Bhavageete
Sahitya: Basavaraja Sabaraha
Song link: Click Here
Badukige enartha nana gelati
Preetige enartha nana gelati
Mounavagi eke kulite nana gelati
Nee meleddu baravva nana gelati ||
Jagada tumba huttagalu beledavalla
Hutta huttadolaga haavu tumbyavalla
Gidagidaka midi nagara sutyavalla
Vishava kakki balannu mutyavalla ||
Hasirutta bhutayi battihoyitu
Hoo totta nelavella kattalayitu
Naguvanta chandrama nalugi hoyitu
Jagada tumba karineralu suttikonditu ||
Kaviyolage kama koletu narutaitalla
Khadiyolaga jagave suttu hogataitalla
Khakiyinda raktada maduvu hariyutaitalla
Kappu dehadolage jeeva karagataitalla ||
Nova nungi nagalynga nana gelati
Hakki rekki kittaralla nana gelati
Belaka batti ittaralla nana gelati
Katla ratri kaleyo voldu nana gelati ||
Preeti hoovu aralabeku nana gelati
Naguvu jagava tumbabeku nana gelati
Horataka nillabeku nana gelati
Daniyetti haadena nana gelati ||
ಭಾವಗೀತೆ
ಬದುಕಿಗೆ ಏನರ್ಥ ನನಗೆಳತಿ
ಪ್ರೀತಿಗೆ ಏನರ್ಥ ನನಗೆಳತಿ
ಮೌನವಾಗಿ ಏಕೆ ಕುಳಿತೆ ನನಗೆಳತಿ
ನೀ ಮೇಲೆದ್ದು ಬಾರವ್ವ ನನಗೆಳತಿ ।।ಪ ।।
ಜಗದ ತುಂಬಾ ಹುತ್ತಗಳು ಬೆಳೆದಾವಲ್ಲ
ಹುತ್ತ ಹುತ್ತದೊಳಗ ಹಾವು ತುಂಬ್ಯಾವಲ್ಲ
ಗಿಡಗಿಡಕ ಮಿಡಿನಾಗರ ಸುತ್ಯಾವಲ್ಲ
ವಿಷವ ಕಕ್ಕಿ ಬಾಳನ್ನು ಮುತ್ಯಾವಲ್ಲ ।।೧।।
ಹಸಿರುಟ್ಟ ಭೂತಾಯಿ ಬತ್ತಿಹೋಯಿತು
ಹೂತೊಟ್ಟ ನೆಲವೆಲ್ಲ ಕತ್ತಲಾಯಿತು
ನಗುವಂತ ಚಂದ್ರಮ ನಲುಗಿ ಹೋಯಿತು
ಜಗದಾ ತುಂಬ ಕರಿನೆರಳು ಸುತ್ತಿಕೊಂಡಿತು ।।೨।।
ಕಾವಿಯೊಳಗೆ ಕಾಮಕೊಳೆತು ನಾರತೈತಲ್ಲಾ
ಖಾದಿಯೊಳಗ ಜಗವೆ ಸುಟ್ಟು ಹೋಗತೈತಲ್ಲ
ಖಾಕಿಯಿಂದ ರಕ್ತದ ಮಡುವು ಹರಿಯುತೈತಲ್ಲ
ಕಪ್ಪು ದೇಹದೊಳಗ ಜೀವ ಕರಗತೈತಲ್ಲ ।।೩।।
ನೋವನುಂಗಿ ನಗಲ್ಯಾ೦ಗ ನನಗೆಳತಿ
ಹಕ್ಕಿ ರೆಕ್ಕಿ ಕಿತ್ತಾರಲ್ಲ ನನಗೆಳತಿ
ಬೆಳಕ ಬತ್ತಿ ಇಟ್ಟಾರಲ್ಲ ನನಗೆಳತಿ
ಕತ್ಲರಾತ್ರಿ ಕಳೆಯೊ ವೊಲ್ದು ನನಗೆಳತಿ ।।೪।।
ಪ್ರೀತಿ ಹೂವು ಅರಳಬೇಕು ನನಗೆಳತಿ
ನಗುವು ಜಗವ ತುಂಬಬೇಕು ನನಗೆಳತಿ
ಹೋರಾಟಕ ನಿಲ್ಲಬೇಕು ನನಗೆಳತಿ
ದನಿಯೆತ್ತಿ ಹಾಡೇನಾ ನನಗೆಳತಿ ।।೫।।
