Tuesday, October 29, 2024

Kaneera Dhare Ideke (ಕಣ್ಣೀರ ಧಾರೆ ಇದೇಕೆ)

Movie: Hosa Belaku (1982)

Singer: Dr. Rajkumar

Song link: Click Here


Kaneera dhare, ideke ideke (2)

Nannolavina hoove, ee shokaveke (2)

Kaneera dhare, ideke ideke (2) ||


Vidhiyaatavenu, ballavaru yaaru

Mundenu endu, heluvaru yaaru

Baruvudu baralendu, nagunaguta baalade (2)

Nirase, vishada, ideke, ideke (2)

Kaneera dhare, ideke ideke (2) ||


Balella nanage, iruladarenu

Jotheyagi endendu, neenillavenu

Naa ninna kanninda, nodutire sogasella (2)

Ninnalli noovu, ideke, ideke (2)

Kaneera dhare, ideke ideke (2) ||


ಚಿತ್ರಗೀತೆ 


ಕಣ್ಣೀರ ಧಾರೆ, ಇದೇಕೆ ಇದೇಕೆ (೨)

ನನ್ನೊಲವಿನಾ ಹೂವೆ, ಈ ಶೋಕವೇಕೆ (೨)

ಕಣ್ಣೀರ ಧಾರೆ, ಇದೇಕೆ ಇದೇಕೆ (೨) ।।ಪ।।


ವಿಧಿಯಾಟವೇನು, ಬಲ್ಲವರು ಯಾರು 

ಮುಂದೇನು ಎಂದು, ಹೇಳುವರು ಯಾರು 

ಬರುವುದು ಬರಲೆಂದು, ನಗುನಗುತ ಬಾಳದೆ (೨)

ನಿರಾಸೆ, ವಿಷಾದ, ಇದೇಕೆ ಇದೇಕೆ (೨)

ಕಣ್ಣೀರ ಧಾರೆ, ಇದೇಕೆ ಇದೇಕೆ (೨) ।।೧।।


ಬಾಳೆಲ್ಲ ನನಗೆ, ಇರುಳಾದರೇನು 

ಜೊತೆಯಾಗಿ ಎಂದೆಂದು, ನೀನಿಲ್ಲವೇನು 

ನಾ ನಿನ್ನ ಕಣ್ಣಿಂದ, ನೋಡುತಿರೆ ಸೊಗಸೆಲ್ಲ (೨)

ನಿನ್ನಲ್ಲಿ ನೋವು, ಇದೇಕೆ, ಇದೇಕೆ (೨)

ಕಣ್ಣೀರ ಧಾರೆ, ಇದೇಕೆ ಇದೇಕೆ (೨) ।।೨।।

         

Saturday, October 26, 2024

Chinnada Mallige Hoove (ಚಿನ್ನದ ಮಲ್ಲಿಗೆ ಹೂವೆ)

Movie: Huliya Haalina mevu (1979)

Singers: Dr. Rajkumar, S Janaki

Song link: Click Here


Chinnada mallige hoove, bidu nee binkava cheluve

Ninna olavu bekendu, balige bandaga chalavu nannalli eke? o..

Chinnada mallige hoove, bidu nee binkava cheluve ||


Maatalle jenu tumbi, nurentu heluve

Nanaginta chluve baralu, nee hinde oduve

Ninnannu kanda kannu, berenu nodainnu (2)

Ninagagiye baaluve.. innu naanu

Honnina dumbiye innu, ninna nambenu naanu

Nanna nenapu bandaga mogava kandaga

Olavu bekendu baruve

Honnina dumbiye innu, ninna nambenu naanu ||


Aa surya chandra sakshi, tangaali sakshiyu

Endendu bidada besuge, ee namma preetiyu

Bangaaradantha nudiya, sangatiyalli nudidu (2)

Aanandada..kambani tande neenu

Chinnada mallige hoove, bidu nee binkava cheluve

Honnina dumbiye innu, ninna nambenu naanu

Ninna olavu bekendu, balige bandaga chalavu nannalli eke? o..

Chinnada mallige hoove, bidu nee binkava cheluve ||


ಚಿತ್ರಗೀತೆ 


ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ ಬಿಂಕವ ಚೆಲುವೆ 

ನಿನ್ನ ಒಲವು ಬೇಕೆಂದು, ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ ? ಓ.. 

ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ ಬಿಂಕವ ಚೆಲುವೆ ।।ಪ।।


ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೆ 

ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೆ 

ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನೂ (೨)

ನಿನಗಾಗಿಯೇ ಬಾಳುವೇ .. ಇನ್ನು ನಾನು 

ಹೊನ್ನಿನ ದುಂಬಿಯೇ ಇನ್ನು, ನಿನ್ನ ನಂಬೆನು ನಾನು 

ನನ್ನ ನೆನಪು ಬಂದಾಗ ಮೊಗವಾ ಕಂಡಾಗ 

ಒಲವು ಬೇಕೆಂದು ಬರುವೇ 

ಹೊನ್ನಿನ ದುಂಬಿಯೇ ಇನ್ನು, ನಿನ್ನ ನಂಬೆನು ನಾನು ।।೧।।


ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ 

ಎಂದೆಂದು ಬಿಡದಾ ಬೆಸುಗೆ, ಈ ನಮ್ಮ ಪ್ರೀತಿಯೂ 

ಬಂಗಾರದಂಥ ನುಡಿಯಾ, ಸಂಗಾತಿಯಲ್ಲಿ ನುಡಿದೂ (೨)

ಆನಂದದಾ .. ಕಂಬನಿ ತಂದೆ ನೀನೂ 

ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ ಬಿಂಕವ ಚೆಲುವೆ 

ಹೊನ್ನಿನ ದುಂಬಿಯೇ ಇನ್ನು, ನಿನ್ನ ನಂಬೆನು ನಾನು

ನಿನ್ನ ಒಲವು ಬೇಕೆಂದು, ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ ? ಓ..  

ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ ಬಿಂಕವ ಚೆಲುವೆ ।।೨।।

                           

Shalege Hoguve (ಶಾಲೆಗೆ ಹೋಗುವೆ)

 ಪದ್ಯ 

ಸಾಹಿತ್ಯ: ಚಂದ್ರಕಾಂತ ಕಾರದಳ್ಳಿ 


ಬಿಸ್ಕೇಟ್ ಬೇಡ 

ಚಾಕ್ಲೇಟ್ ಬೇಡ 

ಶಾಲೆಗೆ ಕಳಿಸಮ್ಮ 


ಶಾಲೆಗೆ ಹೋಗಿ 

ಚಿತ್ರವ ನೋಡಿ 

ಹೆಸರನು ಹೇಳುವೆನಮ್ಮ 


ಅಕ್ಷರ ಕಲಿಯುತ 

ಪದಗಳ ಓದುತ 

ಪಾಠವ ಓದುವೆನಮ್ಮ 


ಪದ್ಯವ ಕಲಿತು 

ರಾಗದಿ ಹಾಡಿ 

ಮೆಚ್ಚುಗೆ ಗಳಿಸುವೆನಮ್ಮ 


ಪಾಠವ ಓದಿ 

ಲೆಕ್ಕವ ಮಾಡಿ 

ಜಾಣನೆ ಆಗುವೆನಮ್ಮ 


ಪರಿಸರ ನೋಡುತ 

ವಿಜ್ಞಾನ ತಿಳಿಯುತ 

ಮಾನವ ನಾನಾಗುವೆನಮ್ಮ 


ಶಾಲೆ ಎಂಬುದು 

ಸರಸ್ವತಿ ಮಂದಿರ 

ಅದುವೆ ಬೆಳಕಮ್ಮ 


ಈಗಲೇ ನಾನು 

ಶಾಲೆಗೆ ಹೋಗುವೆ 

ಬೇಗನೆ ನೀ ಕಳಿಸಮ್ಮ. 


Padya


Bisket beda

Chaklate beda

Shalege kalisamma


Shalege hogi

Chitrava odi

Hesaranu heluvenamma


Akshara kaliyuta

Padagala oduta

Pattava oduvenamma


Padyava kalitu

Raagadi haadi

Mecchuge galisuvenamma


Pattava odi

Lekkava maadi

Jaanane aaguvenamma


Parisara noduta

Vijnana tiliyuta

Manava naanaguvenamma


Shale embudu

Saraswati mandira

Aduve belakamma


Eegale naanu

Shalege hoguve

Begane nee kalisamma.

Vandane (ವಂದನೆ)

 ಪದ್ಯ 

ಸಾಹಿತ್ಯ: ಎಲ್ ಕೆ ಕಂಬಾರ 


ನವಮಾಸ ಹೊತ್ತು 

ನನ್ನನು ಹೆತ್ತು

ಸಾಕಿದ ತಾಯಿಗೆ ವಂದನೆ 


ಮೈಮುರಿ ದುಡಿದು 

ನನ್ನನು ಸಲುಹಿ 

ಬೆಳೆಸಿದ ತಂದೆಗೆ ವಂದನೆ 


ವಿದ್ಯಾ ಬುದ್ಧಿ 

ಬಾಲ್ಯದಿ ಕಲಿಸಿ 

ಹರಸಿದ ಗುರುವಿಗೆ ವಂದನೆ 


ಬಗೆ ಬಗೆ ರೋಗವ 

ವಾಸಿ ಮಾಡುವ 

ವೈದ್ಯೆಗೆ ಮಾಡುವೆ ವಂದನೆ 


ನಿತ್ಯದಿ ದುಡಿದು 

ಅನ್ನವ ನೀಡುವ 

ರೈತಗೆ ಮಾಡುವೆ ವಂದನೆ 


ನಾಡಿನ ರಕ್ಷಣೆ 

ನಿತ್ಯದಿ ಮಾಡುವ 

ಯೋಧಗೆ ಮಾಡುವೆ ವಂದನೆ. 


