Thursday, August 24, 2023

Anuragadalegala Mele (ಅನುರಾಗದಲೆಗಳ ಮೇಲೆ)

Movie: Anuragada Alegalu (1992)

Sahitya: Hamsalekha

Singer: Raghavendra Rajkumar, Manjula Gururaj

Song link: Click Here


Anuragadalegala mele, sangeeta swaragala leele

Nadedaga jeevana gaana, rasapurnavo

O manase, kadalagiru, mugilaguve

Anuragadalegala mele, sangeeta swaragala leele

Nadedaga jeevana yana, paripurnavo

O manase, mugilaagiru, maleyaguve ||


Modalu nee jagava preeti maadu

Olavina koti mogava nodu

Badukige prema sparsha needu

Olavina purna phalava nodu

Siritana, badatana, siritana, badatana

Antarada meleru, naguvina, aluvina

Nantarada haadagu, nantarada olavina haadagu 

Anuragadalegala mele, sangeeta swaragala leele

Nadedaga jeevana yana, paripurnavo

O manase, mugilaagiru, maleyaguve ||


Hrudayada baagilante kannu, kannina kavyavante hennu

Hennina gelatiyante prema, premake devanante shyama

Shamana kolalina, madhura dani keli

Radheya, hrudayavu, malaguvude heli

Olavinede malaguvude heli 

Anuragadalegala mele, sangeeta swaragala leele

Nadedaga jeevana gaana, rasapurnavo

O manase, maleyagiru, hasiraguve ||


ಚಿತ್ರಗೀತೆ 


ಅನುರಾಗದಲೆಗಳ ಮೇಲೆ, ಸಂಗೀತ ಸ್ವರಗಳ ಲೀಲೆ 

ನಡೆದಾಗ ಜೀವನ ಗಾನ, ರಸಪೂರ್ಣವೋ 

ಓ ಮನಸೇ, ಕಡಲಾಗಿರು, ಮುಗಿಲಾಗುವೆ 

ಅನುರಾಗದಲೆಗಳ ಮೇಲೆ, ಸಂಗೀತ ಸ್ವರಗಳ ಲೀಲೆ 

ನಡೆದಾಗ ಜೀವನ ಯಾನ , ಪರಿಪೂರ್ಣವೋ

ಓ ಮನಸೇ, ಮುಗಿಲಾಗಿರು, ಮಳೆಯಾಗುವೆ  ।।ಪ।।


ಮೊದಲು ನೀ ಜಗವ ಪ್ರೀತಿ ಮಾಡು 

ಒಲವಿನ ಕೋಟಿ ಮೊಗವ ನೋಡು 

ಬದುಕಿಗೆ ಪ್ರೇಮ ಸ್ಪರ್ಶ ನೀಡು 

ಒಲವಿನ ಪೂರ್ಣ ಫಲವ ನೋಡು 

ಸಿರಿತನ, ಬಡತನ, ಸಿರಿತನ, ಬಡತನ

ಅಂತರದ ಮೇಲೇರು, ನಗುವಿನ, ಅಳುವಿನ 

ನಂತರದ ಹಾಡಾಗು, ನಂತರದ ಒಲವಿನ ಹಾಡಾಗು

ಅನುರಾಗದಲೆಗಳ ಮೇಲೆ, ಸಂಗೀತ ಸ್ವರಗಳ ಲೀಲೆ 

ನಡೆದಾಗ ಜೀವನ ಯಾನ , ಪರಿಪೂರ್ಣವೋ

ಓ ಮನಸೇ, ಮುಗಿಲಾಗಿರು, ಮಳೆಯಾಗುವೆ   ।।೧।।


ಹೃದಯದ ಬಾಗಿಲಂತೆ ಕಣ್ಣು, ಕಣ್ಣಿನ ಕಾವ್ಯವಂತೆ ಹೆಣ್ಣು 

ಹೆಣ್ಣಿನ ಗೆಳತಿಯಂತೆ ಪ್ರೇಮ, ಪ್ರೇಮಕೆ ದೇವನಂತೆ ಶ್ಯಾಮ 

ಶಾಮನ, ಕೊಳಲಿನ, ಮಧುರ ದನಿ ಕೇಳಿ 

ರಾಧೆಯ, ಹೃದಯವು, ಮಲಗುವುದೆ ಹೇಳಿ 

ಒಲವಿನೆದೆ ಮಲಗುವುದೆ ಹೇಳಿ 

 ಅನುರಾಗದಲೆಗಳ ಮೇಲೆ, ಸಂಗೀತ ಸ್ವರಗಳ ಲೀಲೆ 

ನಡೆದಾಗ ಜೀವನ ಗಾನ, ರಸಪೂರ್ಣವೋ 

ಓ ಮನಸೇ, ಮಳೆಯಾಗಿರು, ಹಸಿರಾಗುವೆ  ।।೨।।




Wednesday, August 23, 2023

Muttu Kolliro Janaru (ಮುತ್ತು ಕೊಳ್ಳಿರೊ ಜನರು)

