Tuesday, March 31, 2026

Tagarina Dhikki (ಟಗರಿನ ಢಿಕ್ಕಿ)

 ಪದ್ಯ 

ಸಾಹಿತ್ಯ : ಜಿ ಪಿ ರಾಜರತ್ನಂ  


ಮೈಯಿಗೆ ಮೈಯ ಮೆಟ್ಟಿ 

ಅಲ್ಲಿ ಇಲ್ಲಿ ಸುತ್ತಿ 

ಎರಡು ಟಗರು ಹತ್ತಿ 

ಸೇರಿತು ಬೆಟ್ಟದ ನೆತ್ತಿ.


ಬೆಟ್ಟದಲೊಂದು ಉಪ್ಪು 

ರುಚಿಯ ದಂಟು ಸೊಪ್ಪು 

ಸಿಕ್ಕಲು ಮುಖವನು ಕಪ್ಪು 

ಮಾಡಿದುವೆರಡೂ ಬೆಪ್ಪು !


ಸಿಕ್ಕಿದ ಸೊಪ್ಪು ಮುಕ್ಕಿ 

ಕೊಂಬಿಗೆ ಕೊಂಬು ತಿಕ್ಕಿ 

ಢೀ ಢೀ ಢೀ ಢೀ ಢಿಕ್ಕಿ !

ಬಿತ್ತು ರಕ್ತ ಕಕ್ಕಿ !


Padya


Maiyige maiya metti

Alli illi sutti

Eradu tagaru hatti

Seritu bettada netti.


Bettadalondu uppu

Ruchiya dantu soppu

Sikkalu mukhavanu kappu

Madiduveradu beppu!


Sikkida soppu mukki

Kombige kombu tikki

Dhee dhee dhee dhee dikki!

Bittu rakta kakki!

Sunday, March 29, 2026

Raghavendra Raghavendra (ರಾಘವೇಂದ್ರ ರಾಘವೇಂದ್ರ)

