Friday, September 5, 2025

Yaarige Rukkamma Modi Madtiya (ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತೀಯಾ)

Movie: Cow Boy Kulla (1973)

Singers: SPB, L R Eshwari

Song link: Click Here


Yaarige rukkamma modi madtiya

Il yaarige lakkamma jodi agtiya

Hoi chinna hai ranna

Ee daadiginta bere jodii illa ||


Yaarige kullappa modi madtiya

Il yaarige dollappa jodi agtiya

Pur baba pur baba ninna

Maya mantra illi gittodilla ||

Are lakkamma..rukkamma..!


Andagaati endu sokki jor madtiya,

Ee mantragaara baabanige sawal haktiya,

Hennu kandu aaseyinda kann kann bidtiya

Baa indrajaaladalli indu nanna geltiya, 

Ha bayilli, ho nillilli, nanna edurali

Chumaya maadibiduve nodu onde kshanadali

Pur baba pur baba pur pur baba pur ||


Yaarige manganna modi madtiya

Il yaarige timmana jodi agtiya

Pur baba pur baba ninna maya mantra illi gittodilla,

Manganna..timmanna...!


Jaadugaara endu sokki joru madtiya,

Ee mantragaati munde ninna bala bichtiya,

Gedde endu jambha kocchi aata adtiya,

Henne haddu meeri nadedu nanage kopa tartiya,

Ee kopakke, ha tapakke, bedaruvalalla,

Nee aakashake haaridaru ninna bidolla,

Pur baba pur baba pur pur baba pur||


Yaarige rukkamma modi madtiya,

Il yaarige dollappa jodi agtiya,

Are lakkama rukkamma, kullappa dollappa,

Pur pur baba pur!


ಚಿತ್ರಗೀತೆ 


ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತೀಯಾ 

ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯಾ 

ಹೋಯ್ ಚಿನ್ನ ಹಾಯ್ ರನ್ನ 

ಈ ದಾಡಿಗಿಂತ ಬೇರೆ ಜೋಡಿ ಇಲ್ಲ ।।


ಯಾರಿಗೆ ಕುಳ್ಳಪ್ಪ ಮೋಡಿ ಮಾಡ್ತೀಯಾ 

ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯಾ 

ಪುರ್ ಬಾಬಾ ಪುರ್ ಬಾಬಾ ನಿನ್ನ 

ಮಾಯಾ ಮಂತ್ರ ಇಲ್ಲಿ ಗಿಟ್ಟೋದಿಲ್ಲ ।।

ಅರೆ ಲಕ್ಕಮ್ಮ.. ರುಕ್ಕಮ್ಮ.. !


ಅಂದಗಾತಿ ಎಂದು ಸೊಕ್ಕಿ ಜೋರ್ ಮಾಡ್ತೀಯಾ, 

ಈ ಮಂತ್ರಗಾರ ಬಾಬನಿಗೆ ಸವಾಲ್ ಹಾಕ್ತಿಯಾ, 

ಹೆಣ್ಣು ಕಂಡು ಆಸೆಯಿಂದ ಕಣ್ ಕಣ್ ಬಿಡ್ತೀಯಾ, 

ಬಾ ಇಂದ್ರ ಜಾಲದಲ್ಲಿ ಇಂದು ನನ್ನ ಗೆಲ್ತಿಯಾ, 

ಹೇ ಬಾಯಿಲ್ಲಿ, ಹೋ ನಿಲ್ಲಲ್ಲಿ, ನನ್ನ ಎದುರಲಿ, 

ಛೂಮಾಮಾ ಮಾಡಿಬಿಡುವೆ ನೋಡು ಒಂದೆ ಕ್ಷಣದಲಿ, 

ಪುರ್ ಬಾಬಾ ಪುರ್ ಬಾಬಾ ಪುರ್ ಪುರ್ ಬಾಬಾ ಪುರ್ ।।


ಯಾರಿಗೆ ಮಂಗಣ್ಣ ಮೋಡಿ ಮಾಡ್ತಿಯಾ,

ಇಲ್ ಯಾರಿಗೆ ತಿಮ್ಮಣ್ಣ ಜೋಡಿ ಆಗ್ತೀಯಾ,

ಪುರ್ ಬಾಬಾ ಪುರ್ ಬಾಬಾ, ನಿನ್ನ ಮಾಯಾ ಮಂತ್ರ ಇಲ್ಲಿ ಗಿಟ್ಟೋದಿಲ್ಲ ,

ಮಂಗಣ್ಣ. . ತಿಮ್ಮಣ್ಣ.. !


