Wednesday, March 27, 2024

Hrudaya Samudra Kalaki (ಹೃದಯ ಸಮುದ್ರ ಕಲಕಿ)

Movie: Ashwamedha (1990)

Singer: Dr. Rajkumar

Song link: Click Here


Hrudaya samudra kalaki, hottide dweshada benki

Roshagni jwale uriduridu

Dushta samhaarake, satya jhenkaarake, prana otte ittu..horaaduve..!

Ditta hejje ittu, yajna dheekshe tottu

Nadesuve ashwamedha.. ashwamedha.. (2) ||


Surya chandrare ninna kangalu, giri shrungave ninna angavo..o..

Dikpaalakare ninna kalgalu, minchu sidilu ninna vegavu

Jeevajeevadali beretu hoda..

Bhavabhavadali karagi hoda..jeevaashwave duraadeya

Pranashwave mareyaadeya, ditta hejje ittu, yajna dheekshe tottu

Nadesuve ashwamedha.. ashwamedha.. (2) ||


Vishavyuhavaa kutti kedavalu, veera pourusha etti hididu

Takita dheem dhirana (3), dheem 

Dhirana (4) dheemtana 

Takita dheem (2) dheem tana

Chadma veshava horageleyalu, kshatra tejadaa katti hiridu

Khula rakshara kocchi kadive, neeti nemagala bitti beleve

Aakashave mel beelali, bhu tayiye bai biriyali

Ditta hejje ittu, yjana dheekshe tottu

Nadesuve ashwamedha.. ashwamedha.. (3) ||


ಚಿತ್ರಗೀತೆ 


ಹೃದಯ ಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ 

ರೋಷಾಗ್ನಿ ಜ್ವಾಲೆ ಉರಿದುರಿದೂ 

ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ, ಪ್ರಾಣ ಒತ್ತೆ ಇಟ್ಟೂ .. ಹೋರಾಡುವೇ .. 

ದಿಟ್ಟ ಹೆಜ್ಜೆ ಇಟ್ಟು, ಯಜ್ಞ ಧೀಕ್ಷೆ ತೊಟ್ಟು 

ನಡೆಸುವೆ ಅಶ್ವಮೇಧಾ .. ಅಶ್ವಮೇಧಾ .. (೨) ।।ಪ।।


ಸೂರ್ಯ ಚಂದ್ರರೇ ನಿನ್ನ ಕಂಗಳು, ಗಿರಿ ಶೃಂಗವೇ ನಿನ್ನ ಅಂಗವೋ .. ಓ .. 

ದಿಕ್ಪಾಲಕರೇ ನಿನ್ನ ಕಾಲ್ಗಳು, ಮಿಂಚು ಸಿಡಿಲು ನಿನ್ನ ವೇಗವು 

ಜೀವಜೀವದಲಿ ಬೆರೆತು ಹೋದಾ .. 

