Wednesday, March 6, 2024

Anuraagade Nee Paadaleke (ಅನುರಾಗದೆ ನೀ ಪಾಡಲೇಕೆ)

Movie: Gaaligopura (1962)

Singers: P B Srinivas, P Susheela

Song link: Click Here


Anuraagade nee paadaleke, mana natyade tugaata eke

Edeyase indu jothe serale gaana, muda meeridalapana

Anuraagade nee paadaleke, mana natyade tugaata eke ||


Priya neenage ee jeeva jodi

Ee balage hondikeya gadi, hmm

Sariyada jodi, ide jateyagi hudi

Bidu gaadi aananda daari hidi

Anuraagade nee paadaleke, mana natyade tugaata eke ||


Ee kesarage hasuragi tugi, hombayalage teneyagi baagi

Bhu tayi bandu, nagu mogadinda nindu

Santosha emagagi tandalindu

Anuraagade nee paadaleke, mana natyade tugaata eke ||


Bari aarambadi bedagu sake

Idu anugala irabeku joke, hmm

Jategudidake, nee ida kelabeke

Namageega soga bere beketake ||


ಚಿತ್ರಗೀತೆ 


ಅನುರಾಗದೆ ನೀ ಪಾಡಲೇಕೆ, ಮನ ನಾಟ್ಯದೆ ತೂಗಾಟ ಏಕೆ 

ಎದೆಯಾಸೆ ಇಂದು ಜೊತೆ ಸೇರಲೇ ಗಾನ, ಮದ ಮೀರಿದಾಲಾಪನಾ

 ಅನುರಾಗದೆ ನೀ ಪಾಡಲೇಕೆ, ಮನ ನಾಟ್ಯದೆ ತೂಗಾಟ ಏಕೆ ।।ಪ।।


ಪ್ರಿಯ ನೀನಾಗೇ  ಈ ಜೀವ ಜೋಡಿ 

ಈ ಬಾಳಾಗೆ ಹೊಂದಿಕೆಯ ಗಾಡಿ, ಹೂಂ 

ಸರಿಯಾದ ಜೋಡಿ, ಇದೆ ಜತೆಯಾಗಿ ಹೂಡಿ 

ಬಿಡು ಗಾಡಿ ಆನಂದ ದಾರಿ ಹಿಡಿ 

ಅನುರಾಗದೆ ನೀ ಪಾಡಲೇಕೆ, ಮನ ನಾಟ್ಯದೆ ತೂಗಾಟ ಏಕೆ ।।೧।।


ಈ ಕೆಸರಾಗೆ ಹಸುರಾಗಿ ತೂಗಿ, ಹೊಂಬಯಲಾಗೆ ತೆನೆಯಾಗಿ ಬಾಗಿ 

ಭೂ ತಾಯಿ ಬಂದು, ನಗು ಮೊಗದಿಂದ ನಿಂದು 

ಸಂತೋಷ ಎಮಗಾಗಿ ತಂದಳಿಂದು 

ಅನುರಾಗದೆ ನೀ ಪಾಡಲೇಕೆ, ಮನ ನಾಟ್ಯದೆ ತೂಗಾಟ ಏಕೆ ।।೨।।


ಬರೀ ಆರಂಭದೀ ಬೆಡಗು ಸಾಕೇ 

ಇದು ಅನುಗಾಲ ಇರಬೇಕು ಜೋಕೆ, ಹೂಂ 

ಜೊತೆಗೂಡಿದಾಕೆ ನೀ ಇದ ಕೇಳಬೇಕೆ 

ನಮಗೀಗ ಸೊಗ ಬೇರೆ ಬೇಕೇತಕೆ ।।೩।।

               


Anuraaga Enaitu (ಅನುರಾಗ ಏನಾಯ್ತು)

Movie: Nee Nanna Gellalaare (1981)

Singer: Dr. Rajkumar

Song link: Click Here


I love you, i love you (2)

Anuraaga enaitu, manaseke kallaitu

Ninna savimaatu, kahi ekaitu

Ninnolavella indenaitu, anuraaga enaitu ||


Neeli baananu biduvaga, mugillella karagi aluvante (2)

Ninna premadinda naa duragi

Nanna kangalella kanniragi

Hagalirulella ninna nenapaitu

Sarasa harusha bari kanasaitu, anuraaga enaitu ||


Odi baruva nadiyalli, kadalaase tumbi harivante (2)

