Wednesday, February 7, 2024

Bhavavemba Hoovu Arali (ಭಾವವೆಂಬ ಹೂವು ಅರಳಿ)

Movie:Upasane (1974)

Singer: Vani Jairam

Song link: Click Here


Aha..aha.. bhavavemba hoovu arali

Gaanavemba ganda chelli

Raagavemba jena honalu, tumbi hariyali

Jagava kunisi tanisali

Bhavavemba hoovu arali, gaanavemba ganda chelli ||


Gagamada gaamaada, samadani saadani

Gaanake naliyada, manase illa

Gaanake maniyada, jeevave illa

Gaanake oliyada devare illa

Gaanave tumbide ee jagavella

Bhavavemba hoovu arali, gaanavemba ganda chelli ||


Dasaru hariya smaraneya maadi

Darushana padedaru anudina paadi

Sharanaru harana neneyuta bedi

Shivana kandaru vachanava haadi

Bhavavemba hoovu arali, gaanavemba ganda chelli ||


Vishwave aralitu omkaaradali

Vaniya veeneya jhenkaaradali

Kuniyitu naradana ganadalli

Taniyitu krishnana muraliyali.. ||


ಚಿತ್ರಗೀತೆ 


ಆಹಾ .. ಆಹಾ ಭಾವವೆಂಬ ಹೂವು ಅರಳಿ 

ಗಾನವೆಂಬ ಗಂಧ ಚೆಲ್ಲಿ 

ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ 

ಜಾಗವಾ ಕುಣಿಸಿ ತಣಿಸಲಿ 

ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ ।।ಪ।।


ಗಗಮದ ಗಾಮಾದ, ಸಮದನಿ ಸಾದನಿ 

ಗಾನಕೆ ನಲಿಯದ, ಮನಸೆ ಇಲ್ಲ 

ಗಾನಕೆ ಮಣಿಯದ, ಜೀವವೆ ಇಲ್ಲ 

ಗಾನಕೆ ಒಲಿಯದ ದೇವರೆ ಇಲ್ಲ 

ಗಾನವೆ ತುಂಬಿದೆ ಈ ಜಗವೆಲ್ಲಾ 

ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ।।೧।।


ದಾಸರು ಹರಿಯಾ ಸ್ಮರಣೆಯ ಮಾಡಿ 

ದರುಶನ ಪಡೆದರು ಅನುದಿನ ಪಾಡಿ 

ಶರಣರು ಹರನಾ ನೆನೆಯುತ ಬೇಡಿ 

ಶಿವನಾ ಕಂಡರು ವಚನವ ಹಾಡೀ 

ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ।।೨।।


ವಿಶ್ವವೆ ಅರಳಿತು ಓಂಕಾರದಲಿ 

ವಾಣಿಯ ವೀಣೆಯ ಝೇಂಕಾರದಲಿ 

ಕುಣಿಯಿತು ನಾರದನ ಗಾನದಲ್ಲಿ 

ತಣಿಯಿತು ಕೃಷ್ಣನಾ ಮುರಳಿಯಲೀ.. ।।೩।।

                 


Bharata Bhushira Mandira Sundari (ಭಾರತ ಭೂಶಿರ ಮಂದಿರ ಸುಂದರಿ)

Movie: Upasane (1974)

Singer: S Janaki

Song link: Click Here


Bharata bhushira mandira sundaree..

Bhuvana manohari kanyakumari

Bharata bhushira mandira sundari ||


Samagaanapriya sambarupini

Paalagadala swara panchamadharini

Sakara shadjada sharadhi tarangini

Sagara sangama sarasa viharini

Bharata bhushira mandira sundari, kanyakumari ||


Shivatandavada damaru neenada

Naada brahmana omkara naada..aa..aa

Naadade leena aagama veda, naada, veda, shive

Naada veda shive, ninna vinoda

Bharata bhushira mandira sundari, kanyakumari ||


Sangeeta sudheya chaitanyadhare

Kanakana neene karunapure

Navabhava navajeeva nee tumbi baare

Navarasavaahini nee daye tore ||


ಚಿತ್ರಗೀತೆ 


ಭಾರತ ಭೂಶಿರ ಮಂದಿರ ಸುಂದರೀ ..