ಭಾವಭಾವದಲಿ ಕರಗಿ ಹೋದಾ .. ಜೀವಶ್ವಾವೇ ದೂರಾದೆಯಾ 

ಪ್ರಾಣಾಶ್ವವೇ ಮರೆಯಾದೆಯಾ, ದಿಟ್ಟ ಹೆಜ್ಜೆ ಇಟ್ಟು, ಯಜ್ಞ ಧೀಕ್ಷೆ ತೊಟ್ಟು 

ನಡೆಸುವೆ ಅಶ್ವಮೇಧಾ .. ಅಶ್ವಮೇಧಾ .. (೨) ।।೧।।


ವಿಷವ್ಯೂಹವಾ ಕುಟ್ಟಿ ಕೆಡವಲು, ವೀರ ಪೌರುಷಾ ಎತ್ತಿ ಹಿಡಿದೂ 

ತಕಿಟ ಧೀ೦ ಧಿರನ (೩)  ಧೀ೦ 

ಧಿರನ (೪) ಧೀ೦ತನ 

ತಕಿಟ ಧೀ೦ (೨) ಧೀ೦ ತನ 

ಛದ್ಮ ವೇಷವ ಹೊರಗೆಳೆಯಲು, ಕ್ಷಾತ್ರ  ತೇಜದಾ ಕತ್ತಿ ಹಿರಿದೂ 

ಖೂಳ ರಾಕ್ಷಸರ ಕೊಚ್ಚಿ ಕಡಿವೆ, ನೀತಿ ನೇಮಗಳ ಬಿತ್ತಿ ಬೆಳೆವೆ 

ಆಕಾಶವೇ ಮೇಲ್ ಬೀಳಲಿ, ಭೂ ತಾಯಿಯೇ ಬಾಯ್ ಬಿರಿಯಲಿ 

ದಿಟ್ಟ ಹೆಜ್ಜೆ ಇಟ್ಟು, ಯಜ್ಞ ಧೀಕ್ಷೆ ತೊಟ್ಟು 

ನಡೆಸುವೆ ಅಶ್ವಮೇಧಾ .. ಅಶ್ವಮೇಧಾ .. (೩) ।।೨।।

                        


Mangalada Ee Sudina (ಮಂಗಳದ ಈ ಸುದಿನ)

Movie: Naa Mecchida Huduga (1970)

Singer: S Janaki

Song link: Click Here


Mangalada ee sudina, madhuravaagali

Nimmolave ee maneya

Nanda deepavagali ||


Anuraagada raagamaale nimmadagali

Apaswarada chaye endu kaanadaagali

Shrutiyodane swarataana leenavagali

Shuba geete midiyali ||


Tande taayi daari toro kannugaleradu

Avara prema duravage makkalu kurudu

Mamateyiruva maneye sada jeninagudu

Ade shantiya beedu ||


ಚಿತ್ರಗೀತೆ 


ಮಂಗಳದ ಈ ಸುದಿನ, ಮಧುರವಾಗಲಿ 

ನಿಮ್ಮೊಲವೆ ಈ ಮನೆಯ 

ನಂದಾ ದೀಪವಾಗಲಿ ।।ಪ।।


ಅನುರಾಗದ ರಾಗಮಾಲೆ ನಿಮ್ಮದಾಗಲಿ 

ಅಪಸ್ವರದ ಛಾಯೆ ಎಂದು ಕಾಣದಾಗಲಿ 

ಶೃತಿಯೊಡನೆ ಸ್ವರತಾನ ಲೀನವಾಗಲಿ 

ಶುಭ ಗೀತೆ ಮಿಡಿಯಲಿ ।।೧।।


ತಂದೆ ತಾಯಿ ದಾರಿ ತೋರೋ ಕಣ್ಣುಗಳೆರಡು 

ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು 

ಮಮತೆಯಿರುವ ಮನೆಯೆ ಸದಾ ಜೇನಿನಗೂಡು 

ಅದೇ ಶಾಂತಿಯ ಬೀಡು ।।೨।।

       


Manave Mandira (ಮನವೆ ಮಂದಿರ)

Movie: Tugudeepa (1966)

Singer: P B Srinivas

Song link: Click Here


Manave mandira (2), nyaya degula

Cheluve devaru olave deevige

Manave mandira .. ||


Karune mamate neeti niyama

Iralu baduku jenugudu, aa..aa

Beda samshaya bhranti vanchane

Himse tumbida vishada vachana ||


Naanu neenu avanu ivalu

Ella onde taaya sutaru, aa.. aa..

Emba bhava banda hrudaya, 

Devaniruva prema nilaya ||


ಚಿತ್ರಗೀತೆ 


ಮನವೆ ಮಂದಿರ (೨),ನ್ಯಾಯ ದೇಗುಲ 

ಚೆಲುವೆ ದೇವರು ಒಲವೇ ದೀವಿಗೆ 

ಮನವೆ ಮಂದಿರ ।।ಪ।।


ಕರುಣೆ ಮಮತೆ ನೀತಿ ನಿಯಮ 

ಇರಲು ಬದುಕು ಜೇನುಗೂಡು, ಆ ..ಆ 

ಬೇಡ ಸಂಶಯ ಭ್ರಾಂತಿ ವಂಚನೆ 

ಹಿಂಸೆ ತುಂಬಿದ ವಿಷದ ವಚನ ।।೧।।


ನಾನು ನೀನು ಅವನು ಇವಳು 

ಎಲ್ಲಾ ಒಂದೇ ತಾಯ ಸುತರು, ಆ .. ಆ .. 

