Friday, April 15, 2022

Mooruthiyane Nilliso Madhava Ninna (ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ)


Bhaktigeete

Purandara Dasara Keerthanegalu

Song link:Click Here




Raga: Kamach

Tala: Roopakatala


Moorutiyane nilliso

Madhava ninna

Moorutiyane nilliso....


Ele tulasiya vanamaleyu koralolu

Holeva pitambaradinda oppuva ninna


Moorutiyane nilliso

Madhava ninna

Moorutiyane nilliso


Muttina sara navaratnada unguravittu

Matte sri lakumiya uradol oppuva ninna ||muruthiyane||


Bhaka kalpataru bhagyada suradhenu

Muktidayaka  purandara vittala ninna  ||muruthiyane||



ಭಕ್ತಿಗೀತೆ 


ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ 

ಮೂರುತಿಯನೆ ನಿಲ್ಲಿಸೋ


ಎಳೆತುಳಸಿಯ ವನಮಾಲೆಯು ಕೊರಳೊಳು 

ಹೊಳೆವ ಪೀತಾಂಬರದಿಂದ ಒಪ್ಪುವ ನಿನ್ನ।।೧।। 


ಮುತ್ತಿನ ಸರ ನವರತ್ನ ದುಂಗುರವಿಟ್ಟು 

ಮತ್ತೆ ಶ್ರೀ ಲಕುಮಿಯ ಉರದೊಳೂಒಪ್ಪುವ ನಿನ್ನ।।೨।। 


ಭಕ್ತ ಕಲ್ಪತರು ಭ್ಯಾಗ್ಯದ ಸುರಧೇನು 

ಮುಕ್ತಿದಾಯಕ ಪುರಂದರ ವಿಠ್ಠಲ ನಿನ್ನ ।।೩।।



Kogileye Kshemave (ಕೋಗಿಲೆಯೆ ಕ್ಷೇಮವೆ)



  • Movie : Mannina doni (1992)
  • Singer: S Janaki
  • Song link: Click Here


Kogileye kshemave

Kasturiye soukyave


Kogileye kshemave

Kasturiye soukyave

Naidileye nidireye

Malligeye mampare

Eliri eliri mele

Nesara bandanu mele nodi

Mangina neeralli muddu moreya

Toledu bandu haadi..||


Kannanadalli beesuva galige endu

Aalasya bandide heli ?

Bettagalalli oduva nadiyu endu

Danidu nintide keli ?

Ragagalante mooduva meghagalige

Besara banditte keli ?

Veerara kaili baggada malebillu

Barenu embude heli ?

Bhuvana tirugide oo....o

Gagana chaliside

Kavana kadedide oo....o

Baduku bareside 


Eliri eliri mele

Nesara bandanu mele nodi

Mangina neeralli muddu moreya

Toledu bandu haadi...||


Janara gumpu kampina totakke haari

Sompina jenannu tandavu

Pundara gumpu huliya topige nuggi

Hotteya biriye tindavu

Tappalinalli rangina acheya hoida

Patanga padeya payana

Kecchalinalli govina kusina dodda

Kannina mecchina mouna

Kamala kuliteya

O..oo alile aviteya

Navile ninteya

O..oo manase mareteya


Eliri eliri mele

Nesara bandanu mele nodi

Mangina neeralli muddu moreya

Toledu bandu haadi...||


ಚಿತ್ರಗೀತೆ

 

ಕೋಗಿಲೆಯೆ ಕ್ಷೇಮವೆ 

ಕಸ್ತೂರಿಯೆ ಸೌಖ್ಯವೆ 


ಕೋಗಿಲೆಯೆ ಕ್ಷೇಮವೆ  

ಕಸ್ತೂರಿಯೆ ಸೌಖ್ಯವೆ  

ನೈದಿಲೆಯೆ ನಿದಿರೆಯೆ  

ಮಲ್ಲಿಗೆಯೆ ಮಂಪರೆ 

ಏಳಿರಿ ಏಳಿರಿ ಮೇಲೆ 

ನೇಸರ ಬಂದನು ಮೇಲೆ ನೋಡಿ 

ಮಂಜಿನ ನೀರಲ್ಲಿ ಮುದ್ದು ಮೋರೆಯ 

ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।


ಕಾನನದಲ್ಲಿ ಬೀಸುವ ಗಾಳಿಗೆ ಎಂದು 

ಆಲಸ್ಯ ಬಂದಿದೆ ಹೇಳಿ 

ಬೆಟ್ಟಗಳಲ್ಲಿ ಓಡುವ ನದಿಯು ಎಂದು 

ದಣಿದು ನಿಂತಿದೆ ಕೇಳಿ ?

