Sunday, March 24, 2024

Anisutide Yako Indu (ಅನಿಸುತಿದೆ ಯಾಕೋ ಇಂದು)

Movie: Mungaru Male (2006)

Singer: Sonu Nigam

Song link: Click Here


Anisutide yako indu, neenene nannavalendu

Mayada lokadinda, nanagaage bandavalendu

Aha entha madhura yatane

Kollu hudugi omme nanna

Haage summane.., anisutide yako indu ||

 

Suriyuva soneyu, suside ninnade parimala

Innyara kanasalu neenu, hodare talamala

Purna chandira rajaa haakida, ninnaya mogavanu kanda kshana

Naa khaidi neene seremane, tabbi nanna appiko omme

Haage summane, anisutide yako indu ||


Tutigala hoovali, aadada maatina sihiyide

Manasina putadali, kevala ninnade sahiyide

Haneyali bareyada ninna hesara, hrudayadi naane korediruve

Ninagunte idara kalpane, nanna hesara kuge omme

haage summane ||


ಚಿತ್ರಗೀತೆ 


ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು 

ಮಾಯದ ಲೋಕದಿಂದ, ನನಗಾಗೆ ಬಂದವಳೆಂದು 

ಆಹಾ ಎಂಥ ಮಧುರ ಯಾತನೆ 

ಕೊಲ್ಲು ಹುಡುಗಿ ಒಮ್ಮೆ ನನ್ನಾ 

ಹಾಗೆ ಸುಮ್ಮನೆ.., ಅನಿಸುತಿದೆ ಯಾಕೋ ಇಂದು ।।ಪ।।


ಸುರಿಯುವ ಸೋನೆಯು, ಸೂಸಿದೆ ನಿನ್ನದೆ ಪರಿಮಳ 

ಇನ್ನ್ಯಾರ ಕನಸಲೂ ನೀನು, ಹೋದರೆ ತಳಮಳ 

ಪೂರ್ಣ ಚಂದಿರ ರಜಾ ಹಾಕಿದ, ನಿನ್ನಯ ಮೊಗವನು ಕಂಡ ಕ್ಷಣ 

ನಾ ಖೈದಿ ನೀನೆ ಸೆರೆಮನೆ, ತಬ್ಬಿ ನನ್ನ ಅಪ್ಪಿಕೊ ಒಮ್ಮೆ 

ಹಾಗೆ ಸುಮ್ಮನೆ, ಅನಿಸುತಿದೆ ಯಾಕೋ ಇಂದು ।।೧।।


ತುಟಿಗಳ ಹೂವಲಿ, ಆಡದ ಮಾತಿನ ಸಿಹಿಯಿದೆ 

ಮನಸಿನ ಪುಟದಲಿ, ಕೇವಲ ನಿನ್ನದೆ ಸಿಹಿಯಿದೆ 

ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದಿ ನಾನೇ ಕೊರೆದಿರುವೆ 

ನಿನಗುಂಟೆ ಇದರ ಕಲ್ಪನೆ, ನನ್ನ ಹೆಸರ ಕೂಗೆ ಒಮ್ಮೆ 

ಹಾಗೆ ಸುಮ್ಮನೆ ।।೨।।

           


Besuge Besuge (ಬೆಸುಗೆ ಬೆಸುಗೆ)

Movie: Besuge (1976)

Singers: SPB, Vani Jairam

Song link: Click Here


Besuge..            besuge.. (4)

Jeevanavella sundara besuge ||


Raagada jothege taalada besuge

Raaga taalake bhavada besuge

Bhavada jothege geeteya besuge

Geeteya jothe sangeetada besuge

Besuge (4) jeevanavella sundara besuge ||


Hareyada hennige lajjeya besuge

Miruguva kannige aaseya besuge

Youvvanadalli mohada besuge

Mai manadalli bayakeya besuge ||


Eradu manasige olavina besuge

Eradu baalina bandhana besuge

Madhura milanake preetiya besuge

Januma janumaku aatmada besuge ||


ಚಿತ್ರಗೀತೆ 


ಬೆಸುಗೆ ..      ಬೆಸುಗೆ ..  (೪)