Ninna sero aase naa kandaga, jothe baalalendu bali bandaga

Sidilonderagi badidantagi, virasa viraha gati nanagaitu

Anuraaga enaitu, manaseke kallaitu ||


ಚಿತ್ರಗೀತೆ 


ಐ ಲವ್ ಯು, ಐ ಲವ್ ಯು (೨)

ಅನುರಾಗ ಏನಾಯ್ತು, ಮನಸೇಕೆ ಕಲ್ಲಾಯ್ತು 

ನಿನ್ನ ಸವಿಮಾತು, ಕಹಿ ಏಕಾಯ್ತು 

ನಿನ್ನೊಲವೆಲ್ಲಾ ಇಂದೇನಾಯ್ತು, ಅನುರಾಗ ಏನಾಯ್ತು ।।ಪ।।


ನೀಲಿ ಬಾನನು ಬಿಡುವಾಗ, ಮುಗಿಲೆಲ್ಲಾ ಕರಗಿ ಅಳುವಂತೆ (೨)

ನಿನ್ನ ಪ್ರೇಮದಿಂದಾ ನಾ ದೂರಾಗಿ 

ನನ್ನ ಕಣ್ಗಳೆಲ್ಲಾ ಕಣ್ಣೀರಾಗಿ 

ಹಗಲಿರುಳೆಲ್ಲಾ ನಿನ್ನ ನೆನಪಾಯ್ತು 

ಸರಸ ಹರುಷ ಬರಿ ಕನಸಾಯ್ತು, ಅನುರಾಗ ಏನಾಯ್ತು ।।೧।।


ಓಡಿ ಬರುವ ನದಿಯಲ್ಲಿ, ಕಡಲಾಸೆ ತುಂಬಿ ಹರಿವಂತೆ (೨)

ನಿನ್ನ ಸೇರೊ ಆಸೆ ನಾ ಕಂಡಾಗ, ಜೊತೆ ಬಾಳಲೆಂದೂ ಬಳಿ ಬಂದಾಗ 

ಸಿಡಿಲೊಂದೆರಗಿ ಬಡಿದಂತಾಗಿ, ವಿರಸ ವಿರಹ ಗತಿ ನನಗಾಯ್ತು 

ಅನುರಾಗ ಏನಾಯ್ತು, ಮನಸೇಕೆ ಕಲ್ಲಾಯ್ತು ।।೨।।

                         


Iva Yava Seeme Gandu Kanammo (ಇವ ಯಾವ ಸೀಮೆ ಗಂಡು ಕಾಣಮ್ಮೋ)

Movie: Ranaranga (1988)

