Thursday, September 7, 2023

Yaare Rangana Yaare Krishnana (ಯಾರೇ ರಂಗನ ಯಾರೇ ಕೃಷ್ಣನ)

Bhaktigeete

Sri Purandara Dasara Keerthanegalu

Song link: Click Here


Raga: Aadi

Tala: Hindola


Yaare rangana yaare krishnana

Yaare rangana kareya bandavaru ||


Gopala krishnana paapavinashana

Ee pariyindali kareya bandavaru ||


Venu vinodana Prana priyana

Jaaneyararasana kareya bandavaru ||


Kariraja varadana parama purushana

Purandara vittalana kareya bandavaru ||


ಭಕ್ತಿಗೀತೆ 


ಯಾರೇ ರಂಗನ ಯಾರೇ ಕೃಷ್ಣನ 

ಯಾರೇ ರಂಗನ ಕರೆಯ ಬಂದವರು ।।ಪ।।


ಗೋಪಾಲ ಕೃಷ್ಣನ ಪಾಪವಿನಾಶನ 

ಈ ಪರಿಯಿಂದಲಿ ಕರೆಯ ಬಂದವರು ।।೧।।


ವೇಣು ವಿನೋದನ ಪ್ರಾಣ ಪ್ರಿಯನಾ 

ಜಾಣೆಯರರಸನ ಕರೆಯ ಬಂದವರು ।।೨।।


ಕರಿರಾಜ ವರದನ ಪರಮ ಪುರುಷನ 

ಪುರಂದರ ವಿಠ್ಠಲನ ಕರೆಯ ಬಂದವರು ।।೩।।              ಶ್ರೀ 




Wednesday, September 6, 2023

Yamuna Teera Vihari (ಯಮುನಾ ತೀರ ವಿಹಾರಿ)

Bhaktigeete

Song link: Click Here


Yamuna teera vihari, vrundavana sanchari

Govardhana giridhari, gopalakrishna murari ||


Prema hrudaya sanchari, balakrishna kanhayi

Govardhana giridhari, gopalakrishna murari ||


Radha chetohaari, muraligaana vihari

Govardhana giridhari, gopalakrishna murari ||


ಭಕ್ತಿಗೀತೆ 


ಯಮುನಾ ತೀರ ವಿಹಾರಿ, ವೃಂದಾವನ ಸಂಚಾರಿ 

ಗೋವರ್ಧನ ಗಿರಿಧಾರಿ, ಗೋಪಾಲಕೃಷ್ಣ ಮುರಾರಿ ।।


ಪ್ರೇಮ ಹೃದಯ ಸಂಚಾರಿ, ಬಾಲಕೃಷ್ಣ ಕನ್ಹಾಯಿ 

ಗೋವರ್ಧನ ಗಿರಿಧಾರಿ, ಗೋಪಾಲಕೃಷ್ಣ ಮುರಾರಿ ।।


ರಾಧಾ ಚೇತೋಹಾರಿ, ಮುರಳೀಗಾನ ವಿಹಾರಿ 

ಗೋವರ್ಧನ ಗಿರಿಧಾರಿ, ಗೋಪಾಲಕೃಷ್ಣ ಮುರಾರಿ ।।




Tuesday, September 5, 2023

Lolalotte Ella Lolalotte (ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ)