ರಾಗಗಳಂತೆ ಮೂಡುವ ಮೇಘಗಳಿಗೆ 

ಬೇಸರ ಬಂದೀತೆ  ಕೇಳಿ ?

ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು 

ಬರೆನು ಎಂಬುದೆ  ಹೇಳಿ 

ಭುವನ ತಿರುಗಿದೆ  ಓ ಓ..  ಓ 

ಗಗನ ಚಲಿಸಿದೆ 

ಕವನ ಕಡೆದಿದೆ  ಓ ಓ .. ಓ 

ಬದುಕು ಬರೆಸಿದೆ 


ಏಳಿರಿ ಏಳಿರಿ ಮೇಲೆ 

ನೇಸರ ಬಂದನು ಮೇಲೆ ನೋಡಿ 

ಮಂಜಿನ ನೀರಲ್ಲಿ ಮುದ್ದು ಮೋರೆಯ 

ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।


ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ 

ಸೊಂಪಿನ ಜೆನ್ನನ್ನು ತಂದವು 

ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ 

ಹೊಟ್ಟೆಯ ಬಿರಿಯೆ ತಿಂದವು 

ತಪ್ಪಲಿನಲ್ಲಿ ರಂಗಿನ ಅಚ್ಚೆಯ ಹೊಯ್ದ 

ಪತಂಗ ಪಡೆಯ ಪಯಣ 

ಕೆಚ್ಚಲಿನಲ್ಲಿ ಗೋವಿನ ಕೂಸಿನ ದೊಡ್ಡ 

ಕಣ್ಣಿನ ಮೆಚ್ಚಿನ ಮೌನ 

ಕಮಲ ಕುಳಿತೆಯಾ 

 ಓಓ  ಓ  ಅಳಿಲೇ ಅವಿತೆಯಾ 

ನವಿಲೇ ನಿಂತೆಯಾ 

ಓ ಓ  ಓ ಮನಸೇ ಮರೆತೆಯಾ 


ಏಳಿರಿ ಏಳಿರಿ ಮೇಲೆ 

ನೇಸರ ಬಂದನು ಮೇಲೆ ನೋಡಿ 

ಮಂಜಿನ ನೀರಲ್ಲಿ ಮುದ್ದು ಮೋರೆಯ 

ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।




Thursday, April 14, 2022

Jana Gana Mana (Rastrageet)



Rastrageet
Written by- Rabindranath Tagore
Song link: Click Here

Janaganamana adhinayaka jaya he

Bharata bhagya vidhata ||

Panjaba sindhu gujarata maratha |

Dravida utkala banga ||

Vindhya himachala yamuna ganga |

Uchchala Jaladhi taranga ||

Tava shubha naame jaage |

Tava shubha asisha maange ||

Gaahe tava jaya gatha |

Janagana mangaladayaka jaya he ||

Bharata bhagya vidhata |

Jaya hae jaya he jaya he ||

Jaya jaya jaya jaya he ||

                               