Bhaktigeete

Sri Purandara Dasara Keerthanegalu

Song link: Click Here


Raga: Panturavali

Tala: Aditala


Muttu kolliro, janaru, mutu kolliro |

Muttu bandide kolli sacchidananda divya ||


Jnanavembo daradalli, ponisida divya muttu

Dhyanadinda kombudidanu, deenarada bhakta janaru ||


Kattalagadu muginalli, ittu mereyalagadidu

Bhrastajanake kaanisadantha, krishnanembo aanimuttu ||


Hidiyalikke silukadadu, kade kaanadendu beleyu

Podavigella purandara vittala, odeyanembo divya muttu ||


ಭಕ್ತಿಗೀತೆ 


ಮುತ್ತು ಕೊಳ್ಳಿರೊ, ಜನರು, ಮುತ್ತು ಕೊಳ್ಳಿರೊ ।।ಪ।।

ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ ।।ಅನು।।


ಜ್ಞಾನವೆಂಬೊ ದಾರದಲ್ಲಿ, ಪೋಣಿಸಿದ ದಿವ್ಯ ಮುತ್ತು 

ಧ್ಯಾನದಿಂದ ಕೊಂಬುದಿದನು, ದೀನರಾದ ಭಕ್ತ ಜನರು ।।೧।।


ಕಟ್ಟಲಾಗದು ಮೂಗಿನಲ್ಲಿ, ಇಟ್ಟು ಮೆರೆಯಲಾಗದಿದು 

ಭ್ರಷ್ಟಜನಕೆ ಕಾಣಿಸದಂಥ, ಕೃಷ್ಣನೆಂಬೊ ಆಣಿಮುತ್ತು ।।೨।।


ಹಿಡಿಯಲಿಕ್ಕೆ ಸಿಲುಕದದು, ಕಡೆ ಕಾಣದೆಂದು ಬೆಲೆಯು 

ಪೊಡವಿಗೆಲ್ಲ ಪುರಂದರ ವಿಠ್ಠಲ, ಒಡೆಯನೆಂಬೊ ದಿವ್ಯ ಮುತ್ತು 

।।೩।।                                                                                           ಶ್ರೀ 



 

Tuesday, August 22, 2023

Kangala Munde Kangolisutide (ಕಂಗಳ ಮುಂದೆ ಕಂಗೊಳಿಸುತಿದೆ)

