Bhaktigeete
Banda chandadinda sundara govinda
Sundari vrundadi banda, nandana kanda
Aha nandana kanda..
Hala maruva gopi baleya manava
Leeleyindali kadda lola nodavva (2)
Leeleyindava moha jala beesuva
Jaladi sushileyara silukisuva bala ||Banda||
Neerige neere tanu sagutalire
Haari baruvanu daari sagalu bidanu(2)
Neereya seere seledu morege mo re
Ittu mutta nittu natta nottuva ranga ||Banda||
Hengaleyara sangadalli sundara
Kangaliruva chanda chukki chandira(2)
Sanga bandura gopi shurnga mandira
Pondi vrundeyara bhava bhanda kaleda ||Banda||
ಭಕ್ತಿಗೀತೆ
ಬಂದ ಚೆಂದದಿಂದ ಸುಂದರ ಗೋವಿಂದ
ಸುಂದರಿ ವೃಂದದಿ ಬಂದ ನಂದನ ಕಂದ
ಆಹಾ ನಂದನ ಕಂದ ।।ಪ ।।
ಹಾಲ ಮಾರುವ ಗೋಪಿ ಬಾಲೆಯ ಮನವಾ
ಲೀಲೆಯಿಂದಲಿ ಕದ್ದ ಲೋಲ ನೋಡವ್ವ
ಲೀಲೆಯಿಂದವ ಮೋಹ ಜಾಲ ಬೀಸುವ
ಜಾಲದಿ ಸುಶಿಲೆಯರ ಸಿಲುಕಿಸುವ ಬಾಲ ।।೧।।
ನೀರಿಗೆ ನೀರೆ ತಾನು ಸಾಗುತಲಿರೆ
ಹಾರಿ ಬರುವನು ದಾರಿ ಸಾಗಲು ಬಿಡನು
ನೀರೆಯ ಸೀರೆ ಸೆಳೆದು ಮೋರೆಗೆ ಮೋರೆ
ಇತ್ತು ಮುತ್ತ ನಿತ್ತು ನತ್ತ ನೊತ್ತುವ ರಂಗ ।।೨।।
ಹೆಂಗಳೆಯರ ಸಂಗದಲ್ಲಿ ಸುಂದರ
ಕಂಗಳಿಗವ ಚಂದ ಚುಕ್ಕಿ ಚಂದಿರ
ಸಂಗ ಬಂದುರ ಗೋಪಿ ಶೃಂಗ ಮಂದಿರ
ಪೊಂದಿ ವೃಂದೆಯರ ಭವ ಬಂಧ ಕಳೆದ ।।೩।।

No comments:
Post a Comment