Movie: Swapna (1981)
Singer: SPB
Song link: Click Here
Arpane ninage arpane (2)
Ee bala aaradhane, arpane ninage arpane
O priye (3)
Laksha deepa jotheyagi belagi marevante kanna minchu
Muttu ratna maleyagi chelli holevante nageya sanchu
Arali ninta kamaladante pada
Idalu hejje uliiva gejjenada
Shrutiyu swaravu kaletiralu hosa raagada prarambha
Manasu manasu beretiralu aunraagada aarambha
Aa manase, ondu aalayavagi
Aa aalaya devate neenade (2)
Dhupa deepa veda nada ella arpane, arpane ninage arpane ||
Odalinalli kanakanavu ninna pratibimba tumbidaga
Olavininda kshana kshanavu ninna hesaranne japisuvaga
Midive indu nayanadinda dura
Padevudendu tutiya jena saara
Banu bhumi seridare adu prakrutiya sammilana
Jeeva jeeva seridare adu pranayada shubhamilana
Aa pranayave ondu gopuravage
Aa gopura kalashavu neenage (2)
Hannu hoovu homa havana ella arpane ||
ಚಿತ್ರಗೀತೆ
ಅರ್ಪಣೆ ನಿನಗೆ ಅರ್ಪಣೆ (೨)
ಈ ಬಾಳ ಆರಾಧನೆ, ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೇ.. (೩) ।।ಪ।।
ಲಕ್ಷ ದೀಪ ಜೊತೆಯಾಗಿ ಬೆಳಗಿ ಮೆರೆವಂತೆ ಕಣ್ಣ ಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ
ಇಡಲು ಹೆಜ್ಜೆ ಉಲಿವ ಗೆಜ್ಜೆನಾದ
ಶೃತಿಯು ಸ್ವರವು ಕಲೆತಿರಲು ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು ಅನುರಾಗದ ಆರಂಭ
ಆ ಮನಸೆ , ಒಂದು ಆಲಯವಾಗಿ
ಆ ಆಲಯ ದೇವತೆ ನೀನಾದೆ (೨)
ಧೂಪ ದೀಪ ವೇದ ನಾದ ಎಲ್ಲಾ ಅರ್ಪಣೆ, ಅರ್ಪಣೆ ನಿನಗೆ ಅರ್ಪಣೆ ।।೧।।
ಒಡಲಿನಲ್ಲಿ ಕಣಕಣವು ನಿನ್ನ ಪ್ರತಿಬಿಂಬ ತುಂಬಿದಾಗ
ಒಲವಿನಿಂದ ಕ್ಷಣ ಕ್ಷಣವು ನಿನ್ನ ಹೆಸರನ್ನು ಜಪಿಸುವಾಗ
ನಿದಿರೆಯಿಂದು ನಯನದಿಂದ ದೂರ
ಪಡೆವುದೆಂದು ತುಟಿಯ ಜೇನ ಸಾರ
ಬಾನು ಭೂಮಿ ಸೇರಿದರೆ ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ ಅದೇ ಪ್ರಣಯದ ಶುಭಮಿಲನ
ಆ ಪ್ರಣಯವೇ ಒಂದು ಗೋಪುರವಾಗೆ
ಆ ಗೋಪುರ ಕಳಶವು ನೀನಾಗೇ (೨)
ಹಣ್ಣು ಹೂವು ಹೋಮ ಹವನ ಎಲ್ಲಾ ಅರ್ಪಣೆ ।।೨।।



