Friday, August 5, 2022

Elladaru Iru Entadaru Iru (ಎಲ್ಲಾದರು ಇರು ಎಂತಾದರು ಇರು )

 


Nadageete

Sahitya: Kuvempu

Song link: Click Here


Elladaru iru entadaru iru

Endendigu nee kannadavagiru

Kannadave satya

Kannadave nitya


Kannada govina o muddina karu

Kannada tanaondiddare nee nammage kalpataru

Kannadave satya

Kannadave nitya


Nee mettuva nela ade karnataka

Neneruva male sahyadri

Nee muttuva mara, srighandada mara

Nee kudiyuva neer kaveri

Pampananoduva ninna nalage

Kannadave satya

Kumaravyasanalipa kiviyidu

Kannadave nitya  ||elladaru iru||


Harihara raghavarige eraguva mana

Halagiha hampege koraguva mana

Pempina banavasige karaguva mana

Belgola belurgala neneyuva mana

Jogada jalapatadi dhumukuva mana

Malenadige hompulivoguva mana

Kannadave satya

Kannadave nitya


Kajanake gili kogileyimpige

Mallige sampige kedage sompige

Mavina hongeya talirina tampige

Rasa romanchanagoluvatana mana

Elliddare en? entiddare en?

Endendigu taan -

Kannadave satya

Kannadave nitya

Anyavenalade mithya  ||elladaru iru||


ನಾಡಗೀತೆ 


ಎಲ್ಲಾದರು ಇರು ಎಂತಾದರು ಇರು 

ಎಂದೆಂದಿಗೂ ನೀ ಕನ್ನಡವಾಗಿರು

 ಕನ್ನಡವೇ ಸತ್ಯ 

ಕನ್ನಡವೇ ನಿತ್ಯ


ಕನ್ನಡ ಗೋವಿನ ಓ ಮುದ್ದಿನ ಕರು 

ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು 

ಕನ್ನಡವೇ ಸತ್ಯ 

ಕನ್ನಡವೇ ನಿತ್ಯ 


ನೀ ಮೆಟ್ಟುವ ನೆಲ ಅದೆ ಕರ್ನಾಟಕ 

ನೀನೇರುವ ಮಲೆ ಸಹ್ಯಾದ್ರಿ 

ನೀ ಮುಟ್ಟುವ ಮರ ಶ್ರೀಗಂಧದ ಮರ 

ನೀ ಕುಡಿಯುವ ನೀರ್ ಕಾವೇರಿ 

ಪಂಪನನೋದುವ ನಿನ್ನಾ ನಾಲಗೆ 

ಕನ್ನಡವೇ ಸತ್ಯ 

ಕುಮಾರವ್ಯಾಸನಾನಾಲಿಪ ಕಿವಿಯಿದು 

ಕನ್ನಡವೇ ನಿತ್ಯ ।।ಎಲ್ಲಾದರು ।।


ಹರಿಹರ ರಾಘವರಿಗೆ ಎರಗುವ ಮನ 

ಹಾಳಾಗಿಹ ಹಂಪೆಗೆ ಕೊರಗುವ ಮನ 

ಪೆ೦ಪಿನ  ಬನವಾಸಿಗೆ ಕರಗುವ ಮನ 

ಬೆಲ್ಗೊಳ  ಬೆಲೂರ್ಗಳ ನೆನೆಯುವ ಮನ 

ಜೋಗದ ಜಲಪಾತದಿ ಧುಮುಕುವ ಮನ 

ಮಲೆನಾಡಿಗೆ ಹೊಂಪುಳಿವೋಗುವ ಮನ 

ಕನ್ನಡವೇ ಸತ್ಯ 

ಕನ್ನಡವೇ ನಿತ್ಯ


ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ 

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ 

ಮಾವಿನ ಹೊಂಗೆಯ ತಳಿರಿನ ತಂಪಿಗೆ 

ರಸರೊಮಾಂಚನಗೊಳುವಾತನ  ಮನ 

ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?

