Thursday, March 26, 2026

Nayanadali Doreyiralu (ನಯನದಲಿ ದೊರೆಯಿರಲು)

Movie: Kitturu Chennamma (1962)

Singer: P Susheela

Song link: Click Here


Nayanadali doreyiralu yaara kanali,

Edurinali neeniralu yaara kelali ||


Mohadali mai maretu nintu paadale, aa..aa,

Hanijena haalage haki needale,

Ennavale baa enade naane hogale,

Idu sariye jothegati helu baarele ||


Kannadada kadugaliya veera kankana, aa..aa,

Ninnodala ennodeya enno ee kshana,

Hasureleya chigurinali maadu torana,

Manavolida varanivane aada karana ||


ಚಿತ್ರಗೀತೆ 


ನಯನದಲಿ ದೊರೆಯಿರಲು ಯಾರ ಕಾಣಲಿ,

ಎದುರಿನಲಿ ನೀನಿರಲು ಯಾರ ಕೇಳಲಿ ।।ಪ।।


ಮೋಹದಲಿ ಮೈ ಮರೆತು ನಿಂತು ಪಾಡಲೆ, ಆ ..ಆ,

ಹನಿಜೇನ ಹಾಲಗೆ ಹಾಕಿ ನೀಡಲೆ, 

ಎನ್ನವಳೆ  ಬಾ ಎನದೆ ನಾನೇ ಹೋಗಲೆ,

ಇದು ಸರಿಯೇ ಜೊತೆಗಾತಿ ಹೇಳು ಬಾರೆಲೆ ।।೧।।


ಕನ್ನಡದ ಕಡುಗಲಿಯ ವೀರ ಕಂಕಣ, ಆ ..ಆ,

ನಿನ್ನೊಡಲ ಎನ್ನೊಡಯ ಎನ್ನೊ ಈ ಕ್ಷಣ,

ಹಸುರೆಲೆಯ ಚಿಗುರಿನಲಿ ಮಾಡು ತೋರಣ.

ಮನವೊಲಿದ ವರನಿವನೆ ಆದ ಕಾರಣ ।।೨।।

  

No comments:

Post a Comment