ಭುವನ ಮನೋಹರಿ ಕನ್ಯಾಕುಮಾರಿ 

ಭಾರತ ಭೂಶಿರ ಮಂದಿರ ಸುಂದರಿ ।।ಪ।।


ಸಾಮಗಾನಪ್ರಿಯ ಸಾಂಬರೂಪಿಣಿ 

ಪಾಲಗಡಲ ಸ್ವರ ಪಂಚಮಧಾರಿಣಿ 

ಸಾಕಾರ ಷಡ್ಜದ ಶರಧಿ ತರಂಗಿಣಿ 

ಸಾಗರ ಸಂಗಮ ಸರಸ ವಿಹಾರಿಣಿ 

ಭಾರತ ಭೂಶಿರ ಮಂದಿರ ಸುಂದರಿ, ಕನ್ಯಾಕುಮಾರೀ ।।೧।।


ಶಿವತಾಂಡವದ ಡಮರು ನೀನಾದ 

ನಾದ ಬ್ರಹ್ಮನ ಓಂಕಾರ ನಾದ, ಆ .. ಆ 

ನಾದದೆ ಲೀನ ಆಗಮ ವೇದ, ನಾದ, ವೇದ, ಶಿವೇ 

ನಾದ ವೇದ ಶಿವೇ, ನಿನ್ನ ವಿನೋದ 

ಭಾರತ ಭೂಶಿರ ಮಂದಿರ ಸುಂದರಿ, ಕನ್ಯಾಕುಮಾರೀ ।।೨।।


ಸಂಗೀತ ಸುಧೆಯ ಚೈತನ್ಯಧಾರೆ 

ಕಣಕಣ ನೀನೇ ಕರುಣಾಪೂರೆ  

ನವಭಾವ ನವಜೀವ ನೀ ತುಂಬಿ ಬಾರೇ 

ನವರಸವಾಹಿನಿ ನೀ ದಯೆ ತೋರೆ ।।೩।।

                       


Deena Naa Bandiruve (ದೀನ ನಾ ಬಂದಿರುವೆ)

Movie: Sandhya Raaga (1966)

Singer: P B Srinivas

Song link: Click Here


Deena naa bandiruve bagilali nindiruve

Jnana bhiksheya needi, daye tori guruve..

Krishnanaalayadache, ninta kanakana reeti (2)

Kaadiruve katurade, enna more kelisade, guruve ||


Dronara bali banda, ekalavyana terade...aa (2)

Guru nimma krupe bayasi, naa bande tande

Nimma padada baliye, enage aashraya needi

Sangeeta sudhe harisi, salahirennanu guruve..

Guruve..guruve..guruve... ||


ಚಿತ್ರಗೀತೆ 


ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ 

ಜ್ಞಾನ ಭಿಕ್ಷೆಯ ನೀಡಿ, ದಯೆ ತೋರಿ ಗುರುವೇ.. 

ಕೃಷ್ಣ ನಾಲಯದಾಚೆ, ನಿಂತ ಕನಕನ ರೀತಿ (೨)

ಕಾದಿರುವೆ ಕಾತುರದೆ, ಎನ್ನ ಮೊರೆ ಕೇಳಿಸದೆ, ಗುರುವೇ ।।


ದ್ರೋಣರ ಬಳಿ ಬಂದ, ಏಕಲವ್ಯನ ತೆರದೆ, ಆ .. (೨)

ಗುರು ನಿಮ್ಮ ಕೃಪೆ ಬಯಸಿ, ನ ಬಂದೆ ತಂದೆ 

ನಿಮ್ಮ ಪಾದದ ಬಳಿಯೆ, ಎನಗೆ ಆಶ್ರಯ ನೀಡಿ 

ಸಂಗೀತ ಸುಧೆ ಹರಿಸಿ, ಸಲಹಿರೆನ್ನನು ಗುರುವೇ 

ಗುರುವೇ .. ಗುರುವೇ .. ಗುರುವೇ .. ।।

                 


Eneno Aase (ಏನೇನೋ ಆಸೆ)

Movie: Shankar Guru (1978)

Singers: Dr. Rajkumar, Vani Jairam

Song link: Click Here


Eneno aase, ni tanda bashe

Indu hosatana tandu tanumana

Kugutide baa endu ninna ||


Lategalu balukutive, ninnante haadi

Sumagalu nagutalive, ninnannu nodi

Himada giriya balasi baruva gali taralu chali

Iniya balige olidu bandu saniha taralu bisi ||


Kamana billinda....banditu ninnanda...

Tareya holapinda....banditu kannanda....