ಜಾದುಗಾರ ಎಂದು ಸೊಕ್ಕಿ ಜೋರು ಮಾಡ್ತೀಯಾ, 

ಈ ಮಂತ್ರಗಾತಿ ಮುಂದೆ ನಿನ್ನ ಬಾಲ ಬಿಚ್ತೀಯಾ, 

ಗೆದ್ದೆ ಎಂದು ಜಂಭ ಕೊಚ್ಚಿ ಆಟ ಆಡ್ತೀಯಾ, 

ಹೆಣ್ಣೆ ಹದ್ದು ಮೀರಿ ನಡೆದು ನನಗೆ ಕೋಪ ತರ್ತೀಯಾ, 

ಈ ಕೋಪಕ್ಕೆ, ಈ ತಾಪಕ್ಕೆ, ಬೆದರುವಳಲ್ಲ, 

ನೀ ಆಕಾಶಕೆ ಹಾರಿದರು ನಿನ್ನ ಬಿಡೋಲ್ಲ, 

ಪುರ್ ಬಾಬಾ ಪುರ್ ಬಾಬಾ ಪುರ್ ಪುರ್ ಬಾಬಾ ಪುರ್ ।।


ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತೀಯಾ,

ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯಾ,

ಅರೆ ಲಕ್ಕಮ್ಮ ರುಕ್ಕಮ್ಮ, ಕುಳ್ಳಪ್ಪ ಡೊಳ್ಳಪ್ಪ,

ಪುರ್ ಪುರ್ ಬಾಬಾ ಪುರ್ !

                  

Wednesday, September 3, 2025

Eke (ಏಕೆ)

 ಪದ್ಯ 

ರಚನೆ : ಕಯ್ಯಾರ ಕಿ೦ಞ್ಞಣ್ಣ ರೈ 


ಕಾಣದಿಹ ದಾರಿಯಲಿ 

ಮುಂದಿರುವ ಕಷ್ಟಗಳ 

ಇಂದು ನೆನೆಯುತ ನೀನು ಮರುಗಲೇಕೆ ?


ಇಂದು ನಿನ್ನಯ ಗತಿಯು 

ಜೀವನದ ಸಂಸ್ಕೃತಿಯು 

ಬೆಂದೊಡಲ ಬೆಂಕಿಯಲಿ ದಹಿಸಬೇಕೆ ?


ಸರಳತೆಯ ದಾರಿಯಲಿ 

ಚಿಂತೆ ಸಂತೆಯನಿರಿಸಿ 

ನಿತ್ಯದಾನಂದವನು ಕೆಡಿಸಲೇಕೆ ?


ನಾಳೆಯೆಂಬುದು ವಿಕೃತಿ 

ಇಂದು ಬಂದಿದೆ ಪ್ರಕೃತಿ 

ಪ್ರಕೃತಿಯನು ವಿಕೃತಿಯೊಳು ಮುಚ್ಚಲೇಕೆ ?


ನಾಳೆ ಸುಖವಿಲ್ಲೆಂದು 

ಇಂದು ಚಿಂತಿಸಬೇಡ 

ಇಂದಿನೊಳು ನಾಳೆಯನು ಬೆರಸಲೇಕೆ ?    


ಈ ಕ್ಷಣವು ನಗುತಿರಲು 

ಈ ದಿನವು ಸುಖವಿರಲು 

ಬಾಳ್ವೆ ಬೆಳಗುವುದೆಂದು ಮರೆಯಲೇಕೆ ?


Padya


Kaanadiha daariyali

Mundiruva kastagala

Indu neneyuta neenu marugaleke?


Indu ninnaya gatiyu

Jeevanada samskrutiyu

Bendodala benkiyali dahisabeke?


Saralateya daariyali

Chinte santeyanirisi

Nityanandavanu kedisaleke?


