Nadageete
Sahitya: Kuvempu
Song link: Click Here
Elladaru iru entadaru iru
Endendigu nee kannadavagiru
Kannadave satya
Kannadave nitya
Kannada govina o muddina karu
Kannada tanaondiddare nee nammage kalpataru
Kannadave satya
Kannadave nitya
Nee mettuva nela ade karnataka
Neneruva male sahyadri
Nee muttuva mara, srighandada mara
Nee kudiyuva neer kaveri
Pampananoduva ninna nalage
Kannadave satya
Kumaravyasanalipa kiviyidu
Kannadave nitya ||elladaru iru||
Harihara raghavarige eraguva mana
Halagiha hampege koraguva mana
Pempina banavasige karaguva mana
Belgola belurgala neneyuva mana
Jogada jalapatadi dhumukuva mana
Malenadige hompulivoguva mana
Kannadave satya
Kannadave nitya
Kajanake gili kogileyimpige
Mallige sampige kedage sompige
Mavina hongeya talirina tampige
Rasa romanchanagoluvatana mana
Elliddare en? entiddare en?
Endendigu taan -
Kannadave satya
Kannadave nitya
Anyavenalade mithya ||elladaru iru||
ನಾಡಗೀತೆ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನಾನಾಲಿಪ ಕಿವಿಯಿದು
ಕನ್ನಡವೇ ನಿತ್ಯ ।।ಎಲ್ಲಾದರು ।।
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪೆ೦ಪಿನ ಬನವಾಸಿಗೆ ಕರಗುವ ಮನ
ಬೆಲ್ಗೊಳ ಬೆಲೂರ್ಗಳ ನೆನೆಯುವ ಮನ
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೊಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್ -
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯಾ ।।ಎಲ್ಲಾದರು ।।