Ee maatu bidu bidu manasannu idu idu

Santosha kodu kodu baa nalle ||


ಚಿತ್ರಗೀತೆ 


ಏನೇನೋ ಆಸೆ, ನೀ ತಂದಾ ಭಾಷೆ 

ಇಂದು ಹೊಸತನ ತಂದು ತಾನುಮನ 

ಕೂಗುತಿದೆ ಬಾ ಎಂದು ನಿನ್ನ ।।ಪ।।


ಲತೆಗಳು ಬಳಿಕುತಿವೆ, ನಿನ್ನಂತೆ ಹಾಡಿ 

ಸುಮಗಳು ನಗುತಲಿವೆ, ನಿನ್ನನ್ನೂ .. ನೋಡಿ 

ಹಿಮದ ಗಿರಿಯ ಬಳಸಿ ಬರುವ ಗಾಳಿ ತರಲು ಛಳಿ 

ಇನಿಯಾ ಬಳಿಗೆ ಒಲಿದು ಬಂದು ಸನಿಹ ತರಲು ಬಿಸಿ  ।।೧।।


ಕಾಮನ ಬಿಲ್ಲಿಂದಾ .... ಬಂದಿತು ನಿನ್ನಂದಾ 

ತಾರೆಯ ಹೊಳಪಿ೦ದಾ .... ಬಂದಿತು ಕಣ್ಣಂದಾ 

ಈ ಮಾತು ಬಿಡು ಬಿಡು ಮನಸ್ಸನ್ನು ಇಡು ಇಡು 

ಸಂತೋಷ ಕೊಡು ಕೊಡು ಬಾ ನಲ್ಲೆ ।।೨।।

                               


Tuesday, February 6, 2024

Ellige Payana (ಎಲ್ಲಿಗೆ ಪಯಣ)

Movie: Sipayi Ramu (1972)

Singer: P B Srinivas

Song link: Click Here        


 Kathe mugiyite.. aarambhada munna

Late baadi hoyite.. hoovaguva munna ||


Ellige payana, yavudo daari

Ekangi sanchari, ekangi sanchari ||


Madadi makkalu, snehitarannu, mannina vasha maadi

Nadedide indu, andhana reeti shokade..

Eno ninna guri.. ellige payana ||


Solu geluvu, savu novu, jeevanaduyyale

Sayuva munna, janisida manna

Darushana nee padedu, tayiya madila

Dhulali beretu, shunyade...mugisu ninna kathe

Ellige payana, yavudo daari

Ekangi sanchari (3) ||


ಚಿತ್ರಗೀತೆ 


ಕಥೆ ಮುಗಿಯಿತೇ..ಆರಂಭದ ಮುನ್ನ 

ಲತೆ ಬಾಡಿ ಹೋಯಿತೇ.. ಹೂವಾಗುವ ಮುನ್ನ ।।


ಎಲ್ಲಿಗೆ ಪಯಣ, ಯಾವುದೊ ದಾರಿ 

ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ ।।


ಮಡದಿ ಮಕ್ಕಳು, ಸ್ನೇಹಿತರನ್ನು, ಮಣ್ಣಿನ ವಶ ಮಾಡಿ 

ನಡೆದಿಹೆ ಇಂದು, ಅಂಧನ ರೀತಿ ಶೋಕದೇ ..

ಏನೋ ನಿನ್ನ ಗುರಿ.. ಎಲ್ಲಿಗೆ ಪಯಣ ।।


ಸೋಲು ಗೆಲುವು, ಸಾವು ನೋವು, ಜೀವನದುಯ್ಯಾಲೆ 

ಸಾಯುವ ಮುನ್ನಾ, ಜನಿಸಿದ ಮಣ್ಣ 

ದರುಶನ ನೀ ಪಡೆದು, ತಾಯಿಯ ಮಡಿಲ 

ಧೂಳಲಿ ಬೆರೆತು, ಶೂನ್ಯದೇ ....,ಮುಗಿಸು ನಿನ್ನ ಕಥೆ 

ಎಲ್ಲಿಗೆ ಪಯಣ, ಯಾವುದೊ ದಾರಿ 

ಏಕಾಂಗಿ ಸಂಚಾರಿ (೩) ।।

             


Naguve Snehada Haadu (ನಗುವೆ ಸ್ನೇಹದ ಹಾಡು)

Movie: Mugdha Manava (1977)