Naaleyembudu vikruti

Indu bandide prakruti

Prakrutiyanu vikrutiyolu mucchaleke?


Naale sukhavillendu

Indu chintisabeda

Indinolu naaleyanu beresaleke?


Ee kshanavu nagutiralu

Ee dinavu sukhaviralu

Balve belaguvudendu mareyaleke?

         

Ondenno Onti Hennu (ಒಂದೆನ್ನೊ ಒಂಟಿ ಹೆಣ್ಣು)

Movie: Cow Boy Kulla (1973)

Singer: P Susheela

Song link: Click Here


Ondenno onti hennu balleya neenu,

Eradenno eradu kannu kandihe enu,

Moorenu helenu torenu..haha haha..!


Nalkendre nalvaru iharu nannanu balasi,

Idaneyava ninnane nenasi bandenu bayasi,

Kaanisada andava kaanu tereyanu sarisi,

Mohisuva mojanella nee anubhavisi,

Hoi manasillidu ha kannllidu, andada nadu balukisi nee nodu ||


Ukkina ee tolininda amukadirenna,

Hannante hareyada hennu kelo chinna,

Ha mruduvaagi maiyanu balasu kaanuve kanasu,

Tuti mele tutiyanu irisu aagale sogasu,

Hoi maseyalu bhuja manasige maja, ha embudu nija tiliyalu baa

 raja ||


ಚಿತ್ರಗೀತೆ 


ಒಂದೆನ್ನೊ ಒಂಟಿ ಹೆಣ್ಣು ಬಲ್ಲೆಯ ನೀನು, 

ಎರಡೆನ್ನೊ ಎರಡು ಕಣ್ಣು ಕಂಡಿಹೆ ಏನು, 

ಮೂರೇನು ಹೇಳೆನು ತೋರೆನು ಹಾಹಾ ..ಹಾಹಾ ।।ಪ।।


ನಾಲ್ಕೆಂದರೆ ನಾಲ್ವರು ಇಹರು ನನ್ನನು ಬಳಸಿ, 

ಐದನೆಯವ ನಿನ್ನನೆ ನೆನಸಿ ಬಂದೆನು ಬಯಸಿ, 

ಕಾಣಿಸದ ಅಂದವ ಕಾಣು ತೆರೆಯನು ಸರಿಸಿ, 

ಮೋಹಿಸುವ ಮೋಜನೆಲ್ಲ ನೀ ಅನುಭವಿಸಿ, 

ಹೋಯ್ ಮನಸಿಲ್ಲಿಡು ಹಾ ಕಣ್ಣಿಲ್ಲಿಡು, ಅಂದದ ನಡು ಬಳುಕಿಸಿ ನೀ ನೋಡು ।।೧।।


ಉಕ್ಕಿನ ಈ ತೋಳಿನಿಂದ ಅಮುಕದಿರೆನ್ನ, 

ಹೆಣ್ಣಂತೆ ಹರೆಯದ ಹೆಣ್ಣು ಕೇಳೋ ಚಿನ್ನಾ, 

ಹಾ ಮೃದುವಾಗಿ ಮೈಯ್ಯನು ಬಳಸು ಕಾಣುವೆ ಕನಸು, 

ತುಟಿ ಮೇಲೆ ತುಟಿಯನು ಇರಿಸು ಆಗಲೆ ಸೊಗಸು, 

ಹೋಯ್ ಮಸೆಯಲು ಭುಜ ಮನಸಿಗೆ ಮಜ, ಹಾ ಎಂಬುದು ನಿಜ ತಿಳಿಯಲು ಬಾ ರಾಜ ।।೨।।

             

Maagiya Chaliyali (ಮಾಗಿಯ ಛಳಿಯಲಿ)

Movie: Cow Boy Kulla (1973)

Singer: Vani Jairam

Song link: Click Here


Ahaa..

