಲು ವಿಸ್ಮಯ ನಿನ್ನ ಕೊರಳು 

ಸೌಂದರ್ಯದಲ್ಲಿ  ಗಾಂಭೀರ್ಯವಂತೆ.. 

ಆಂತರ್ಯದಲ್ಲಿ ಔದಾರ್ಯವಂತೆ .. 

ನೀನೇ .. ನನ್ನ ಪ್ರೇಯಸಿ ! 


ಪಾದ ಪದ್ಯಾನ ಬರೆದ ಹಾಗಿರುವ, ಹೆಜ್ಜೆಯಾ ಮುದ್ರೆಯೂ .. 

ನಿನ್ನ ನಡೆ ಕಂಡು, ಹಿಂದೆ ಬರಬಹುದು, ತುಂಗೆಯೂ, ಭದ್ರೆಯೂ 

ನಾನು ಶ್ರೀಕೃಷ್ಣ, ನೀನೆ ನನ ಭಾಮೆ, ಮೂಡಿದೆ ಪ್ರೀತಿಯು 

ಎಷ್ಟು ಜನ್ಮಗಳ, ದಾಟಿ ಬಂದಾಯ್ತು, ಈ ಕ್ಷಣ ಸಾಕ್ಷಿಯು 

ಲೀಲಾವತಿ, ಶರಾವತಿ, ನೀಲಾವತಿ ಹೆಸರೇನೆ 

ಗಂಗಾವತಿ, ತುಂಗಾವತಿ, ನೇತ್ರಾವತಿ ನೀನೇನೆ !


ನೀ ನಕ್ಕರೆ ಸಕ್ಕರೆ, ಅರೆರೆರೆ ಎಂದೂ ಬ್ರಹ್ಮನಿಗೂನು ಬೆರಗು 

ನೀನೆಂದರೆ ಬೆರಗಿಗೂ ಬೆರಗು 

ಬರೆದರೆ ಮುಗಿಯದು ಪದದಲಿ ಸಿಗದು 

ರತಿಯರಿಗಿಂತ ಸೊಬಗು 

ಮೈ ಮಾಟವೆ ಮೋಹಕ ಸೊಬಗು 

ಲಾವಣ್ಯ ನೋಡಿ ನಾ ಧನ್ಯನಾದೆ 

ತಾರುಣ್ಯ ಮೋಡಿ ಹೀಗಾಗಿ ಹೋದೆ 

ನೀನೇ .. ನನ್ನ ಪ್ರೇಯಸಿ !


ಜೆನ ದನಿಯೊಳೆ, ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ 

ಹಂಸ ನಡೆಯೋಳೆ, ಎದೆಗೆ ಇಳಿದೊಳೆ, ಜೀವ ಝಲ್ ಎಂದಿದೆ 

ಬೇರೆ ದಾರೀನು, ಇಲ್ಲ ನನಗಿನ್ನು, ನೀನು ಸಿಕ್ಕಾಗಿದೆ 

ನಾನು ಹುಡುಕಿದ್ದ, ನನ್ನ ನಿಲ್ದಾಣ, ನೀನೆ ಇನ್ನೇನಿದೆ !

                              

Wednesday, August 14, 2024

Aadiyanariyada Kattala Payanake (ಆದಿಯನರಿಯದ ಕತ್ತಲ ಪಯಣಕೆ)

Bhavageete

Sahitya: K S Nisar Ahmed


Aadiyanariyada kattala payanake

Antyada guriyilla;

Aganita dehava todutiha pranake

Lokadi teravilla.


Badukidu jeevada pahareya tirugu,

Saradige nildana;

Iruvo, mannina kannina beragu-

Bhuviya surapaana.


Swarnaaksharadali keertiya kettisi

Nadedavarilluntu;

Smaranasaktiya smarakavettisi

Madidavarilluntu.


Kaalada kadalali nenapina haayiya

Telisidavarelli?

Bhumiya tolali beeguta, maayeya

Solisidavarelli?