राष्ट्रगीत 


जन गण मन अधिनायक जय हे 

भारत भाग्य विधाता

पंजाब सिंध गुजरात मराठा 

द्रविड़ उत्कल बंगा 

विंध्य हिमाचल यमुना गंगा 

उच्छल जलधि तरंगा 

तव शुभ नामे जागे 

तव शुभ आशिष माँगे 

गाहे तव जय गाथा 

जन गण मन अधिनायक जय हे 

भारत भाग्य विधाता 

जय हे, जय हे, जय हे

जय जय जय जय, हे


ರಾಷ್ಟ್ರಗೀತೆ 


ಜನಗಣಮನ ಅಧಿನಾಯಕ ಜಯ ಹೇ ।

ಭಾರತ ಭಾಗ್ಯ ವಿಧಾತಾ ।।

ಪಂಜಾಬ ಸಿಂಧು ಗುಜರಾತ ಮರಾಠಾ ।

ದ್ರಾವಿಡ ಉತ್ಕಲ ಬಂಗಾ ।।

ವಿಂಧ್ಯ ಹಿಮಾಚಲ ಯಮುನಾ ಗಂಗಾ ।

ಉಚ್ಛಲ ಜಲಧಿ ತರಂಗಾ ।।

ತವ ಶುಭ ನಾಮೇ ಜಾಗೇ ।

ತವ ಶುಭ ಆಶಿಷ ಮಾಗೇ ।।

ಗಾಹೇ ತವ ಜಯ ಗಾಥಾ ।

ಜನ ಗಣ ಮನ ಅಧಿನಾಯಕ ಜಯ ಹೇ ।।

ಭಾರತ ಭಾಗ್ಯ ವಿಧಾತಾ ।

ಜಯ ಹೇ ..ಜಯ ಹೇ .. ಜಯ ಹೇ ।।

ಜಯ ಜಯ ಜಯ ಜಯ ಹೇ ।।

         

Sada Enna Hrudayadalli (ಸದಾ ಎನ್ನ ಹೃದಯದಲ್ಲಿ)


Bhaktigeete

Song link: Click Here


Sada enna hrudayadalli

Vasa mado sri hari

Nadamurthy ninna paada

Moodadinda bhajisuve


Jnanavembo navaratnada

Mantapada madhyadalli

Venulolana kullirisi

Modadinda bhajisuve


Sada enna hrudayadalli

Vasa mado sri hari


Bhaktirasavembo muttu

Manikyada harivanadi

Mukthanagabeku endu

Muttinarati ettuvenu


Sada enna hrudayadalli

Vasa mado sri hari


Ninna nanu biduvanalla

Enna neenu bidalu salla

Ghanna mooruti vijaya vittala

Kelo ninna bhakutara solla


Sada enna hrudayadalli

Vasa mado sri hari

Nadamurthy ninna paada

Moodadinda bhajisuve


Sada enna hrudayadalli

Vasa mado sri hari


ಭಕ್ತಿಗೀತೆ 


ಸದಾ ಎನ್ನ ಹೃದಯದಲ್ಲಿ 

ವಸ ಮಾಡೋ ಶ್ರೀಹರಿ 

ನಾದಮೂರ್ತಿ ನಿನ್ನ ಪಾದ 

ಮೋದದಿಂದ ಭಜಿಸುವೆ 


ಜ್ಞಾನವೆಂಬೋ ನವರತ್ನದ 

ಮಂಟಪದ ಮಧ್ಯದಲ್ಲಿ 

ವೇಣುಲೋಲನ ಕುಳ್ಳಿರಿಸಿ 

ಮೋದದಿಂದ ಭಜಿಸುವೆ ।।೧।।


ಭಕ್ತಿರಸವೆಂಬೋ  ಮುತ್ತು 

ಮಾಣಿಕ್ಯದಾ ಹರಿವಾಣದೀ 

ಮುಕ್ತನಾಗಬೇಕು ಎಂದು 

ಮುತ್ತಿನಾರತಿ ಎತ್ತುವೆ ।।೨।।


ನಿನ್ನ ನಾನು ಬಿಡುವನಲ್ಲ 

ಎನ್ನ ನೀನು ಬಿಡಲು ಸಲ್ಲ 

ಘನ್ನ ಮೂರುತಿ  ವಿಜಯ ವಿಠ್ಠಲ 

ಕೇಳೋ ನಿನ್ನ ಭಕುತರ ಸೊಲ್ಲ ।।೩।।



 

Tuesday, April 12, 2022

Chutu Chutu (ಚುಟು ಚುಟು)



  • Movie: Rambo - 2 (2018)
  • Singers: Ravindra Soragavi, Shamitha Malnad
  • Song link: Click Here


A hudugi yak hing aadti

Matalle malla madti

Varshatu hinga aadti

Sigavalli kaige


A huduga yako karti

Sikkalle signal kodti

Dinakondu dialogue hoditi

Hengaiti maige


Ninna naduvu sanna iiti

Nadige kannu kukaiti

Ninna gunga eriti

Manasu mangya agaiti

Nanna taleya kediseti


A hudugi

Ena mava

Chutu chutu

Elli?