Padya


Navamaasa hottu

Nannanu hettu

Saakida tayige vandane


Maimuri dudidu

Nannanu saluhi

Belesida tandege vandane


Vidya buddhi

Balyadi kalisi

Harasida guruvige vandane


Bage bage rogava

Vaasi maaduva

Vaidyege vandane


Nityadi dudidu

Annava needuva

Raitage maaduve vandane


Nadina rakshane

Nityadi maaduva

Yodhage maaduve vandane.

    


Friday, October 25, 2024

Muttu Muttu Maatu Muttu (ಮುತ್ತು ಮತ್ತು ಮಾತು ಮುತ್ತು)

Movie: Mrutyunjaya (1990)

Singers: SPB, Manjula Gururaj

Song link: Click Here 


Muttu muttu maatu muttu, ninna muttu tanda mattu (2)

Hitavagi sukhavagi saviyada kanasagi

Mana uyyaleya aadide ||


Nalle nadevaga naduvenu anda, giri navilondu kunidante chenda

Nalla nudivaga dani enu chenda, aragiliyante maatella anda

Jotheyagi nadevaga, olavinda kunivaga

Matte madhumaasavu bandide ||


Suli minchondu baninda jaari, nanna maiyella haridaditeno

Nanna usirata bisiyagi hogi, tanu aralutta hoovayiteno

Idu taane anuraaga, idu taane shubhayoga

Mana aanandava kandide ||


ಚಿತ್ರಗೀತೆ 


ಮುತ್ತು ಮತ್ತು ಮಾತು ಮುತ್ತು, ನಿನ್ನ ಮುತ್ತು ತಂದ ಮತ್ತು (೨)

ಹಿತವಾಗಿ ಸುಖವಾಗಿ ಸವಿಯಾದ ಕನಸಾಗಿ 

ಮನ ಉಯ್ಯಾಲೆಯಾ ಆಡಿದೆ ।।ಪ।।


ನಲ್ಲೆ ನಡೆವಾಗ ನಡುವೆನು ಅಂದ, ಗಿರಿ ನವಿಲೊಂದು ಕುಣಿದಂತೆ ಚೆಂದ 

ನಲ್ಲ ನುಡಿವಾಗ ದನಿ ಏನು ಚೆಂದ, ಅರಗಿಳಿಯಂತೆ ಮಾತೆಲ್ಲ ಅಂದ 

ಜೊತೆಯಾಗಿ ನಡೆವಾಗ, ಒಲವಿಂದ ಕುಣಿವಾಗ 

ಮತ್ತೆ ಮಧುಮಾಸವು ಬಂದಿದೆ ।।೧।।


ಸುಳಿ ಮಿಂಚೊ೦ದು ಬಾನಿಂದ ಜಾರಿ, ನನ್ನ ಮೈಯೆಲ್ಲ ಹರಿದಾಡಿತೇನೋ 

ನನ್ನ ಉಸಿರಾಟ ಬಿಸಿಯಾಗಿ ಹೋಗಿ, ತನು ಅರಳುತ್ತ ಹೂವಾಯಿತೇನೋ 

ಇದು ತಾನೇ ಅನುರಾಗ, ಇದು ತಾನೇ ಶುಭಯೋಗ 

ಮನ ಆನಂದವ ಕಂಡಿದೆ ।।೨।।

                                                                                                                                                              

Jataka Kudure (ಜಟಕಾ ಕುದುರೆ)

Movie: Gajapati Garvabhanga (1989)

Singer: Manjula Gururaj

Song link: Click Here


Jataka kudure hatti pyategoguma (2)

Jarada beeda tinta karaga noduma

He.. tali katto gandu, bisi ragi mudde undu (2)

Are jaldi jaldi nadi nadi yehe..yehe.. ||


Aaha ganda, jagamonda, ninna pinda, balu danda, heyya

Hane myale baasinga kunkuma (2)

Hase mane myale chendata aaduma

Nadi gandhi bajaru kade hoguma

Osi sendi sarayi ruchi noduma

Wahre mere cheta, tale mele kambi peta

Idu ragi kallu guta, aha entha mojinaata

Are bademeeya hidi kaiya.. baa..baa..baa ||

Kudure krishna.. !


Maduve aagoke munchene sobana (2)

Ninna maigella hacchabeku arishina, hi hi..

