Bhavageete
Sahitya: Na kru Satyanarayana
Song link: Click Here
Sneha ati madhura, sneha adu amara (2)
Snehave gudiyu, preetiye devaru (2)
Kala, desha, meerida bhava
Sneha ati madhura, sneha adu amara ||
Snehake vayassina antaravilla
Siritana badatana seemegalilla
Snehake swarthada aasegalilla
Samate mamate snehada gana
Sneha ati madhura, Sneha adu amara
Sneha ati madhura ||
Oduva nadige modada sneha
Araluva hoovige kiranada sneha
Bangarada sashige sagarada sneha
Olavu, nalivu, snehada cheluvu
Sneha ati madhura, Sneha adu amara ||
Lokada jeevana snehada bandhana
Pavana prema snehada spandana
Snehava bayasada janarelliharu
Haalu jenu snehada sangama
Sneha ati madhura, Sneha adu amara
Sneha ati madhura ||
ಭಾವಗೀತೆ
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ (೨)
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು (೨)
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।ಪ।।
ಸ್ನೇಹಕೆ ವಯಸ್ಸಿನ ಅಂತರವಿಲ್ಲ
ಸಿರಿತನ ಬಡತನ ಸೀಮೆಗಳಿಲ್ಲ
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ
ಸಮತೇ, ಮಮತೇ ಸ್ನೇಹದ ಗಾನ
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।೧।।
ಓಡುವ ನದಿಗೆ ಮೋಡದ ಸ್ನೇಹ
ಅರಳುವ ಹೂವಿಗೆ ಕಿರಣದ ಸ್ನೇಹ
ಬಂಗಾರದ ಶಶಿಗೆ ಸಾಗರದ ಸ್ನೇಹ
ಒಲವೂ, ನಲಿವೂ ಸ್ನೇಹದ ಚೆಲುವು
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।೨।।
ಲೋಕದ ಜೀವನ ಸ್ನೇಹದ ಬಂಧನಾ
ಪಾವನ ಪ್ರೇಮ ಸ್ನೇಹದ ಸ್ಪಂದನಾ
ಸ್ನೇಹವ ಬಯಸದ ಜನರೆಲ್ಲಿಹರು
ಹಾಲು ಜೇನು ಸ್ನೇಹದ ಸಂಗಮ
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ।।೩।।