Singers: SPB, Vani Jairam

Song link: Click Here


Iva yava seeme gandu kanammo

Ivanige nanna seere myala yaka kannammo

Aa nota ondu banadangammo

Shiva shiva adu hyango bandu natikontammo

Guruvaara banda, gurutaita enda

Aa elu januma, nenapaita enda ||


Iva gajanurina gandu kanammo

Tadi tadi iva poli hudugara jatiyallammo

Nana myala urina koti kannammo

Shiva shiva nanna kannu yako ninna myalammo

Raviraja banda, kanasaga ninda

Magu elu enda, nina seru enda

Eva yava seme gandu kanammo

Tadi tadi iva poli hudugara jatiyallammo ||


Kala gejje kuda, iva haadutane haada

Haadale, purvada, nenapa maadale

Koli guddada myaga, nee haadidanta raaga

Nenapide, helale, nanu eegale

Tangali beesuttidda, honge neralali

Sujiya mallige itte, nanna mudiyali

Iva gajanurina gandu kanammo

Tadi tadi iva poli hudugara jatiyallammo ||


Ho..mugu nattina tirupa, bigi maadalene swalpa

Sari sari, adu sari, veerakesari

Matinallu sarasa, ninag hyanga banto arasa

Tadi tadi, tilisuve, asha sundari

Kuniyodu nanaga tatanu bitta umbali

Kunisodu nanaga appanu kotta baluvali

Iva gajanurina gandu kanammo

Tadi tadi iva poli hudugara jatiyallammo ||


Aa nota ondu banadangammo

Shiva shiva adu hyango bandu natikontammo

Raviraja banda, kanasaga ninda

Magu elu enda, nina seru enda

Ammo iva yava seeme gandu kanammo

Tadi tadi iva gajanurina gandu kanammo ||


ಚಿತ್ರಗೀತೆ 


ಇವ ಯಾವ ಸೀಮೆ ಗಂಡು ಕಾಣಮ್ಮೋ 

ಇವನಿಗೆ ನನ್ನ ಸೀರೆ ಮ್ಯಾಲ ಯಾಕ ಕಣ್ಣಮ್ಮೋ 

ಆ ನೋಟ ಒಂದು ಬಾಣದಂಗಮ್ಮೋ 

ಶಿವ ಶಿವ ಅದು ಹ್ಯಾಂಗೊ ಬಂದು ನಾಟಿಕೊಂತಮ್ಮೋ 

ಗುರುವಾರ ಬಂದ, ಗುರುತಾಯ್ತ ಎಂದ 

ಆ ಏಳು ಜನುಮ, ನೆನಪಾಯ್ತು ಎಂದ ।।


ಇವ ಗಾಜನೂರಿನ ಗಂಡು ಕಾಣಮ್ಮೋ 

ತಡಿ ತಡಿ ಇವ ಪೋಲಿ ಹುಡುಗರ ಜಾತಿಯಲ್ಲಮ್ಮೋ 

ನನ ಮ್ಯಾಲ ಊರಿನ ಕೋಟಿ ಕಣ್ಣಮ್ಮೋ 

ಶಿವ ಶಿವ ನನ್ನ ಕಣ್ಣು ಯಾಕೋ ನಿನ್ನ ಮ್ಯಾಲಮ್ಮೋ 

ರವಿರಾಜ ಬಂದ, ಕನಸಾಗ ನಿಂದ 

ಮಗು ಏಳು ಎಂದ, ನಿನ ಸೇರು ಎಂದ 

ಇವ ಯಾವ ಸೀಮೆ ಗಂಡು ಕಾಣಮ್ಮೋ 

ತಡಿ ತಡಿ ಇವ ಪೋಲಿ ಹುಡುಗರ ಜಾತಿಯಲ್ಲಮ್ಮೋ ।।


ಕಾಲ ಗೆಜ್ಜೆ ಕೂಡ, ಇವ ಹಾಡುತಾನೆ ಹಾಡ 

ಹಾಡಲೇ, ಪೂರ್ವದ, ನೆನಪ ಮಾಡಲೇ 

ಕೋಳಿ ಗುಡ್ಡದ ಮ್ಯಾಗ, ನೀ ಹಾಡಿದಂತೆ ರಾಗ 

ನೆನಪಿದೆ, ಹೇಳಲೆ, ನಾನು ಈಗಲೇ 