 Bhaktigeete

Sri Purandara Dasara Keerthanegalu

Song link: Click Here


Raga: Shankarabharana

Tala: Atatala


Lolalotte ella lolalotte ||


Aane kudure onte lolalotte

Bahu sene bhandaravu lolalotte

Maniniyara sanga lolalotte

Dodda, kshoneeshanembudu lolalotte ||


Muttu manikya lolalotte

Matte chatra chamara dhwaja lolalotte

Suttagala kote lolalotte

Matte, uttama prabhutva lolalotte ||


Kantakarembodu lolalotte

Namma nentaru istharu lolalotte

Untada gunanidhi purandara vittalanna

Bantanagadava lolalotte ||


ಭಕ್ತಿಗೀತೆ 


ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ।।ಪ।।


ಆನೆ ಕುದುರೆ ಒಂಟೆ ಲೊಳಲೊಟ್ಟೆ 

ಬಹು ಸೇನೆ ಭಂಡಾರವು ಲೊಳಲೊಟ್ಟೆ 

ಮಾನಿನಿಯರ ಸಂಗ ಲೊಳಲೊಟ್ಟೆ 

ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ ।।೧।।


ಮುತ್ತು ಮಾಣಿಕ್ಯ ಲೊಳಲೊಟ್ಟೆ 

ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ 

ಸುತ್ತಗಲ  ಕೋಟೆ ಲೊಳಲೊಟ್ಟೆ 

ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ ।।೨।।


ಕಂಟಕರೆಂಬೋದು ಲೊಳಲೊಟ್ಟೆ 

ನಮ್ಮ ನೆಂಟರು ಇಷ್ಟರು ಲೊಳಲೊಟ್ಟೆ 

ಉಂಟಾದ ಗುಣನಿಧಿ ಪುರಂದರವಿಠ್ಠಲನ್ನ 

ಬಂಟನಾಗದವ ಲೊಳಲೊಟ್ಟೆ ।।೩।।                                       ಶ್ರೀ 



Monday, September 4, 2023

Yare Neenu Cheluve (ಯಾರೇ ನೀನು ಚೆಲುವೇ)

Movie: Nanu Nanna Hendti (1985)

Sahitya: Hamsalekha

Singer: SPB

Song link: Click Here


Yare neenu cheluve (2) ninnastakke neene (2)

Ninnastakke neene eke naguve (2) ||


Munjane hottinalli, nammurina dibbadali (2)

Bangarada tili bannada suryana nodalu kayuttidde (2)

Ellindalo neenu bande, suryana mare maadi ninde (2)

Dalimbe hannante neenu, nagu chellida karanavenu

Innomme nakkare neenu, aa suryane nachikondano ||


Hunnime ratriyali, beladingala belakinali (2)

Chandrana melondu, kavyava kattalu ekantadallide (2)

Mele nodidare alli, chandranilla baninalli(2)

Neene nintidde alli, haalinantha naguvanna chelli

Chandranilla baninalli, neenidde nanna kavyadalli ||


ಚಿತ್ರಗೀತೆ 


ಯಾರೇ ನೀನು ಚೆಲುವೇ (೨) ನಿನ್ನಷ್ಟಕ್ಕೆ ನೀನೇ (೨)

ನಿನ್ನಷ್ಟಕ್ಕೆ ನೀನೆ ಏಕೆ ನಗುವೇ (೨) ।।ಪ।।


ಮುಂಜಾನೆ ಹೊತ್ತಿನಲ್ಲಿ, ನಮ್ಮೂರಿನ ದಿಬ್ಬದಲಿ (೨)

ಬಂಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ (೨)

ಎಲ್ಲಿಂದಲೋ ನೀನೂ ಬಂದೆ, ಸೂರ್ಯನ ಮರೆ ಮಾಡಿ ನಿಂದೆ 

ದಾಳಿಂಬೆ ಹಣ್ಣಂತೆ ನೀನೂ, ನಗು ಚೆಲ್ಲಿದ ಕಾರಣವೇನು 

ಇನ್ನೊಮ್ಮೆ ನಕ್ಕರೆ ನೀನೂ, ಆ ಸೂರ್ಯನೆ ನಾಚಿಕೊಂಡನೊ ।।೧।।


ಹುಣ್ಣಿಮೆ ರಾತ್ರಿಯಲಿ, ಬೆಳದಿಂಗಳ ಬೆಳಕಿನಲಿ (೨)

ಚಂದ್ರನ ಮೇಲೊಂದು, ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ (೨)

ಮೇಲೆ ನೋಡಿದರೆ ಅಲ್ಲಿ, ಚಂದ್ರನಿಲ್ಲ ಬಾನಿನಲ್ಲಿ (೨)