Singer: SPB

Song link: Click Here


Naguve snehada haadu, Maguve tayiya haadu

Nagutire panniru, alutire kanniru

Preetiye ee maneya haadu, haadu 

Naguve snehada haadu, maguve tayiya haadu ||


Hagale suryana haadu, irule chandrana haadu

Hagalu irulu, odutaliralu

Endu mugiyada, kalada haadu

Naguve snehada haadu, maguve tayiya haadu ||


Kangale hrudayada haadu, nudigale manasina haadu

Aluva kandana daniye ammana

Endu mareyada, mamateya haadu

Naguve snehada haadu, maguve tayiya haadu ||


Shanti sahaneya haadu, neeti badukina haadu

Shanti neetiya aritu galisuva

Endu solada, geluvina haadu 

Naguve snehada haadu, maguve tayiya haadu ||


ಚಿತ್ರಗೀತೆ 


ನಗುವೆ ಸ್ನೇಹದ ಹಾಡು, ಮಗುವೆ ತಾಯಿಯ ಹಾಡು 

ನಗುತಿರೆ ಪನ್ನೀರು, ಅಳುತಿರೆ ಕಣ್ಣೀರು 

ಪ್ರೀತಿಯೇ ಈ ಮನೆಯ ಹಾಡು, ಹಾಡು 

ನಗುವೆ ಸ್ನೇಹದ ಹಾಡು, ಮಗುವೆ ತಾಯಿಯ ಹಾಡು ।।ಪ।।


ಹಗಲೆ ಸೂರ್ಯನ ಹಾಡು, ಇರುಳೆ ಚಂದ್ರನ ಹಾಡು 

ಹಗಲು ಇರುಳು, ಓಡುತಲಿರಲು 

ಎಂದೂ ಮುಗಿಯದ, ಕಾಲದ ಹಾಡು 

ನಗುವೆ ಸ್ನೇಹದ ಹಾಡು, ಮಗುವೆ ತಾಯಿಯ ಹಾಡು ।।೧।।


ಕಂಗಳೆ ಹೃದಯದ ಹಾಡು, ನುಡಿಗಳೆ ಮನಸಿನ ಹಾಡು 

ಅಳುವ ಕಂದನ ದನಿಯೇ ಅಮ್ಮನ 

ಎಂದೂ ಮರೆಯದ ಮಮತೆಯ ಹಾಡು 

ನಗುವೆ ಸ್ನೇಹದ ಹಾಡು, ಮಗುವೆ ತಾಯಿಯ ಹಾಡು ।।೨।।


ಶಾಂತಿ ಸಹನೆಯ ಹಾಡು, ನೀತಿ ಬದುಕಿನ ಹಾಡು 

ಶಾಂತಿ ನೀತಿಯ, ಅರಿತು ಗಳಿಸುವ 

ಎಂದೂ ಸೋಲದ, ಗೆಲುವಿನ ಹಾಡು

ನಗುವೆ ಸ್ನೇಹದ ಹಾಡು, ಮಗುವೆ ತಾಯಿಯ ಹಾಡು ।।೩।।

                                                                 



Kamalada Hoovinda (ಕಮಲದ ಹೂವಿಂದ)

Movie: Baalu Belagitu (1970)

Singer: P B Srinivas

Song link: Click Here


Kamalada hoovinda, kenneya madidanu

Dumbigalinda, ee mungurulanda ninage tandanu ||


Minchanu chelluva kantiya ee kannali tumbidanu (2)

Dalimbeya hoovina esalinda ee tutigala madidanu

Mettane tutigalu muttidalendu jenanu savaridanu ||


Januma janumada poojeya phala tanda vara neenu (2)

Beladingale hennina roopagi nanagagi bantenu

Anudina hunnime iruliralendu ninnanu kalisidanu ||


Kamana billina bannagala beragisalaguvude (2)

Aa miniguva taare gaganada sneha maretiralaguvude

Balali nanu ninnanu bitu baduliralaguvude ||


ಚಿತ್ರಗೀತೆ 


ಕಮಲದ ಹೂವಿಂದ, ಕೆನ್ನೆಯ ಮಾಡಿದನು 

ದುಂಬಿಗಳಿಂದ, ಈ ಮುಂಗುರುಳಂದ ನಿನಗೇ ತಂದನು ।।ಪ।।


ಮಿಂಚನು ಚೆಲ್ಲುವ ಕಾಂತಿಯ ಈ ಕಣ್ಣಲ್ಲಿ ತುಂಬಿದನು (೨)

ದಾಳಿಂಬೆಯ ಹೂವಿನ ಎಸಳಿಂದ ಈ ತುಟಿಗಳ ಮಾಡಿದನು 

ಮೆತ್ತನೆ ತುಟಿಗಳು ಮುತ್ತಿಡಲೆಂದು ಜೇನನು ಸವರಿದನು ।।೧।।


ಜನುಮ ಜನುಮದ ಪೂಜೆಯ ಫಲ ತಂದ ವರ ನೀನು (೨)

ಬೆಳದಿಂಗಳೆ ಹೆಣ್ಣಿನ ರೂಪಾಗಿ ನನಗಾಗಿ ಬಂತೇನು 

ಅನುದಿನ ಹುಣ್ಣಿಮೆ ಇರುಳಿರಲೆಂದು ನಿನ್ನನು ಕಳಿಸಿದನು ।।೨।।


ಕಾಮನ ಬಿಲ್ಲಿನ ಬಣ್ಣಗಳ ಬೇರಾಗಿಸಲಾಗುವುದೇ (೨)

ಆ ಮಿನುಗುವ ತಾರೆ ಗಗನದ ಸ್ನೇಹ ಮರೆತಿರಲಾಗುವುದೇ 

ಬಾಳಲಿ ನಾನು ನಿನ್ನನು ಬಿಟ್ಟು ಬದುಕಿರಲಾಗುವುದೇ ।।೩।।