Friday, February 16, 2024

Arpane Ninage Arpane (ಅರ್ಪಣೆ ನಿನಗೆ ಅರ್ಪಣೆ)

Movie: Swapna (1981)

Singer: SPB

Song link: Click Here


Arpane ninage arpane (2)

Ee bala aaradhane, arpane ninage arpane

O priye (3)


Laksha deepa jotheyagi belagi marevante kanna minchu

Muttu ratna maleyagi chelli holevante nageya sanchu

Arali ninta kamaladante pada

Idalu hejje uliiva gejjenada

Shrutiyu swaravu kaletiralu hosa raagada prarambha

Manasu manasu beretiralu aunraagada aarambha

Aa manase, ondu aalayavagi

Aa aalaya devate neenade (2)

Dhupa deepa veda nada ella arpane, arpane ninage arpane ||


Odalinalli kanakanavu ninna pratibimba tumbidaga

Olavininda kshana kshanavu ninna hesaranne japisuvaga

Midive indu nayanadinda dura

Padevudendu tutiya jena saara

Banu bhumi seridare adu prakrutiya sammilana

Jeeva jeeva seridare adu pranayada shubhamilana

Aa pranayave ondu gopuravage

Aa gopura  kalashavu neenage (2)

Hannu hoovu homa havana ella arpane ||


ಚಿತ್ರಗೀತೆ 


ಅರ್ಪಣೆ ನಿನಗೆ ಅರ್ಪಣೆ  (೨)

ಈ ಬಾಳ ಆರಾಧನೆ, ಅರ್ಪಣೆ ನಿನಗೆ ಅರ್ಪಣೆ 

ಓ ಪ್ರಿಯೇ.. (೩) ।।ಪ।।


ಲಕ್ಷ ದೀಪ ಜೊತೆಯಾಗಿ ಬೆಳಗಿ ಮೆರೆವಂತೆ ಕಣ್ಣ ಮಿಂಚು 

ಮುತ್ತು ರತ್ನ ಮಳೆಯಾಗಿ ಚೆಲ್ಲಿ ಹೊಳೆವಂತೆ ನಗೆಯ ಸಂಚು 

ಅರಳಿ ನಿಂತ ಕಮಲದಂತೆ ಪಾದ 

ಇಡಲು ಹೆಜ್ಜೆ ಉಲಿವ ಗೆಜ್ಜೆನಾದ 

ಶೃತಿಯು ಸ್ವರವು ಕಲೆತಿರಲು ಹೊಸ ರಾಗದ ಪ್ರಾರಂಭ 

ಮನಸು ಮನಸು  ಬೆರೆತಿರಲು ಅನುರಾಗದ ಆರಂಭ 

ಆ ಮನಸೆ , ಒಂದು ಆಲಯವಾಗಿ 

ಆ ಆಲಯ ದೇವತೆ  ನೀನಾದೆ (೨)

ಧೂಪ ದೀಪ ವೇದ ನಾದ ಎಲ್ಲಾ ಅರ್ಪಣೆ, ಅರ್ಪಣೆ ನಿನಗೆ ಅರ್ಪಣೆ ।।೧।।


ಒಡಲಿನಲ್ಲಿ ಕಣಕಣವು ನಿನ್ನ ಪ್ರತಿಬಿಂಬ ತುಂಬಿದಾಗ 

ಒಲವಿನಿಂದ  ಕ್ಷಣ ಕ್ಷಣವು ನಿನ್ನ ಹೆಸರನ್ನು ಜಪಿಸುವಾಗ 

ನಿದಿರೆಯಿಂದು ನಯನದಿಂದ ದೂರ 

ಪಡೆವುದೆಂದು ತುಟಿಯ ಜೇನ ಸಾರ 

ಬಾನು ಭೂಮಿ ಸೇರಿದರೆ ಅದು ಪ್ರಕೃತಿಯ ಸಮ್ಮಿಲನ 

ಜೀವ ಜೀವ ಸೇರಿದರೆ ಅದೇ  ಪ್ರಣಯದ ಶುಭಮಿಲನ 

ಆ ಪ್ರಣಯವೇ ಒಂದು ಗೋಪುರವಾಗೆ  

ಆ ಗೋಪುರ ಕಳಶವು ನೀನಾಗೇ (೨)

