Movie: Eradu Kanasu (1974)
Singers: P B Srinivas, Vani Jairam
Song link: Click Here
Endendu ninnanu maretu badukiralaare,
Innendu ninnanu agali naniralaare,
Ondu kshana nondaru nee na talalaare,
Ondu kshana virahavanu naa sahisalaare ||
Sagara hunnime kandu, ukkuva reeti,
Ninnanu kanda dinave, hommitu preeti,
Oho..nee kadalaadare, na nadiyaguve,
Nillade odi odi ninna seruve..seruve..seruve ||
Nee hoo adare naanu, parimalavaagi,
Seruve ninnodalannu, balu hitavagi,
Oho..nee mugiladare, na navilaguve,
Teluva ninna, nodi, nodi haaduve, kuniyuve, naliyuve ||
Savira janumave barali beduvudonde,
Nannavalagiru neenu ennuvudonde
Oho..neeniruvudadare swargavu ee dhare, na ninna jodiyagi endu
baaluve (3)
Endendu..endendu..||
ಚಿತ್ರಗೀತೆ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ,
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ,
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ,
ಒಂದು ಕ್ಷಣ ವಿರಹವನು ನಾ ಸಹಿಸಲಾರೆ ।।ಪ।।
ಸಾಗರ ಹುಣ್ಣಿಮೆ ಕಂಡು, ಉಕ್ಕುವ ರೀತಿ,
ನಿನ್ನನು ಕಂಡ ದಿನವೇ, ಹೊಮ್ಮಿತು ಪ್ರೀತಿ,
ಒಹೋ ..
ನೀ ಕಡಲಾದರೆ, ನಾ ನದಿಯಾಗುವೆ,
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ .. ಸೇರುವೆ .. ಸೇರುವೆ ।।೧।।
ನೀ ಹೂ ಆದರೆ ನಾನು, ಪರಿಮಳವಾಗಿ,
ಸೇರುವೆ ನಿನ್ನೊಡಲನ್ನು, ಬಲು ಹಿತವಾಗಿ,
ಒಹೋ ..
ನೀ ಮುಗಿಲಾದರೆ, ನಾ ನವಿಲಾಗುವೆ, ತೇಲುವಾ ನಿನ್ನ, ನೋಡಿ ನೋಡಿ
ಹಾಡುವೆ, ಕುಣಿಯುವೆ, ನಲಿಯುವೆ..
।।೨।।
ಸಾವಿರ ಜನುಮವೆ ಬರಲಿ ಬೇಡುವುದೊಂದೇ,
ನನ್ನವಳಾಗಿರು ನೀನು ಎನ್ನುವುದೊಂದೇ,
ಒಹೋ ..ನೀನಿರುವುದಾದರೆ ಸ್ವರ್ಗವು ಈ ಧರೆ,
ನಾ ನಿನ್ನ ಜೋಡಿಯಾಗಿ ಎಂದು ಬಾಳುವೆ..(೩)
ಎಂದೆಂದೂ ..ಎಂದೆಂದೂ ।।೩।।