Bhaktigeete

Singer: Dr. Rajkumar

Song link: Click Here


Raghavendra raghavendra raghavendra enniri,

Naama smaraneyinda nijaanandavannu hondiri ||


Tande taayi, bandhu balaga, ella neene enniri,

Naanu emba moha maretu, endu avana nambiri,

Hege irali, elle irali, avana smarane maadiri,

Dhyanadinda manava suduva, chinte dura madiri ||


Maana prana dhanavu ella, swami ninnadenniri,

Guruve ninna karuneyonde, saaku nanage enniri,

Kallo mullo, sidilo maleyo, avana karune enniri,

Ene barali avanadendu, nambi munde nadeyiri ||


Nimma maneya nimma manada, vishayavella ballanu,

Chapaladinda aleva manadalendu, guruvu nillanu,

Koduvudella koduvanavanu, innu aase etake,

Kalpavrukshadante guruvu iralu, chinte etake ||


Pujyaya raghavendraya, satyadharma ratayacha,

Bhajatam kalpavrukshaya, namatam kamadhenuve ||


ಭಕ್ತಿಗೀತೆ 


ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ,

ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ ।।ಪ।।


ತಂದೆ ತಾಯಿ, ಬಂಧು ಬಳಗ, ಎಲ್ಲ ನೀನೇ ಎನ್ನಿರಿ, 

ನಾನು ಎಂಬ ಮೋಹ ಮರೆತು, ಎಂದೂ ಅವನ ನಂಬಿರಿ,

ಹೇಗೆ ಇರಲಿ, ಎಲ್ಲೆ ಇರಲಿ ಅವನ ಸ್ಮರಣೆ ಮಾಡಿರಿ,

ಧ್ಯಾನದಿಂದ ಮನವ ಸುಡುವ, ಚಿಂತೆ ದೂರ ಮಾಡಿರಿ ।।೧।।


ಮಾನ ಪ್ರಾಣ ಧನವು ಎಲ್ಲ, ಸ್ವಾಮಿ ನಿನ್ನದೆನ್ನಿರಿ,

ಗುರುವೆ ನಿನ್ನ ಕರುಣೆಯೊಂದೆ, ಸಾಕು ನನಗೆ ಎನ್ನಿರಿ,

ಕಲ್ಲೋ ಮುಳ್ಳೊ, ಸಿಡಿಲೋ ಮಳೆಯೋ, ಅವನ ಕರುಣೆ ಎನ್ನಿರಿ,

ಏನೇ ಬರಲಿ ಅವನದೆಂದು, ನಂಬಿ ಮುಂದೆ ನಡೆಯಿರಿ ।।೨।।


ನಿಮ್ಮ ಮನೆಯ ನಿಮ್ಮ ಮನದ, ವಿಷಯವೆಲ್ಲ ಬಲ್ಲನು,

ಚಪಲದಿಂದ ಅಲೆವ ಮನದಲೆಂದು, ಗುರುವು ನಿಲ್ಲನು,

ಕೊಡುವುದೆಲ್ಲ ಕೊಡುವನವನು, ಇನ್ನು ಆಸೆ ಏತಕೆ,

ಕಲ್ಪವೃಕ್ಷದಂತೆ ಗುರುವು ಇರಲು, ಚಿಂತೆ ಏತಕೆ ।।೩।।


ಪೂಜ್ಯಾಯ ರಾಘವೇಂದ್ರಾಯ, ಸತ್ಯಧರ್ಮ ರತಾಯಚ,

ಭಜತಾಂ ಕಲ್ಪವೃಕ್ಷಾಯ, ನಮತಾಂ ಕಮಧೇನುವೇ ।।

   

Haadu Kogile Nalidaadu Kogile (ಹಾಡು ಕೋಗಿಲೆ ನಲಿದಾಡು ಕೋಗಿಲೆ)

Bhaktigeete

Singer: Dr. Rajkumar

Song link: Click Here


Haadu kogile, nalidaadu kogile,

Raghavendra raghavendra,  raghavendra  raghavendra,

Endu haadu eegale ||


Hariva nadiya kalaravadali, ninna daniyu serali,

Gaaliyodane teli hogi, dura dura saagali,

Elli tirugalalli ninna, madhura gaana kelali ||


Madhuvanarasi hogutiruva, dumbigalu kelali,

Hrudaya tumbi banda danige, tamma shrutiya beresali,

Kusuma kusumadallu avana, naama tumbi hogali ||


Ninna daniya saviya keli, jeevarashi naliyali,

Ella maretu ninna swarake, korala beresi haadali,

Raghavendranemba dhyana, jagavanella kunisali ||


ಭಕ್ತಿಗೀತೆ 


ಹಾಡು ಕೋಗಿಲೆ, ನಲಿದಾಡು ಕೋಗಿಲೆ,

ರಾಘವೇಂದ್ರ ರಾಘವೇಂದ್ರ, ರಾಘವೇಂದ್ರ ರಾಘವೇಂದ್ರ,

ಎಂದು ಹಾಡು ಈಗಲೇ ।।ಪ।।


ಹರಿವ ನದಿಯ ಕಲರವದಲಿ, ನಿನ್ನ ದನಿಯು ಸೇರಲಿ,

ಗಾಳಿಯೊಡನೆ ತೇಲಿ ಹೋಗಿ, ದೂರ ದೂರ ಸಾಗಲಿ,

ಎಲ್ಲಿ ತಿರುಗಲಲ್ಲಿ ನಿನ್ನ, ಮಧುರ ಗಾನ ಕೇಳಲಿ ।।೧।।


ಮಧುವನರಸಿ ಹೋಗುತಿರುವ, ದುಂಬಿಗಳು ಕೇಳಲಿ,

ಹೃದಯತುಂಬಿ ಬಂದ ದನಿಗೆ, ತಮ್ಮ ಶೃತಿಯ ಬೆರೆಸಲಿ,

ಕುಸುಮ ಕುಸುಮದಲ್ಲೂ ಅವನ, ನಾಮ ತುಂಬಿ ಹೋಗಲಿ

 ।।೨।।


ನಿನ್ನ ದನಿಯ ಸವಿಯ ಕೇಳಿ, ಜೀವರಾಶಿ ನಲಿಯಲಿ,

ಎಲ್ಲ ಮರೆತು ನಿನ್ನ ಸ್ವರಕೆ, ಕೊರಳ ಬೆರೆಸಿ ಹಾಡಲಿ,

ರಾಘವೇಂದ್ರ ನೆಂಬ ಧ್ಯಾನ, ಜಗವನೆಲ್ಲ ಕುಣಿಸಲೀ ।।೩।।

 

Madhura Madhuravee Mannjula Gaana (ಮಧುರ ಮಧುರವೀ ಮಂಜುಳ ಗಾನ)

Movie: Sati Sukanya (1967)