ಎಂಬ ಭಾವ ಬಂದ ಹೃದಯ 

ದೇವನಿರುವ ಪ್ರೇಮ ನಿಲಯ ।।೨।।

                    


Halliyaadarenu Shiva (ಹಳ್ಳಿಯಾದರೇನು ಶಿವಾ)

Movie: Mayer Muttanna (1969)

Singer: P B Srinivas

Song link: Click Here


Halliyaadarenu shiva, dilliyaadarenu shiva

Janarella onde shiva, ella ninnante shiva

Jagavella ninnade shiva ||


Ella sampattallitte, ellarigende kotte (2)

Hanchikondu baalalariyada, duraase jana huh..

Vanchaneya maadutiruvaro

Badavarannu tulidu, ajankaaradalli meredu

Anyaya maadutiruvaro ||


Mahadiyaliddarenu, gudisalaliddarenu (2)

Hasivige anna tinnade, chinnavannu tinnalu sadhyavenu

Swarthadinda kudi, eneno aatavaadi

Barigaili kadege nadevaro..o.. ||


ಚಿತ್ರಗೀತೆ 


ಹಳ್ಳಿಯಾದರೇನು ಶಿವಾ, ದಿಲ್ಲಿಯಾದರೇನು ಶಿವಾ 

ಜನರೆಲ್ಲ ಒಂದೇ ಶಿವಾ, ಎಲ್ಲಾ ನಿನ್ನಂತೆ ಶಿವಾ 

ಜಗವೆಲ್ಲಾ ನಿನ್ನದೇ ಶಿವಾ ।।ಪ।।


ಎಲ್ಲಾ ಸಂಪತ್ತಲ್ಲಿಟ್ಟೆ, ಎಲ್ಲರಿಗೆಂದೆ ಕೊಟ್ಟೆ (೨)

ಹಂಚಿಕೊಂಡು ಬಾಳಲರಿಯದ, ದುರಾಸೆ ಜನ ಹ್ಹ.. 

ವಂಚನೆಯ ಮಾಡುತಿರುವರೋ 

ಬಡವರನ್ನು ತುಳಿದು, ಅಹಂಕಾರದಲ್ಲಿ ಮೆರೆದು 

ಅನ್ಯಾಯ ಮಾಡುತಿರುವರೋ ।।೧।।


ಮಹಡಿಯಲಿದ್ದರೇನು, ಗುಡಿಸಲಲಿದ್ದರೇನೂ  (೨)

ಹಸಿವಿಗೆ ಅನ್ನ ತಿನ್ನದೆ, ಚಿನ್ನವನ್ನು ತಿನ್ನಲು ಸಾಧ್ಯವೇನು 

ಸ್ವಾರ್ಥದಿಂದ ಕೂಡಿ, ಏನೇನೋ ಆಟವಾಡಿ 

ಬರಿಗೈಲಿ ಕಡೆಗೆ ನಡೆವರೋ .. ಓ .. ।।೨।।

           


Hareya Hora Susuta Tandiha (ಹರೆಯ ಹೊರ ಸೂಸುತ ತಂದಿಹ)

Movie: Takka Bitre Sikka (1970)

Singer: P B Srinivas

Song link: Click Here


Ha Re Ya hora susuta tandiha

Sa Ni Ha nasu naachade dochuva

Sa Ma Ya ee sudina janumadina

Apurva amulya mahaadina

CHO: HAPPY BIRTHDAY TO YOU (3)


Nee minda neerella haalagali

Neenanda maatella jenagali

Nee tanda hoovella hannagali

Nee konda humaale honnagali ||


Ha Re Ya hora susuta tandiha

Sa Ni Ha nasu nachade dochuva

Sa Ma Ya ee sudina janumadina

Apurva amulya mahaadina

CHO: HAPPY BIRTHDAY TO YOU (3)


kannase kaigudi eederali,

Haaraike puraike bennerali 

Baalondu bangaara ganiyagali

Stiravaada singaara siriyaagali ||


ಚಿತ್ರಗೀತೆ 


ಹ ರೆ ಯ ಹೊರ ಸೂಸುತ ತಂದಿಹ 

ಸ ನಿ ಹ ನಸು ನಾಚದೆ ದೋಚುವ 

ಸ ಮ ಯ ಈ ಸುದಿನ ಜನುಮದಿನ 

ಅಪೂರ್ವ ಅಮೂಲ್ಯ ಮಹಾದಿನ 

 ಚೊ: ಹ್ಯಾಪಿ ಬರ್ತ್ಡೇ ಟು ಯು (೩)


