Thursday, August 17, 2023

Matinalli Helalarenu (ಮಾತಿನಲ್ಲಿ ಹೇಳಲಾರೆನು)

Movie: Bombat (2008)

Singer: Sonu Nigam

Song link: Click Here


Matinalli helalarenu, rekheyalli geechalarenu

Aadarunu haadadene uliyalarenu

Antha roopasi, nanna preyasi, elli iruvalo, nanna kayisi

Nanu prema rogi, dayamadi vasi madabedi

Antha roopasi, nanna preyasi, omme avalige nanna torisi ||


Kannallide aa kannallide, hombelakina nava neelanjana

Innellide aha innellide, hoo manasina aa madhugunjana

Bere enu kanalare, yara nanu duralare

Saku innu duravannu taalalarenu

Nanna kanasinalli, dayamadi palu kelabedi

Antha roopasi, nanna preyasi, omme avalige nanna torisi ||


Nageyallide, aa bageyallide, bagehariyada, aa avalokana

Nadeyallide, aa nudiyallide, tale kedisuva, aa aamantrana

Kanasiginta chendavagi, alisadanta gandhavagi

Modala bari kanda kshanave bandhiyadenu

Hode nanu kaledu, dayamadi patte madabedi

Antha roopasi, nanna preyasi, omme avalige nanna torisi ||


ಚಿತ್ರಗೀತೆ 


ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು 

ಆದರೂನು ಹಾಡದೇನೆ ಉಳಿಯಲಾರೆನು 

ಅಂಥ ರೂಪಸಿ, ನನ್ನ ಪ್ರೇಯಸಿ, ಎಲ್ಲಿ ಇರುವಳೋ, ನನ್ನ ಕಾಯಿಸಿ 

ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ 

ಅಂಥ ರೂಪಸಿ, ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ 

।।ಪ।।


ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಹೊಂಬೆಳಕಿನ ನವ ನೀಲಾಂಜನ 

ಇನ್ನೆಲ್ಲಿದೆ ಆಹಾ ಇನ್ನೆಲ್ಲಿದೆ, ಹೂ ಮನಸಿನ ಆ ಮಧುಗುಂಜನ 

ಬೇರೆ ಏನು ಕಾಣಲಾರೆ, ಯಾರ ನಾನು ದೂರಲಾರೆ 

ಸಾಕು ಇನ್ನು ದೂರವನ್ನು ತಾಳಲಾರೆನು 

ನನ್ನ ಕನಸಿನಲ್ಲಿ, ದಯಮಾಡಿ ಪಾಲು ಕೇಳಬೇಡಿ 

ಅಂಥ ರೂಪಸಿ, ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ 

।।೧।।


ನಗೆಯಲ್ಲಿದೆ, ಆ ಬಗೆಯಲ್ಲಿದೆ, ಬಗೆಹರಿಯದ, ಆ ಅವಲೋಕನ 

ನಡೆಯಲ್ಲಿದೆ, ಆ ನುಡಿಯಲ್ಲಿದೆ, ತಲೆ ಕೆಡಿಸುವ, ಆ ಆಮಂತ್ರಣ 

ಕನಸಿಗಿಂತ ಚೆಂದವಾಗಿ, ಅಳಿಸದಂತ ಗಂಧವಾಗಿ 

ಮೊದಲ ಬಾರಿ ಕಂಡ ಕ್ಷಣವೆ ಬಂಧಿಯಾದೆನು 

ಹೋದೆ ನಾನು ಕಳೆದು, ದಯಮಾಡಿ ಪತ್ತೆ ಮಾಡಬೇಡಿ 

ಅಂಥ ರೂಪಸಿ, ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ 

।।೨।।

                                           






Wednesday, August 16, 2023

Bharata Desha Onde (ಭಾರತ ದೇಶ ಒಂದೇ)

Deshabhakti Geete

Singer: Aakanksha Badami

Song link: Click Here


Bharata desha onde, ellaariginta munde munde (2)

Onde balli hoogalante, nagu naguta nadeva

Munde inde.. ||


Parvata girialante nammee guriyu chalavu

Sadhaneye moolamantra jaya taruvudemage, endu endendu ||


Paavana nadigalu hariva, punyavee bharata bhumi

Samskrutiya pata kaliso, itihasa merevudilli ellelli ||


Jatyateeta rastra, akhanda bharata desha

Endendigu.., navellaru.. onde

Endu nudiva, bharatada hirime, saaruva saaruva ||


ದೇಶಭಕ್ತಿ ಗೀತೆ 


ಭಾರತ ದೇಶ ಒಂದೇ , ಎಲ್ಲಾರಿಗಿಂತ ಮುಂದೇ ಮುಂದೇ (೨)

