Saturday, July 2, 2022

Tere Liye Hum Hein Jiye

Movie: Veer - Zaara (2004)
Singers: Lata Mangeshkar, Roop Kumar Rathod
Song link: Click Here



Tere liye hum hein jiye

Hothon ko siye

Tere liye hum hein jiye

Har aansu piye


Dil mein magar jalte rahe

Chahat ke diye

Tere liye, tere liye 


Tere liye hum hein jiye

Har aansu piye

Tere liye hum hein jiye

Hothon ko siye


Dil mein magar jalte rahe

Chahat ke diye

Tere liye, tere liye 


Zindagi leke aayi hae

Beethe dinoo ki kitab

Ghere hein ab hamein

Yaadein be-hisab

Bin puche mile mujhe

Kitne saare jawab

Chaha tha kya, paya hae kya

Hum ne dekhiye


Dil mein magar jalte rahe

Chahat ke diye

Tere liye, tere liye


Kya kahun duniya ne kiya

Mujh se kaisa bair

Hukm tha, mein jiyun

Lekin tere baghair

Nadaan hai woh, kehte hein jo

Mere liye tum ho ghair

Kitne sitam humpe sanam

Logon ne kiye


Dil mein magar jalte rahe

Chaahat ke diye

Tere liye, tere liye


Tere liye hum hein jiye

Hothon ko siye

Tere liye hum hein jiye

Har aansu piye


Dil mein magar jalte rahe

Chaahat ke diye

Tere liye, tere liye

Tere liye, tere liye

Tere liye, tere liye..



Friday, July 1, 2022

Nanu Badavi Aata Badava (ನಾನು ಬಡವಿ ಆತ ಬಡವ)

Bhavageete

                                          Sahitya: Da Ra Bendre

                                          Singer: Kasturi Shankar

                                           Song link: Click Here


Nanu badavi aata badava

Olave namma baduku

Balasikondevadane navu

Adaku idaku edako ||


Hattirirali dooravirali

Avane rangasale (2)

Kannu kattuvantha murthy

Kivige mecchinole ||


Aata kotta vastu odave

Nanage avage gottu (2)

Tolugalige tolabandi

Kenne tumba muttu ||


Kundu korate toralilla

Beku hecchigenu? (2)

Hottegitha jeeva phalava

Tutige halu jenu ||


ಭಾವಗೀತೆ 


ನಾನು ಬಡವಿ ಆತ ಬಡವ 

ಒಲವೆ ನಮ್ಮ ಬದುಕು 

ಬಳಸಿಕೊಂಡೆವದನೆ ನಾವು 

ಅದಕು ಇದಕು ಎದಕೋ ।।ಪ।।


ಹತ್ತಿರಿರಲಿ ದೂರವಿರಲಿ 

ಅವನೆ ರಂಗಸಾಲೆ (೨)

ಕಣ್ಣು ಕಟ್ಟುವಂಥ ಮೂರ್ತಿ 

ಕಿವಿಗೆ ಮೆಚ್ಚಿನೋಲೆ ।।೧।।


ಆತ ಕೊಟ್ಟ ವಸ್ತು ಒಡವೆ 

ನನಗೆ ಅವಗೆ ಗೊತ್ತು (೨)

ತೋಳುಗಳಿಗೆ ತೋಳ ಬಂದಿ 

ಕೆನ್ನೆ ತುಂಬ ಮುತ್ತು ।।೨।।


ಕುಂದು ಕೊರತೆ ತೋರಲಿಲ್ಲ 

ಬೇಕು ಹೆಚ್ಚಿಗೇನು ? (೨)

ಹೊಟ್ಟೆಗಿತ್ತ ಜೀವ ಫಲವ 

ತುಟಿಗೆ ಹಾಲು ಜೇನು ।।೩।।



Thursday, June 30, 2022

Hasiru Gajina Balegale (ಹಸಿರು ಗಾಜಿನ ಬಳೆಗಳೆ)

 Movie: Avane Nanna Ganda (1989)

Singer: Latha Hamsalekha

Song link: Click Here

Ni Sa Ga Ma Pa, Ga Ma Pa Ga Re Ni (2)

Ni Sa Ga Ma Pa Ni Pa Da ..aa aa 


Hasiru gajina balegale, stri kulada shuba swaragale

Ee kaigalige shringarave, nee gallendare sangeetave

Nillada gaana nimmadamma (2) ||


Tottilina kusige dristi idu tane 

Modaveya vayasige odave idu tane

Kamana billigu idara sati nilladu

Rushigala samyama idara munde nilladu

Stri kulada soubhagyave ninna roopavu

Oo oo  oo oo, la la la la, hasiru gajina balegale ||


Ruthugala jotheyali baduku nadevaga

Badukina neralali hennu nadevaga

Premada pranayada naduve ninna naguvide

Savina novina naduve ninna aluvide

Stri kulada soubhagyave ninna roopavu

Oo oo  oo oo, la la la la, hasiru gajina balegale ||



ಚಿತ್ರಗೀತೆ
 

ನಿ  ಸ  ಗ  ಮ  ಪ, ಗ  ಮ  ಪ  ಗ  ರಿ  ನಿ (೨)

ನಿ  ಸ  ಗ  ಮ  ಪ  ನಿ  ಪ  ದಾ   ಆ..   ಆ..   


