Thursday, March 28, 2024

Vrundavanadolu Aaduvanyare (ವೃಂದಾವನದೊಳು ಆಡುವನ್ಯಾರೆ)

Bhaktigeete

Rachane: Purandara Dasaru

Song link: Click Here


Raaga: Sriraaga

Taala: Atataala


Vrundavanadolu aaduvanyare 

Gopi, chandira vadane noduva baare ||


Aruna pallava paada yugalane 

Divya, marakata manjulaabharanane

Sirivara yadukula somane 

Intha, paripurna Kaama nisseemane ||


Haara heeragunadharane

Divya, saara shareera shrungaarane

Aarigaadaru manadoorane

Tanna, seridavara maata meerane ||


Makara kundala kanti bharitane 

Divya, akalanka rupa lavanyane

Sakalarolage devaneetane

Namma, mukuteesha purandara vittalane ||


ಭಕ್ತಿಗೀತೆ   


ವೃಂದಾವನದೊಳು ಆಡುವನ್ಯಾರೆ 

ಗೋಪಿ, ಚಂದಿರವದನೆ ನೋಡುವ ಬಾರೆ  ।।ಪ।।


ಅರುಣಪಲ್ಲವ ಪಾದ ಯುಗಳನೇ

ದಿವ್ಯ, ಮರಕಟ ಮಂಜುಳಾಭರಣನೆ 

ಸಿರಿವರ ಯದುಕುಲ ಸೋಮನೆ 

ಇಂಥ, ಪರಿಪೂರ್ಣ ಕಾಮ ನಿಸ್ಸೀಮನೆ ।।೧।।


ಹಾರ ಹೀರ ಗುಣಧಾರನೆ 

ದಿವ್ಯ, ಸಾರ ಶರೀರ ಶೃಂಗಾರನೆ 

ಆರಿಗಾದರೂ ಮನದೂರನೆ 

ತನ್ನ, ಸೇರಿದವರ ಮಾತ ಮೀರನೆ ।।೨।।


ಮಕರ ಕುಂಡಲ ಕಾಂತಿ ಭರಿತನೆ 

ದಿವ್ಯ, ಅಕಳಂಕ ರೂಪ ಲಾವಣ್ಯನೆ 

ಸಕಲರೊಳಗೆ ದೇವನೀತನೆ 

ನಮ್ಮ, ಮುಕುತೀಶ ಪುರಂದರ ವಿಠ್ಠಲನೇ ।।೩।।

           

Daana Dharmava Maadi (ದಾನ ಧರ್ಮವ ಮಾಡಿ)