ಒಂದೇ ಬಳ್ಳಿ ಹೂಗಳಂತೆ, ನಗು ನಗುತ ನಡೆವಾ ಮುಂದೇ ಇಂದೇ 

।।ಪ।।


ಪರ್ವತ ಗಿರಿಗಳಂತೆ ನಮ್ಮೀ ಗುರಿಯು ಛಲವು 

ಸಾಧನೆಯೇ ಮೂಲಮಂತ್ರ ಜಯತರುವುದೆಮಗೆ, ಎಂದು ಎಂದೆಂದೂ ।।೧।।


ಪಾವನ ನದಿಗಳು ಹರಿವಾ, ಪುಣ್ಯವೀ ಭರತ ಭೂಮಿ 

ಸಂಸ್ಕೃತಿಯ ಪಾಠ ಕಲಿಸೋ, ಇತಿಹಾಸ ಮೆರೆವುದಿಲ್ಲಿ ಎಲ್ಲೆಲ್ಲಿ 

।।೨।।


ಜಾತ್ಯತೀತ ರಾಷ್ಟ್ರ, ಅಖಂಡ ಭಾರತ ದೇಶ 

ಎಂದೆಂದಿಗೂ .. ನಾವೆಲ್ಲರೂ ..ಒಂದೇ 

ಎಂದೂ ನುಡಿವಾ, ಭಾರತದ ಹಿರಿಮೆ ಸಾರುವ ಸಾರುವ ।।೩।।



Tuesday, August 15, 2023

Aakashakkeddu Ninta Parvata Hima Mounadalli (ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ)

Deshabhakti Geete

Sahitya: K S Narasimhaswamy

Singer: SPB

Song link: Click Here


Aakashakkeddu ninta parvata hima mounadalli

Karavalige muttaniduva berderegala ganadalli

Bayala tumba hasira deepa hacchi hariva nadigalalli

Neeliyalli hogeya chelli yantraghoshaveluvali

Kannu bere, notavondu, navu bharatiyaru (2) ||


Nadigella gadigalalli baninalli kadalinalli

Namma yodharetti hidida namma dwajada nerralinalli

Onde nelada totilalli beleda namma koralinalli

Namma yugada danigalagi moodidella haadinalli

Bashe bere, bhavavondu, navu bharatiyaru (2) ||


Nadigagi tanuva tetta hutatmara smaraneyalli

Namma kastadallu nerege neralaneeva karuneyalli

Daari balasi eruvalli birugaaliye molaguvalli

Namma guriya belakinedege nadeva dheera payanadalli

Elle irali, navu ondu, navu bharatiyaru (2) ||


ದೇಶಭಕ್ತಿ ಗೀತೆ 


ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ 

ಕರಾವಳಿಗೆ ಮುತ್ತನಿಡುವ ಬೇರ್ದೆರೆಗಳ ಗಾನದಲ್ಲಿ 

ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ 

ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷವೇಳುವಲ್ಲಿ 

ಕಣ್ಣು ಬೇರೆ, ನೋಟವೊಂದು, ನಾವು ಭಾರತೀಯರು (೨) ।।


ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ 

ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ 

ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ 

ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ 

ಭಾಷೆ ಬೇರೆ, ಭಾವವೊಂದು, ನಾವು ಭಾರತೀಯರು (೨) ।।


ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ 

ನಮ್ಮ ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ 

ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ 

ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ 

ಎಲ್ಲೇ ಇರಲಿ, ನಾವು ಒಂದು, ನಾವು  ಭಾರತೀಯರು (೨) ।।





Monday, August 14, 2023

Neenendare Nannolage (ನೀನೆಂದರೆ ನನ್ನೊಳಗೆ)

Movie: Junglee (2009)