ತಂಗಾಳಿ ಬೀಸುತ್ತಿದ್ದ, ಹೊಂಗೆ ನೆರಳಲಿ 

ಸೂಜಿಯ ಮಲ್ಲಿಗೆ ಇಟ್ಟೆ, ನನ್ನಾ ಮುಡಿಯಲಿ 

ಇವ ಯಾವ ಸೀಮೆ ಗಂಡು ಕಾಣಮ್ಮೋ 

ತಡಿ ತಡಿ ಇವ ಪೋಲಿ ಹುಡುಗರ ಜಾತಿಯಲ್ಲಮ್ಮೋ ।।


ಓ .. ಮೂಗು ನತ್ತಿನ ತಿರುಪ, ಬಿಗಿ ಮಾಡಲೇನೆ ಸ್ವಲ್ಪ 

ಸರಿ ಸರಿ, ಅದು ಸರಿ, ವೀರಕೇಸರಿ 

ಮಾತಿನಲ್ಲು ಸರಸ, ನಿನಗ್ ಹ್ಯಾಂಗ ಬಂತೋ ಅರಸ 

ತಡಿ ತಡಿ, ತಿಳಿಸುವೆ, ಆಶಾ ಸುಂದರಿ 

ಕುಣಿಯೋದು ನನಗ ತಾತನು ಬಿಟ್ಟಾ ಉಂಬಳಿ 

ಕುಣಿಸೋದು ನನಗ ಅಪ್ಪನು ಕೊಟ್ಟ ಬಳುವಳಿ 

ಇವ ಯಾವ ಸೀಮೆ ಗಂಡು ಕಾಣಮ್ಮೋ 

ತಡಿ ತಡಿ ಇವ ಪೋಲಿ ಹುಡುಗರ ಜಾತಿಯಲ್ಲಮ್ಮೋ ।।


ಆ ನೋಟ ಒಂದು ಬಾಣದಂಗಮ್ಮೋ 

ಶಿವ ಶಿವ ಅದು ಹ್ಯಾಂಗೊ ಬಂದು ನಾಟಿಕೊಂತಮ್ಮೋ 

ರವಿರಾಜ ಬಂದ, ಕನಸಾಗ ನಿಂದ 

ಮಗು ಏಳು ಎಂದ, ನಿನ ಸೇರು ಎಂದ 

ಅಮ್ಮೋ ಇವ ಯಾವ ಸೀಮೆ ಗಂಡು ಕಾಣಮ್ಮೋ 

ತಡಿ ತಡಿ ಇವ ಗಾಜನೂರಿನ ಗಂಡು ಕಾಣಮ್ಮೋ ।।

                       



Sunday, March 3, 2024

Baa Bega Manamohini (ಬಾ ಬೇಗ ಮನಮೋಹಿನಿ)

Movie: Manku Dinne (1968)

Singer: P B Srinivas

Song link: Click Here


Baa bega manamohini

Baa bega manamohini, ramani

Baa bega manamohini

Vaiyaravanu tori, nasu nageyanu beeri

Baa bega bali kamini.., baa bega manamohini ||


Modada tereyinda, chandira noduvante (2)

Bagila mareyinda, heegeke kaaduve..kaveri

Ninna aa vayasu neneyuta, haleyu chellata aaduta (2)

Kulukuta, balukuta, melu nade, nadeyuta

Tanuva, kunisi, manava, nalisi, oliyuta

Baayari, alla alla kaveri manamohini ||


Madanana baanavu, natide edeyali (2)

Manadanne ee nova, naa hege taalali.. kaveri

Viraha tapadali beyuta, pranaya bharadali kusiyuta (2)

Cheluvina, mogavanu, neneyuta, balalide

Manava, geluva, sukhava, padeva

Aaseyu bayari, kaveri manamohini

Baa bega manamohini, mohini, mohini ||


ಚಿತ್ರಗೀತೆ 


ಬಾ ಬೇಗ ಮನಮೋಹಿನಿ

ಬಾ ಬೇಗ ಮನಮೋಹಿನಿ, ರಮಣಿ 

ಬಾ ಬೇಗ ಮನಮೋಹಿನಿ 

ವೈಯಾರವನು ತೋರಿ, ನಸು ನಗೆಯನು ಬೀರಿ 

ಬಾ ಬೇಗ ಬಳಿ ಕಾಮಿನಿ, ಬಾ ಬೇಗ ಮನಮೋಹಿನಿ ।।ಪ।।


ಮೋಡದ ತೆರೆಯಿಂದ, ಚಂದಿರ ನೋಡುವಂತೆ (೨)

ಬಾಗಿಲ ಮರೆಯಿಂದ, ಹೀಗೇಕೆ ಕಾಡುವೆ .. ಕಾವೇರಿ 

ನಿನ್ನ ಆ ವಯಸು ನೆನೆಯುತಾ, ಹಳೆಯು ಚೆಲ್ಲಾಟ ಆಡುತಾ (೨)

ಕುಲುಕುತ, ಬಳುಕುತ, ಮೆಲು ನಡೆ, ನಡೆಯುತ 

ತನುವ, ಕುಣಿಸಿ, ಮನವ, ನಳಿಸಿ, ಒಲಿಯುತ 

ಬಾಯಾರಿ, ಅಲ್ಲಾ ಅಲ್ಲಾ ಕಾವೇರಿ ಮನಮೋಹಿನಿ ।।೧।।


ಮದನನ ಬಾಣವು, ನಾಟಿದೆ ಎದೆಯಲಿ (೨)

ಮನದನ್ನೆ ಈ ನೋವ, ನಾ ಹೇಗೆ ತಾಳಲಿ .. ಕಾವೇರಿ 

ವಿರಹ ತಪದಲಿ ಬೇಯುತಾ, ಪ್ರಣಯ ಭಾರದಲಿ ಕುಸಿಯುತಾ (೨)