Chutu chutu antaiti,  nanaga

Chumu chumu agtaiti (2)


Oor hinda bale tota

Oor munda kali saita

Edakella neenaga odati

Matyaka anumana padati


Ha

Shokige sala madi

Tandidi bullet gadi

Nan nodi double horn hoditi

Ooraga neenesta meriti


Ooraga nandond level iti

Daryag nintu yaka baiti


Esta kadati

Malla madati

Manasyanga taditaiti..

Mava

Ena hudgi


Chutu chutu antaiti,  nanagu

Chumu chumu agtaiti (3)


ಚಿತ್ರಗೀತೆ 


ಏ ಹುಡುಗಿ ಯಾಕ್ ಹಿಂಗ್ ಆಡ್ತಿ 

ಮಾತಲ್ಲೆ ಮಳ್ಳ ಮಾಡ್ತಿ 

ವರ್ಷಾತು ಹಿಂಗ ಆಡ್ತಿ 

ಸಿಗವಲ್ಲಿ ಕೈಗೆ 


ಏ ಹುಡುಗ ಯಾಕೊ ಕರಿತಿ 

ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ 

ದಿನಕೊಂದು ಡೈಲಾಗ್ ಹೊಡಿತಿ 

ಹೆಂಗೈತಿ ಮೈಗೆ 


ನಿನ್ನ ನಡುವು ಸಣ್ಣ್ ಐತಿ 

ನಡಿಗೆ ಕಣ್ಣು ಕುಕೈತಿ 

ನಿನ್ನ ಗುಂಗ ಏರೈತಿ 

ಮನ್ಸು ಮಂಗ್ಯಾ ಆಗೈತಿ 

ನನ್ನ ತಲಿಯ  ಕೇಡಿಸೆತಿ 


ಏ ಹುಡುಗಿ 

ಏನ್ ಮಾವ 

ಚುಟು ಚುಟು 

ಎಲ್ಲಿ ?


ಚುಟು ಚುಟು ಅಂತೈತಿ ನನಗ 

ಚುಮು ಚುಮು ಆಗೈತಿ (೨)


ಉರ್ ಹಿಂದ ಬಾಳೆ ತೋಟ 

ಉರ್ ಮುಂದ ಖಾಲಿ ಸೈಟ 

ಇದಕೆಲ್ಲ ನಿನಾಗ ಒಡತಿ 

ಮತ್ಯಾಕ ಅನುಮಾನ ಪಡತಿ 


ಶೋಕಿಗೆ ಸಾಲ ಮಾಡಿ 

ತಂದೀದಿ ಬುಲ್ಲೆಟ್ ಗಾಡಿ 

ನನ್ನೊಡಿ ಡಬಲ್ ಹಾರ್ನ್ ಹೊಡಿತಿ 

ಊರಾಗ ನೀನೆಸ್ಟ್ ಮೆರಿತಿ 


ಊರಾಗ್ ನಂದೊಂದ್ ಲೆವೆಲ್ಲ ಐತಿ 

ದಾರ್ಯಾಗ್ ನಿಂತು ಯಾಕ ಬೈತಿ 


ಏಷ್ಟ ಕಾಡತಿ 

ಮಳ್ಳ ಮಾಡತಿ 

ಮನಸ್ಯಾಂಗ ತಡಿತೈತಿ.. 

 

ಮಾವ 

ಏನ ಹುಡುಗಿ 


ಚುಟು ಚುಟು ಅಂತೈತಿ ನನಗ 

ಚುಮು ಚುಮು ಆಗೈತಿ (೩)



Karunakara Nee Nembuvadyatako (ಕರುಣಾಕರ ನೀನೆಂಬುವದೇತಕೊ)

Bhaktigeete

Song link: Click Here


Karunakara nee nembuvadyatako

Baravase illenage

Pari pariyali nara janmavanittu

Tiru tirugisi mana karagisuvadake


Karidruva bali panchali ahalyeya

poredava bhavadalli neenante

Aritu vicharisi nodaladellavu

 Merevudeega kanthegalante..