Bhaktigeete

Rachane: Kanaka Dasaru

Song link: Click Here


Daana dharmava maadi sukhiyaagu manave

Heenavruttiyali nee kedabeda manave ||


Ekkanaati ellamma maari durgi choudi

Akkarindali puje maadaleke

Kikkiridu yamana dutareledoivaga

Shaktiyaru bidisikondaareno marule ||


Sambhramadallondu hottu nemadalliddu

Tambittina deepa horaletake

Kombu hotu kuri konanaa baligomba

Dombi daivagala bhajisadiru manave ||


Chigurele bevinasoppu naara seere

Bagebageyinda shringaaramaadi

Negenegedu aadalu kuniyalu ninaginnu

Migilaada mukutiyunte hucchu manave ||


Daana dharma paropakaarava maadu

Deenanaagi nee kedabedavo

Jnanavillade heena daivava bhajisalu

Enuntu ninaginnu ele hucchumanave ||


Naralokadi yamana badheyu kaleyala

Vara punya kathegala kelutali

Siriyaadikeshavaraayana nere nambi

Stiravaada padaviya pade hucchu manave ||


ಭಕ್ತಿಗೀತೆ 


ದಾನ ಧರ್ಮವ ಮಾಡಿ ಸುಖಿಯಾಗು ಮನವೆ 

ಹೀನವೃತ್ತಿಯಲಿ ನೀ ಕೆಡಬೇಡ ಮನವೆ ।।ಪ।।


ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿ ಚೌಡಿ 

ಅಕ್ಕರಿಂದಲಿ ಪೂಜೆ ಮಾಡಲೇಕೆ 

ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ 

ಶಕ್ತಿಯರು ಬಿಡಿಸಿಕೊಂಡಾರೇನೊ ಮರುಳೆ ।।೧।।


ಸಂಭ್ರಮದಲ್ಲೊಂದು ಹೊತ್ತು ನೇಮದಲ್ಲಿದ್ದು 

ತಂಬಿಟ್ಟಿನಾ ದೀಪ ಹೊರಲೇತಕೆ 

ಕೊಂಬು ಹೋತು ಕುರಿ ಕೋಣನಾ ಬಲಿಗೊಂಬ 

ದೊಂಬಿ ದೈವಗಳ ಭಜಿಸದಿರು ಮನವೇ ।।೨।।


ಚಿಗುರೆಲೆ ಬೇವಿನಸೊಪ್ಪು ನಾರ ಸೀರೆ 

ಬಗೆಬಗೆಯಿಂದ ಶೃಂಗಾರಮಾಡಿ 

ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು 

ಮಿಗಿಲಾದ ಮುಕುತಿಯುಂಟೆ ಹುಚ್ಚು ಮನವೆ ।।೩।।


ದಾನ ಧರ್ಮ ಪರೋಪಕಾರವ ಮಾಡು 

ದೀನನಾಗಿ ನೀ ಕೆಡಬೇಡವೊ 

ಜ್ಞಾನವಿಲ್ಲದೆ ಹೀನ ದೈವವ ಭಜಿಸಲು 

ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ ।।೪।।


ನರಲೋಕದಿ ಯಮನ ಬಾಧೆಯು ಕಳೆಯಲ 

ವರ ಪುಣ್ಯ ಕಥೆಗಳ ಕೇಳುತಲಿ 

ಸಿರಿಯಾದಿಕೇಶವರಾಯನ ನೆರೆ ನಂಬಿ 

ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ ।।೫।।

                 


Kula Kula Kulavennutiharu (ಕುಲ ಕುಲ ಕುಲವೆನ್ನುತಿಹರು)

Bhaktigeete

Rachane: Kanaka Dasaru

Song link: Click Here


Kula kula kulavennutiharu

Kula yavudu satya sukhavulla janarige ||


Kesarolu tavare puttalu ada tandu

Bisajanaabhanigarpisalillave

Hasuvina mamsadol utpatti ksheeravu

Vasudheyolage bhusurarunnallillave |


Mrugagala maiyalli puttalu kasturi

Tegedu pusuvaru dwijarellaru

Ogeyinda narayananaava kulavaiyya

Jagavallabhanaava kula pelirayya ||


Atma yava kula jeeva yava kula

Tatvendriyagala kula pelirayya

Aata mahatmanu neleyaadikeshava

Yatara kulavaiyya aatanolida mele ||


ಭಕ್ತಿಗೀತೆ 


ಕುಲ ಕುಲ ಕುಲವೆನ್ನುತಿಹರು 

ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ ।।ಪ।।


ಕೆಸರೊಳು ತಾವರೆ ಪುಟ್ಟಲು ಅದ ತಂದು 

ಬಿಸಜನಾಭನಿಗರ್ಪಿಸಲಿಲ್ಲವೆ  

ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು 

ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ ।।೧।।


ಮೃಗಗಳ ಮೈಯಲಿ ಪುಟ್ಟಲು ಕಸ್ತೂರಿ 

ತೆಗೆದು ಪೂಸುವರು ದ್ವಿಜರೆಲ್ಲರು 

ಒಗೆಯಿಂದ ನಾರಾಯಣನಾವ ಕುಲವಯ್ಯ 

ಜಗವಲ್ಲಭನಾವ ಕುಲ ಪೇಳಿರಯ್ಯ ।।೨।।


ಆತ್ಮ ಯಾವ ಕುಲ ಜೀವ ಯಾವ ಕುಲ 

ತತ್ವೇ೦ದ್ರಿಯಗಳ ಕುಲ ಪೇಳಿರಯ್ಯ 

ಆತ ಮಹಾತ್ಮನು ನೆಲೆಯಾದಿಕೇಶವ 

ಯಾತರ ಕುಲವಯ್ಯ ಆತನೊಲಿದ ಮೇಲೆ ।।೩।।

             