Bhaktigeete

Singer: B K Sumitra

Song link: Click Here


Kangala munde kangolisutide

Mangala udupi krishnana muruti ||


Angaladi janani mosaranu kadedire

Changane bandu appida muruti

Anganeyaru ta neerige bandire

Sangadigarodanada kaadida muruti ||


Dwarakapuriyali devaki devige

Balaka rupade torida muruti

Ashta matagala yatigala poojeya

Kaigoluva karunamaya muruti ||


Purandara dasaru haadi hogalida

Parama puneeta chinmaya muruti

Bhakuta kanakana moreyanu keli

Paschimake moga tiruvida muruti ||


ಭಕ್ತಿಗೀತೆ 


ಕಂಗಳ ಮುಂದೆ ಕಂಗೊಳಿಸುತಿದೆ 

ಮಂಗಳ ಉಡುಪಿ ಕೃಷ್ಣನ ಮೂರುತಿ ।।ಪ।।


ಅಂಗಳದಿ ಜನನಿ ಮೊಸರನು ಕಡೆದಿರೆ 

ಚಂಗನೆ ಬಂದು ಅಪ್ಪಿದ ಮೂರುತಿ 

ಅಂಗನೆಯರು ತಾ ನೀರಿಗೆ ಬಂದಿರೆ 

ಸಂಗಡಿಗರೊಡನಾಡ  ಕಾಡಿದ ಮುರುತಿ ।।೧।।


ದ್ವಾರಕಾ ಪುರಿಯಲಿ ದೇವಕಿ ದೇವಿಗೆ 

ಬಾಲಕ ರೂಪದೆ ತೋರಿದ ಮೂರುತಿ 

ಅಷ್ಟ ಮಠಗಳ ಯತಿಗಳ ಪೂಜೆಯ 

ಕೈಗೊಳುವ ಕರುಣಾಮಯ ಮೂರುತಿ ।।೨।।


ಪುರಂದರ ದಾಸರು ಹಾಡಿ ಹೊಗಳಿದ 

ಪರಮ ಪುನೀತ ಚಿನ್ಮಯ ಮೂರುತಿ 

ಭಕುತ ಕನಕನ ಮೊರೆಯನು ಕೇಳಿ `

ಪಶ್ಚಿಮಕೆ ಮೊಗ ತಿರುವಿದ ಮೂರುತಿ ।।೩।।





Monday, August 21, 2023

Panchami Habba (ಪಂಚಮಿ ಹಬ್ಬ)

Janapada Geete

Singer: B R Chaya

Song link: Click Here


Panchami habba....(2) ulidava dina naka

Anna baralilla yaka karilaka ||


Nanna tavaruru gokula nagara

Nanna annayya dodda sahukara

Maniyanthaaddu rajamandira

Hyanga aadita ittu iralaka

Anna baralilla yaka karilaka ||


Muttinanthaki, aaki nanna attigi

Preeti bhala nanna myala avaleegi

Bittalenamma bittu iralaka

Anna baralilla yaka karilaka ||


Nanna tavaralli panchami bhari

Mona tukada bella kobbari

Ellu avalakki tambittu suri

Nanu tinuvaki alle manasaari

Anna baralilla yaka karilaka ||


ಜನಪದ ಗೀತೆ 


ಪಂಚಮಿ ಹಬ್ಬ .... (೨) ಉಳಿದಾವ ದಿನ ನಾಕ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।ಪ।।


ನನ್ನ ತವರೂರು ಗೋಕುಲ ನಗರಾ 

ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ 

ಮನಿಯಂಥಾದ್ದು ರಾಜಮಂದಿರ

ಹ್ಯಾಂಗ ಆದೀತ ಬಿಟ್ಟು ಇರಲಾಕ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।೧।।


ಮುತ್ತಿನಂಥಾಕಿ ಆಕಿ ನನ್ನ ಅತ್ತಿಗಿ 

ಪ್ರೀತಿ ಭಾಳ ನನ್ನ ಮ್ಯಾಲ ಅವಳೀಗಿ 

ಬಿಟ್ಟಾಳೇನಮ್ಮ ಬಿಟ್ಟು ಇರಲಾಕ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।೨।।


ನನ್ನ ತವರಲ್ಲಿ ಪಂಚಮಿ ಭಾರಿ 

ಮೊಣ ತೂಕದ ಬೆಲ್ಲ ಕೊಬ್ಬರಿ 

ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ 

ನಾನು ತಿನುವಾಕಿ ಅಲ್ಲೇ ಮನಸಾರಿ 

ಅಣ್ಣ ಬರಲಿಲ್ಲ ಯಾಕ ಕರಿಲಾಕ ।।೩।।



Saturday, August 19, 2023

Ibbani Tabbida Ileyali (ಇಬ್ಬನಿ ತಬ್ಬಿದ ಇಳೆಯಲಿ)

Movie: Rashmi (1994)