Karunakara nee nembuvadyatako

Baravase illenage


Karunakara neenadare ee gati

Karapididennanu nee kayo

Sarasijakshane arasu neenadare

Durithagalennanu pidipudunte..


Karunakara nee nembuvadyatako

Baravase illenage


Maranakaladali ajamila golidu nee

Garudadwajanembo birudininda

Vara birudugalu uliyabekadare

Twaritadi salaho purandara vittala..

purandara vittala..

purandara vittala..


Karunakara nee nembuvadyatako

Baravase illenage


ಭಕ್ತಿಗೀತೆ 


ಕರುಣಾಕರ ನೀನೆಂಬುವದೇತಕೊ 

ಭರವಸೆಯಿಲ್ಲೆನಗೆ 

ಪರಿಪರಿಯಲಿ ನರ ಜನ್ಮವನಿತ್ತು 

ತಿರು ತಿರುಗಿಸಿ ಮನ ಕರಗಿಸುವುದಕೆ 


ಕರಿಧ್ರುವ ಬಲಿ ಪಾಂಚಾಲಿ ಅಹಲ್ಯೆಯ 

ಪೊರೆದವ ಭವದಲ್ಲಿ ನೀನಂತೆ 

ಅರಿತು ವಿಚಾರಿಸಿ ನೋಡಲದೆಲ್ಲವು 

ಮರೆವುದೀಗ ಕಂತೆಗಳಂತೆ ।।೧।।


ಕರುಣಾಕರ ನೀನಾದರೆ ಈ ಗತಿ 

ಕರಪಿಡಿದೆನ್ನನು ನೀ ಕಾಯೋ 

ಸರಸಿಜಾಕ್ಷನೆ ಅರಸು ನೀನಾದರೆ 

ದುರಿತಗಳೆನ್ನನು ಪೀಡಿಪುದುಂಟೆ ।।೨।।


ಮರಣಕಾಲದಲಿ ಅಜಮಿಳಗೊಲಿದು  ನೀ 

ಗರುಡಧ್ವಜನೆಂಬ ಬಿರುದಿನಿಂದ 

ವರಬಿರುದುಗಳು ಉಳಿಯಬೇಕಾದರೆ 

ತ್ವರಿತದಿ ಸಲಹೋ ಪುರಂದರ ವಿಠ್ಠಲ ।।೩।।



Monday, April 11, 2022

O Malenadina Maisiriye (ಓ ಮಲೆನಾಡಿನ ಮೈ ಸಿರಿಯೆ)



  • Movie: Chaitrada Premanjali (1992)
  • Singer: SPB, Chitra
  • Song link: Click Here

 

O malenadina maisiriye

Aa ravi jaariso hoo gariye

Nanneya aanege neenire sakshige

Needuve nanne na mecchida cheluvege


O malenadina maisiriye

Aa ravi jaariso hoo gariye

Nanneya aanege neenire sakshige

Needuve nanne na mecchida cheluvage


O malenadina maisiriye

Aa ravi jaariso hoo gariye


Ee gangeya aanege kaikodu

Pannirina manasali baredidu

Antara gange neenu nanna premake

Mantrada hoovu naanu ninna snehake

Mareyabedave..

O malenadina maisiriye

Aa ravi jaariso hoo gariye


Devara gudiyante, vedada nudiyante

Nadada aleyante premavu

Meghadha dhaniyante, varshada sharadante

Dharaniya hasirante premavu

Ee devara aanege kaikodu

Ee jyothiya kannali nenapidu

Aatmake savu illa,  endu torisu

Premake savu illa, endu preetisu

Mareyabedavo..