ಜೀವನವೆಲ್ಲಾ ಸುಂದರ ಬೆಸುಗೆ ।।ಪ।।


ರಾಗದ ಜೊತೆಗೆ ತಾಳದ ಬೆಸುಗೆ 

ರಾಗ ತಾಳಕೆ ಭಾವದ ಬೆಸುಗೆ 

ಭಾವದ ಜೊತೆಗೆ ಗೀತೆಯ ಬೆಸುಗೆ 

ಗೀತೆಯ ಜೊತೆಗೆ ಸಂಗೀತದ ಬೆಸುಗೆ 

ಬೆಸುಗೆ (೪) ಜೀವನವೆಲ್ಲಾ ಸುಂದರ ಬೆಸುಗೆ ।।೧।।


ಹರೆಯದ ಹೆಣ್ಣಿಗೆ  ಲಜ್ಜೆಯ ಬೆಸುಗೆ 

ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ 

ಯೌವನದಲ್ಲಿ ಮೋಹದ ಬೆಸುಗೆ 

ಮೈ ಮನದಲ್ಲಿ ಬಯಕೆಯ ಬೆಸುಗೆ ।।೨।।


ಎರಡು ಮನಸಿಗೆ ಒಲವಿನ ಬೆಸುಗೆ 

ಎರಡು ಬಾಳಿನ ಬಂಧನ ಬೆಸುಗೆ 

ಮಧುರ ಮಿಲನಕೆ ಪ್ರೀತಿಯ ಬೆಸುಗೆ 

ಜನುಮ ಜನುಮಕೂ ಆತ್ಮದ ಬೆಸುಗೆ ।।೩।।

             


Ballige Hoovu Chenda (ಬಳ್ಳಿಗೆ ಹೂವು ಚೆಂದ)

Movie: Bhale Huccha (1972)

Singers: P B Srinivas, S Janaki

Song link: Click Here


Ballige hoovu chenda, hoovige dumbi chenda

Dumbiya gaana chenda, gaanada saviyu chenda

Dumbiya gaana chenda, chendavo chenda chenda ||


Kadala mutte anda, muttina muguti anda

Muguti hennige anda, henninaa kanne anda

Hennina kanne anda, andavo anda anda

Andavo anda anda ||


Sanjeya veleyali, tannane gaaliyali (2)

Bisiyu erutiha bhavane eke

Tampu galiyali, impu gaanadali

Manadi moha mudi kaadide adake

Ninnali aaseyu nanageke

O..o..nannanu kenakuva intha maateke ||


Kannugala nudiyenu, nannade haadenu (2)

Ondu tiliyada kaaranavenu

Heluva matalla, keluva katheyalla

Hrudayada haadige, bhasheye illa

Enidu nannali, aananda

Aa..aa olida devanu, tanda sambandha ||


ಚಿತ್ರಗೀತೆ 


ಬಳ್ಳಿಗೆ ಹೂವು ಚೆಂದ, ಹೂವಿಗೆ ಉಂಬಿ ಚೆಂದ 

ದುಂಬಿಯ ಗಾನ ಚೆಂದ, ಗಾನದ ಸವಿಯು ಚೆಂದ 

ದುಂಬಿಯ ಗಾನ ಚೆಂದ, ಚೆಂದವೋ ಚೆಂದ ಚೆಂದ ।।


ಕಡಲ ಮುತ್ತೇ ಅಂದ, ಮುತ್ತಿನ ಮೂಗುತಿ ಅಂದ 

ಮೂಗುತಿ ಹೆಣ್ಣಿಗೆ ಅಂದ, ಹೆಣ್ಣಿನಾ ಕಣ್ಣೇ ಅಂದ 

ಹೆಣ್ಣಿನಾ ಕಣ್ಣೇ ಅಂದ, ಅಂದವೋ ಅಂದ ಅಂದ 

ಅಂದವೋ ಅಂದ ಅಂದ ।।


ಸಂಜೆಯ ವೇಳೆಯಲಿ, ತಣ್ಣನೆ ಗಾಳಿಯಲಿ (೨)

ಬಿಸಿಯು ಏರುತಿಹ ಭಾವನೆ ಏಕೆ 

ತಂಪು ಗಾಳಿಯಲಿ, ಇಂಪು ಗಾನದಲಿ 

ಮನದಿ ಮೋಹ ಮೂಡಿ ಕಾಡಿದೆ ಅದಕೆ 

ನಿನ್ನಲೀ ಆಸೆಯು ನನಗೇಕೆ 

ಓ .. ಓ ನನ್ನನೂ ಕೆಣಕುವ ಇಂಥಾ ಮಾತೇಕೆ ।।೧।।


ಕಣ್ಣುಗಳ ನುಡಿಯೇನು, ನನ್ನದೆ ಹಾಡೇನು (೨)                 