ಹಸಿರು ಗಾಜಿನ ಬಳೆಗಳೆ, ಸ್ತ್ರೀ ಕುಲದ ಶುಭ ಸ್ವರಗಳೆ 

ಈ ಕೈಗಳಿಗೆ ಶೃಂಗಾರವೆ, ನೀ ಘಲ್ಲೆಂದರೆ ಸಂಗೀತವೆ 

ನಿಲ್ಲದ ಗಾನ ನಿಮ್ಮದಮ್ಮಾ  (೨) ।।ಪ।।


ತೊಟ್ಟಿಲಿನಾ  ಕೂಸಿಗೆ ದೃಷ್ಟಿ ಇದು ತಾನೇ
 
ಮೊಡವೆಯ ವಯಸ್ಸಿಗೆ ಒಡವೆ ಇದು ತಾನೇ

ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
 
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು 

ಸ್ತ್ರೀ ಕುಲದ ಸೌಭಾಗ್ಯವೇ ನಿನ್ನ ರೂಪವೂ 

 ಓ ಓ ಓ ಓ ಓ ಲ ಲ ಲ ಲಾ  ಹಸಿರು ಗಾಜಿನ ಬಳೆಗಳೆ।।೧।।


ಋತುಗಳಾ ಜೊತೆಯಲಿ ಬದುಕು ನಡೆವಾಗ 

ಬದುಕಿನ ನೆರಳಲಿ ಹೆಣ್ಣು ನಡೆವಾಗ 

ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ 

ಸಾವಿನ ನೋವಿನ ನಡುವೆ ನಿನ್ನಅಳುವಿದೆ 

ಸ್ತ್ರೀ ಕುಲದ ಸೌಭಾಗ್ಯವೇ ನಿನ್ನ ರೂಪವೂ 

ಓ ಓ ಓ ಓ ಓ ಲ ಲ ಲ ಲಾ  ಹಸಿರು ಗಾಜಿನ ಬಳೆಗಳೆ ।।೨।।

                                    

Wednesday, June 29, 2022

Onde Onde Onde Karnataka Onde (ಒಂದೇ ಒಂದೇ ಒಂದೇ ಕರ್ನಾಟಕ ಒಂದೇ)