Premada nantanu habbisi prakruti

Uliside tannanne;

Tannutkarshake tantrava hooduta

Balaside baalanne.



Usirina melake jaga himmelava 

Kudisi kunisiralu,

Hasiro hasiru, hesaro hesaru-

Haadiyo bari neralu.


ಭಾವಗೀತೆ 


ಆದಿಯನರಿಯದ ಕತ್ತಲ ಪಯಣಕೆ 

ಅಂತ್ಯದ ಗುರಿಯಿಲ್ಲ;

ಅಗಣಿತ ದೇಹವ ತೊಡುತಿಹ ಪ್ರಾಣಕೆ 

ಲೋಕದಿ ತೆರವಿಲ್ಲ. 


ಬದುಕಿದು ಜೀವದ ಪಹರೆಯ ತಿರುಗು, 

ಸರದಿಗೆ ನಿಲ್ದಾಣ; 

ಇರುವೋ, ಮಣ್ಣಿನ ಕಣ್ಣಿನ ಬೆರಗು- 

ಭುವಿಯ ಸುರಾಪಾನ. 


ಸ್ವರ್ಣಾಕ್ಷರದಲಿ ಕೀರ್ತಿಯ ಕೆತ್ತಿಸಿ 

ನಡೆದವರಿಲ್ಲುಂಟು;

ಸ್ಮರಣಾಸಕ್ತಿಯ ಸ್ಮಾರಕವೆತ್ತಿಸಿ 

ಮಡಿದವರಿಲ್ಲುಂಟು.  


ಕಾಲದ ಕಡಲಲಿ ನೆನಪಿನ ಹಾಯಿಯ 

ತೇಲಿಸಿದವರೆಲ್ಲಿ? 

ಭೂಮಿಯ ತೋಳಲಿ ಬೀಗುತ, ಮಾಯೆಯ 

ಸೋಲಿಸಿದವರೆಲ್ಲಿ ?


ಪ್ರೇಮದ ನಂಟನು ಹಬ್ಬಿಸಿ ಪ್ರಕೃತಿ 

ಉಳಿಸಿದೆ ತನ್ನನ್ನೆ;

ತನ್ನುತ್ಕರ್ಷಕೆ ತಂತ್ರವ ಹೂಡುತ 

ಬಳಸಿದೆ ಬಾಳನ್ನೆ. 


ಉಸಿರಿನ ಮೇಳಕೆ ಜಗ ಹಿಮ್ಮೇಳವ 

ಕೂಡಿಸಿ ಕುಣಿಸಿರಲು, 

ಹಸಿರೋ ಹಸಿರು, ಹೆಸರೋ ಹೆಸರು-

ಹಾದಿಯೊ ಬರಿ ನೆರಳು.  

    

Ellelli Nodali (ಎಲ್ಲೆಲ್ಲಿ ನೋಡಲಿ)

Movie: Naa Ninna Mareyalare (1976)

Singers: Dr. Rajkumar, S Janaki

Song link: Click Here


Ellelli nodali, ninnanne kanuve

Kannalli tumbiruve, manadali mane maadi aaduve

Ellelli nodali, ninnanne kanuve

Kannalli tumbiruve, manadali mane maadi aaduve

Ellelli nodali, ninnanne kanuve ||


Aa kempu tavare, aa neerigaadare

Ee honna tavare, nannaseyaasare aa.. aa..