ಒಂದೂ ತಿಳಿಯದ ಕಾರಣವೇನು 

ಹೇಳುವ ಮಾತಲ್ಲ, ಕೇಳುವ ಕಥೆಯಲ್ಲ 

ಹೃದಯದ ಹಾಡಿಗೆ, ಭಾಷೆಯೇ ಇಲ್ಲ 

ಏನಿದೂ ನನ್ನಲಿ, ಆನಂದ 

ಆ .. ಆ ಒಲಿದ ದೇವನು, ತಂದ ಸಂಬಂಧ ।।೨।।

                     



Wednesday, March 20, 2024

Baalu Belakayitu (ಬಾಳು ಬೆಳಕಾಯಿತು)

Movie: Haalu Jenu (1982)

Singer: Dr. Rajkumar

Song link: Click Here


Baalu belakayitu (2) premada hoove (3)

Ninna, seri, indu, baalu belakayitu ||


Hoovali gandha, serida haage (2)

Bereyalu indu.. (2) nanna, ninna, jeeva, chinna

Olavina hoove, baalu belakayitu

Premada hoove, ninna, seri, indu

Baalu belakayitu ||


Raagavu neenu, bhavavu neenu (2)

Nannade veene aa..aa..aa..aa

Nannade veene, nudisi, naliye, neenu, cheluve

Olavina hoove, baalu belakayitu

Premada hoove, ninna, seri, indu

Baalu belakayitu ||


Dehavu naanu, pranavu neenu (2)

Agaluvudunte, innu, ninna, naanu, helu

Olavina hoove, baalu belakayitu

Premada hoove (3) 

Ninna, seri, indu, baalu belakayitu ||


ಚಿತ್ರಗೀತೆ 


ಬಾಳು ಬೆಳಕಾಯಿತು (೨) ಪ್ರೇಮದ ಹೂವೆ (೩)

ನಿನ್ನ, ಸೇರಿ, ಇಂದು, ಬಾಳು ಬೆಳಕಾಯಿತು ।।ಪ।।


ಹೂವಲಿ ಗಂಧ, ಸೇರಿದ ಹಾಗೆ (೨)

ಬೆರೆಯಲು ಇಂದೂ .. (೨) ನನ್ನ, ನಿನ್ನ, ಜೀವ, ಚಿನ್ನ 

ಒಲವಿನ ಹೂವೆ, ಬಾಳು ಬೆಳಕಾಯಿತು 

ಪ್ರೇಮದ ಹೂವೆ ,ನಿನ್ನ, ಸೇರಿ, ಇಂದು 

ಬಾಳು ಬೆಳಕಾಯಿತು ।।೧।।


ರಾಗವು ನೀನು, ಭಾವವು ನೀನು (೨)

ನನ್ನದೆ ವೀಣೆ ಆ .. ಆ .. ಆ .. ಆ 

ನನ್ನದೆ ವೀಣೆ, ನುಡಿಸಿ, ನಲಿಯೆ, ನೀನು, ಚೆಲುವೆ 

ಒಲವಿನ ಹೂವೆ, ಬಾಳು ಬೆಳಕಾಯಿತು 

ಪ್ರೇಮದ ಹೂವೆ ,ನಿನ್ನ, ಸೇರಿ, ಇಂದು

 ಬಾಳು ಬೆಳಕಾಯಿತು ।।೨।।


ದೇಹವು ನಾನು, ಪ್ರಾಣವು ನೀನು (೨)

ಅಗಲುವುದುಂಟೆ, ಇನ್ನು, ನಿನ್ನ, ನಾನು, ಹೇಳು 

ಒಲವಿನ ಹೂವೆ, ಬಾಳು ಬೆಳಕಾಯಿತು 

ಪ್ರೇಮದ ಹೂವೆ (೩) ನಿನ್ನ, ಸೇರಿ, ಇಂದು

 ಬಾಳು ಬೆಳಕಾಯಿತು ।।೩।।

               


Baalondu Nandana (ಬಾಳೊಂದು ನಂದನ)

Movie: Jenugoodu (1963)