ಹಣ್ಣು ಹೂವು ಹೋಮ ಹವನ ಎಲ್ಲಾ ಅರ್ಪಣೆ ।।೨।।

                        



Olavina Priyalate (ಒಲವಿನ ಪ್ರಿಯಲತೆ)

Movie: Kulavadhu (1963)

Singer: P B Srinivas

Song link: Click Here


Olavina priyalate, avalade chinte

Avala maate, madhura geete, avale enna devate ||


Mareyadantha premarashi, hrudayadasha rupasi

Manadolado aa vilasi, olidu banda preyasi ||


Pranayaraagada jeeva gelati, bala belago srimati

Sanne maatina sarasagati, kannadambeya kulasati ||


ಚಿತ್ರಗೀತೆ 


ಒಲವಿನ ಪ್ರಿಯಲತೆ, ಅವಳದೆ ಚಿಂತೆ 

ಅವಳ ಮಾತೆ, ಮಧುರ ಗೀತೆ, ಅವಳೆ ಎನ್ನ ದೇವತೆ ।।ಪ।।


ಮರೆಯದಂಥ ಪ್ರೇಮರಾಶಿ, ಹೃದಯದಾಶಾ ರೂಪಸಿ 

ಮನದೊಳಾಡೋ ಆ ವಿಲಾಸಿ, ಒಲಿದು ಬಂದ ಪ್ರೇಯಸಿ ।।೧।।


ಪ್ರಣಯರಾಗದ ಜೀವ ಗೆಳತಿ, ಬಾಳ ಬೆಳಗೋ ಶ್ರೀಮತಿ 

ಸನ್ನೆ ಮಾತಿನ ಸರಾಸಗಾತಿ, ಕನ್ನಡಾಂಬೆಯ ಕುಲಸತಿ ।।೨।।

                             



Aakashada Lokadi Dura (ಆಕಾಶದ ಲೋಕದಿ ದೂರ)

Movie: Bettada Huli (1965)

Singers: S Janaki, P B Srinivas

Song link: Click Here


Aakashada lokadi dura, nalidadide chandira taara

Ee bhumiyali, anuraagadali, meredadide premada saara

Aakashada lokadi dura, nalidadide chandira taara ||


Hrudaya vega, hondide eega, milanada kaaturake (2)

Premadalli mindu kande (2) indu bhavukate

Aakashada lokadi dura, nalidadide chandira taara ||


Hrudayavanne udugoreyagi padeyalu baa geleya

Nenapali bandu, manadali nindu, sarasavaaduveya

Kanna nota,  aadi aata (2)

Kalise premada pata.... ||


ಚಿತ್ರಗೀತೆ 


ಆಕಾಶದ ಲೋಕದಿ ದೂರ, ನಲಿದಾಡಿದೆ ಚಂದಿರ ತಾರ 

ಈ ಭೂಮಿಯಲಿ ಅನುರಾಗದಲಿ, ಮೆರೆದಾಡಿದೆ ಪ್ರೇಮದ ಸಾರ 

ಆಕಾಶದ ಲೋಕದಿ ದೂರ, 

ನಲಿದಾಡಿದೆ ಚಂದಿರ ತಾರ ।।ಪ।।


ಹೃದಯ ವೇಗ, ಹೊಂದಿದೆ ಈಗ, ಮಿಲನದ ಕಾತುರಕೆ (೨)

ಪ್ರೇಮದಲ್ಲಿ ಮಿಂದು ಕಂಡೆ (೨) ಇಂದು ಭಾವುಕತೆ 

ಆಕಾಶದ ಲೋಕದಿ ದೂರ ನಲಿದಾಡಿದೆ ಚಂದಿರ ತಾರ ।।೧।।


ಹೃದಯವನ್ನೇ ಉಡುಗೊರೆಯಾಗಿ ಪಡೆಯಲು ಬಾ ಗೆಳೆಯ 

ನೆನಪಲಿ ಬಂದು, ಮನದಲಿ ನಿಂದು, ಸರಸವಾಡುವೆಯಾ 

ಕಣ್ಣ ನೋಟ   ಆಡಿ ಆಟ (೨)

