Bhavageete
Sahitya: Da Ra Bendre
Song link: Click Here
Nee hinga nodabyada nanna
Nee hinga nodabyada nanna
Nee hinga nodidare nanna
Tirugi na hyanga nodali ninna
Nee hinga nodabyada nanna
Samsara sagaradaga
Lekkaviradastu dhukada bandi
Na balle nanage gotilladiddaru
Elli acheya dandi
Malagiruva koosu malagirali alli
Mundinadu devara chitta
Na tadilare adu yaka nodatee
Matta matta nee itta
Tambala hakada tumba kempu
Gini gadaka hannina hanga
Iddanta tutiya bannetta haritu
Yava galige hinga
Ee gattagalla hani kannu kandu
Marige mariya reeti
Savana tanna kai savaritilli
Bantenaga illada beeti
Nee hinga nodabyada nanna..
Ibbani toledaruu halu mettida
Kavali kantiya hannu
Hole holeva hanga kanniruva henna
Helu ninnavena ee kannu
Digilagi annatada jeeva ninna
Kannare kandu ommigila
hunnimi chandirana henna bantho
Mugilaga telata hagala
Ninna kanninyaga kaluuri maleyuu
Nada nadaka hucchu nagi yaka
Hani odeyalikke bandantha moda
Tadadanga galiya nevaka
Attare attu bidu honalu barali
Nakyaka marasati dhukka
Ede birisi kedavu barigannu byada
tuti kacchi hidiyadiru bikka
Nee hinga nodabyada nanna..
ಭಾವಗೀತೆ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ
ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ
ನೀ ಹೀಂಗ ನೋಡಬ್ಯಾಡ ನನ್ನ ..
ಸಂಸಾರ ಸಾಗರದಾಗ ಲೆಕ್ಕವಿರದಷ್ಟು
ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ
ಎಲ್ಲಿ ಆಚೆಯ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ
ಮುಂದಿನದು ದೇವರ ಚಿತ್ತ
ನಾ ತಡಿಲಾರೆ ಅದು ಯಾಕ ನೋಡತೀ
ಮತ್ತ ಮತ್ತ ನೀ ಇತ್ತ
ತಂಬಲ ಹಾಕದ ತುಂಬಾ ಕೆಂಪು
ಗಿಣಿ ಗಡಕ ಹಣ್ಣಿನ ಹಂಗ
ಇದ್ದಂತ ತುಟಿಯ ಬಣ್ಣೆತ್ತ ಹಾರಿತು
ಯಾವ ಗಾಳಿಗೆ ಹಿಂಗ
ಈ ಗತ್ತಗಲ್ಲ ಹನಿ ಕಣ್ಣು ಕಂಡು
ಮಾರಿಗೆ ಮಾರಿಯಾ ರೀತಿ
ಸಾವನ ತನ್ನ ಕೈ ಸವರಿತಿಲ್ಲಿ
ಬಂತೆನಗ ಇಲ್ಲದ ಭೀತಿ
ನೀ ಹೀಂಗ ನೋಡಬ್ಯಾಡ ನನ್ನ ..
ಇಬ್ಬನಿ ತೊಳೆದರೂ ಹಾಲು ಮೆತ್ತಿದ
ಕವಲಿ ಕಂಠಿಯ ಹಣ್ಣು
ಹೊಳೆ ಹೊಳೆವ ಹಂಗ ಕಣ್ಣಿರುವ ಹೆಣ್ಣ
ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ
ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿಮಿ ಚಂದಿರನ ಹೆಣ್ಣಾ ಬಂತೋ
ಮುಗಿಲಾಗ ತೇಲತಾ ಹಗಲ
ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯೂ
ನಡ ನಡಕ ಹುಚ್ಚು ನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂತ ಮೋಡ
ತಡದಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು ಹೊನಲು ಬರಲಿ
ನಕ್ಯಾಕ ಮರೆಸತಿ ದುಃಖ
ಎದೆ ಬಿರಿಸಿ ಕೆಡವು ಬರಿಗಣ್ಣು ಬ್ಯಾಡ
ತುಟಿ ಕಚ್ಚಿ ಹಿಡಿಯದಿರು ಬಿಕ್ಕ
ನೀ ಹೀಂಗ ನೋಡಬ್ಯಾಡ ನನ್ನ ..