ಎಂದೆಂದಿಗೂ ತಾನ್ -

ಕನ್ನಡವೇ ಸತ್ಯ 

ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯಾ   ।।ಎಲ್ಲಾದರು ।।

                



Thursday, August 4, 2022

Ello Hudukide Illada Devara (ಎಲ್ಲೋ ಹುಡುಕಿದೆ ಇಲ್ಲದ ದೇವರ )

 

Bhavageete

Sahitya: G S Shivarudrappa

Song link: Click Here



Ello hudukide illada devara

Kallu mannugala gudiyolage

Ille iruva preeti snehagala

Gurutisadadenu nammolage


Ellide nandana ellide bandhana

Ella ive ee nammolage

Olagina tiliyanu kalakade iddare

Amrutada savi ide Naligege  ||1||


Hattiraviddu doora nilluvevu

Namma ahammina koteyali

Estu kastavo hondike embudu

Nalku dinada ee badukinali  ||2||


ಭಾವಗೀತೆ 


ಎಲ್ಲೋ ಹುಡುಕಿದೆ ಇಲ್ಲದ ದೇವರ 

ಕಲ್ಲು ಮಣ್ಣುಗಳ ಈ ಗುಡಿಯೊಳಗೆ 

ಇಲ್ಲೇ ಇರುವ ಪ್ರೀತಿ ಸ್ನೇಹಗಳ 

ಗುರುತಿಸದಾದೆನು ನಮ್ಮೊಳಗೆ 


ಎಲ್ಲಿದೆ ನಂದನ ಎಲ್ಲಿದೆ ಬಂಧನ 

ಎಲ್ಲಾ ಇವೆ ಈ ನಮ್ಮೊಳಗೆ 

ಒಳಗಿನ ತಿಳಿಯನು ಕಲಕದೆ ಇದ್ದರೆ 

ಅಮೃತದ ಸವಿಯಿದೆ ನಾಲಿಗೆಗೆ ।।೧।।


ಹತ್ತಿರವಿದ್ದೂ ದೂರ ನಿಲ್ಲುವೆವು 

ನಮ್ಮ ಅಹಮ್ಮಿನ ಕೋಟೆಯಲಿ 

ಎಷ್ಟು ಕಷ್ಟವೊ ಹೊಂದಿಕೆ ಎಂಬುದು 

ನಾಲ್ಕು ದಿನದ ಈ ಬದುಕಿನಲಿ ।।೨।।



Gagana Nee Bhuvana Nee (ಗಗನ ನೀ ಭುವನ ನೀ )

 

  • Movie: KGF Chapter 2
  • Singer: Suchetha Basrur
  • Song link: Click Here


Gagana nee bhuvana nee

Shikhara nee

Danidare dharanige

Dhaniyu nee


Udaya nee ulke nee

Sakhala nee

Panavidu naleya

Charite nee


Yugavu iruva tanakavu neene

Janara kayodhamaniyu neene

Tadeva aleyu nooride munde

Anjadedeya navikanedure

Panavidu naleya

Charite nee (2)


Savira padegalu samarave sarali

Kshanadali

Obbane sainika ninage nee

Aayudha jagadali


Thandani tane tane thandano

Thane nane no

He thandani tane tane thandano

Thane nane no.. 


ಚಿತ್ರಗೀತೆ 


ಗಗನ ನೀ ಭುವನ ನೀ 

ಶಿಖರ ನೀ 

ದಣಿದರೆ ಧರಣಿಗೆ 

ಧಣಿಯು ನೀ 


ಉದಯ ನೀ ಉಲ್ಕೆ ನೀ 

ಸಖಲ ನೀ 

ಪಣವಿಡು ನಾಳೆಯ 

ಚರಿತೆ ನೀ 


ಯುಗವು ಇರುವ ತನಕವೂ ನೀನೇ 

ಜನರ ಕಾಯೋ ಧಮನಿಯು ನೀನೇ 

ತಡೆವ ಅಲೆಯು ನೂರಿದೆ ಮುಂದೆ 

ಅಂಜದೆದೆಯ ನಾವಿಕನೆದುರೇ 

ಪಣವಿಡು ನಾಳೆಯ 

ಚರಿತೆ ನೀ (೨)


ಸಾವಿರ ಪಡೆಗಳು ಸಮರವೇ ಸಾರಲಿ 

ಕ್ಷಣದಲಿ 

ಒಬ್ಬನೇ ಸೈನಿಕ ನಿನಗೆ ನೀ 

ಆಯುಧ ಜಗದಲಿ 


ತಂದಾನಿ ತಾನೇ ತಾನೇ ತಂದಾನೋ 

ತಾನೇ ನಾನೇನೋ 

ಹೇ  ತಂದಾನಿ ತಾನೇ ತಾನೇ ತಂದಾನೋ 

ತಾನೇ ನಾನೇನೋ .. 