Ayyo yaara mukha nodi bande ee dina

Idu chandi chamundiya darshana

Ore dongana kodka, ninagyake bantu naduka

Ninna aase swalpa tadka, ninna kacche sari madka

Aha.. bhale bhale maja maja baa baa.. ||


He he ganda nintkolo..! hah hah he mundeganda nintkollalo !


ಚಿತ್ರಗೀತೆ 


ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ (೨)

ಜರದಾ ಬೀಡಾ ತಿಂತ ಕರಗ ನೋಡುಮ 

ಹೇ .. ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು (೨)

ಅರೆ ಜಲ್ದಿ ಜಲ್ದಿ ನಡಿ ನಡಿ ಏಹೇ ಏಹೇ .. ।।ಪ।।


ಆಹಾ ಗಂಡ, ಜಗಮೊಂಡ, ನಿನ್ನ ಪಿಂಡ, ಬಲುದಂಡ, ಹೇಯ್ಯಾ 

ಹಣೆ ಮ್ಯಾಲೆ ಬಾಸಿಂಗ ಕುಂಕುಮ (೨)

ಹಸೆ ಮಣೆ ಮ್ಯಾಲೆ ಚೆಂಡಾಟ ಆಡುಮಾ 

ನಡಿ ಗಾಂಧಿ ಬಜಾರು ಕಡೆ ಹೋಗುಮ 

ಒಸಿ ಸೇಂದಿ ಸಾರಾಯಿ ರುಚಿ ನೋಡುಮ 

ವ್ಹಾರೆ ಮೇರೆ ಚೇಟ, ತಲೆ ಮೇಲೆ ಕಂಬಿ ಪೇಟ 

ಇದು ರಾಗಿ ಕಲ್ಲು ಗೂಟ, ಅಹ ಎಂಥ ಮೋಜಿನಾಟ 

ಅರೆ ಬಡೆಮಿಯಾ ಹಿಡಿ ಕೈಯ ಬಾ .. ಬಾ .. ಬಾ ।।೧।।

ಕುದುರೆ ಕೃಷ್ಣಾ.. !


ಮದುವೆ ಆಗೋಕೆ ಮುಂಚೇನೇ ಸೋಬನಾ (೨)

ನಿನ್ನ ಮೈಗೆಲ್ಲಾ ಹಚ್ಚಬೇಕು ಅರಿಶಿನಾ, ಹಿ ಹಿ.. 

ಅಯ್ಯೋ ಯಾರ ಮುಖ ನೋಡಿ ಬಂದೆ ಈ ದಿನ 

ಇದು ಚಂಡಿ ಚಾಮುಂಡಿಯ ದರ್ಶನಾ 

ಒರೆ ದೊಂಗನಾ ಕೊಡ್ಕಾ, ನಿನಗ್ಯಾಕೆ ಬಂತು ನಡುಕ 

ನಿನ್ನ ಆಸೆ ಸ್ವಲ್ಪ ತಡ್ಕ, ನಿನ್ನ ಕಚ್ಚೆ ಸರಿ ಮಾಡ್ಕ 

ಅಹಾ .. ಭಲೇ ಭಲೇ ಮಜಾ ಮಜಾ ಬಾ ಬಾ ..  ।।೨।।


ಹೇ .. ಹೇ .. ಗಂಡ ನಿಂತ್ಕೊಳೋ,  ಹ್ಹ ಹ್ಹಹೇ  ಮುಂಡೆಗಂಡ ನಿಂತ್ಕೊಳ್ಳಲೋ ..!

                   


Premada Kadambari (ಪ್ರೇಮದ ಕಾದಂಬರಿ)

Movie: Bandhana (1984)

Singer: SPB

Song link: Click Here


Premada kadambari, baredanu kannirali

Katheyu mugide hodaru, mugiyadirali bandhana ||


Modala putaku koneya putaku, naduve enitu antara

Bandu hoguva sneha savira, nimma bandha nirantara ||


Nanna kathege antya baredu, kaviyu harasida nannanu

Koneya usirali onde aase, daiva harasali nimmanu ||


ಚಿತ್ರಗೀತೆ 


ಪ್ರೇಮದ ಕಾದಂಬರಿ, ಬರೆದನು ಕಣ್ಣೀರಲಿ 

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ ।।ಪ।।


ಮೊದಲ ಪುಟಕೂ ಕೊನೆಯ ಪುಟಕೂ, ನಡುವೆ ಎನಿತು ಅಂತರ 

ಬಂದು ಹೋಗುವ ಸ್ನೇಹ ಸಾವಿರ, ನಿಮ್ಮ ಬಂಧ ನಿರಂತರ ।।೧।।


ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು 

ಕೊನೆಯ ಉಸಿರಲಿ ಒಂದೇ ಆಸೆ, ದೈವ ಹರಸಲಿ ನಿಮ್ಮನು  ।।೨।।