Wednesday, March 15, 2023

Mangagala Upavasa (ಮಂಗಗಳ ಉಪವಾಸ)

Padya

Sahitya: Mucchimale Shankaranarayanarao

Song link: Click Here


Baleya totada pakkada kadolu

Vasisutiddavu mangagalu;

Mangagalellavu ottige seruta

Ond upavasava madidavu.


Enu tinnade, mata mata noduta

Iddavu maradali kulitalle,

"Nalege tindiya egale hudukuva

Banniri" enditu kapiyondu.


"Houdoudanna" endennuta ellavu

Baleya totake haridavu,

Totadi baleya hannanu nodalu

Aaseyu hecchitu, neeruri.


"Sulide iduva aagade?" enditu

Aaseya marikapiyondaga;

"Houdoude"nnuta hannanu sulidavu,

Kaiyole hididu kulitiralu.


"Kaiyalletake bayolagittare

Aagade?" enditu innondu

Hannanu bayali ittavu "jagide

Iduvevu" enditu mattondu.


Jagidu jagidu, nungidavella

Aagale mugiyitu upavasa.


ಪದ್ಯ 


ಬಾಳೆಯ ತೋಟದ ಪಕ್ಕದ ಕಾಡೊಳು 

ವಾಸಿಸುತ್ತಿದ್ದವು ಮಂಗಗಳು;

ಮಂಗಗಳೆಲ್ಲವು ಒಟ್ಟಿಗೆ ಸೇರುತ 

ಒಂದುಪವಾಸವ ಮಾಡಿದವು. 


ಏನು ತಿನ್ನದೆ, ಮಟ ಮಟ ನೋಡುತ 

ಇದ್ದವು ಮರದಲಿ ಕುಳಿತಲ್ಲೆ,

"ನಾಳೆಗೆ ತಿಂಡಿಯ ಈಗಲೆ ಹುಡುಕುವ 

ಬನ್ನಿರಿ" ಎಂದಿತು ಕಪಿಯೊಂದು. 


"ಹೌದೌದಣ್ಣ" ಎಂದೆನ್ನುತ ಎಲ್ಲವು 

ಬಾಳೆಯ ತೋಟಕೆ ಹರಿದವು,

ತೋಟದಿ ಬಾಳೆಯ ಹಣ್ಣನು ನೋಡಲು 

ಆಸೆಯು ಹೆಚ್ಚಿತು, ನೀರೂರಿ. 


"ಸುಲಿದೇ ಇಡುವ ಆಗದೆ?" ಎಂದಿತು 

ಆಸೆಯ ಮರಿಕಪಿಯೊಂದಾಗ;

"ಹೌದೌದೆ"ನ್ನುತ  ಹಣ್ಣನು ಸುಲಿದವು,

ಕೈಯೊಳೆ ಹಿಡಿದು ಕುಳಿತಿರಲು. 


"ಕೈಯಲ್ಲೇತಕೆ ಬಾಯೊಳಗಿಟ್ಟರೆ 

ಆಗದೆ?"ಎಂದಿತು ಇನ್ನೊಂದು,

ಹಣ್ಣನು ಬಾಯಲಿ ಇಟ್ಟವು "ಜಗಿದೇ 

ಇಡುವೆವು" ಎಂದಿತು ಮತ್ತೊಂದು. 


ಜಗಿದೂ ಜಗಿದೂ, ನುಂಗಿದವೆಲ್ಲಾ 

ಆಗಲೆ ಮುಗಿಯಿತು ಉಪವಾಸ.  




Tuesday, March 14, 2023

Ninnanda Kanalendu (ನಿನ್ನಂದ ಕಾಣಲೆಂದು)

Movie: Samyukta (1988)

Singer: SPB, S Janaki

Song link: Click Here


Ninnanda kanalendu aananda hondalendu

Aakasha bagide..

Ninnanda kanalendu aananda hondalendu

Nodalli mohini, kamini, bhamini

Aakasha bagide ||


Aa.... tangali beesi bandu, ninna hoo mai sokite

Aralida sumagala parimala chelladite

Aa rembe tugi tugi, hosa ullasa toruta

Hasurina elegala chamara beesite

Ballili naguva hoovu, soundarya kanuva

Chapaladi inukuta nasu nachi nodide ||aakasha||


Ellinda tanda kannu, ivalellinda banda hennu

Nadeyalu natyavu, mounave sangeetavu

Sringarakavya ondu, hosa hennagi banditeno

Havalavo adaravo pranayada chellatavo

Bangaradinda tanda, ee tanuva kantige

Bayakeyu, manasanu, kenakalu na sotene ||aakasha||


ಚಿತ್ರಗೀತೆ 


ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು 

ಆಕಾಶ ಬಾಗಿದೆ .... 

ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು 

ನೋಡಲ್ಲಿ ಮೋಹಿನಿ, ಕಾಮಿನಿ, ಭಾಮಿನಿ 

ಆಕಾಶ ಬಾಗಿದೆ .... ।।ಪ।।


ಆ .. ತಂಗಾಳಿ ಬೀಸಿ ಬಂದು, ನಿನ್ನ ಹೂ ಮೈ ಸೋಕಿತೆ 

ಅರಳಿದ ಸುಮಗಳ ಪರಿಮಳ ಚೆಲ್ಲಾಡಿತೆ 

ಆ ರೆಂಬೆ ತೂಗಿ ತೂಗಿ, ಹೊಸ ಉಲ್ಲಾಸ ತೋರುತ 

ಹಸುರಿನ ಎಲೆಗಳ ಚಾಮರ ಬೀಸಿತೆ 

ಬಳ್ಳಿಲಿ ನಗುವ ಹೂವು, ಸೌಂದರ್ಯ ಕಾಣುವ 

ಚಪಲದಿ ಇಣುಕುತ ನಸು ನಾಚಿ ನೋಡಿದೆ ।।೧।।


ಎಲ್ಲಿಂದ ತಂದ ಕಣ್ಣು, ಇವಳೆಲ್ಲಿಂದ ಬಂದ ಹೆಣ್ಣೂ 

ನಡೆಯಲು ನಾಟ್ಯವು ಮೌನವೇ ಸಂಗೀತವು 

ಶೃಂಗಾರಕಾವ್ಯ ಒಂದು, ಹೊಸ ಹೆಣ್ಣಾಗಿ ಬಂದಿತೇನೋ 

ಹವಳವೋ, ಅದರವೋ, ಪ್ರಣಯದ ಚೆಲ್ಲಾಟವೋ 

ಬಂಗಾರದಿಂದ ತಂದ, ಈ ತನುವ ಕಾಂತಿಗೆ 

ಬಯಕೆಯೂ, ಮನಸನೂ, ಕೆಣಕಲು ನಾ ಸೋತೆನೆ ।।೨।।





Monday, March 13, 2023

Ashagana Mohana (ಆಶಾಗನ ಮೋಹನ)

Movie: Karuneye Kutumba Kannu (1962)

Singer: S Janaki

Song link: Click Here


Ashagana mohana

Ashatana jeevana

Priyatamana sammilana

Ananta aananda sandhana ||


Manadali olavina vikasa

Mareyada anubhava vilasa

Sumadhura samarasa haasa

Ee sarasa suhasa, santosha sangeeta sandesha ||


Satipati pranayada vaibhoga

Badukina hirimeye ideega

Sukhamaya samayada raga

Ee hosa anuraga, samsara samrajya soubhagya ||


ಚಿತ್ರಗೀತೆ 


ಆಶಾಗನ ಮೋಹನ 

ಆಶಾತಾನ ಜೀವನ 

ಪ್ರಿಯತಮನ ಸಮ್ಮಿಲನ 

ಅನಂತ ಆನಂದ ಸಂಧಾನ ।।ಪ।।


ಮನದಲಿ  ಒಲವಿನ ವಿಕಾಸ 

ಮರೆಯದ ಅನುಭವ ವಿಲಾಸ 

ಸುಮಧುರ ಸಮರಸ ರಾಗ 

ಈ ಸರಸ ಸುಹಾಸ, ಸಂತೋಷ ಸಂಗೀತ ಸಂದೇಶ ।।೧।।


ಸತಿಪತಿ ಪ್ರಣಯದ ವೈಭೋಗ 

ಬದುಕಿನ ಹಿರಿಮೆಯೆ  ಇದೀಗ 

ಸುಖಮಯ ಸಮಯದ ರಾಗ 

ಈ ಹೊಸ ಅನುರಾಗ, ಸಂಸಾರ ಸಾಮ್ರಾಜ್ಯ ಸೌಭಾಗ್ಯ ।।೨।।




Wednesday, March 8, 2023

Baramma Guruseve Maduva (ಬಾರಮ್ಮ ಗುರುಸೇವೆ ಮಾಡುವ)