ನೀನೇ ನಿಂತಿದ್ದೆ ಅಲ್ಲಿ, ಹಾಲಿನಂಥ ನಗುವನ್ನ ಚೆಲ್ಲಿ 

ಚಂದ್ರನಿಲ್ಲ ಬಾನಿನಲ್ಲಿ, ನೀನಿದ್ದೆ ನನ್ನ ಕಾವ್ಯದಲ್ಲಿ ।।೨।।



Sunday, September 3, 2023

Mayavagide Manasu (ಮಾಯವಾಗಿದೆ ಮನಸು)

Movie: Haage Summane (2008)

Sahitya: Jayanth Kaykini

Singer: Sonu Nigam

Song link: Click Here


 Mayavagide manasu, haage summane

Gayava madide kanasu, haage summane

Mohadalli beeluva, madhuravada bhavane

Eega tane bandide, needade suchane ||


Tumbi hoyiteegale, nanna dinachari

Ella putadalu, avalade vaikhari

Avala niluvugannadi, punya madide

Roopa tali nintide nannade kalpane ||


Nanna haadinallide, avala sangati

Jaahiragali, jeevada mahiti

Elle horatu nintaru, alle talupuve

Jasti helalarenu, khasagi yochane ||


ಚಿತ್ರಗೀತೆ 


ಮಾಯವಾಗಿದೆ ಮನಸು, ಹಾಗೆ ಸುಮ್ಮನೆ 

ಗಾಯವ ಮಾಡಿದೆ ಕನಸು, ಹಾಗೆ ಸುಮ್ಮನೆ 

ಮೋಹದಲ್ಲಿ ಬೀಳುವ, ಮಧುರವಾದ ಭಾವನೆ 

ಈಗ ತಾನೆ ಬಂದಿದೆ, ನೀಡದೆ ಸೂಚನೆ ।।ಪ।।


ತುಂಬಿ ಹೋಯಿತೀಗಲೇ, ನನ್ನ ದಿನಚರಿ 

ಎಲ್ಲ ಪುಟದಲು, ಅವಳದೇ ವೈಖರಿ 

ಅವಳ ನಿಲುವುಗನ್ನಡಿ, ಪುಣ್ಯ ಮಾಡಿದೆ 

ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ ।।೧।।


ನನ್ನ ಹಾಡಿನಲ್ಲಿದೆ, ಅವಳ ಸಂಗತಿ 

ಜಾಹೀರಾಗಲಿ, ಜೀವದ ಮಾಹಿತಿ 

ಎಲ್ಲೆ ಹೊರಟು ನಿಂತರು, ಅಲ್ಲೆ ತಲುಪುವೆ 

ಜಾಸ್ತಿ ಹೇಳಲಾರೆನು, ಖಾಸಗಿ ಯೋಚನೆ ।।೨।।



Saturday, September 2, 2023

Hakida Janivarava (ಹಾಕಿದ ಜನಿವಾರವ)

Tatvapada

Sishunala Shariefa sahebara Geetegalu

Singer: Shivamogga Subbanna

Song link: Click Here


Hakida janivarava sadgurunatha

Hakida janivarava!


Hakida janivara nukida bhavabhara

Lokade brahmajnana nee padeyendu

Hakida janivarava.


Sandhyavandane kalisi - aanandada

Bindu madhyadi nilisi,

Nandisi manasanu atmada jaladali

Endendigu yamadandugavaliyendu

Hakida janivarava.


Kanda kandavarodane aledi - dharma

Landara jate yake beredi?

Punda eetana nooku endu nindise, guru

Gandendareetane neevella chee endu

Hakida janivarava.


Sishunaladheesha guru - tannodalolu

Vashavada sutravanu

Nasunagutali tegedalliye todisida

Usurida mantrava hosabana maaduta

Hakida janivarava.


ತತ್ವಪದ 


ಹಾಕಿದ ಜನಿವಾರವ ಸದ್ಗುರುನಾಥ 

ಹಾಕಿದ ಜನಿವಾರವ !


ಹಾಕಿದ ಜನಿವಾರ ನೂಕಿದ ಭವಭಾರ 

ಲೋಕದೆ ಬ್ರಹ್ಮಜ್ಞಾನ ನೀ ಪಡೆಯೆಂದು 

ಹಾಕಿದ ಜನಿವಾರವ. 