Maagiya chaliyali koriyuva neerali

Nadugutaliruve baa

Mogginantha ee maiyyi hoovagide, o mava

Koodi ninna hannago manasagide || ba ba ||


Neeli baninali telo modadali

Inuinuki nanna mai honna banna raviyu noduta

Tanna hombisilu mele chellidaru

Bisi eradaagi tanuveko baagi ninne neneyuta

Iniya bandu tanuva balasi santaisendide ||ba ba ||


Jodi hakkigalu koodi nalidiralu

Hosadondu bayake bandenna kenake ninna kugide

Haadi kuniyona odi naliyona

Embaase moodi nannanu kaade ede jhal endide

Kaadu kaadu nondu nondu manasu sotide || ba ba ||


ಚಿತ್ರಗೀತೆ 


ಆಹಾ.... 

ಮಾಗಿಯ ಛಳಿಯಲಿ ಕೊರಿಯುವ ನೀರಲಿ, ನಡುಗುತಲಿರುವೆ ಬಾ 

ಮೊಗ್ಗಿನಂಥ ಈ ಮೈಯ್ಯಿ ಹೂವಾಗಿದೆ, ಓ ಮಾವಾ 

ಕೂಡಿ ನಿನ್ನ ಹಣ್ಣಾಗೂ ಮನಸಾಗಿದೆ ।।ಪ।।

ಬಾ ಬಾ .. 


ನೀಲಿ ಬಾನಿನಲಿ ತೇಲೋ ಮೋಡದಲಿ 

ಇಣುಕಿಣುಕಿ ನನ್ನ ಮೈ ಹೊನ್ನ ಬಣ್ಣ ರವಿಯೂ ನೋಡುತಾ 

ತನ್ನಾ ಹೊಂಬಿಸಿಲು ಮೇಲೆ ಚೆಲ್ಲಿದರು 

ಬಿಸಿ ಏರದಾಗಿ ತನುವೇಕೋ ಬಾಗಿ ನಿನ್ನೆ ನೆನೆಯುತಾ 

ಇನಿಯಾ ಬಂದು ತನುವಾ ಬಳಸಿ ಸಂತೈಸೆಂದಿದೆ ।।೧।। 

ಬಾ ಬಾ .. 


ಜೋಡಿ ಹಕ್ಕಿಗಳು ಕೂಡಿ ನಲಿದಿರಲು 

ಹೊಸದೊಂದು ಬಯಕೆ ಬಂದೆನ್ನ ಕೆಣಕೆ ನಿನ್ನಾ ಕೂಗಿದೆ 

ಹಾಡಿ ಕುಣಿಯೋಣ ಓಡಿ ನಲಿಯೋಣ 

ಎಂಬಾಸೆ ಮೂಡಿ ನನ್ನನು ಕಾಡೆ ಎದೆ ಝಲ್ ಎಂದಿದೆ 

ಕಾದು ಕಾದು ನೊಂದು ನೊಂದು ಮನಸು ಸೋತಿದೆ ।।೨।।

ಬಾ ಬಾ .. 

                                 

Modalu Manavanaagu (ಮೊದಲು ಮಾನವನಾಗು)

ಪದ್ಯ 

ರಚನೆ : ಸಿದ್ದಯ್ಯ ಪುರಾಣಿಕ 


ಓದಿ ಬೋಧಕನಾಗು  

ಕಾದಿ ಯೋಧನೆ ಆಗು 

ಶ್ರಮಿಕ ವಣಿಕನೆ ಆಗು 

ದುಡಿದು ಗಳಿಸಿ,

ಏನಾದರೂ ಆಗು 

ನಿನ್ನೊಲವಿನಂತಾಗು 

ಏನಾದರೂ ಸರಿಯೆ 

ಮೊದಲು ಮಾನವನಾಗು !


ಹಿಂದು ಮುಸ್ಲಿಮನಾಗು 

ಬೌದ್ಧ ಕ್ರೈಸ್ತನೆ ಆಗು 

ಚಾರ್ವಾಕನೇ ಆಗು 

ಭೋಗ ಬಯಸಿ,

ಏನಾದರೂ ಆಗು 

ಹಾರೈಸಿದಂತಾಗು 

ಏನಾದರೂ ಸರಿಯೆ 

ಮೊದಲು ಮಾನವನಾಗು !


