Padya
Sahitya: Mucchimale Shankaranarayanarao
Song link: Click Here
Baleya totada pakkada kadolu
Vasisutiddavu mangagalu;
Mangagalellavu ottige seruta
Ond upavasava madidavu.
Enu tinnade, mata mata noduta
Iddavu maradali kulitalle,
"Nalege tindiya egale hudukuva
Banniri" enditu kapiyondu.
"Houdoudanna" endennuta ellavu
Baleya totake haridavu,
Totadi baleya hannanu nodalu
Aaseyu hecchitu, neeruri.
"Sulide iduva aagade?" enditu
Aaseya marikapiyondaga;
"Houdoude"nnuta hannanu sulidavu,
Kaiyole hididu kulitiralu.
"Kaiyalletake bayolagittare
Aagade?" enditu innondu
Hannanu bayali ittavu "jagide
Iduvevu" enditu mattondu.
Jagidu jagidu, nungidavella
Aagale mugiyitu upavasa.
ಪದ್ಯ
ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತ್ತಿದ್ದವು ಮಂಗಗಳು;
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು.
ಏನು ತಿನ್ನದೆ, ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೆ,
"ನಾಳೆಗೆ ತಿಂಡಿಯ ಈಗಲೆ ಹುಡುಕುವ
ಬನ್ನಿರಿ" ಎಂದಿತು ಕಪಿಯೊಂದು.
"ಹೌದೌದಣ್ಣ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹರಿದವು,
ತೋಟದಿ ಬಾಳೆಯ ಹಣ್ಣನು ನೋಡಲು
ಆಸೆಯು ಹೆಚ್ಚಿತು, ನೀರೂರಿ.
"ಸುಲಿದೇ ಇಡುವ ಆಗದೆ?" ಎಂದಿತು
ಆಸೆಯ ಮರಿಕಪಿಯೊಂದಾಗ;
"ಹೌದೌದೆ"ನ್ನುತ ಹಣ್ಣನು ಸುಲಿದವು,
ಕೈಯೊಳೆ ಹಿಡಿದು ಕುಳಿತಿರಲು.
"ಕೈಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ?"ಎಂದಿತು ಇನ್ನೊಂದು,
ಹಣ್ಣನು ಬಾಯಲಿ ಇಟ್ಟವು "ಜಗಿದೇ
ಇಡುವೆವು" ಎಂದಿತು ಮತ್ತೊಂದು.
ಜಗಿದೂ ಜಗಿದೂ, ನುಂಗಿದವೆಲ್ಲಾ
ಆಗಲೆ ಮುಗಿಯಿತು ಉಪವಾಸ.

No comments:
Post a Comment