 Nadageete

Sahitya: Da Ra Bendre

Song link: Click Here



Onde onde onde karnataka onde

Hinde munde ende karnataka onde ||


Jagadeligeyaguvudide karnatakadinde

Illiya jana mana bhasheyu kannadavadu onde

Onde janavu manavu kannadigaru ende

Kulaonde stalaonde neetiya neleyonde

Heegennada heravaru

Avariddaru onde iradiddaru onde

Kannadavendu oppadu karnataka ninde ||


Kannada mate mateyu, karnataka onde

Adu daivata adu jeevita opphevaduvende

Nammadu nimmadu avaradu ee asti pasti

Nadina tayige seride, bereya mane nasti

Kannada kayakadallilavo kammi jasti

Idanoppada heravaru

Avariddaru onde iradiddaru onde

Karnataka hita-vihitavu kannada kuladinde ||


Kannadavu bharatavu jagavellavu onde

Tumbide kannada kulavannu oppuva kuladinde

Intariyada heravaru

Avariddaru onde iradiddaru onde

Uggadisiri nastige 

Jaya jaya jaya vende ||


ನಾಡಗೀತೆ 


ಒಂದೇ ಒಂದೇ ಒಂದೇ ಕರ್ನಾಟಕ ಒಂದೇ 

ಹಿಂದೆ ಮುಂದೆ ಎಂದೇ ಕರ್ನಾಟಕ ಒಂದೇ ।।ಪ ।।


ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ 

ಇಲ್ಲಿಯ ಜನಮನ ಭಾಷೆಯು ಕನ್ನಡವದು ಒಂದೇ 

ಒಂದೇ ಜನವೂ ಮನವೂ ಕನ್ನಡಿಗರು ಎಂದೇ 

ಕುಲವೊಂದೇ ಸ್ಥಳವೊಂದೇ ನೀತಿಯ ನೆಲೆಯೊಂದೇ 

ಹೀಗೆನ್ನದ ಹೆರವರು 

ಅವರಿದ್ದರು ಒಂದೇ ಇರದಿದ್ದರೂ ಒಂದೇ 

ಕನ್ನಡವೆಂದೂ ಒಪ್ಪದು ಕರ್ನಾಟಕ ನಿಂದೆ ।।೧।।


ಕನ್ನಡ ಮಾತೆ ಮಾತೆಯು, ಕರ್ನಾಟಕ ಒಂದೇ 

ಅದು ದೈವತ ಅದು ಜೀವಿತ ಒಪ್ಪಿಹೆವದುವೆ೦ದೇ 

ನಮ್ಮದು ನಿಮ್ಮದು ಅವರದು ಈ ಅಸ್ತಿ ಪಾಸ್ತಿ 

ನಾಡಿನ ತಾಯಿಗೆ ಸೇರಿದೆ, ಬೇರೆಯ ಮನೆ ನಾಸ್ತಿ 

ಕನ್ನಡ ಕಾಯಕದಲ್ಲಿಲವೋ ಕಮ್ಮಿ ಜಾಸ್ತಿ 

ಇದನೊಪ್ಪದ ಹೆರವರು 

ಅವರಿದ್ದರು ಒಂದೇ ಇರದಿದ್ದರೂ ಒಂದೇ 

ಕರ್ನಾಟಕ ಹಿತ ವಿಹಿತವು ಕನ್ನಡ ಕುಲದಿಂದೆ ।।೨।।


ಕನ್ನಡವು ಭಾರತವು ಜಗವೆಲ್ಲವು ಒಂದೇ 

ತುಂಬಿದೆ ಕನ್ನಡ ಕುಲವನ್ನು ಒಪ್ಪುವ  ಕುಲದಿಂದೆ  

ಇಂತರಿಯದ ಹೆರವರು 

ಅವರಿದ್ದರು ಒಂದೇ ಇರದಿದ್ದರೂ ಒಂದೇ 

ಉಗ್ಗಡಿಸಿರಿ ನಾಸ್ತಿಗೆ 

ಜಯ ಜಯ ಜಯವೆಂದೇ ।।೩।।



Tuesday, June 28, 2022

Barisu Kannada Dimdimava (ಬಾರಿಸು ಕನ್ನಡ ಡಿ೦ಡಿಮವ)




Nadageete

Sahitya: Kuvempu

Song link: Click Here


Barisu kannada dimdimava

O karnataka hrudaya shiva ||


Sattantiharanu badideccharisu

Kacchaduvaranu kudisi olisu

Hotteya kicchige kaneer surisu

Ottige baluva teradali harasu ||


Kshayise shivetara kriti kritiyalli

Moodali mangala mati matiyalli

Kavi rushi santara aadarshadalli

Sarvodayavagali sarvarali ||


ನಾಡಗೀತೆ 


ಬಾರಿಸು ಕನ್ನಡ ಡಿ೦ಡಿಮವ 

ಓ ಕರ್ನಾಟಕ ಹೃದಯ ಶಿವ ।।ಪ ।।


ಸತ್ತಂತಿಹರನು ಬಡಿದೆಚ್ಚರಿಸು 

ಕಚ್ಚಾಡುವರನು ಕೂಡಿಸಿ ಒಲಿಸು 

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು 

ಒಟ್ಟಿಗೆ ಬಾಳುವ ತೆರದಲಿ ಹರಸು ।।೧।।


ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ 

ಮೂಡಲಿ ಮಂಗಳ ಮತಿ ಮತಿಯಲ್ಲಿ 

ಕವಿ ಋಷಿ ಸಂತರ ಆದರ್ಶದಲಿ 

ಸರ್ವೋದಯವಾಗಲಿ ಸರ್ವರಲಿ  ।।೨।।



Sunday, June 26, 2022

Hindilla Swami Mundilla (ಹಿಂದಿಲ್ಲ ಸ್ವಾಮಿ ಮುಂದಿಲ್ಲ)