Minchemba ballige meghada aasare

Ee henna baalige nina tolinaasare

Oo  yugagalu jaari urulidarenu

Naane neenu neene naanu

Aada mele bere enide ||


Raviyannu kaanade hagalendu aagadu

Ninnannu nodade ee prana nilladu

Kadalannu serada nadi elli kaanuve

Ninnannu serade naa hege baaluve

Oo virahada nova mareyali jeeva

Hoovu gandha seridante

Premadinda ninna seruve ||


ಚಿತ್ರಗೀತೆ 


ಎಲ್ಲೆಲ್ಲಿ ನೋಡಲಿ, ನಿನ್ನನ್ನೆ ಕಾಣುವೆ 

ಕಣ್ಣಲ್ಲಿ, ತುಂಬಿರುವೆ, ಮನದಲಿ ಮನೆ ಮಾಡಿ ಆಡುವೆ 

ಎಲ್ಲೆಲ್ಲಿ ನೋಡಲಿ, ನಿನ್ನನ್ನೆ ಕಾಣುವೆ 

ಕಣ್ಣಲ್ಲಿ, ತುಂಬಿರುವೆ, ಮನದಲಿ ಮನೆ ಮಾಡಿ ಆಡುವೆ 

ಎಲ್ಲೆಲ್ಲಿ ನೋಡಲಿ, ನಿನ್ನನ್ನೆ ಕಾಣುವೆ ।।ಪ।।


ಆ ಕೆಂಪು ತಾವರೆ, ಆ ನೀರಿಗಾದರೆ 

ಈ ಹೊನ್ನ ತಾವರೆ ನನ್ನಾಸೆಯಾಸರೇ, ಆ ..  ಆ .. 

 ಮಿಂಚೆ೦ಬ  ಬಳ್ಳಿಗೆ ಮೇಘದ ಆಸರೆ 

ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ 

ಓಓ..  ಯುಗಗಳು ಜಾರಿ ಉರುಳಿದರೇನು 

ನಾನೇ ನೀನು ನೀನೇ ನಾನು, ಆದ ಮೇಲೆ ಬೇರೆ ಏನಿದೆ ।।೧।।


ರವಿಯನ್ನು ಕಾಣದೆ ಹಗಲೆಂದು ಆಗದು 

ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು 

ಕಡಲನ್ನು ಸೇರದ ನದಿ ಎಲ್ಲಿ ಕಾಣುವೆ 

ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ 

ಓಓ .. ವಿರಹದ ನೋವ ಮರೆಯಲಿ ಜೀವ 

ಹೂವು ಗಂಧ ಸೇರಿದಂತೆ, ಪ್ರೇಮದಿಂದ ನಿನ್ನ ಸೇರುವೆ ।।೨।।

                            

Elle Iru Hege Iru (ಎಲ್ಲೇ ಇರು ಹೇಗೆ ಇರು)

Movie: Kasturi Nivasa (1971)

Singer: P Susheela

Song link: Click Here


Elle iru hege iru

Endendu manadalli nee tumbiru ||


Baalemba gudige nee devanaade

Karunaalu neenu adharavaade

Naa bedalaare varavenanu

Nee needu saku nageyondanu ||


Nannase nooru hoovagi nagalu

Hoo maale maadi ninagende taralu

Kantumba kande aa roopava

Belakagi banda aa deepava ||


ಚಿತ್ರಗೀತೆ 


ಎಲ್ಲೇ ಇರು ಹೇಗೆ ಇರು 

ಎಂದೆಂದೂ ಮನದಲ್ಲಿ ನೀ ತುಂಬಿರು ।।ಪ।।


ಬಾಳೆಂಬ ಗುಡಿಗೆ ನೀ ದೇವನಾದೆ 

ಕರುಣಾಳು ನೀನು ಆಧಾರವಾದೆ 

ನಾ ಬೇಡಲಾರೆ ವರವೇನನು 

ನೀ ನೀಡು ಸಾಕು ನಗೆಯೊಂದನು ।।೧।।


ನನ್ನಾಸೆ ನೂರು ಹೂವಾಗಿ ನಗಲು 

ಹೂ ಮಾಲೆ ಮಾಡಿ ನಿನಗೆಂದೆ ತರಲು 

ಕಣ್ತುಂಬ ಕಂಡೆ ಆ ರೂಪವಾ 

ಬೆಳಕಾಗಿ ಬಂದಾ ಆ ದೀಪವಾ ।।೨।।

               

Jeevana Sanjeevana (ಜೀವನ ಸಂಜೀವನ)

Movie: Hantakana Sanchu (1980)