Singer: Sonu Nigam

Song link: Click Here


Neenendare nannolage eno ondu sanchalana

Na bareyada kavitegala neene ondu sankalana

O jeevave heli bidu ninagu kooda heegena

Neenendare nannolage eno ondu sanchalana

Eno ondu sanchalana ||


Tandenu pisu maatu jeballi, kandenu hasi minchu kannalli

Bandenu tusu doora jotheyalli, maretu maimana

Ninna beralu hididu naanu, neera mele bareyalenu

Ninna neralu suliyuvallu, hoova tandu suriyalenu

Nambi kuta humba nanu, neenu heegena ||


Hoovina male neenu kanasalli, mohada sele neenu manasalli

Mayada kale neenu edeyalli, olida ee kshana

Ninna gunginingda nanna bandu paaru maadu neenu

Onde kanasu kaanuvaga naanu neenu bere yenu

Sharanu banda chora naanu, neenu heegena ||


ಚಿತ್ರಗೀತೆ 


ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ 

ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ 

ಓ ಜೀವವೆ ಹೇಳಿ ಬಿಡು ನಿನಗೂ ಕೂಡ ಹೀಗೇನಾ 

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ

ಏನೋ ಒಂದು ಸಂಚಲನ ।।ಪ।।


ತಂದೆನು ಪಿಸು ಮಾತು ಜೇಬಲ್ಲಿ, ಕಂಡೆನು ಹಸಿ ಮಿಂಚು ಕಣ್ಣಲ್ಲಿ 

ಬಂದೆನು ತುಸು ದೂರ ಜೊತೆಯಲ್ಲಿ, ಮರೆತು ಮೈಮನ 

ನಿನ್ನ ಬೆರಳು ಹಿಡಿದು ನಾನು, ನೀರ ಮೇಲೆ ಬರೆಯಲೇನು 

ನಿನ್ನ ನೆರಳು ಸುಳಿಯುವಲ್ಲು, ಹೂವ ತಂದು ಸುರಿಯಲೇನು 

ನಂಬಿ ಕೂತ ಹುಂಬ ನಾನು, ನೀನು ಹೀಗೇನಾ ।।೧।।


ಹೂವಿನ ಮಳೆ ನೀನು ಕನಸಲ್ಲಿ, ಮೋಹದ ಸೆಲೆ ನೀನು ಮನಸಲ್ಲಿ 

ಮಾಯದ ಕಲೆ ನೀನು ಎದೆಯಲ್ಲಿ, ಒಲಿದ ಈ ಕ್ಷಣ 

ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು 

ಒಂದೆ ಕನಸು ಕಾಣುವಾಗ ನಾನು ನೀನು ಬೇರೆಯೇನು 

ಶರಣು ಬಂದ ಚೋರ ನಾನು, ನೀನು ಹೀಗೇನಾ ।।೨।।

                                





Innu Yaka Baralillavva Hubballiyanva (ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ)

Janapada Geete

Sahitya: Da Ra Bendre

Song link: Click Here


Innu yaka baralillavva hubbaliyanva

Varadaga moorasarati bandu hodanva ||


Bhari jarada rummala suttikondanva

Tumba-misi teedikota hubba harasanva

Maatu maatige nakka nagisi aadisyadanva

Eno andara eno katti haada haadanva ||


Iru andara baratenanta eddu horadanva

Maree telaga haakitendare iddu bidanva

Hidi hideele rokka tagadu hidi hidi annava

Khare anta kaimadidara hidad; bidanva ||


Chahada jodi chudadhanga nee nanagandanva

Choudiyalla nee chudamaniyanta rameesa bandanva

Beraligungura mooginaga mugabattittanva

Kanninaagina gombihanga edyaga nattanva ||


Elli ! malli ! paari ! taari !nodirenavva ?

Ningee ! sangee ! savantaree ! elhana nannava ?

Settara huduga setagondhodaa anta nanna jeenva

Haadi beedhi hudukutaitre bitta ella hyanva ||


ಜನಪದ ಗೀತೆ 


ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ 

ವಾರದಾಗ ಮೂರಸರತಿ ಬಂದು ಹೋದಾಂವಾ ।।ಪ।।


ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ 

ತುಂಬ - ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ 

ಮಾತುಮಾತಿಗೆ ನಕ್ಕನಗಿಸಿ ಆಡಿಸ್ಯಾಡಾಂವಾ 

ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ।।೧।।


ಇರು ಅಂದರ ಬರತೇನಂತ ಎದ್ದು ಹೊರಡಾ೦ವಾ 

ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ 

ಹಿಡಿ ಹೀಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾ೦ವಾ 

ಖರೇ ಅಂತ ಕೈಮಾಡಿದರ ಹಿಡದ; ಬಿಡಾಂವಾ ।।೨।।


ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾ೦ವಾ 

ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ 

ಬೆರಳಿಗುಂಗುರಾ ಮೂಗಿನಾಗ ಮೂಗಬಟ್ಟಿಟ್ಟಾ೦ವಾ 

ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾ೦ವಾ  ।।೩।।


ಎಲ್ಲೀ  ! ಮಲ್ಲೀ  ! ಪಾರೀ  ! ತಾರೀ ! ನೋಡೀರೇನವ್ವಾ ?

ನಿಂಗೀ ! ಸಂಗೀ ! ಸಾವಂತರೀ ! ಎಲ್ಲ್ಹಾನ  ನನ್ನಾಂವಾ ?