ಚೆಲುವಿನ, ಮೊಗವನು, ನೆನೆಯುತ, ಬಳಲಿದೆ 

ಮನವ, ಗೆಲುವ, ಸುಖವ, ಪಡೆವ 

ಆಸೆಯು ಬಾಯಾರಿ, ಕಾವೇರಿ ಮನಮೋಹಿನಿ 

ಬಾ ಬೇಗ ಮನಮೋಹಿನಿ, ಮೋಹಿನಿ, ಮೋಹಿನಿ ।।೨।।

                                   


Ee lokavella Neene Iruva (ಈ ಲೋಕವೆಲ್ಲ ನೀನೆ ಇರುವ)

Movie: Devaru Kotta Tangi (1973)

Singer: P B Srinivas

Song link: Click Here


Ee lokavella neene iruva puja mandira

Naa kanutiruva notavella satya sundara ||


Mullina gidadali andada hoovu

Kesarali naguva tavare cheluvu

Sobagina siriyanu chelliruve

Mamateya maleya suridiruve lalla lalla lallala

Ee lokavella neene iruva puja mandira

Naa kanutiruva notavella satya sundara ||


Neeliya banali teluva mugilu

Haaruva hakkiya gaanada honalu

Ellede tumbide aananda, ellede premada sambhanda 

lalla lalla lallala

Ee lokavella neene iruva puja mandira

Naa kanutiruva notavella satya sundara ||


Bettada kallali jenina haniyu

Havina hedeyali holeyuva maniyu

Santasa haridide ee nelade, antaravellide ee jagade

lalla lalla lallala

Ee lokavella neene iruva puja mandira

Naa kanutiruva notavella satya sundara ||


ಚಿತ್ರಗೀತೆ 


ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ 

ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ ।।ಪ।।


ಮುಳ್ಳಿನ ಗಿಡದಲಿ ಅಂದದ ಹೂವು 

ಕೆಸರಲಿ ನಗುವ ತಾವರೆ ಚೆಲುವು 

ಸೊಬಗಿನ ಸಿರಿಯನು ಚೆಲ್ಲಿರುವೆ 

ಮಮತೆಯ ಮಳೆಯ ಸುರಿದಿರುವೆ, ಲಲ್ಲ ಲಲ್ಲ ಲಲ್ಲಲಾ 

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ 

ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ ।।೧।।


ನೀಲಿಯ ಬಾನಲಿ ತೇಲುವ ಮುಗಿಲು 

ಹಾರುವ ಹಕ್ಕಿಯ ಗಾನದ ಹೊನಲು 

ಎಲ್ಲೆಡೆ ತುಂಬಿದೆ ಆನಂದ, ಎಲ್ಲೆಡೆ ಪ್ರೇಮದ ಸಂಬಂಧ, 

ಲಲ್ಲ ಲಲ್ಲ ಲಲ್ಲಲಾ 

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ 

ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ ।।೨।।


ಬೆಟ್ಟದ ಕಲ್ಲಲ್ಲಿ ಜೇನಿನ ಹನಿಯು 

ಹಾವಿನ ಹೆಡೆಯಲಿ ಹೊಳೆಯುವ ಮಣಿಯು 

ಸಂತಸ ಹರಿದಿದೆ ಈ ನೆಲದೆ, ಅಂತರವೆಲ್ಲಿದೆ ಈ ಜಗದೆ,

 ಲಲ್ಲ ಲಲ್ಲ ಲಲ್ಲಲಾ 

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ 

ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ ।।೩।।

                             


Saturday, March 2, 2024

Dayavirali Dayavirali Damodara (ದಯವಿರಲಿ ದಯವಿರಲಿ ದಾಮೋದರ)