Singers: Vani Jairam, P Jayachandran

Song link: Click Here


Jeevana sanjeevana nanna jeevake neene

Jeewana sanjeevana (2)

Neenuliye naanu, nirulida meenu

Neene jeevana, jeevana sanjeevana 

Jeewana sanjeevana nanna jeevake neene

Jeevana sanjeevana (2) ||


Tampala jenimpala, nanna usirige neene

Tampala jenimpala, ahaa..aa..aa

Neenu munidare bisil, neenuliye tann nelal

Nanna baalige, tampala nee jeninimpala

Jeewana sanjeevana nanna jeevake neene

Jeevana sanjeevana (2) ||


Kampala savi sompala, padma hrudayake neene

Kampala savi sompala, lala..la..la

Neen appal aan amruta, nee tappidare na mruta

Nannedeya kamalada kampala nee savi sompala

Jeewana sanjeevana nanna jeevake neene

Jeevana sanjeevana (2) ||


ಚಿತ್ರಗೀತೆ 


ಜೀವನ ಸಂಜೀವನ ನನ್ನ ಜೀವಕೆ ನೀನೆ 

ಜೀವನ ಸಂಜೀವನ (೨)

ನೀನುಳಿಯೇ ನಾನು, ನೀರುಳಿದ ಮೀನು 

ನೀನೆ  ಜೀವನ, ಜೀವನ ಸಂಜೀವನ 

ಜೀವನ ಸಂಜೀವನ ನನ್ನ ಜೀವಕೆ ನೀನೆ 

ಜೀವನ ಸಂಜೀವನ (೨) ।।ಪ।।


ತಂಪಲ ಜೇನಿಂಪಲ,  ನನ್ನ ಉಸಿರಿಗೆ ನೀನೇ 

ತಂಪಲ ಜೇನಿಂಪಲ ಆಹಾ .. ಆ .. .. ಆ 

ನೀನು ಮುನಿದರೆ ಬಿಸಿಲ್, ನೀನೊಲಿಯೇ ತಣ್ ನೆಳಲ್   

ನನ್ನ ಬಾಳಿಗೆ, ತಂಪಲ ನೀ ಜೇನಿಂಪಲ 

ಜೀವನ ಸಂಜೀವನ ನನ್ನ ಜೀವಕೆ ನೀನೆ 

ಜೀವನ ಸಂಜೀವನ (೨) ।।೧।।


ಕಂಪಲ ಸವಿ ಸೊಂಪಲ, ಪದ್ಮ ಹೃದಯಕೆ ನೀನೆ 

ಕಂಪಲ ಸವಿ ಸೊಂಪಲ, ಲಾಲಾ .. ಲಾ .. ಲಾ 

ನೀನಪ್ಪಲ್ ಆನ್ ಅಮೃತ, ನೀ ತಪ್ಪಿದರೆ ನಾ ಮೃತ 

ನನ್ನೆದೆಯ ಕಮಲದ ಕಂಪಲ ನೀ ಸವಿ ಸೊಂಪಲ 

ಜೀವನ ಸಂಜೀವನ ನನ್ನ ಜೀವಕೆ ನೀನೆ 

ಜೀವನ ಸಂಜೀವನ (೨) ।।೨।।

           

Sunday, August 11, 2024

Vasanta Banda (ವಸಂತ ಬಂದ)

Bhavageete

Sahitya: B M Shree

Song link: Click Here


Vasanta banda ruthugala raja ta banda

Chiguranu tanda, hengala kunisuta ninda

Chaliyanu konda, hakkigaluligale chenda

Kuvu, jag jag, puvvi ttuvi tavvu !


Kuri negedaata, kurubara kolalinudaata

Iniyara beta, banadali beladingaluta

Hosa hosa nota, hakkige nalivina pata,

Kuvu, jag jag, puvvi ttuvi tavvu !


Mavina sompu mallige bayalella kampu

Galiya tampu janagala jatreya gumpu

Kivigaligimpu hakkigaluluhina pempu

Kuvu, jag jag, puvvi ttuvi tavvu !