Bhaktigeete

Purandara Dasara Keerthanegalu

Song link: Click Here


Raga: Pantuvarali

TalaAtatala


Hindilla swami mundilla

Govinda neenallade iha paravilla


Parara bedippante gatiyayitalla

Narara tutisi nalige baradayitalla

Paravilla ihavilla narajanma stiravalla

Narage pamarage papada panjarage   ||


Tanuvu tannadalla tannavar tanagilla

Anukulaviruvaga sati sutarella

Anuvu tappi mana tallanisuvaga

Vanaja nabha neenillade yarilla   ||


Matapitru bandhugalu muntagi

Sampreetiyoliralu manniparai ella

Kataranag yama kondoiyyuvaga

Samgata inyarayya purandara vittala   ||       sri


ಭಕ್ತಿಗೀತೆ 


ಹಿಂದಿಲ್ಲ ಸ್ವಾಮಿ ಮುಂದಿಲ್ಲ 

ಗೋವಿಂದ ನೀನಲ್ಲದೆ ಇಹ ಪರವಿಲ್ಲ ।।ಪ ।।


ಪರರ ಬೀಡಿಪ್ಪಂತೆ ಗತಿಯಾಯಿತಲ್ಲ 

ನರರ ತುತಿಸಿ ನಾಲಿಗೆ ಬರಡಾಯಿತಲ್ಲ 

ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ 

ನರಗೆ ಪಾಮರಗೆ ಪಾಪದ ಪಂಜರಗೆ ।।೧।।


ತನುವು ತನ್ನದಲ್ಲ ತನ್ನವರ್ ತನಗಿಲ್ಲ 

ಅನುಕೂಲ ವಿರುವಾಗ ಸತಿಸುತರೆಲ್ಲ 

ಅನುವು ತಪ್ಪಿ ಮನ ತಲ್ಲಣಿಸುವಾಗ 

ವನಜ ನಾಭ ನೀನಿಲ್ಲದೆ ಯಾರಿಲ್ಲ ।।೨।।


ಮಾತಾಪಿತೃ ಬಂಧುಗಳು ಮುಂತಾಗಿ 

ಸಂಪ್ರೀತಿಯೊಳಿರಲು ಮನ್ನಿಪರೈ ಎಲ್ಲ 

ಕಾತರನಾಗ್ ಯಮ ಕೊಂಡೊಯ್ಯುವಾಗ 

ಸಂಗಾತ ಇನ್ಯಾರೈಯ್ಯ ಪುರಂದರ ವಿಠ್ಠಲ ।।೩।।                   ಶ್ರೀ 



Saturday, June 25, 2022

Namamma Sharade (ನಮ್ಮಮ್ಮ ಶಾರದೆ)

Bhaktigeete

Kanakadasara Padagalu

Song link: https:Click Here


Namamma sharade

Uma maheshwari

Nimmolagihanyaramma

Kammagolana vairi sutanada sondila

Hemmeya gananathane  ammayya


Mo re kappina bhava moradagalada kivi

Kore dadiganyaramma

Muru kannana suta muridditta chandrana

Deera ta gananathane  ammayya


Utta dattiyu bigidutta challanada

Ditta tanivanyaramma

Pattada rani parvathiya kumarane

Hotteya gananathane   ammayya


Rashi vidyeya balla ramani hambalanolla

Bashiga nivanyaramma

Lesagi janara salahuva kagi neleyadi

Keshava dasa kane   ammayya


ಭಕ್ತಿಗೀತೆ 


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ 

ನಿಮ್ಮೊಳಗಿಹನ್ಯಾರಮ್ಮ 

ಕಮ್ಮಗೋಲನ ವೈರಿ ಸುತನಾದ ಸೊಂಡಿಲ 

ಹೆಮ್ಮೆಯ ಗಣನಾಥನೆೇ, ಅಮ್ಮಯ್ಯ ।।ಪ ।।


ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ 

ಕೋರೆ ಡಾಡಿಗನ್ಯಾರಮ್ಮ 

ಮೂರು ಕಣ್ಣನ  ಸುತ ಮುರಿದಿಟ್ಟ ಚಂದ್ರನ 

ಧೀರ ತಾ ಗಣನಾಥನೇ, ಅಮ್ಮಯ್ಯ ।।೧।।


ಉಟ್ಟ ದಟ್ಟಿಯು  ಬಿಗಿದುಟ್ಟ ಚಲ್ಲಣದ 

ದಿಟ್ಟ ತಾನಿವನ್ಯಾರಮ್ಮ 

ಪಟ್ಟದ ರಾಣಿ ಪಾರ್ವತಿಯಾ ಕುಮಾರನೆ 

ಹೊಟ್ಟೆಯ ಗಣನಾಥನೇ, ಅಮ್ಮಯ್ಯ।।೨।। 


ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ 

ಭಾಷಿಗ ನಿವನ್ಯಾರಮ್ಮ 

ಲೇಸಾಗಿ ಜನರ ಸಲುಹುವ ಕಾಗಿ ನೆಲೆಯಾದಿ 

ಕೇಶವ ದಾಸ ಕಣೀ,  ಅಮ್ಮಯ್ಯ ।।೪।।