Bhaktigeete

Sahitya: Gopaladasaru

Song link: Click Here


Dayavirali dayavirali damodara

Sayavagi bidadenna sakuva srikrishna ||


Hogi baruvenayya hoda hagella

Saguvavanalla naa ninna bittu

Tugi tottilu konege staladalli nilluvadu

Hyage nee nadedante haage naa nadakombe ||


Iddalle ennannuddaripa shakti

Asadhya ninagendu bandavanalla

Natyaadi kshetra murthigalalli nijajnana

Vrudha janara huduki ninna tiliyalu bande ||


Enage aavadu balle ellelli podaru

Kshana bidade ninna nolpa jnanava kodo

Chinumaya muruti gopala vittala

Ghana karuni madwamuni mandira nivaasa ||


ಭಕ್ತಿಗೀತೆ 


ದಯವಿರಲಿ ದಯವಿರಲಿ ದಾಮೋದರ 

ಸಯವಾಗಿ ಬಿಡದೆನ್ನ ಸಾಕುವ  ಶ್ರೀಕೃಷ್ಣ ।।ಪ।।


ಹೋಗಿ ಬರುವೇನಯ್ಯ ಹೋದ ಹಾಗೆಲ್ಲ 

ಸಾಗುವವನಲ್ಲ ನಾ ನಿನ್ನ ಬಿಟ್ಟು 

ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲಿ ನಿಲ್ಲುವದು 

ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।।


ಇದ್ದಲ್ಲೇ ಎನ್ನನ್ನುದ್ಧರಿಪ ಶಕ್ತಿ 

ಅಸಾಧ್ಯ ನಿನಗೆ೦ದು ಬಂದವನಲ್ಲ 

ನತ್ಯಾದಿ ಕ್ಷೇತ್ರ ಮೂರ್ತಿಗಳಲ್ಲಿ ನಿಜಜ್ಞಾನ 

ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।।೨।।


ಎನಗೆ ಆವುದು ಬಲ್ಲೆ ಎಲ್ಲೆಲ್ಲಿ ಪೋದರು 

ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೋ 

ಚಿನುಮಯ ಮೂರುತಿ ಗೋಪಾಲ ವಿಠ್ಠಲ 

ಘನ ಕರುಣಿ ಮಧ್ವಮುನಿ ಮಂದಿರ ನಿವಾಸ ।।೩।।

                   


Friday, March 1, 2024

Kappeya Haadu (ಕಪ್ಪೆಯ ಹಾಡು)

ಪದ್ಯ 

ಸಾಹಿತ್ಯ : ಗೋಪಾಲಕೃಷ್ಣ ಶಗ್ರಿತ್ತಾಯ 


ಮಣ್ಣ ಬಣ್ಣ ನೀಲಿ ಕಣ್ಣ 

ಸಣ್ಣ ಜೀವಿ ನಾನು  

ಸಂಜೆ ಹೊತ್ತು ಕೆರೆಯ ಸುತ್ತ 

ನೋಡಿರುವೆಯಾ ನೀನು ?


ಬೇಸಿಗೆಯಲಿ ನೆಲದ ಒಳಗೆ 

ವಾಸವಿರುವೆನು 

ಸುಡುವ ಬಿಸಿಲ ಕಾಲದಲ್ಲಿ 

ಅಡಗಿ ಬಿಡುವೆನು 


ಬಿತ್ತಿ ಬೆಳೆವ ಹಳ್ಳಿ ರೈತ 

ನನ್ನ ಗೆಳೆಯನು 

ನನ್ನ ಕೊರಳ ಹಾಡಿಗಾಗಿ 

ಕಾಯುತಿರುವನು 


ತುಂಟ ಹುಡುಗ ನನ್ನ ಕಂಡು 

ಕಲ್ಲು ಎಸೆವನು 

ಅವನು ಬರಲು ಮಾರು ದೂರ 

ಜಿಗಿದು ಬಿಡುವೆನು 


ಅದೋ ನೋಡು ಕೆರೇರಾಯ 

ಬರುತಲಿರುವನು 

ಆದ್ದರಿಂದ ಈಗ ಹೋಗಿ 

ಮತ್ತೆ ಬರುವೆನು. 


Padya


Manna banna neeli kanna

Sanna jeevi naanu

Sanje hottu kereya sutta

Nodiruveya neenu?


Besigeyali nelada olage

Vaasaviruvenu

Suduva bisila kaaladalli

Adagi biduvenu


Bitti beleva halli raita

Nanna geleyanu

Nanna korala haadigagi

Kayutiruvanu


Tunta huduga nanna kandu

Kallu esevanu

Avanu baralu maaru dura

Jigidu biduvenu


Ado nodu kereraaya

Barutaliruvanu

Aadarinda eega hogi Matte baruvenu.