Singers: P B Srinivas, B K Sumitra

Song link: Click Here


Madhura madhuravee manjula gaana,

Hrudaya tanisuvaa hosa taana,

Madhura madhuravee manjula gaana ||


Siri sambhrama swara beresiha gaaliya,

Parimala swagata priya prana, aa..aa,

Paravasha bhavada raagava tori,

Pulukitagoliside manaveena ||


Tumbida youvvana bimbada kantiya,

Tandihe kaadide suma baana,

Dumbiya notada kaatara kandu,

Ambara needide madhupaana ||


Ee nava ruthuve mohamaya,

Kaanuva cheluve kale nilaya,

Aa..pavana bhogada premaadarave,

Jeevana yogada ee sudina ||


ಚಿತ್ರಗೀತೆ 


ಮಧುರ ಮಧುರವೀ ಮಂಜುಳ ಗಾನ,

ಹೃದಯ ತಣಿಸುವಾ ಹೊಸ ತಾನ,

ಮಧುರ ಮಧುರವೀ ಮಂಜುಳ ಗಾನ ।।ಪ।।


ಸಿರಿ ಸಂಭ್ರಮ ಸ್ವರ ಬೆರೆಸಿಹ ಗಾಳಿಯ,

ಪರಿಮಳ ಸ್ವಾಗತ ಪ್ರಿಯ ಪ್ರಾಣ, ಆ ..ಆ,

ಪರವಶ ಭಾವದ ರಾಗವಾ ತೋರಿ,

ಪುಳುಕಿತಗೊಳಿಸಿದೆ ಮನವೀಣಾ ।।೧।।


ತುಂಬಿದ ಯೌವ್ವನ ಬಿಂಬದ ಕಾಂತಿಯ,

ತಂದಿಹೆ ಕಾದಿದೆ ಸುಮ ಬಾಣಾ,

ದುಂಬಿಯ ನೋಟದ ಕಾತರ ಕಂಡು,

ಅಂಬರ ನೀಡಿದೆ ಮಧು ಪಾನ ।।೨।।


ಈ ನವ ಋತುವೇ ಮೋಹಮಯ,

ಕಾಣುವ ಚೆಲುವೇ ಕಲೆ ನಿಲಯ,

ಆ .. ಪಾವನ ಭೋಗದ ಪ್ರೇಮಾದರವೆ,

ಜೀವನ ಯೋಗದ ಈ ಸುದಿನ ।।೩।।

 

Nanalli Ekintu (ನನ್ನಲ್ಲಿ ಏಕಿಂತು)

Movie: Kallu Sakkare (1967)

Singer: S Janaki

Song link: Click Here


Nannalli ekintu aananda kaane,

Manase nee balleya sukhava,

Nannavanu, bandaanu, baa illi endu enna karedaanu ||


Naa kanda kanasella nijavadaaga,

Aa nalla sallapa savi tandaga,

Naa nachi duragalu avanu,

Nudi muttu bahumanava taruva,

Aa sukhava nee balleya, manase ||


Ee jodi bhesh endu janarendaaga,

Nanniniya baarendu bali karedaaga,

Enendu naa helali tiliye,

Mai mareva aa reetiye olave,

Aa sukhava nee balleya, manase ||


ಚಿತ್ರಗೀತೆ 


ನನ್ನಲ್ಲಿ ಏಕಿಂತು ಆನಂದ ಕಾಣೆ,

ಮನಸೇ ನೀ ಬಲ್ಲೆಯಾ ಸುಖವಾ,

ನನ್ನವನು, ಬಂದಾನು, ಬಾ ಇಲ್ಲಿ ಎಂದು ಎನ್ನ ಕರೆದಾನು 

।।ಪ।।


ನಾ ಕಂಡ ಕನಸೆಲ್ಲ ನಿಜವಾದಾಗ,

ಆ ನಲ್ಲ ಸಲ್ಲಾಪ ಸವಿ ತಂದಾಗ,

ನಾ ನಾಚಿ ದುರಾಗಲೂ ಅವನು,

ನುಡಿ ಮುತ್ತು ಬಹುಮಾನವಾ ತರುವ,

ಆ ಸುಖವ ನೀ ಬಲ್ಲೆಯಾ, ಮನಸೆ ।।೧।।


ಈ ಜೋಡಿ ಭೇಷ್ ಎಂದು ಜನರೆಂದಾಗ,

ನನ್ನಿನಿಯ ಬಾರೆಂದು ಬಳಿ ಕರೆದಾಗ,

ಏನೆಂದು ನಾ ಹೇಳಲಿ ತಿಳಿಯೆ,

ಮೈ ಮರೆವ ಆ ರೀತಿಯೇ ಒಲವೇ,

ಆ ಸುಖವ ನೀ ಬಲ್ಲೆಯಾ, ಮನಸೆ ।।೨।।

   

Thursday, March 26, 2026

Natavara Gangadhara (ನಟವರ ಗಂಗಾಧರ)

Movie: Swarnagowri (1962)