ಭಾವಗೀತೆ 


ವಸಂತ ಬಂದ ಋತುಗಳ ರಾಜ ತಾಬಂದ 

ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ 

ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ 

ಕೂವೂ, ಜಗ್ ಜಗ್, ಪೂವ್ವೀ, ಟ್ಟುವೀ, ಟ್ವವು ।।ಪ।।


ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ 

ಇನಿಯರ ಬೇಟ, ಬನದಲಿ ಬೆಳದಿಂಗಳೂಟ 

ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,

ಕೂವೂ, ಜಗ್ ಜಗ್, ಪೂವ್ವೀ, ಟ್ಟುವೀ, ಟ್ವವು ।।೧।।


ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲಾ ಕಂಪು 

ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು 

ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆ೦ಪು 

ಕೂವೂ, ಜಗ್ ಜಗ್, ಪೂವ್ವೀ, ಟ್ಟುವೀ, ಟ್ವವು ।।೨।।

                                

Ide Naadu Ide Bhashe (ಇದೇ ನಾಡು ಇದೇ ಭಾಷೆ)

Movie: Tirugu Baana (1983)

Singer: SPB

Song link: Click Here


Ide naadu, ide bhashe, endendu nannadagirali

Elle irali, hege irali, kannadave namma usiralli

Ide naadu, ide bhashe, endendu nannadagirali ||


Karunaadu swargada seeme, kaveri huttida naadu

Kallalli kaleyanu kanda, belura shilpada beedu

Basaveshwara, ranna pampara, kavi vaniya naadu

Ide naadu, ide bhashe, endendu nannadagirali ||


Chamundi raksheyu namage, gommatesha kavalu illi

Shringeri sharade veene, rasa tungeyaagide illi

Vishwakhyatiya vishweshvarayya, janisida ee naadu

Ide naadu, ide bhashe, endendu nannadagirali ||


Elelu janmave barali, ee mannali naanu huttuve

Enenu kashtave irali, sirigannadakkage dudiyuve

Tanu kannada, nudi kannada, mana kannadavaagirali 

Ide naadu, ide bhashe, endendu nannadagirali ||


ಚಿತ್ರಗೀತೆ 


ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ 

ಎಲ್ಲೇ ಇರಲಿ, ಹೇಗೆ ಇರಲಿ, ಕನ್ನಡವೇ ನಮ್ಮ ಉಸಿರಲ್ಲಿ 

ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ ।।ಪ।।


ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು 

ಕಲ್ಲಲ್ಲಿ ಕಲೆಯನು ಕಂಡ, ಬೇಲೂರ ಶಿಲ್ಪದ ಬೀಡು 

ಬಸವೇಶ್ವರ, ರನ್ನ ಪಂಪರ, ಕವಿ ವಾಣಿಯ ನಾಡು 

ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ ।।೧।।


ಚಾಮುಂಡಿ ರಕ್ಷೆಯು ನಮಗೆ, ಗೊಮ್ಮಟೇಶ ಕಾವಲು ಇಲ್ಲಿ 

ಶೃಂಗೇರಿ ಶಾರದೆ ವೀಣೆ, ರಸ ತುಂಗೆಯಾಗಿದೆ ಇಲ್ಲಿ 

ವಿಶ್ವ ಖ್ಯಾತಿಯ ವಿಶ್ವೇಶ್ವರಯ್ಯ, ಜನಿಸಿದ ಈ ನಾಡು 

ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ ।।೨।।


ಏಳೇಳು ಜನ್ಮವೆ ಬರಲಿ, ಈ ಮಣ್ಣಲಿ ನಾನು ಹುಟ್ಟುವೆ 

ಏನೇನು ಕಷ್ಟವೆ ಇರಲಿ, ಸಿರಿಗನ್ನಡಕ್ಕಾಗೆ ದುಡಿಯುವೆ 

ತನು ಕನ್ನಡ, ನುಡಿ ಕನ್ನಡ, ಮನ ಕನ್ನಡವಾಗಲಿ 

ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ ।।೩।।