Singer: Ghantasala

Songlink: Click Here


Baalondu nandana, anuraaga bandhana

Saha jeevana, savi jenina, sadana, baalondu nandana ||


Toredalli jenugudu, horagella kaadu medu

Kaigudida mai mudida, hulu baala hoo bana

Holasaayiti dina

Baalondu nandana, anuraaga bandhana

Saha jeevana, savi jenina, sadana ||


Olavemba seemegoida, priyanindu duranaada

Sakhanillade, sukhavellide, priyegaayitee jaga

Doreyilladolaga, baalondu nandana, anuraaga bandhana

Saha jeevana, savi jenina, sadana ||


Vidhi hodalondu sanchu, sukha dukha hinchu munchu

Manadaaseyu, mahadaashaya, mannagalollade 

hannagaballude ||


ಚಿತ್ರಗೀತೆ 


ಬಾಳೊಂದು ನಂದನ, ಅನುರಾಗ ಬಂಧನ 

ಸಹ ಜೀವನ, ಸವಿ ಜೇನಿನ, ಸದನ, ಬಾಳೊಂದು ನಂದನ ।।ಪ।।


ತೊರೆದಲ್ಲಿ ಜೇನುಗೂಡು, ಹೊರಗೆಲ್ಲ ಕಾಡು ಮೇಡು 

ಕೈಗೂಡಿದ ಮೈ ಮೂಡಿದ, ಹುಲು ಬಾಳ ಹೂ ಬನ 

ಹೊಲಸಾಯಿತೀ ದಿನ 

ಬಾಳೊಂದು ನಂದನ, ಅನುರಾಗ ಬಂಧನ 

ಸಹ ಜೀವನ, ಸವಿ ಜೇನಿನ, ಸದನ ।।೧।।


ಒಲವೆಂಬ ಸೀಮೆಗೋಯ್ದ, ಪ್ರಿಯನಿಂದು ದೂರನಾದ 

ಸಖನಿಲ್ಲದೆ, ಸುಖವೆಲ್ಲಿದೆ, ಪ್ರಿಯೆಗಾಯಿತೀ ಜಗ 

ದೊರೆಯಿಲ್ಲದೊಲಗ, ಬಾಳೊಂದು ನಂದನ, ಅನುರಾಗ ಬಂಧನ 

ಸಹ ಜೀವನ, ಸವಿ ಜೇನಿನ, ಸದನ ।।೨।।


ವಿಧಿ ಹೊಡಲೊಂದು ಸಂಚು, ಸುಖ ದುಃಖ ಹಿಂಚು ಮುಂಚು 

ಮನದಾಸೆಯ, ಮಹದಾಶಯ, ಮಣ್ಣಾಗಲೊಲ್ಲದೆ 

ಹಣ್ಣಾಗಬಲ್ಲುದೆ  ।।

           


Monday, March 18, 2024

Emma Maneyangaladi (ಎಮ್ಮ ಮನೆಯಂಗಳದಿ)

Movie: Kulavadhu (1963)