Sahitya: Doddarangegowda

Singer: B R Chaya, L N Shastri

Song link: Click Here


Ibbani tabbida ileyali, raviteja kanna teredu

Bana, koti kirana, ilidu bantu bhumige ||


Kadu hakki kugi, impada gaanavu

Gali beesi bees, madhu madhura tanavu

Bellakki, tugi palakki, kannalli, bhava ukkukki

Molle maruga jaji, sogasagi arali, kananada kavya ||


Dura ninta betta, gambhira mounavu

Tonge tonge seri, hasihasira lasyavu

Attitta dhare chellutta, dhummikki nadiyu odutta

Haavu harida reeti, cheluvagi harida, kaveriya natya ||


ಚಿತ್ರಗೀತೆ 


ಇಬ್ಬನಿ ತಬ್ಬಿದ ಇಳೆಯಲಿ, ರವಿತೇಜ ಕಣ್ಣ ತೆರೆದು 

ಬಾನ, ಕೋಟಿ ಕಿರಣ, ಇಳಿದು ಬಂತು ಭೂಮಿಗೆ ।।ಪ।।  


ಕಾಡು ಹಕ್ಕಿ ಕೂಗಿ, ಇಂಪಾದ ಗಾನವು 

ಗಾಳಿ ಬೀಸಿ ಬೀಸಿ, ಮಧು ಮಧುರ ತಾನವು 

ಬೆಳ್ಳಕ್ಕಿ , ತೂಗಿ ಪಲ್ಲಕ್ಕಿ, ಕಣ್ಣಲ್ಲಿ, ಭಾವ ಉಕ್ಕುಕ್ಕಿ 

ಮೊಲ್ಲೆ ಮರುಗ ಜಾಜಿ, ಸೊಗಸಾಗಿ ಅರಳಿ, ಕಾನನದ ಕಾವ್ಯ 

।।೧।।


ದೂರ ನಿಂತ ಬೆಟ್ಟ, ಗಂಭೀರ ಮೌನವು 

ಟೊಂಗೆ ಟೊಂಗೆ ಸೇರಿ, ಹಸಿಹಸಿರ ಲಾಸ್ಯವು 

ಅತ್ತಿತ್ತ ಧಾರೆ ಚೆಲ್ಲುತ್ತ, ಧುಮ್ಮಿಕ್ಕಿ ನದಿಯು ಓಡುತ್ತಾ 

ಹಾವು ಹರಿದ ರೀತಿ, ಚೆಲುವಾಗಿ ಹರಿದ, ಕಾವೇರಿಯ ನಾಟ್ಯ 

।।೨।।  



                                                                                                                                                                                                

Friday, August 18, 2023

Krishna Nee Begane Baro (ಕೃಷ್ಣ ನೀ ಬೇಗನೆ ಬಾರೋ)

Movie: Paris Pranaya (2003)

Singer: Shreya Goshal

Song link: Click Here


Krishna nee begane baro

Sri krishna nee begane baro

Ee radheya kugu, nee kelalillavenu (2)

Vasudeva venugopa ba, krishna ba ||


Atmavu neene, jeevavu neene

Nannede haade neene, haadina pranavu neene

Preetiya radhe, prati kshana kaade

Enanu maadali nanu, yaarige helali innu

Gopala gopi krishna, mayavi maya krishna

Neenirade, nanilla, nee barade, balilla

Madhava mukundane ba, bega ba, nee bega ba ||


Jananau neene, maranavu neene

Nannede dhyanavu neene, dhyanada pranatiyu naane

Belaguve deepa, toriso roopa

Endige baruveyo neenu, ennuta kaayuve naanu

Gopala gopi krishna, mayavi maya krishna

Neenirade nanilla, nee barade, balilla

Keshava janardhana ba, bega ba, nee bega ba ||


ಚಿತ್ರಗೀತೆ 


ಕೃಷ್ಣ ನೀ ಬೇಗನೆ ಬಾರೋ 

ಶ್ರೀ ಕೃಷ್ಣ ನೀ ಬೇಗನೆ ಬಾರೋ 

ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು (೨)

ವಾಸುದೇವ ವೇಣುಗೋಪ ಬಾ, ಕೃಷ್ಣ ಬಾ ।।ಪ।।


ಆತ್ಮವು ನೀನೆ, ಜೀವವು ನೀನೆ 

ನನ್ನೆದೆ ಹಾಡೆ ನೀನೇ, ಹಾಡಿನ ಪ್ರಾಣವು ನೀನೇ 

ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ 

ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು 

ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ 

ನೀನಿರದೆ, ನಾನಿಲ್ಲ, ನೀ ಬರದೆ, ಬಾಳಿಲ್ಲ 

ಮಾಧವ ಮುಕುಂದನೆ ಬಾ, ಬೇಗ ಬಾ, ನೀ ಬೇಗ ಬಾ ।।೧।।


ಜನನವು ನೀನೇ, ಮರಣವು ನೀನೇ 

ನನ್ನೆದೆ ಧ್ಯಾನವು ನೀನೇ, ಧ್ಯಾನದ ಪ್ರಣತಿಯು ನಾನೇ 

ಬೆಳಗುವೆ ದೀಪ, ತೋರಿಸೊ ರೂಪ 

ಎಂದಿಗೆ ಬರುವೆಯೊ ನೀನೂ, ಎನ್ನುತ ಕಾಯುವೆ ನಾನು 

ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯಾ ಕೃಷ್ಣ 

ನೀನಿರದೆ, ನಾನಿಲ್ಲ, ನೀ ಬರದೆ, ಬಾಳಿಲ್ಲ 

ಕೇಶವ ಜನಾರ್ಧನ ಬಾ, ಬೇಗ ಬಾ, ನೀ ಬೇಗ ಬಾ ।।೨।।



Thursday, August 17, 2023

Matinalli Helalarenu (ಮಾತಿನಲ್ಲಿ ಹೇಳಲಾರೆನು)