ನೀ ಮಿಂದ ನೀರೆಲ್ಲ ಹಾಲಾಗಲಿ 

ನೀನಂದ ಮಾತೆಲ್ಲ ಜೇನಾಗಲಿ 

ನೀ ತಂದ ಹೂವೆಲ್ಲ ಹಣ್ಣಾಗಲಿ 

ನೀ ಕೊಂಡ ಹೂಮಾಲೆ ಹೊನ್ನಾಗಲಿ ।।೧।।


ಹ ರೆ ಯ ಹೊರ ಸೂಸುತ ತಂದಿಹ 

ಸ ನಿ ಹ ನಸು ನಾಚದೆ ದೋಚುವ 

ಸ ಮ ಯ ಈ ಸುದಿನ ಜನುಮದಿನ 

ಅಪೂರ್ವ ಅಮೂಲ್ಯ ಮಹಾದಿನ 

ಚೊ: ಹ್ಯಾಪಿ ಬರ್ತ್ಡೇ ಟು ಯು (೩)


ಕಣ್ಣಾಸೆ ಕೈಗೂಡಿ ಈಡೇರಲಿ 

ಹಾರೈಕೆ ಪೂರೈಕೆ ಬೆನ್ನೇರಲಿ (೨)

ಬಾಳೊಂದು ಬಂಗಾರ ಗಣಿಯಾಗಲಿ 

ಸ್ಥಿರವಾದ ಸಿಂಗಾರ ಸಿರಿಯಾಗಲಿ ।।೨।।

                 


Monday, March 25, 2024

Beluvalada Madilalli (ಬೆಳುವಲದ ಮಡಿಲಲ್ಲಿ)

Movie: Beluvalada Madilalli (1975)

Singers: SPB, S Janaki

Song link: Click Here


Beluvalada madilallee..    Bevara hani biddaga

Beluvalada madilalli, bevara hani biddaga (2)

Ondondu bevara hani muttaitado

Raagiya jwalada teneyaitado

Ondondu bevara hani muttaitado

Ellara annada tuttaitado 

Beluvalada madilalli, bevara hani biddaga ||


Dudimeli yavattu idabeku bhakti

Badatanava odsoke adu onde yukti

Dudiyore naadinaa.. (2) balu dodda shakti

Beleyora kaigale deshakke asti 

Ee namma shaktilee..nambike.. ittaga (2)

Nav kaano kasavella rasavaitado

Nav kanda kanasella nanasaitado 

Beluvalada madilalli, bevara hani biddaga ||


Uluvone lokakke bekaada geleya

Halligu dilligu kodtane beleya

Bhutayi bhanta..aa.. (2) ee negila nenta

Ivnindle aliyodu hasivina sankta

Ee bhanta dudidaaga..   bhudevi nagutaale (2)

Aavagle nelavella hasiraitado

Ellara baalina usiraitado 

Beluvalada madilalli, bevara hani biddaga ||


ಚಿತ್ರಗೀತೆ 


ಬೆಳುವಲದ ಮಡಿಲಲ್ಲೀ ..        ಬೆವರ ಹನಿ ಬಿದ್ದಾಗ .. 

ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ (೨)

ಒಂದೊಂದು ಬೆವರ ಹನಿ ಮುತ್ತಾಯ್ತದೋ 

ರಾಗಿಯ ಜ್ವಾಳದ ತೆನೆಯಾಯ್ತದೋ 

ಒಂದೊಂದು ಬೆವರ ಹನಿ ಮುತ್ತಾಯ್ತದೋ 

ಎಲ್ಲಾರ ಅನ್ನದ ತುತ್ತಾಯ್ತದೋ 

ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ ।।ಪ।।


ದುಡಿಮೇಲಿ ಯಾವತ್ತು ಇಡಬೇಕು ಭಕ್ತಿ 

ಬಡತನವ ಓಡ್ಸೋಕೆ ಅದು ಒಂದೇ ಯುಕ್ತಿ 

ದುಡಿಯೋರೆ ನಾಡಿನಾ .. (೨) ಬಲು ದೊಡ್ಡ ಶಕ್ತಿ 

ಬೆಳೆಯೋರ ಕೈಗಳೆ ದೇಶಕ್ಕೆ ಅಸ್ತಿ 

ಈ ನಮ್ಮ ಶಕ್ತೀಲೀ .. ನಂಬಿಕೆ ಇಟ್ಟಾಗ .. (೨)

