Thursday, February 16, 2023

Deepadinda Deepava Hacchabeku Manava (ದೀಪದಿಂದ ದೀಪವ ಹಚ್ಚಬೇಕು ಮಾನವ)

Movie: Nanjundi (2003)

Singers: Madhubalakrishna, Nandita

Song link: Click Here


Deepadinda deepava hacchabeku manava

Preetiyinda preeti hanchiro..


Deepadinda deepava hacchabeku manava

Preetiyinda preeti hanchalu 

Manasininda manasanu belagabeku manava

Melu keelu bheda nillalu

Bedhavilla benkige dweshavilla belakige

Nee tiliyo,  nee tiliyo 


Aase hinde dukha endaru

Ratri hinde hagalu endaru

Dweshavendu hore endaru

Habbavadake hegalu endaru

Eradu mukhada namma janumada, veshavali

Tegedu halbelaka kudivude, deepavali ||1||


Mannininda hanateyadare

Beejadinda enneyayitu

Araleyinda battiyadare

Suduva benki jyothiyayitu

Nambisuvudu tumba sulabhavo, he manava

Ha nambisuvudu tumba katinavo, he danava ||2||


ಚಿತ್ರಗೀತೆ 


ದೀಪದಿಂದ ದೀಪವ ಹಚ್ಚಬೇಕು ಮಾನವ 

ಪ್ರೀತಿಯಿಂದ ಪ್ರೀತಿ ಹಂಚಿರೋ .. 


ದೀಪದಿಂದ ದೀಪವ ಹಚ್ಚಬೇಕು ಮಾನವ 

ಪ್ರೀತಿಯಿಂದ ಪ್ರೀತಿ ಹಂಚಲೂ 

ಮನಸಿನಿಂದ ಮನಸನು ಬೆಳಗಬೇಕು ಮಾನವ 

ಮೇಲು ಕೀಳು ಬೇಧ ನಿಲ್ಲಲೂ 

ಬೇಧವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ 

ನೀ ತಿಳಿಯೋ , ನೀ ತಿಳಿಯೋ ।।ಪ।।


ಆಸೆ ಹಿಂದೆ ದುಃಖ ಎಂದರೂ 

ರಾತ್ರಿ ಹಿಂದೆ ಹಗಲು ಎಂದರೂ 

ದ್ವೇಷವೆಂದು ಹೊರೆ ಎಂದರೂ 

ಹಬ್ಬವದಕೆ ಹೆಗಲು ಎಂದರೂ 

ಎರಡು ಮುಖದ ನಮ್ಮ ಜನುಮದ, ವೇಷಾವಳಿ 

ತೆಗೆದು ಹಾಲ್ಬೆಳಕ ಕುಡಿವುದೆ, ದೀಪಾವಳಿ ।।೧।।


ಮಣ್ಣಿನಿಂದ ಹಣತೆಯಾದರೇ 

ಬೀಜದಿಂದ ಎಣ್ಣೆಯಾಯಿತು 

ಅರಳೆಯಿಂದ ಬತ್ತಿಯಾದರೇ 

ಸುಡುವ ಬೆಂಕಿ ಜ್ಯೋತಿಯಾಯಿತು 

ನಂಬಿಸುವುದು ತುಂಬ ಸುಲಭವೋ, ಹೇ ಮಾನವ 

ಹಾ ನಂಬಿಸುವುದು ತುಂಬ ಕಠಿಣವೊ, ಹೇ ದಾನವ ।।೨।।







No comments:

Post a Comment