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ 

ಹಾದೀ ಬೀದೀ ಹುಡುಕತೈತ್ರೇ ಬಿಟ್ಟ ಎಲ್ಲಾ ಹ್ಯಾಂವಾ  ।।೩।। 



Saturday, August 12, 2023

Mounave Aabharana (ಮೌನವೇ ಆಭರಣ)

Movie: Tugudeepa (1966)

Singer: P B Srinivas

Song link: Click Here


Mounave aabharana.. mugulnage sashikirana (2)

Notave hoobana.. cheluvina madhuvana ||


Hejjeyanidalu hoovaraluvudu

Gejjeya naadavu haadaguvudu

Sajjige sihiya maatellihudu

Lajjeyu ninnali mane madihudu ||


Kadalina aalava aledavarilla

Hennina manasanu aritavarilla

karedire balige varisida nalla

Nachike etako shivane balla ||


ಚಿತ್ರಗೀತೆ 


ಮೌನವೇ ಆಭರಣ .. ಮುಗುಳ್ನಗೆ ಶಶಿಕಿರಣ  (೨)

ನೋಟವೇ ಹೂ ಬಾಣ .. ಚೆಲುವಿನಾ ಮಧುವನ ।।ಪ।।


ಹೆಜ್ಜೆಯನಿಡಲು ಹೂವರಳುವುದು 

ಗೆಜ್ಜೆಯ ನಾದವು ಹಾಡಾಗುವುದು 

ಸಜ್ಜಿಗೆ ಸಿಹಿಯ ಮಾತೆಲ್ಲಿಹುದು 

ಲಜ್ಜೆಯು ನಿನ್ನಲಿ ಮನೆ ಮಾಡಿಹುದು ।।೧।।


ಕಡಲಿನ ಆಳವ ಅಳೆದವರಿಲ್ಲ 

ಹೆಣ್ಣಿನ ಮನಸನು ಅರಿತವರಿಲ್ಲ 

ಕರೆದಿರೆ ಬಳಿಗೆ ವರಿಸಿದನಲ್ಲ 

ನಾಚಿಕೆ ಏತಕೋ ಶಿವನೇ ಬಲ್ಲ ।।೨।।



Myale Kavkonda Mungara Moda (ಮ್ಯಾಲೆ ಕವ್ಕೊಂಡ ಮುಂಗಾರ ಮೋಡ)

Movie : Chinnari Mutta (1993)

Sahitya: H S Venktesh Murthy

Singer: Manjula Gururaj

Song link: Click Here


Myale kavkonda mungara moda

Turi bartana chandrama noda

Ottarisi kattala rahu ketu, chendulla chigari hegaleri kutu

Bendantha baalige beldingal surisi

Lokava tumbida vyakula harisi ||


Neeliya navula harisikondu

Chukkiya bavuta erisikondu

Angalake barutane aavaregu taalu

Bandaga mavayya bekaddu kelu ||


Modada nadige ninnannu hoidu

Tugi tottilanendu rambhera baidu

Muttana niddege kanaseleyo hottu

Kodtane mavayya becchane muttu ||


ಚಿತ್ರಗೀತೆ 


ಮ್ಯಾಲೆ ಕವ್ಕೊಂಡ ಮುಂಗಾರ ಮೋಡ 

ತೂರಿ ಬರ್ತಾನ ಚಂದ್ರಾಮ ನೋಡ 

ಒತ್ತರಿಸಿ ಕತ್ತಲ ರಾಹು ಕೇತು, ಚೆಂದುಳ್ಳ ಚಿಗರಿ ಹೆಗಲೇರಿ ಕೂತು 

ಬೆಂದಂಥ ಬಾಳಿಗೆ ಬೆಳ್ ದಿ೦ಗಳ್ ಸುರಿಸಿ 

ಲೋಕವ ತುಂಬಿದ ವ್ಯಾಕುಲ ಹರಿಸಿ ।।ಪ।।


ನೀಲಿಯ ನವುಲ ಹಾರಿಸಿಕೊಂಡು 

ಚುಕ್ಕಿಯ ಬಾವುಟ ಏರಿಸಿಕೊಂಡು 

ಅಂಗಳಕೆ ಬರುತಾನೆ ಆವರೆಗೂ ತಾಳು 

ಬಂದಾಗ ಮಾವಯ್ಯ ಬೇಕಾದ್ದು ಕೇಳು ।।೧।।


ಮೋಡದ ನಾಡಿಗೆ ನಿನ್ನನ್ನು ಹೋಯ್ದು 

ತೂಗಿ ತೊಟ್ಟಿಲನೆಂದು ರಂಭೇರ ಬೈದು 

ಮುತ್ತನ ನಿದ್ದೆಗೆ ಕನಸೆಳೆಯೋ ಹೊತ್ತು 

ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತು ।।೨।।