ರಾಜಕಾರಣಿಯಾಗು

 ರಾಷ್ಟ್ರಭಕ್ತನೆ ಆಗು 

ಕಲೆಗಾರ ವಿಜ್ಞಾನಿ 

ವ್ಯಾಪಾರಿಯೇ ಆಗು 

ಏನಾದರೂ ಆಗು 

ನೀ ಬಯಸಿದಂತಾಗು 

ಏನಾದರೂ ಸರಿಯೆ 

ಮೊದಲು ಮಾನವನಾಗು !


Padya


Odi bodhakanaagu

Kaadi yodhane aagu

Shramika vanikane aagu

Dudidu galisi,

enaadaru aagu

Ninnolavinantaagu

Enaadaru sariye

Modalu manavanaagu!


Hindu muslimanaagu

Boudha kraistane aagu

Charvaakane aagu

Bhoga bayasi,

Enaadaru aagu

Haraisidantaagu

Enaadaru sariye

Modalu manavanaagu!


Rajakaraniyaagu

Rastrabhaktane aagu

Kalegaara vijnani

Vyapariye aagu

Enaadaru aagu

Nee bayasidantaagu

Enaadaru sariye

Modalu manavanaagu!

           

Thursday, August 28, 2025

Naale Neenu Maduva Kelasa Inde Maadu (ನಾಳೆ ನೀನು ಮಾಡುವ ಕೆಲಸ ಇಂದೇ ಮಾಡು)

Bhaktigeete

Singer: Dr. Rajkumar

Song link: Click Here


Naale, neenu maduva kelasa inde maadu, aa naale emba maata munde doodu,

Naale enaguvudo ballavaru yaaru, nee inde gururayana smarane maadu ||


Iruvaaga, kaala doretaaga, samaya bandaaga, smarane  matradi baruva, karuna sagaranannu,

Arekshanavaadaru neneyo jeeva, neenu arekshanavaadaru neneyo jeeva,

Enondu, beku enabeda, aase padabeda, iruvalle manadalli sri raghavendrana,

Arekshanavaadaru dhyanisu sarthaka ||


Karedaaga, pasha esedaaga, yamanu seledaaga, naale baa endare hinde hoguvanenu,

Arekshanavaadaru bittu nilluvanenu, arekshanavaadaru bittu nilluvanenu,

Kadalannu daati baralaare giriya horalaare,  hanumantanante nee sevisalaare,

Arekshanavaadaru dhyanisu iddalle ||


Hagalirulu, emba maatilla, yaara hangilla, manavu nirmalavaagi, guruvalli beretaaga, 