O malenadina maisiriye

Aa ravi jaariso hoo gariye

Nanneya aanege neenire sakshige

Needuve nanne na mecchida cheluvege


O malenadina maisiriye

Aa ravi jaariso hoo gariye

Nanneya aanege neenire sakshige

Needuve nanne na mecchida cheluvage


ಚಿತ್ರಗೀತೆ 


ಓ ಮಲೆನಾಡಿನ ಮೈ ಸಿರಿಯೆ  

ಆ ರವಿ ಜಾರಿಸೋ ಹೂ ಗರಿಯೆ 

ನನ್ನೆಯಾ ಆಣೆಗೆ ನೀನಿರೆ ಸಾಕ್ಷಿಗೆ 

ನೀಡುವೆ ನನ್ನೇ ನಾ 

ಮೆಚ್ಚಿದ ಚೆಲುವೆಗೆ  


ಓ ಮಲೆನಾಡಿನ ಮೈ ಸಿರಿಯೆ  

ಆ ರವಿ ಜಾರಿಸೋ ಹೂ ಗರಿಯೆ 

ನನ್ನೆಯಾ ಆಣೆಗೆ ನೀನಿರೆ ಸಾಕ್ಷಿಗೆ 

ನೀಡುವೆ ನನ್ನೇ ನಾ 

ಮೆಚ್ಚಿದ ಚೆಲುವಗೆ 


ಓ ಮಲೆನಾಡಿನ ಮೈ ಸಿರಿಯೆ  

ಆ ರವಿ ಜಾರಿಸೋ ಹೂ ಗರಿಯೆ 


ಈ ಗಂಗೆಯ ಆಣೆಗೆ ಕೈಕೊಡು 

ಪನ್ನೀರಿನ ಮನಸಲಿ ಬರೆದಿಡು 

ಅಂತರ ಗಂಗೆ ನೀನು ನನ್ನ ಪ್ರೇಮಕೆ 

ಮಂತ್ರದ ಹೂವು ನಾನು ನಿನ್ನ ಸ್ನೇಹಕೆ 

ಮರೆಯಬೇಡವೇ .. 

ಓ ಮಲೆನಾಡಿನ ಮೈ ಸಿರಿಯೆ  

ಆ ರವಿ ಜಾರಿಸೋ ಹೂ ಗರಿಯೆ 


ದೇವರ ಗುಡಿಯಂತೆ , ವೇದದ ನುಡಿಯಂತೆ 

ನಾದದ ಅಲೆಯಂತೆ ಪ್ರೇಮವೋ 

ಮೇಘದ ದನಿಯಂತೆ, ವರ್ಷದ ಶರದಂತೆ 

ಧರಣಿಯ ಹಸಿರಂತೆ ಪ್ರೇಮವೋ 


ಈ  ದೇವರ ಆಣೆಗೆ ಕೈಕೊಡು 

ಈ ಜ್ಯೋತಿಯ ಕಣ್ಣಲಿ ನೆನಪಿಡು 

ಆತ್ಮಕ್ಕೆ ಸಾವು ಇಲ್ಲ ಎಂದು ತೋರಿಸು 

ಪ್ರೇಮಕ್ಕೆ ಸಾವು ಇಲ್ಲ ಎಂದು ಪ್ರೀತಿಸು 

ಮರೆಯಬೇಡವೋ .. 


ಓ ಮಲೆನಾಡಿನ ಮೈ ಸಿರಿಯೆ  

ಆ ರವಿ ಜಾರಿಸೋ ಹೂ ಗರಿಯೆ 

ನನ್ನೆಯಾ ಆಣೆಗೆ ನೀನಿರೆ ಸಾಕ್ಷಿಗೆ 

ನೀಡುವೆ ನನ್ನೇ ನಾ 

ಮೆಚ್ಚಿದ ಚೆಲುವೆಗೆ  


ಓ ಮಲೆನಾಡಿನ ಮೈ ಸಿರಿಯೆ  

ಆ ರವಿ ಜಾರಿಸೋ ಹೂ ಗರಿಯೆ 

ನನ್ನೆಯಾ ಆಣೆಗೆ ನೀನಿರೆ ಸಾಕ್ಷಿಗೆ 

ನೀಡುವೆ ನನ್ನೇ ನಾ 

ಮೆಚ್ಚಿದ ಚೆಲುವಗೆ