ಕಲಿಸೆ  ಪ್ರೇಮದ ಪಾಠ .... ।।೨।।

           


Thursday, February 15, 2024

Naa Mecchida Huduganige (ನಾ ಮೆಚ್ಚಿದ ಹುಡುಗನಿಗೆ)

Movie: Naa Mecchida Huduga (1970)

Singer: S Janaki

Song link: Click Here


Naa mecchida huduganige, kaanike tandiruve

Ee patrade bareda padagalanu, chumbisi kalisiruve

Naa chumbisi kalisiruve ||


Padagalu tumbida kavanavidalla, hrudayave adagide idali

Adara odetana ninage ella, komala eccharavirali

Naa mecchida huduganige, kaanike tandiruve ||


Tagalade ninna kaigaligeega, virahada ee bisi usiru

Nannaya dehada naranadigalu, mididide ninnaya hesaru

Naa mecchida huduganige, kaanike tandiruve ||


Kadalina neeranu bindigeyinda, baridu maadalu aaguvude

Nanna premada aalava ninage, patrade tilisalu aaguvude

Naa mecchida huduganige, kaanike tandiruve ||


ಚಿತ್ರಗೀತೆ 


ನಾ ಮೆಚ್ಚಿದ ಹುಡುಗನಿಗೆ, ಕಾಣಿಕೆ ತಂದಿರುವೆ 

ಈ ಪತ್ರದೆ ಬರೆದ ಪದಗಳನು, ಚುಂಬಿಸಿ ಕಳಿಸಿರುವೆ 

ನಾ ಚುಂಬಿಸಿ ಕಳಿಸಿರುವೆ ।।ಪ।।


ಪದಗಳು ತುಂಬಿದ ಕವನವಿದಲ್ಲ, ಹೃದಯವೆ ಅಡಗಿದೆ ಇದಲಿ 

ಅದರ ಒಡೆತನ ನಿನಗೆ ಎಲ್ಲ, ಕೋಮಲ ಎಚ್ಚರವಿರಲಿ 

ನಾ ಮೆಚ್ಚಿದ ಹುಡುಗನಿಗೆ, ಕಾಣಿಕೆ ತಂದಿರುವೆ ।।೧।।


ತಗಲದೆ ನಿನ್ನ ಕೈಗಳಿಗೀಗ, ವಿರಹದ ಈ ಬಿಸಿ ಉಸಿರು 

ನನ್ನೆಯ ದೇಹದ ನರನಾಡಿಗಳು, ಮಿಡಿದಿದೆ ನಿನ್ನಯ ಹೆಸರು 

ನಾ ಮೆಚ್ಚಿದ ಹುಡುಗನಿಗೆ, ಕಾಣಿಕೆ ತಂದಿರುವೆ ।।೨।।


ಕಡಲಿನ ನೀರನು ಬಿಂದಿಗೆಯಿಂದ, ಬರಿದು ಮಾಡಲು ಆಗುವುದೇ 

ನನ್ನ ಪ್ರೇಮದ ಆಳವ ನಿನಗೆ, ಪತ್ರದೆ ತಿಳಿಸಲು ಆಗುವುದೆ 

ನಾ ಮೆಚ್ಚಿದ ಹುಡುಗನಿಗೆ, ಕಾಣಿಕೆ ತಂದಿರುವೆ ।।೩।।

                              



Monday, February 12, 2024

Aalare Aalare (ಆಲಾರೆ ಆಲಾರೆ)

Movie: Krishna Nee Begane Baro (1986)

Singer: S Janaki

Song link: Click Here


Aalare aalare, mukunda murare

Gopala barayya..baro

Sri krishna nee bega baa..ro..(2) ||


O.. nanna kannalli nodu ninna bimbave

Nanna manadalli indu ninna rupave, balleya..krishnane

Nenne kanasallu nanu ninne kandene

Ninna nodo aase naa talalarene

Keshava..madhava..radhalola ||


O..premave daiva endu premave jeeva

Premada kugu innu kelade deva, tamasa..etake

Nanna hrudayada prema gaana kelade

Jeeva nilladu krishna ninna nodade

Keshava..madhava..radhalola ||


ಚಿತ್ರಗೀತೆ 


ಆಲಾರೆ ಆಲಾರೆ, ಮುಕುಂದ ಮುರಾರೆ 

ಗೋಪಾಲ ಬಾರಯ್ಯ .. ಬಾರೋ .. 

