Tatvapada
Sishunala Shariefa Sahebara Geetegalu
Song link: Click Here
Gudiya nodiranna - dehada
Gudiya nodiranna |
Gudiya nodiridu
Podavige odeyanu
Adagikondu kadubedaginolirutiha
Gudiya nodiranna ||
Mooru mooliya kallu - adanu
Eri koota dollu
Dheera nirgunana sara sagunadali
Tori adagi ta byaragirutiha
Gudiya nodiranna ||1||
Aaru mooru katti - melake
Eridavane ghatti
Bheri kahali shankha bhari sunadadi
Meeridananda tori holeyutiha
Gudiya nodiranna ||2||
Saagutihavu divasa - sevisi
Tegi holigi payasa
Yogiraja sishunaladheesha ta -
Nagi paratpara brahmaroopaniha
Gudiya nodiranna ||3||
ತತ್ವಪದ
ಗುಡಿಯ ನೋಡಿರಣ್ಣ - ದೇಹದ
ಗುಡಿಯ ನೋಡಿರಣ್ಣ।
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣ।।
ಮೂರು ಮೂಲಿಯ ಕಲ್ಲು - ಅದನು
ಏರಿ ಕೂತ ಡೊಳ್ಳು
ಧೀರ ನಿರ್ಗುಣನ ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರಾಗಿರುತಿಹ
ಗುಡಿಯ ನೋಡಿರಣ್ಣ।।೧।।
ಆರು ಮೂರು ಕಟ್ಟಿ - ಮೇಲಕೆ
ಏರಿದವನೆ ಘಟ್ಟಿ
ಭೇರಿ ಕಹಳಿ ಶಂಖ ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣ।।೨।।
ಸಾಗುತಿಹವು ದಿವಸ - ಸೇವಿಸಿ
ತೇಗಿ ಹೋಳಿಗಿ ಪಾಯಸ
ಯೋಗಿರಾಜ ಶಿಶುನಾಳಾಧೀಶ ತಾ -
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣ।।೩।।

No comments:
Post a Comment