ಸಂಧ್ಯಾವಂದನೆ ಕಲಿಸಿ - ಆನಂದದ 

ಬಿಂದು ಮಧ್ಯದಿ ನಿಲಿಸಿ,

ನಂದಿಸಿ ಮನಸನು ಆತ್ಮದ ಜಲದಲಿ 

ಎಂದೆಂದಿಗೂ ಯಮದಂದುಗವಳಿಯೆಂದು 

ಹಾಕಿದ ಜನಿವಾರವ. 


ಕಂಡ ಕಂಡವರೊಡನೆ ಅಲೆದಿ - ಧರ್ಮ

ಲಂಡರ ಜತೆ ಯಾಕೆ ಬೆರೆದಿ ?

ಪುಂಡ ಈತನ ನೂಕು ಎಂದು ನಿಂದಿಸೆ, ಗುರು 

ಗಂಡೆಂದರೀತನೆ ನೀವೆಲ್ಲ ಛೀ ಎಂದು

ಹಾಕಿದ ಜನಿವಾರವ. 


ಶಿಶುನಾಳಾಧೀಶ ಗುರು - ತನ್ನೊಡಲೊಳು 

ವಶವಾದ ಸೂತ್ರವನು 

ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ 

ಉಸುರಿದ ಮಂತ್ರವ ಹೊಸಬನ ಮಾಡುತ 

ಹಾಕಿದ ಜನಿವಾರವ. 



Friday, September 1, 2023

Naa Ninna Kandaga (ನಾ ನಿನ್ನ ಕಂಡಾಗ)

Bhavageete

Sahitya: K S Nisar Ahmed

Singer: Shivamogga Subbanna

song link: Click Here


Naa ninna kandaga estondu nalavittu

Estondu gelavittu, astondu naguvittu ||


Hagalella ninna dhyana, irulella ninna swapna

Nee nadeva daariyalli, anudinavu nanna payana ||


Nannedeya totadalli aadadu o! navile

Ihudalli haccha hasiru, ilidihudu karmugile ||


Hattaru chinteyirali, ballella gole irali

Nee nakkarella mareve, sukha swapnadalli teli ||


Nenedaga ninna roopa, edegattalalli deepa

Mana bicchi omme nagalu, nanagava chinte digilu? ||


ಭಾವಗೀತೆ 


ನಾ ನಿನ್ನ ಕಂಡಾಗ ಎಷ್ಟೊಂದು ನಲವಿತ್ತು 

ಎಷ್ಟೊಂದು ಗೆಲವಿತ್ತು, ಅಷ್ಟೊಂದು ನಗುವಿತ್ತು ।।ಪ।।


ಹಗಲೆಲ್ಲ ನಿನ್ನ ಧ್ಯಾನ, ಇರುಳೆಲ್ಲ ನಿನ್ನ ಸ್ವಪ್ನ 

ನೀ ನಡೆವ ದಾರಿಯಲ್ಲಿ, ಅನುದಿನವು ನನ್ನ ಪಯಣ ।।೧।।


ನನ್ನೆದೆಯ ತೋಟದಲ್ಲಿ ಆಡಾಡು ಓ! ನವಿಲೆ 

ಇಹುದಲ್ಲಿ ಹಚ್ಚ ಹಸಿರು, ಇಳಿದಿಹುದು ಕಾರ್ಮುಗಿಲೇ ।।೨।।


ಹತ್ತಾರು ಚಿಂತೆಯಿರಲಿ, ಬಾಳೆಲ್ಲ ಗೋಳೆ ಇರಲಿ 

ನೀ ನಕ್ಕರೆಲ್ಲ ಮರೆವೆ, ಸುಖ ಸ್ವಪ್ನದಲ್ಲಿ ತೇಲಿ ।।೩।।


ನೆನೆದಾಗ ನಿನ್ನ ರೂಪ, ಎದೆಗತ್ತಲಲ್ಲಿ ದೀಪ 

ಮನ ಬಿಚ್ಚಿ ಒಮ್ಮೆ ನಗಲು, ನನಗಾವ ಚಿಂತೆ ದಿಗಿಲು ? ।।೪।।