ಶ್ರೀ ಕೃಷ್ಣ ನೀ ಬೇಗ ಬಾ .. ರೋ .. (೨) ।।ಪ।।


ಓ .. ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ 

ನನ್ನ ಮನದಲ್ಲಿ ಇಂದು ನಿನ್ನ ರೂಪವೆ, ಬಲ್ಲೆಯಾ .. ಕೃಷ್ಣನೇ 

ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ 

ನಿನ್ನ ನೋಡೊ ಆಸೆ ನಾ ತಾಳಲಾರೆನೆ 

ಕೇಶವಾ .. ಮಾಧವಾ .. ರಾಧಾಲೋಲ ।।೧।।


ಓ .. ಪ್ರೇಮವೆ ದೈವ ಎಂದೂ ಪ್ರೇಮವೆ ಜೇವಾ 

ಪ್ರೇಮದ ಕೂಗು ಇನ್ನು ಕೇಳದೆ ದೇವ, ತಾಮಸಾ .. ಏತಕೇ 

ನನ್ನ ಹೃದಯದ ಪ್ರೇಮ ಗಾನ ಕೇಳದೆ 

ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ 

ಕೇಶವಾ .. ಮಾಧವಾ .. ರಾಧಾಲೋಲ।।೨।।

                                       


Aalisu O Iniya (ಆಲಿಸು ಓ ಇನಿಯಾ)

Movie: Bhale Jodi (1970)

Singer: S Janaki

Song link: Click Here


Aalisu o iniya..nannedeya kareya (2)

Kambanidhara oresalu bara

Kaadihe na raja raja raja ||


Januma janumada ee anubhanda

Nanna ninna olavina bandha

Balali kavida andhakara neegisalendu begane bara

Kadihe naa raja raja raja ||


Balina gelatiya neneyuvudendo

Mugiyada haadanu mugisuvudendo

Kaanade ninna balalide nayana

Aaguvudendo nammaya milana ||


ಚಿತ್ರಗೀತೆ 


ಆಲಿಸು ಓ ಇನಿಯಾ .. ನನ್ನೆದೆಯಾ ಕರೆಯಾ (೨)

ಕಂಬನಿಧಾರ ಒರೆಸಲು ಬಾರಾ 

ಕಾದಿಹೆ ನಾ ರಾಜಾ ರಾಜಾ ರಾಜಾ ।।ಪ।।


ಜನುಮ ಜನುಮದ ಈ ಅನುಭಂದ 

ನನ್ನ ನಿನ್ನಾ ಒಲವಿನ ಬಂಧ 

ಬಾಳಲಿ ಕವಿದ ಅಂಧಕಾರ ನೀಗಿಸಲೆಂದು ಬೇಗನೆ ಬಾರಾ 

ಕಾದಿಹೆ ನಾ ರಾಜಾ ರಾಜಾ ರಾಜಾ ।।೧।।


ಬಾಳಿನ ಗೆಳತಿಯ ನೆನೆಯುವುದೆಂದೋ 

ಮುಗಿಯದ ಹಾಡನು ಮುಗಿಸುವುದೆಂದೋ 

ಕಾಣದೆ ನಿನ್ನ ಬಳಲಿದೆ ನಯನ 

ಆಗುವುದೆಂದೋ ನಮ್ಮಯ ಮಿಲನ ।।೨।।

                           


Friday, February 9, 2024

Karnatakada Itihasadali (ಕರ್ನಾಟಕದ ಇತಿಹಾಸದಲೀ)

Movie: Krishna Rukmini (1988)

Singer: SPB

Song link: Click Here


Karnatakada itihasadali, bangarada yugada katheyannu

Haaduve keli, na haaduve keli (2)

Karnatakada itihasadali ||


Jnanada jyotiyu, vidyaranyaru, anugraha gaida, bhumi idu..