Movie: Karuneye Kutumba kannu (1962)

Singer: S Janaki

Song link: Click Here


Baramma guruseve maduva

Nitya bhuri brahmananda honduva ||


Endigadaru savu tappadu

Guru hondade nijamukti dakkadu

Sundara tanuvidu nilladu

Moha bandhanadinda sukha salladu ||


Nitya guru rangana seruva

Chitta vruttigalellava aliyuva

Sacchidananda paravastuva seri

Mukti rajyadi manemaduva ||


ಚಿತ್ರಗೀತೆ 


ಬಾರಮ್ಮ ಗುರುಸೇವೆ ಮಾಡುವ 

ನಿತ್ಯ ಭೂರಿ ಬ್ರಹ್ಮಾನಂದ ಹೊಂದುವ ।।ಪ।।


ಎಂದಿಗಾದರೂ ಸಾವು ತಪ್ಪದು 

ಗುರು ಹೊಂದದೆ ನಿಜಮುಕ್ತಿ ದಕ್ಕದು ।

ಸುಂದರ ತನುವಿದು ನಿಲ್ಲದು 

ಮೋಹ ಬಂಧನದಿಂದ ಸುಖ ಸಲ್ಲದು ।।೧।।


ನಿತ್ಯ ಗುರು ರಂಗನ ಸೇರುವ 

ಚಿತ್ತ ವೃತ್ತಿಗಳೆಲ್ಲವ ಅಳಿಯುವ ।

ಸಚ್ಚಿದಾನಂದ ಪರವಸ್ತುವ ಸೇರಿ 

ಮುಕ್ತಿ ರಾಜ್ಯದಿ ಮನೆಮಾಡುವ ।।೨।।



Monday, March 6, 2023

Nagutiru Chanda Aladiru Kanda (ನಗುತಿರು ಚೆಂದ.. ಅಳದಿರು ಕಂದ)

Movie: Mahatma Kabeer (1962)

Singer: Ghantasala

Song link: Click Here


Nagutiru chanda.. aladiru kanda

Harasalu hanumanu banda ||


Mohana ramana pavana nama

Ninaganandada mangaladhama

Ninnaya bhakuti.. namada shakuti

Lokada janarige taruvudu mukuti

Nagutiru kanda.. nagu aananda

Harasalu hanumanu banda ||1||


Vishwaadhara.. veda vihara

Shubhadakara..papavidoora

Karunabharana.. pavana charana

Bhavabhaya harana.. seetaramana

Jaya jaya rama

Jaya sri rama

Jaya jaya taraka nama ||2||


ಚಿತ್ರಗೀತೆ 


ನಗುತಿರು ಚೆಂದ.. ಅಳದಿರು ಕಂದ 

ಹರಸಲು ಹನುಮನು ಬಂದ ।।ಪ।।


ಮೋಹನ ರಾಮನ ಪಾವನ ನಾಮ 

ನಿನಗಾನಂದದ ಮಂಗಳಧಾಮ 

ನಿನ್ನಯ ಭಕುತಿ .. ನಾಮದ ಶಕುತಿ 

ಲೋಕದ ಜನರಿಗೆ ತರುವುದು ಮುಕುತಿ 

ನಗುತಿರು .. ಕಂದ  ನಗು ಆನಂದ 

ಹರಸಲು ಹನುಮನು ಬಂದ ।।೧।।


ವಿಶ್ವಾಧಾರಾ  .. ವೇದ ವಿಹಾರ 

ಶುಭದಾಕಾರ .. ಪಾಪವಿದೂರ 

ಕರುಣಾಭರಣ .. ಪಾವನ ಚರಣ 

ಭವಭಯ ಹರಣ .. ಸೀತಾರಮಣ 

ಜಯ ಜಯ ರಾಮ 

ಜಯ ಶ್ರೀ ರಾಮ 

ಜಯ ಜಯ ತಾರಕ ನಾಮ ।।೨।।

                                           



Friday, March 3, 2023

Raga Ninnadu Bhava Nannadu (ರಾಗ ನಿನ್ನದು ಭಾವ ನನ್ನದು)