Wednesday, March 27, 2024

Hrudaya Samudra Kalaki (ಹೃದಯ ಸಮುದ್ರ ಕಲಕಿ)

Movie: Ashwamedha (1990)

Singer: Dr. Rajkumar

Song link: Click Here


Hrudaya samudra kalaki, hottide dweshada benki

Roshagni jwale uriduridu

Dushta samhaarake, satya jhenkaarake, prana otte ittu..horaaduve..!

Ditta hejje ittu, yajna dheekshe tottu

Nadesuve ashwamedha.. ashwamedha.. (2) ||


Surya chandrare ninna kangalu, giri shrungave ninna angavo..o..

Dikpaalakare ninna kalgalu, minchu sidilu ninna vegavu

Jeevajeevadali beretu hoda..

Bhavabhavadali karagi hoda..jeevaashwave duraadeya

Pranashwave mareyaadeya, ditta hejje ittu, yajna dheekshe tottu

Nadesuve ashwamedha.. ashwamedha.. (2) ||


Vishavyuhavaa kutti kedavalu, veera pourusha etti hididu

Takita dheem dhirana (3), dheem 

Dhirana (4) dheemtana 

Takita dheem (2) dheem tana

Chadma veshava horageleyalu, kshatra tejadaa katti hiridu

Khula rakshara kocchi kadive, neeti nemagala bitti beleve

Aakashave mel beelali, bhu tayiye bai biriyali

Ditta hejje ittu, yjana dheekshe tottu

Nadesuve ashwamedha.. ashwamedha.. (3) ||


ಚಿತ್ರಗೀತೆ 


ಹೃದಯ ಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ 

ರೋಷಾಗ್ನಿ ಜ್ವಾಲೆ ಉರಿದುರಿದೂ 

ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ, ಪ್ರಾಣ ಒತ್ತೆ ಇಟ್ಟೂ .. ಹೋರಾಡುವೇ .. 

ದಿಟ್ಟ ಹೆಜ್ಜೆ ಇಟ್ಟು, ಯಜ್ಞ ಧೀಕ್ಷೆ ತೊಟ್ಟು 

ನಡೆಸುವೆ ಅಶ್ವಮೇಧಾ .. ಅಶ್ವಮೇಧಾ .. (೨) ।।ಪ।।


ಸೂರ್ಯ ಚಂದ್ರರೇ ನಿನ್ನ ಕಂಗಳು, ಗಿರಿ ಶೃಂಗವೇ ನಿನ್ನ ಅಂಗವೋ .. ಓ .. 

ದಿಕ್ಪಾಲಕರೇ ನಿನ್ನ ಕಾಲ್ಗಳು, ಮಿಂಚು ಸಿಡಿಲು ನಿನ್ನ ವೇಗವು 

ಜೀವಜೀವದಲಿ ಬೆರೆತು ಹೋದಾ .. 