Hakka bukkaru aalidarilli, harushada, maleyannu, ellu chelli

Vijayada kahaleya.. udidaru vijayanagara, stapane madidaru ||


Gandara ganda, dheera prachanda, krishnadevaraya, aalida vaibhavade

Kaligala naadu, kavigala beedu

Enisitu, hampeyu..aa dinade, kannada bavuta..haarisida

Madhurevaregu..rajyava, haradisida..

Karnatakada itihasadali ||


Sangeeta natyagala, sangamaville, shilpa kalegala.. taanavide..

Bhuvaneshwariya, tavarurille, yatigala, dasara..nele nadille

Pavana mannidu, hampeyadu, yuga yuga aliyada, keerti idu

Kannada bhumi, kannada nudiyu, kannada keerti, endendu baalali

Sirigannadam gelge, sirigannadam gelge, sirigannadam gelge ||


ಚಿತ್ರಗೀತೆ 


ಕರ್ನಾಟಕದ ಇತಿಹಾಸದಲೀ, ಬಂಗಾರದ ಯುಗದಾ ಕಥೆಯನ್ನು 

ಹಾಡುವೆ ಕೇಳಿ, ನಾ ಹಾಡುವೆ ಕೇಳಿ (೨)

ಕರ್ನಾಟಕದ ಇತಿಹಾಸದಲೀ।।ಪ।।


ಜ್ಞಾನದ ಜ್ಯೋತಿಯು, ವಿದ್ಯಾರಣ್ಯರು, ಅನುಗ್ರಹ ಗೈದ, ಭೂಮಿ ಇದೂ 

ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ, ಮಳೆಯನ್ನು, ಎಲ್ಲೂ ಚೆಲ್ಲಿ 

ವಿಜಯದ ಕಹಳೆಯಾ, ಊದಿದರು ವಿಜಯನಗರ, ಸ್ಥಾಪನೆ ಮಾಡಿದರು ।।೧।।


ಗಂಡರ ಗಂಡ, ಧೀರ ಪ್ರಚಂಡಾ, ಕೃಷ್ಣದೇವರಾಯ, ಆಳಿದ ವೈಭವದೆ 

ಕಲಿಗಳ ನಾಡು, ಕವಿಗಳ ಬೀಡು 

ಎನಿಸಿತು,ಹಂಪೆಯೂ..  ಆ ದಿನದೇ , ಕನ್ನಡ ಬಾವುಟಾ, ಹಾರಿಸಿದಾ 

ಮಧುರೆವರೆಗೂ ರಾಜ್ಯವ, ಹರಡಿಸಿದಾ 

ಕರ್ನಾಟಕದ ಇತಿಹಾಸದಲೀ ।।೨।।


ಸಂಗೀತ ನಾಟ್ಯಗಳ, ಸಂಗಮವಿಲ್ಲೆ, ಶಿಲ್ಪಾ ಕಲೆಗಳಾ, ತಾಣವಿದೇ 

ಭುವನೇಶ್ವರಿಯ, ತವರೂರಿಲ್ಲೆ, ಯತಿಗಳ, ದಾಸರಾ, ನೆಲೆ ನಾಡಿಲ್ಲೆ

ಪಾವನ ಮಣ್ಣಿದು, ಹಂಪೆಯದು, ಯುಗ ಯುಗ ಅಳಿಯದಾ, ಕೀರ್ತಿ ಇದು 

ಕನ್ನಡ ಭೂಮಿ, ಕನ್ನಡ ನುಡಿಯು, ಕನ್ನಡ ನುಡಿಯು, ಕನ್ನಡ ಕೀರ್ತಿ, ಎಂದೆಂದು ಬಾಳಲಿ 

ಸಿರಿಗನ್ನಡಂ ಗೆಲ್ಗೆ,  ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ ।।೩।