Nadageete
Sahitya: B R Lakshmana Rao
Song link: Click Here
Karnataka bari nadalla
Namma samskrutiya dhatu
Kannada kevala nudiyalla
Namm antarangada mathu
Kangolisuva bari giriyalla
Sahyadriya salu
Hommide salahuva ammanede
Udalemage halu
Bari nere nugguva neeralla
Krishne kaveri tunge
Dhamani dhamaniyali hariva chetana
Kanna belaku namage ||karnataka||
Pampa kumaravyasarendare
Alla kavigalu matra
Indu kannada kavya malege
Avare antasutra
Shilpa kaleya ba re baleyalla
Halebeedu beluru
Namma berannu torutide
Alli namma talemaru ||karnataka||
ನಾಡಗೀತೆ
ಕರ್ನಾಟಕ ಬರಿ ನಾಡಲ್ಲ
ನಮ್ಮ ಸಂಸ್ಕೃತಿಯ ಧಾತು
ಕನ್ನಡ ಕೇವಲ ನುಡಿಯಲ್ಲ
ನಮ್ಮಂತರಂಗದ ಮಾತು
ಕಂಗೊಳಿಸುವ ಬರಿ ಗಿರಿಯಲ್ಲ
ಸಹ್ಯಾದ್ರಿಯ ಸಾಲು
ಹೊಮ್ಮಿದೆ ಸಲಹುವ ಅಮ್ಮನೆದೆ
ಉಡಲೆಮಗೆ ಹಾಲು
ಬರಿ ನೆರೆ ನುಗ್ಗುವ ನೀರಲ್ಲ
ಕೃಷ್ಣೆ ಕಾವೇರಿ ತುಂಗೆ
ಧಮನಿ ಧಮನಿಯಲಿ ಹರಿವ ಚೇತನ
ಕಣ್ಣ ಬೆಳಕು ನಮಗೆ ।।ಕರ್ನಾಟಕ ।।
ಪಂಪ ಕುಮಾರವ್ಯಾಸರೆಂದರೆ
ಅಲ್ಲ ಕವಿಗಳು ಮಾತ್ರ
ಇಂದೂ ಕನ್ನಡ ಕಾವ್ಯಮಾಲೆಗೆ
ಅವರೇ ಅಂತಃಸೂತ್ರ
ಶಿಲ್ಪಕಲೆಯ ಬರೆ ಬಲೆಯಲ್ಲ
ಹಳೆಬೀಡು ಬೇಲೂರು
ನಮ್ಮ ಬೇರನ್ನು ತೋರುತ್ತಿದೆ
ಅಲಿ ನಮ್ಮ ತಲೆಮಾರು ।।ಕರ್ನಾಟಕ ।।