Singer: M Balamuralikrishna

Song link: Click Here


Natavara gangadhara, umashankara,

Nee leela, vinoda, vihaara..! natavara gangadhara ||


Janana maranondu chadurangavagi, janare kaayagi,

Neene kaliyagi ranaranga saagi, aa..aa,

Naguve nee tugee.., natavara gangadhara ||


Torinalavinda nee baalininda,

Bhrameya tumbiduve..,

Daari kavalaagi mana maaruvaaga,

Prabhuve mumbiduve..., natavara gangadhara ||


Jnana gumamaala karunalavaana,

Tiliye nee neela.., deva jana tunga mahimantaranga,

Bhalare jagapaala, aa..aa.., natavara gangadhara ||


ಚಿತ್ರಗೀತೆ 


ನಟವರ ಗಂಗಾಧರ, ಉಮಾಶಂಕರ,

ನೀ ಲೀಲಾ, ವಿನೋದ, ವಿಹಾರ .., ನಟವರ ಗಂಗಾಧರ ।।ಪ।।


ಜನನ ಮರಣೊ೦ದು ಚದುರಂಗವಾಗಿ, ಜನರೇ ಕಾಯಾಗಿ,

ನೀನೆ ಕಲಿಯಾಗಿ ರಣರಂಗ ಸಾಗಿ .., ಆ ..ಆ ..,

ನಗುವೇ ನೀ ತೂಗೀ .., ನಟವರ ಗಂಗಾಧರ ।।೧।।


ತೋರಿನಲವಿಂದ ನೀ ಬಾಳಿನಿಂದ, 

ಭ್ರೆಮೆಯಾ ತುಂಬಿಡುವೇ ..,

ದಾರಿ ಕವಲಾಗಿ ಮನ ಮಾರುವಾಗ,

ಪ್ರಭುವೆ ಮುಂಬಿಡುವೇ .., ನಟವರ ಗಂಗಾಧರ ।।೨।।


ಜ್ಞಾನ ಗುಣಮಾಲ ಕರುಣಾಲವಾನ,

ತಿಳಿಯೇ ನೀ ನೀಲಾ.., ದೇವಾ ಜನ ತುಂಗಾ ಮಹಿಮಾಂತರಂಗ,

ಭಲರೇ ಜಗಪಾಲಾ ..,ಆ ..ಆ .., ನಟವರ ಗಂಗಾಧರ ।।೩।।

Naguvudanu Kaliyuveya (ನಗುವುದನು ಕಲಿಯುವೆಯಾ)

Movie: Roudi Raja (1984)

Singer: Manjula Gururaj

Song link: Click Here


Naguvudanu kaliyuveya, chinteyanu mareyuveya,

Vedaneyella oduvudu, nemmadi aaga muduvudu ||


Hoovu tumbidaaga aa balli entha chenna,

Hasiru tumbidaaga aa maravu entha chenna,

Sanje moodidaga aa rangu entha chenna,

Taare minugidaaga aa baanu entha chenna,

Naguvaaga ninna mogavu innu chenna chenna ||


Hoovu baadidaga kannannu seleyodilla,

Anda kuda illa aananda needodilla,

Mogavu badidaaga santosha kanodilla,

Muppu bega bandu soundarya nillodilla,

Aluvaaga ninna jothege yaaru illa illa ||


ಚಿತ್ರಗೀತೆ 


ನಗುವುದನು ಕಲಿಯುವೆಯಾ, ಚಿಂತೆಯನು ಮರೆಯುವೆಯಾ,

ವೇದನೆಯೆಲ್ಲಾ ಓಡುವುದು, ನೆಮ್ಮದಿ ಆಗ ಮೂಡುವುದು ।।ಪ।।


ಹೂವು ತುಂಬಿದಾಗ ಆ ಬಳ್ಳಿ ಎಂಥ ಚೆನ್ನ,

ಹಸಿರು ತುಂಬಿದಾಗ ಆ ಮರವು ಎಂಥ ಚೆನ್ನ,

ಸಂಜೆ ಮೂಡಿದಾಗ ಆ ರಂಗು ಎಂಥ ಚೆನ್ನ,

ತಾರೆ ಮಿನುಗಿದಾಗ ಆ ಬಾನು ಎಂಥ ಚೆನ್ನ,

ನಗುವಾಗ ನಿನ್ನ ಮೊಗವು ಇನ್ನೂ ಚೆನ್ನ ಚೆನ್ನ ।।೧।।


ಹೂವು ಬಾಡಿದಾಗ ಕಣ್ಣನ್ನು ಸೆಳೆಯೋದಿಲ್ಲ,

ಅಂದ ಕೂಡ ಇಲ್ಲ ಆನಂದ ನೀಡೋದಿಲ್ಲ,

ಮೊಗವು ಬಾಡಿದಾಗ ಸಂತೋಷ ಕಾಣೋದಿಲ್ಲ,

ಮುಪ್ಪು ಬೇಗ ಬಂತು ಸೌಂದರ್ಯ ನಿಲ್ಲೋದಿಲ್ಲ,

ಅಳುವಾಗ ನಿನ್ನ ಜೊತೆಗೆ ಯಾರು ಇಲ್ಲ ಇಲ್ಲ ।।೨।।