Movie: Bombat (2008)

Singer: Sonu Nigam

Song link: Click Here


Matinalli helalarenu, rekheyalli geechalarenu

Aadarunu haadadene uliyalarenu

Antha roopasi, nanna preyasi, elli iruvalo, nanna kayisi

Nanu prema rogi, dayamadi vasi madabedi

Antha roopasi, nanna preyasi, omme avalige nanna torisi ||


Kannallide aa kannallide, hombelakina nava neelanjana

Innellide aha innellide, hoo manasina aa madhugunjana

Bere enu kanalare, yara nanu duralare

Saku innu duravannu taalalarenu

Nanna kanasinalli, dayamadi palu kelabedi

Antha roopasi, nanna preyasi, omme avalige nanna torisi ||


Nageyallide, aa bageyallide, bagehariyada, aa avalokana

Nadeyallide, aa nudiyallide, tale kedisuva, aa aamantrana

Kanasiginta chendavagi, alisadanta gandhavagi

Modala bari kanda kshanave bandhiyadenu

Hode nanu kaledu, dayamadi patte madabedi

Antha roopasi, nanna preyasi, omme avalige nanna torisi ||


ಚಿತ್ರಗೀತೆ 


ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು 

ಆದರೂನು ಹಾಡದೇನೆ ಉಳಿಯಲಾರೆನು 

ಅಂಥ ರೂಪಸಿ, ನನ್ನ ಪ್ರೇಯಸಿ, ಎಲ್ಲಿ ಇರುವಳೋ, ನನ್ನ ಕಾಯಿಸಿ 

ನಾನು ಪ್ರೇಮ ರೋಗಿ, ದಯಮಾಡಿ ವಾಸಿ ಮಾಡಬೇಡಿ 

ಅಂಥ ರೂಪಸಿ, ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ 

।।ಪ।।


ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಹೊಂಬೆಳಕಿನ ನವ ನೀಲಾಂಜನ 

ಇನ್ನೆಲ್ಲಿದೆ ಆಹಾ ಇನ್ನೆಲ್ಲಿದೆ, ಹೂ ಮನಸಿನ ಆ ಮಧುಗುಂಜನ 

ಬೇರೆ ಏನು ಕಾಣಲಾರೆ, ಯಾರ ನಾನು ದೂರಲಾರೆ 

ಸಾಕು ಇನ್ನು ದೂರವನ್ನು ತಾಳಲಾರೆನು 

ನನ್ನ ಕನಸಿನಲ್ಲಿ, ದಯಮಾಡಿ ಪಾಲು ಕೇಳಬೇಡಿ 

ಅಂಥ ರೂಪಸಿ, ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ 

।।೧।।


ನಗೆಯಲ್ಲಿದೆ, ಆ ಬಗೆಯಲ್ಲಿದೆ, ಬಗೆಹರಿಯದ, ಆ ಅವಲೋಕನ 

ನಡೆಯಲ್ಲಿದೆ, ಆ ನುಡಿಯಲ್ಲಿದೆ, ತಲೆ ಕೆಡಿಸುವ, ಆ ಆಮಂತ್ರಣ 

ಕನಸಿಗಿಂತ ಚೆಂದವಾಗಿ, ಅಳಿಸದಂತ ಗಂಧವಾಗಿ 

ಮೊದಲ ಬಾರಿ ಕಂಡ ಕ್ಷಣವೆ ಬಂಧಿಯಾದೆನು 

ಹೋದೆ ನಾನು ಕಳೆದು, ದಯಮಾಡಿ ಪತ್ತೆ ಮಾಡಬೇಡಿ 

ಅಂಥ ರೂಪಸಿ, ನನ್ನ ಪ್ರೇಯಸಿ, ಒಮ್ಮೆ ಅವಳಿಗೆ ನನ್ನ ತೋರಿಸಿ 

।।೨।।