Ninagaago aananda nudiye maatilla, ninagaago aananda nudiye maatilla,

Nenedavara, chinte kaleyuvanu, shanti needuvanu, 

Anugaala jotheyaagi konegaala bandaaga, nemmadiya tumbi kaluhisi koduvanamma ||


ಭಕ್ತಿಗೀತೆ 


ನಾಳೆ ನೀನು ಮಾಡುವ ಕೆಲಸ ಇಂದೇ ಮಾಡು ಆ ನಾಳೆ ಎಂಬ ಮಾತು ಮುಂದೆ ದೂಡು,

ನಾಳೆ ಎನಾಗುವುದೋ ಬಲ್ಲವರು ಯಾರು, ನೀ ಇಂದೇ ಗುರುರಾಯನ ಸ್ಮರಣೆ ಮಾಡು ।।ಪ।।


ಇರುವಾಗ ಕಾಲ ದೊರೆತಾಗ ಸಮಯ ಬಂದಾಗ ಸ್ಮರಣೆ ಮಾತ್ರದಿ ಬರುವಾ ಕರುಣಾಸಾಗರನನ್ನು,

 ಅರೆಕ್ಷಣವಾದರು ನೆನೆಯೋ ಜೀವ, ನೀನು ಅರೆಕ್ಷಣವಾದರು ನೆನೆಯೋ ಜೀವ,

ಏನೊಂದು, ಬೇಕು ಎನಬೇಡ, ಆಸೆ ಪಡಬೇಡ, ಇರುವಲ್ಲೇ ಮನದಲ್ಲಿ ಶ್ರೀ ರಾಘವೇಂದ್ರನ,

ಅರೆಕ್ಷಣವಾದರು ಧ್ಯಾನಿಸು ಸಾರ್ಥಕ ।।೧।।


ಕರೆದಾಗ, ಪಾಶ ಎಸೆದಾಗ, ಯಮನು ಸೆಳೆದಾಗ, ನಾಳೆ ಬಾ ಎಂದರೆ ಹಿಂದೆ ಹೋಗುವನೇನು, 

ಅರೆಕ್ಷಣವಾದರು ಬಿಟ್ಟು ನಿಲ್ಲುವನೇನು, ಅರೆಕ್ಷಣವಾದರು ಬಿಟ್ಟು ನಿಲ್ಲುವನೇನು,

ಕಡಲನ್ನು, ದಾಟಿ ಬರಲಾರೆ, ಗಿರಿಯ ಹೊರಲಾರೆ, ಹನುಮಂತನಂತೆ 

ನೀ ಸೇವಿಸಲಾರೆ,

ಅರೆಕ್ಷಣವಾದರೂ ಧ್ಯಾನಿಸು ಇದ್ದಲ್ಲೇ ।।೨।।


ಹಗಲಿರುಳು, ಎಂಬ ಮಾತಿಲ್ಲ ಯಾರ ಹಂಗಿಲ್ಲ, ಮನವು ನಿರ್ಮಲವಾಗಿ ಗುರುವಲ್ಲಿ ಬೆರೆತಾಗ,

ನಿನಗಾಗೋ ಆನಂದ ನುಡಿಯೇ ಮಾತಿಲ್ಲ, ನಿನಗಾಗೋ ಆನಂದ ನುಡಿಯೇ ಮಾತಿಲ್ಲ,

ನೆನೆದವರ, ಚಿಂತೆ ಕಳೆಯುವನು, ಶಾಂತಿ ನೀಡುವನು, 

ಅನುಗಾಲ ಜೊತೆಯಾಗಿ, ಕೊನೆಗಾಲ ಬಂದಾಗ, ನೆಮ್ಮದಿಯ ತುಂಬಿ ಕಳುಹಿಸಿ ಕೊಡುವನಮ್ಮ ।।೩।।

                                                           

Shubodaya (ಶುಭೋದಯ)

Naadageete

Sahitya: G S Shivarudrappa

Song link: Click Here


Navodayada kiranaleele

Kannadadee nelada mele

Shubhodayava teredide.


Nada nadigala neerinalli

Giri vanagala mudigalalli

Shilpa kalaa gaanakavya

Gudigopura shikharadalli.


Mugda jaanapadagalalli

Dagda nagara gondaladali

Yantra tantradattahaasa

Chakra gatiya pragatiyalli.


Halabaralli hosabaralli

Hiriyaralli kiriyaralli

Hosa chetanadusthahada

Chilume chimmuvedegalalli.


ನಾಡಗೀತೆ 


ನವೋದಯದ ಕಿರಣಲೀಲೆ 

ಕನ್ನಡದೀ ನೆಲದ ಮೇಲೆ 

ಶುಭೋದಯವ ತೆರೆದಿದೆ. 


ನದ ನದಿಗಳ ನೀರಿನಲ್ಲಿ 

ಗಿರಿವನಗಳ ಮುಡಿಗಳಲ್ಲಿ 

ಶಿಲ್ಪಕಲಾ ಗಾನಕಾವ್ಯ 

ಗುಡಿಗೋಪುರ ಶಿಖರದಲ್ಲಿ. 


ಮುಗ್ಧ ಜಾನಪದಗಳಲ್ಲಿ 

ದಗ್ಧನಗರ ಗೊಂದಲದಲಿ 

ಯಂತ್ರ ತಂತ್ರದಟ್ಟಹಾಸ 

ಚಕ್ರ ಗತಿಯ ಪ್ರಗತಿಯಲ್ಲಿ. 


ಹಳಬರಲ್ಲಿ ಹೊಸಬರಲ್ಲಿ 

ಹಿರಿಯರಲ್ಲಿ ಕಿರಿಯರಲ್ಲಿ 

ಹೊಸ ಚೇತನದುತ್ಸಾಹದ 

ಚಿಲುಮೆ ಚಿಮ್ಮುವೆಡೆಗಳಲ್ಲಿ.