ನಾವ್ ಕಾಣೋ ಕಸವೆಲ್ಲ ರಸವಾಯ್ತದೋ 

ನಾವ್ ಕಂಡ ಕನಸೆಲ್ಲ ನನಸಾಯ್ತದೋ 

ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ ।।೧।।


ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ 

ಹಳ್ಳಿಗೂ ದಿಲ್ಲಿಗೂ ಕೊಡ್ತಾನೆ ಬೆಳೆಯ 

ಭೂತಾಯಿ ಭಂಟ .. ಆ .. (೨) ಈ ನೇಗಿಲ ನೆಂಟ 

ಇವ್ನಿ೦ದ್ಲೇ ಅಳಿಯೋದು ಹಸಿವಿನಾ ಸಂಕ್ಟ 

ಈ ಭಂಟ ದುಡಿದಾಗ ..     ಭೂದೇವಿ ನಗುತಾಳೆ (೨)

ಆವಾಗ್ಲೆ ನೆಲವೆಲ್ಲ ಹಸಿರಾಯ್ತದೋ 

ಎಲ್ಲಾರ ಬಾಳಿನ ಉಸಿರಾಯ್ತದೋ 

ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ ।।೨।।

                   


Sunday, March 24, 2024

Anisutide Yako Indu (ಅನಿಸುತಿದೆ ಯಾಕೋ ಇಂದು)

Movie: Mungaru Male (2006)

Singer: Sonu Nigam

Song link: Click Here


Anisutide yako indu, neenene nannavalendu

Mayada lokadinda, nanagaage bandavalendu

Aha entha madhura yatane

Kollu hudugi omme nanna

Haage summane.., anisutide yako indu ||

 

Suriyuva soneyu, suside ninnade parimala

Innyara kanasalu neenu, hodare talamala

Purna chandira rajaa haakida, ninnaya mogavanu kanda kshana

Naa khaidi neene seremane, tabbi nanna appiko omme

Haage summane, anisutide yako indu ||


Tutigala hoovali, aadada maatina sihiyide

Manasina putadali, kevala ninnade sahiyide

Haneyali bareyada ninna hesara, hrudayadi naane korediruve

Ninagunte idara kalpane, nanna hesara kuge omme

haage summane ||


ಚಿತ್ರಗೀತೆ 


ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು 

ಮಾಯದ ಲೋಕದಿಂದ, ನನಗಾಗೆ ಬಂದವಳೆಂದು 

ಆಹಾ ಎಂಥ ಮಧುರ ಯಾತನೆ 

ಕೊಲ್ಲು ಹುಡುಗಿ ಒಮ್ಮೆ ನನ್ನಾ 

ಹಾಗೆ ಸುಮ್ಮನೆ.., ಅನಿಸುತಿದೆ ಯಾಕೋ ಇಂದು ।।ಪ।।


ಸುರಿಯುವ ಸೋನೆಯು, ಸೂಸಿದೆ ನಿನ್ನದೆ ಪರಿಮಳ 

ಇನ್ನ್ಯಾರ ಕನಸಲೂ ನೀನು, ಹೋದರೆ ತಳಮಳ 

ಪೂರ್ಣ ಚಂದಿರ ರಜಾ ಹಾಕಿದ, ನಿನ್ನಯ ಮೊಗವನು ಕಂಡ ಕ್ಷಣ 

ನಾ ಖೈದಿ ನೀನೆ ಸೆರೆಮನೆ, ತಬ್ಬಿ ನನ್ನ ಅಪ್ಪಿಕೊ ಒಮ್ಮೆ 

ಹಾಗೆ ಸುಮ್ಮನೆ, ಅನಿಸುತಿದೆ ಯಾಕೋ ಇಂದು ।।೧।।


ತುಟಿಗಳ ಹೂವಲಿ, ಆಡದ ಮಾತಿನ ಸಿಹಿಯಿದೆ 

ಮನಸಿನ ಪುಟದಲಿ, ಕೇವಲ ನಿನ್ನದೆ ಸಿಹಿಯಿದೆ 

ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದಿ ನಾನೇ ಕೊರೆದಿರುವೆ 

ನಿನಗುಂಟೆ ಇದರ ಕಲ್ಪನೆ, ನನ್ನ ಹೆಸರ ಕೂಗೆ ಒಮ್ಮೆ 

ಹಾಗೆ ಸುಮ್ಮನೆ ।।೨।।