ಭಾವಭಾವದಲಿ ಕರಗಿ ಹೋದಾ .. ಜೀವಶ್ವಾವೇ ದೂರಾದೆಯಾ 

ಪ್ರಾಣಾಶ್ವವೇ ಮರೆಯಾದೆಯಾ, ದಿಟ್ಟ ಹೆಜ್ಜೆ ಇಟ್ಟು, ಯಜ್ಞ ಧೀಕ್ಷೆ ತೊಟ್ಟು 

ನಡೆಸುವೆ ಅಶ್ವಮೇಧಾ .. ಅಶ್ವಮೇಧಾ .. (೨) ।।೧।।


ವಿಷವ್ಯೂಹವಾ ಕುಟ್ಟಿ ಕೆಡವಲು, ವೀರ ಪೌರುಷಾ ಎತ್ತಿ ಹಿಡಿದೂ 

ತಕಿಟ ಧೀ೦ ಧಿರನ (೩)  ಧೀ೦ 

ಧಿರನ (೪) ಧೀ೦ತನ 

ತಕಿಟ ಧೀ೦ (೨) ಧೀ೦ ತನ 

ಛದ್ಮ ವೇಷವ ಹೊರಗೆಳೆಯಲು, ಕ್ಷಾತ್ರ  ತೇಜದಾ ಕತ್ತಿ ಹಿರಿದೂ 

ಖೂಳ ರಾಕ್ಷಸರ ಕೊಚ್ಚಿ ಕಡಿವೆ, ನೀತಿ ನೇಮಗಳ ಬಿತ್ತಿ ಬೆಳೆವೆ 

ಆಕಾಶವೇ ಮೇಲ್ ಬೀಳಲಿ, ಭೂ ತಾಯಿಯೇ ಬಾಯ್ ಬಿರಿಯಲಿ 

ದಿಟ್ಟ ಹೆಜ್ಜೆ ಇಟ್ಟು, ಯಜ್ಞ ಧೀಕ್ಷೆ ತೊಟ್ಟು 

ನಡೆಸುವೆ ಅಶ್ವಮೇಧಾ .. ಅಶ್ವಮೇಧಾ .. (೩) ।।೨।।

                        


Mangalada Ee Sudina (ಮಂಗಳದ ಈ ಸುದಿನ)

Movie: Naa Mecchida Huduga (1970)

Singer: S Janaki

Song link: Click Here


Mangalada ee sudina, madhuravaagali

Nimmolave ee maneya

Nanda deepavagali ||


Anuraagada raagamaale nimmadagali

Apaswarada chaye endu kaanadaagali

Shrutiyodane swarataana leenavagali

Shuba geete midiyali ||


Tande taayi daari toro kannugaleradu

Avara prema duravage makkalu kurudu

Mamateyiruva maneye sada jeninagudu

Ade shantiya beedu ||


ಚಿತ್ರಗೀತೆ 


ಮಂಗಳದ ಈ ಸುದಿನ, ಮಧುರವಾಗಲಿ 

ನಿಮ್ಮೊಲವೆ ಈ ಮನೆಯ 

ನಂದಾ ದೀಪವಾಗಲಿ ।।ಪ।।


ಅನುರಾಗದ ರಾಗಮಾಲೆ ನಿಮ್ಮದಾಗಲಿ 

ಅಪಸ್ವರದ ಛಾಯೆ ಎಂದು ಕಾಣದಾಗಲಿ 

ಶೃತಿಯೊಡನೆ ಸ್ವರತಾನ ಲೀನವಾಗಲಿ 

ಶುಭ ಗೀತೆ ಮಿಡಿಯಲಿ ।।೧।।


ತಂದೆ ತಾಯಿ ದಾರಿ ತೋರೋ ಕಣ್ಣುಗಳೆರಡು 

ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು 

ಮಮತೆಯಿರುವ ಮನೆಯೆ ಸದಾ ಜೇನಿನಗೂಡು 

ಅದೇ ಶಾಂತಿಯ ಬೀಡು ।।೨।।

       


Manave Mandira (ಮನವೆ ಮಂದಿರ)

Movie: Tugudeepa (1966)

Singer: P B Srinivas

Song link: Click Here


Manave mandira (2), nyaya degula

Cheluve devaru olave deevige

Manave mandira .. ||


Karune mamate neeti niyama

Iralu baduku jenugudu, aa..aa

Beda samshaya bhranti vanchane

Himse tumbida vishada vachana ||


Naanu neenu avanu ivalu

Ella onde taaya sutaru, aa.. aa..