Wednesday, August 3, 2022

Idu Bhagya Idu Bhagya Idu Bhagyavayya (ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ)

Bhaktigeete

Purandara Dasara Keerthanegalu

Song link: Click Here


Raga: Kamboja

Tala: Jampetala


Idu bhagya idu bhagya idu bhagyavayya

Padumanabhana pada, bhajane sukhavayya


Kallagi iralubeku katina bhavatoreyolage

Billagi iralubeku ballavarolage

Mellane madhavana manava mecchisabeku

Bellavagirabeku bhandu janarolage ||idu bhagya||


Buddhiyindali manava tiddi kollalubeku

Muddagiralu beku muni yogigalige

Madwa matabdiyolu meenagiralubeku

Shuddhanagiralubeku karana trayagalali ||idu bhagya||


Vishayabhogada trunake uriyagiralubeku

Nishi hagalu srihariya neneyabeku

Vasudheesha purandara vittalarayana

Hasanada dasara sevisalubeku  ||idu bhagya||                     sri


ಭಕ್ತಿಗೀತೆ 


ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ।।ಪ ।।

ಪದುಮನಾಭನ ಪಾದ ಭಜನೆ ಸುಖವಯ್ಯ ।।ಅನು ।।


ಕಲ್ಲಾಗಿ ಇರಲುಬೇಕು ಕಠಿಣ ಭವತೊರೆಯೊಳಗೆ 

ಬಿಲ್ಲಾಗಿ ಇರಲುಬೇಕು ಬಲ್ಲವರೊಳಗೆ 

ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು 

ಬೆಲ್ಲವಾಗಿರಬೇಕು ಬಂಧು ಜನರೊಳಗೆ   ।।೧।।


ಬುದ್ದಿಯಿಂದಲಿ ಮನವ ತಿದ್ದಿ ಕೊಳ್ಳಲು ಬೇಕು 

ಮುದ್ದಾಗಿರಲು ಬೇಕು ಮುನಿಯೋಗಿಗಳಿಗೆ 

ಮಧ್ವ ಮಾತಾಬ್ದಿಯೊಳು ಮೀನಾಗಿರಲುಬೇಕು 

ಶುದ್ಧನಾಗಿರಲುಬೇಕು ಕರಣ ತ್ರಯಗಳಲಿ  ।।೨।।


ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು 

ನಿಶಿ ಹಗಲು ಶ್ರೀಹರಿಯ ನೆನೆಯಬೇಕು 

ವಸುಧೀಶ ಪುರಂದರ ವಿಠ್ಠಲರಾಯನ 

ಹಸನಾದ ದಾಸರ ಸೇವಿಸಲುಬೇಕು  ।।೩।।                       ಶ್ರೀ 



Tuesday, August 2, 2022

Kenakutide Ninna Kannota (ಕೆಣಕುತಿದೆ ನಿನ್ನ ಕಣ್ಣ್ ನೋಟ )


Movie: Aasegobba Meesegobba (1990)
Singer: SPB
Song link: Click Here


Kenakutide ninna kann nota

Kunisutide ninna kann ata

Seleyalu ninna tanuvina mata

Kaliyalu aase

Pranayada pata

Maduvudeniga?


Sanje bana banna kande kenneli

Kande chandra tanda kanti ninna kannali

Nee nudidaru sogasu

Mounavu sogasu

Ella sangeetave..


Indu kanda anda alla ninnadu

Nalle endo kanda sneha prema nammadu

Idu savira januma

Jotheyali navu

Kanda aanandavu..


ಚಿತ್ರಗೀತೆ 


ಕೆಣಕುತಿದೆ ನಿನ್ನ ಕಣ್ಣ್  ನೋಟ 

ಕುಣಿಸುತಿದೆ ನಿನ್ನ ಕಣ್ಣ್ ಆಟ 

ಸೆಳೆಯಲು ನಿನ್ನ ತನುವಿನ ಮಾಟ 

ಕಲಿಯಲು ಆಸೆ ಪ್ರಣಯದ ಪಾಠ 

ಮಾಡುವುದೇನಿಗ ?


ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ 

ಕಂಡೆ ಚಂದ್ರ  ತಂದ ಕಾಂತಿ ನಿನ್ನ ಕಣ್ಣಲಿ 

ನೀ ನುಡಿದರು ಸೊಗಸು 

ಮೌನವು ಸೊಗಸು 

ಎಲ್ಲ ಸಂಗೀತವೇ  ।।೧।।


ಇಂದು ಕಂಡ ಅಂದ ಅಲ್ಲ ನಿನ್ನದು 

ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು 

ಇದು ಸಾವಿರ ಜನುಮ 

ಜೊತೆಯಲಿ ನಾವು 

ಕಂಡ ಆನಂದವು  ।।೨।।




Daniyirada Balinalli (ದನಿಯಿರದ ಬಾಳಿನಲ್ಲಿ)


Bhavageete

Sahitya: Doddarangegowda

Song link: https://youtu.be/JeMQrt-zwwM


Daniyirada balinalli

Kolalade neenu

Ninnolume hadanu nudisi

Marulade nanu


Kanasinalu ninnade rupu

Shringara sumavagi

Bayake shruti bhavagalalli

Sambandha inidagi

Sangeeta edeyolu tumbi

Nanade nadada dumbi  ||daniyirada||


Gandharva gana gange

Toururu neenagi

Sangeeta gayana hariso

Nija rasika nanagi

Alapaderilitadali

Na midide mohana murali  ||daniyirada||


ಭಾವಗೀತೆ 


ದನಿಯಿರದ ಬಾಳಿನಲ್ಲಿ 

ಕೊಳಲಾದೆ ನೀನು 

ನಿನ್ನೊಲುಮೆ ಹಾಡನು ನುಡಿಸಿ 

ಮರುಳಾದೆ ನಾನು ।।ಪ ।।


ಕನಸಿನಲೂ ನಿನ್ನದೆ ರೂಪು 

ಶೃಂಗಾರ ಸುಮವಾಗಿ 

ಬಯಕೆ ಶ್ರುತಿ ಭಾವಗಳಲ್ಲಿ 

ಸಂಬಂಧ ಇನಿದಾಗಿ 

ಸಂಗೀತ ಎದೆಯೊಳು ತುಂಬಿ 

ನಾನಾದೆ ನಾದದ ದುಂಬಿ ।।೧।।


ಗಂಧರ್ವ ಗಾನ ಗಂಗೆ 

ತೌರೂರು ನೀನಾಗಿ 

ಸಂಗೀತ ಗಾಯನ ಹರಿಸೋ 

ನಿಜ ರಸಿಕ ನಾನಾಗಿ 

ಆಲಾಪದೇರಿಳಿತದಲಿ 

ನಾಮಿಡಿದೆ ಮೋಹನ ಮುರಳಿ ।।೨।।





Monday, August 1, 2022

Sudu Bayala Gali Nanu (ಸುಡು ಬಯಲ ಗಾಳಿ ನಾನು )

 

Bhavageete

Sahitya: H S Shivaprakash

Song link:  Click Here


Sudu bayala gali nanu

Suliye parimalave neenu

Koragi marugutaliruva

Taruku birukina nelake

Suriye maleyagi neenu


Yaru nettaru illi

Mullu lohada balli

Berugalu baralu baralu

Doora gaganada nadu

Khali neeliya jadu

Tore karmugila kurulu ||sudubayala||


Saku yatane chinte

Lokagalu nannante

Dekutive ninna kadege

Kareye jeevada govu

Mereye gokulavannu

Beku nandana ilege  ||sudubayala||


ಭಾವಗೀತೆ 


ಸುಡು ಬಯಲ ಗಾಳಿ ನಾನು 

ಸುಳಿಯೇ ಪರಿಮಳವೇ ನೀನು 

ಕೊರಗಿ ಮರುಗುತಲಿರಿರುವ 

ತರುಕು ಬಿರುಕಿನ ನೆಲಕೆ 

ಸುರಿಯೆ ಮಳೆಯಾಗಿ ನೀನು 


ಯಾರು ನೆಟ್ಟರು ಇಲ್ಲಿ 

ಮುಳ್ಳು ಲೋಹದ ಬಳ್ಳಿ 

ಬೇರುಗಳು ಬರಲು ಬರಲು 

ದೂರ ಗಗನದ ನಾಡು 

ಖಾಲಿ ನೀಲಿಯ ಜಾಡು 

ತೋರೆ ಕಾರ್ಮುಗಿಲ ಕುರುಳು    ।।ಸುಡುಬಯಲ ।।


ಸಾಕು ಯಾತನೆ ಚಿಂತೆ 

ಲೋಕಗಳು ನನ್ನಂತೆ 

ದೇಕುತಿವೆ ನಿನ್ನ ಕಡೆಗೆ 

ಕರೆಯೆ ಜೀವದ ಗೋವು 

ಮೇರೆಯೇ ಗೋಕುಲವನ್ನು 

ಬೇಕು ನಂದನ ಇಳೆಗೆ      ।।ಸುಡುಬಯಲ ।।