Singer: S Janaki

Song link: Click Here


Emma maneyangaladi beledondu hoovannu

Nimma madilolagiralu tandiruvevu

Kolliri maguvannu emma mane belakannu

Nimma maneyanu tumbalu oppisuvevu ||


Hettavara manegindu horagaade nee magale

Ee maneye, ee ivare ninnavaru munde

Ivare taigalu sukharu, bhagyavanu belasuvaru

Ivara devare ninna devarugalu ||


Nillu kannoresuko, nillu tai hoguvevu

Tayidira tandeyira kolliri ivala

Eradu manegala hesaru khyatigalu ulivante

Tumbidaayushyadali baali baduku ||


 ಚಿತ್ರಗೀತೆ 


ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು 

ನಿಮ್ಮ ಮಡಿಲೊಳಗಿರಲು ತಂದಿರುವೆವು 

ಕೊಳ್ಳಿರಿ ಮಗುವನ್ನು ಎಮ್ಮ ಮನೆ ಬೆಳಕನ್ನು 

ನಿಮ್ಮ ಮನೆಯನು ತುಂಬಲು ಒಪ್ಪಿಸುವೆವು ।।ಪ।।


ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ 

ಈ ಮನೆಯೆ, ಈ ಇವರೆ ನಿನ್ನವರು ಮುಂದೆ 

ಇವರೆ ತಾಯ್ಗಳು ಸುಖರು, ಭಾಗ್ಯವನು ಬೆಳಸುವರು 

ಇವರ ದೇವರೆ ನಿನ್ನ ದೇವರುಗಳು ।।೫।।


ನಿಲ್ಲು ಕಣ್ಣೊರೆಸುಕೊ, ನಿಲ್ಲು ತಾಯ್ ಹೋಗುವೆವು 

ತಾಯಿದಿರ ತಂದೆಯಿರ ಕೊಳ್ಳಿರಿ ಇವಳ 

ಎರಡು ಮನೆಗಳ ಹೆಸರು ಖ್ಯಾತಿಗಳು ಉಳಿವಂತೆ 

ತುಂಬಿದಾಯುಷ್ಯದಲಿ ಬಾಳಿ ಬದುಕು ।।೬।।

                           



Bisilaadarenu Maleyaadarenu (ಬಿಸಿಲಾದರೇನು, ಮಳೆಯಾದರೇನು)

Movie: Benkiya Bale (1983)

Singer: SPB

Song link: Click Here


Bisilaadarenu maleyaadarenu (2)

Jotheyagi endu, naanillavenu

Nee nanna jeeva endigu..

Bisilaadarenu, maleyaadarenu, bisilaadarenu ||


Hoovu haavadarenu, haalu vishavadarenu (2)

Ee ninna nota beretaga mullu hoovagi araladenu

Bhuviye bayi bittarenu, sidile eduradarenu

Nan aane nalle, naa ninna bidenu, pranakke prana koduve

Kambani, midiyade, innu nagalaareyenu

Bisilaadarenu, maleyaadarenu, bisilaadarenu ||


Seleva suliyaadarenu, benkiya baleyaadarenu (2)

Ee baalu endu horata taane, bidu innu chinteyannu

Yaarenu andarenu, ure eduraadarenu

Kone tanaka naanu horadi geluve, ninnannu naanu bidenu

Koragade, nadugade, nalle nagalaareyenu ||


ಚಿತ್ರಗೀತೆ 


ಬಿಸಿಲಾದರೇನು, ಮಳೆಯಾದರೇನು (೨)

ಜೊತೆಯಾಗಿ ಎಂದೂ, ನಾನಿಲ್ಲವೇನೂ 

ನೀ ನನ್ನ ಜೀವಾ ಎಂದಿಗೂ ... 

ಬಿಸಿಲಾದರೇನು, ಮಳೆಯಾದರೇನು, ಬಿಸಿಲಾದರೇನೂ..  ।।ಪ।।


ಹೂವು ಹಾವಾದರೇನು, ಹಾಲು ವಿಷವಾದರೇನೂ (೨)

ಈ ನಿನ್ನ ನೋಟ ಬೆರೆತಾಗ ಮುಳ್ಳು ಹೂವಾಗಿ ಅರಳದೇನೂ 

ಭುವಿಯೇ ಬಾಯಿ ಬಿಟ್ಟರೇನೂ, ಸಿಡಿಲೆ ಎದುರಾದರೇನೂ 

ನನ್ನಾಣೆ ನಲ್ಲೆ, ನಾ ನಿನ್ನ ಬಿಡೆನು, ಪ್ರಾಣಕ್ಕೆ ಪ್ರಾಣ ಕೊಡುವೆ 

ಕಂಬನಿ,ಮಿಡಿಯದೇ, ಇನ್ನು ನಾಗಲಾರೆಯೇನು 

ಬಿಸಿಲಾದರೇನು, ಮಳೆಯಾದರೇನು, ಬಿಸಿಲಾದರೇನೂ.. ।।೧।।


ಸೆಳೆವಾ ಸುಳಿಯಾದರೇನು, ಬೆಂಕಿಯ ಬಲೆಯಾದರೇನೂ (೨)

ಈ ಬಾಳು ಎಂದು ಹೋರಾಟ ತಾನೆ, ಬಿಡು ಇನ್ನು ಚಿಂತೆಯನ್ನೂ 

ಯಾರೇನೂ ಅಂದರೇನು, ಊರೆ ಎದುರಾದರೇನೂ 

ಕೊನೆ ತನಕ ನಾನು ಹೋರಾಡಿ ಗೆಲುವೆ, ನಿನ್ನನ್ನು ನಾನು ಬಿಡೆನು 

ಕೊರಗದೇ, ನಡುಗದೇ, ನಲ್ಲೆ ನಾಗಲಾರೆಯೇನೂ ।।೨।।