Emba bhava banda hrudaya, 

Devaniruva prema nilaya ||


ಚಿತ್ರಗೀತೆ 


ಮನವೆ ಮಂದಿರ (೨),ನ್ಯಾಯ ದೇಗುಲ 

ಚೆಲುವೆ ದೇವರು ಒಲವೇ ದೀವಿಗೆ 

ಮನವೆ ಮಂದಿರ ।।ಪ।।


ಕರುಣೆ ಮಮತೆ ನೀತಿ ನಿಯಮ 

ಇರಲು ಬದುಕು ಜೇನುಗೂಡು, ಆ ..ಆ 

ಬೇಡ ಸಂಶಯ ಭ್ರಾಂತಿ ವಂಚನೆ 

ಹಿಂಸೆ ತುಂಬಿದ ವಿಷದ ವಚನ ।।೧।।


ನಾನು ನೀನು ಅವನು ಇವಳು 

ಎಲ್ಲಾ ಒಂದೇ ತಾಯ ಸುತರು, ಆ .. ಆ .. 

ಎಂಬ ಭಾವ ಬಂದ ಹೃದಯ 

ದೇವನಿರುವ ಪ್ರೇಮ ನಿಲಯ ।।೨।।

                    


Halliyaadarenu Shiva (ಹಳ್ಳಿಯಾದರೇನು ಶಿವಾ)

Movie: Mayer Muttanna (1969)

Singer: P B Srinivas

Song link: Click Here


Halliyaadarenu shiva, dilliyaadarenu shiva

Janarella onde shiva, ella ninnante shiva

Jagavella ninnade shiva ||


Ella sampattallitte, ellarigende kotte (2)

Hanchikondu baalalariyada, duraase jana huh..

Vanchaneya maadutiruvaro

Badavarannu tulidu, ajankaaradalli meredu

Anyaya maadutiruvaro ||


Mahadiyaliddarenu, gudisalaliddarenu (2)

Hasivige anna tinnade, chinnavannu tinnalu sadhyavenu

Swarthadinda kudi, eneno aatavaadi

Barigaili kadege nadevaro..o.. ||


ಚಿತ್ರಗೀತೆ 


ಹಳ್ಳಿಯಾದರೇನು ಶಿವಾ, ದಿಲ್ಲಿಯಾದರೇನು ಶಿವಾ 

ಜನರೆಲ್ಲ ಒಂದೇ ಶಿವಾ, ಎಲ್ಲಾ ನಿನ್ನಂತೆ ಶಿವಾ 

ಜಗವೆಲ್ಲಾ ನಿನ್ನದೇ ಶಿವಾ ।।ಪ।।


ಎಲ್ಲಾ ಸಂಪತ್ತಲ್ಲಿಟ್ಟೆ, ಎಲ್ಲರಿಗೆಂದೆ ಕೊಟ್ಟೆ (೨)

ಹಂಚಿಕೊಂಡು ಬಾಳಲರಿಯದ, ದುರಾಸೆ ಜನ ಹ್ಹ.. 

ವಂಚನೆಯ ಮಾಡುತಿರುವರೋ 

ಬಡವರನ್ನು ತುಳಿದು, ಅಹಂಕಾರದಲ್ಲಿ ಮೆರೆದು 

ಅನ್ಯಾಯ ಮಾಡುತಿರುವರೋ ।।೧।।


ಮಹಡಿಯಲಿದ್ದರೇನು, ಗುಡಿಸಲಲಿದ್ದರೇನೂ  (೨)

ಹಸಿವಿಗೆ ಅನ್ನ ತಿನ್ನದೆ, ಚಿನ್ನವನ್ನು ತಿನ್ನಲು ಸಾಧ್ಯವೇನು 

ಸ್ವಾರ್ಥದಿಂದ ಕೂಡಿ, ಏನೇನೋ ಆಟವಾಡಿ 

ಬರಿಗೈಲಿ ಕಡೆಗೆ ನಡೆವರೋ .. ಓ .. ।।೨।।