Movie: Kulagourava (1971)

Singer: P Susheela

Song link: Click Here


Raga ninnadu bhava nannadu

Tala ninnadu natya nannadu

Raga ninnadu bhava nannadu ||


Manave yamuna maneye gokula

Nane murali neene gopala

Nutana sambrama nammaya sangama

Hrudaya veene midiye tana

Hadi naliva amara gana

Raga ninnadu bhava nannadu ||


Balina gudiyali deepava belagide

Jeevana noukege ambiga neenade

Ninnaya hoonage badada mallige

Intha prema intha preeti

Endu irali onde reeti

Raga ninnadu bhava nannadu

Tala ninnadu natya nannadu

Raga ninnadu bhava nannadu ||


ಚಿತ್ರಗೀತೆ 


ರಾಗ ನಿನ್ನದು ಭಾವ ನನ್ನದು 

ತಾಳ ನಿನ್ನದು ನಾಟ್ಯ ನನ್ನದು 

ರಾಗ ನಿನ್ನದು ಭಾವ ನನ್ನದು ।।ಪ ।।


ಮನವೆ ಯಮುನ ಮನೆಯೇ ಗೋಕುಲ 

ನಾನೇ ಮುರಳಿ ನೀನೇ ಗೋಪಾಲ 

ನೂತನ ಸಂಭ್ರಮ ನಮ್ಮಯ ಸಂಗಮ 

ಹೃದಯ ವೀಣೆ ಮಿಡಿಯೆ ತಾನ 

ಹಾಡಿ ನಲಿವ ಅಮರ ಗಾನ 

ರಾಗ ನಿನ್ನದು ಭಾವ ನನ್ನದು ।।೧।।


ಬಾಳಿನ ಗುಡಿಯಲಿ ದೀಪವ ಬೆಳಗಿದೆ 

ಜೀವನ ನೌಕೆಗೆ ಅಂಬಿಗ ನೀನಾದೆ 

ನಿನ್ನಯ ಹೂ ನಗೆ ಬಾಡದ ಮಲ್ಲಿಗೆ 

ಇಂಥ ಪ್ರೇಮ ಇಂಥ ಪ್ರೀತಿ 

ಎಂದು ಇರಲಿ ಒಂದೇ ರೀತಿ 

ರಾಗ ನಿನ್ನದು ಭಾವ ನನ್ನದು 

ತಾಳ ನಿನ್ನದು ನಾಟ್ಯ ನನ್ನದು 

ರಾಗ ನಿನ್ನದು ಭಾವ ನನ್ನದು ।।೨।।



Thursday, March 2, 2023

Sanjeya Ragake Banu Kemperide (ಸಂಜೆಯ ರಾಗಕೆ ಬಾನು ಕೆಂಪೇರಿದೆ)

Bhavageete

Sahitya: Subraya Chokkadi

Song link: Click Here


Sanjeya ragake banu kemperide

Tingalu moodi belakina kodi

Chelladide ega rangeride ||sanjeya||


Maragida nelada mele neralanu haaside

Hoogala dalagala naduve ninnade beralide ||1||


Gaaliya jateya gandhavu ninnanu savaride

Olagu horagu vyapisi yavvana keralide ||2||


Koladali moodida bimbavu hoogala mareside

Taladali entaha kanasina lokavu teredide ||3||


ಭಾವಗೀತೆ 


ಸಂಜೆಯ ರಾಗಕೆ ಬಾನು ಕೆಂಪೇರಿದೆ 

ತಿಂಗಳು ಮೂಡಿ ಬೆಳಕಿನ ಕೋಡಿ 

ಚೆಲ್ಲಾಡಿದೆ ಈಗ ರಂಗೇರಿದೆ ।।ಪ ।।


ಮರಗಿಡ ನೆಲದ ಮೇಲೆ ನೆರಳನು ಹಾಸಿದೆ 

ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ।।೧।।


ಗಾಳಿಯ ಜತೆಯ ಗಂಧವು ನಿನ್ನನು ಸವರಿದೆ 

ಒಳಗೂ ಹೊರಗೂ ವ್ಯಾಪಿಸಿ ಯವ್ವನ ಕೆರಳಿದೆ ।।೨।।


ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ 

ತಳದಲಿ ಎಂತಹ ಕನಸಿನ ಲೋಕವು ತೆರೆದಿದೆ ।।೩।।