Saturday, August 12, 2023

Mounave Aabharana (ಮೌನವೇ ಆಭರಣ)

Movie: Tugudeepa (1966)

Singer: P B Srinivas

Song link: Click Here


Mounave aabharana.. mugulnage sashikirana (2)

Notave hoobana.. cheluvina madhuvana ||


Hejjeyanidalu hoovaraluvudu

Gejjeya naadavu haadaguvudu

Sajjige sihiya maatellihudu

Lajjeyu ninnali mane madihudu ||


Kadalina aalava aledavarilla

Hennina manasanu aritavarilla

karedire balige varisida nalla

Nachike etako shivane balla ||


ಚಿತ್ರಗೀತೆ 


ಮೌನವೇ ಆಭರಣ .. ಮುಗುಳ್ನಗೆ ಶಶಿಕಿರಣ  (೨)

ನೋಟವೇ ಹೂ ಬಾಣ .. ಚೆಲುವಿನಾ ಮಧುವನ ।।ಪ।।


ಹೆಜ್ಜೆಯನಿಡಲು ಹೂವರಳುವುದು 

ಗೆಜ್ಜೆಯ ನಾದವು ಹಾಡಾಗುವುದು 

ಸಜ್ಜಿಗೆ ಸಿಹಿಯ ಮಾತೆಲ್ಲಿಹುದು 

ಲಜ್ಜೆಯು ನಿನ್ನಲಿ ಮನೆ ಮಾಡಿಹುದು ।।೧।।


ಕಡಲಿನ ಆಳವ ಅಳೆದವರಿಲ್ಲ 

ಹೆಣ್ಣಿನ ಮನಸನು ಅರಿತವರಿಲ್ಲ 

ಕರೆದಿರೆ ಬಳಿಗೆ ವರಿಸಿದನಲ್ಲ 

ನಾಚಿಕೆ ಏತಕೋ ಶಿವನೇ ಬಲ್ಲ ।।೨।।



Myale Kavkonda Mungara Moda (ಮ್ಯಾಲೆ ಕವ್ಕೊಂಡ ಮುಂಗಾರ ಮೋಡ)

Movie : Chinnari Mutta (1993)

Sahitya: H S Venktesh Murthy

Singer: Manjula Gururaj

Song link: Click Here


Myale kavkonda mungara moda

Turi bartana chandrama noda

Ottarisi kattala rahu ketu, chendulla chigari hegaleri kutu

Bendantha baalige beldingal surisi

Lokava tumbida vyakula harisi ||


Neeliya navula harisikondu

Chukkiya bavuta erisikondu

Angalake barutane aavaregu taalu

Bandaga mavayya bekaddu kelu ||


Modada nadige ninnannu hoidu

Tugi tottilanendu rambhera baidu

Muttana niddege kanaseleyo hottu

Kodtane mavayya becchane muttu ||


ಚಿತ್ರಗೀತೆ 


ಮ್ಯಾಲೆ ಕವ್ಕೊಂಡ ಮುಂಗಾರ ಮೋಡ 

ತೂರಿ ಬರ್ತಾನ ಚಂದ್ರಾಮ ನೋಡ 

ಒತ್ತರಿಸಿ ಕತ್ತಲ ರಾಹು ಕೇತು, ಚೆಂದುಳ್ಳ ಚಿಗರಿ ಹೆಗಲೇರಿ ಕೂತು 

ಬೆಂದಂಥ ಬಾಳಿಗೆ ಬೆಳ್ ದಿ೦ಗಳ್ ಸುರಿಸಿ 

ಲೋಕವ ತುಂಬಿದ ವ್ಯಾಕುಲ ಹರಿಸಿ ।।ಪ।।


ನೀಲಿಯ ನವುಲ ಹಾರಿಸಿಕೊಂಡು 

ಚುಕ್ಕಿಯ ಬಾವುಟ ಏರಿಸಿಕೊಂಡು 

ಅಂಗಳಕೆ ಬರುತಾನೆ ಆವರೆಗೂ ತಾಳು 

ಬಂದಾಗ ಮಾವಯ್ಯ ಬೇಕಾದ್ದು ಕೇಳು ।।೧।।


ಮೋಡದ ನಾಡಿಗೆ ನಿನ್ನನ್ನು ಹೋಯ್ದು 

ತೂಗಿ ತೊಟ್ಟಿಲನೆಂದು ರಂಭೇರ ಬೈದು 

ಮುತ್ತನ ನಿದ್ದೆಗೆ ಕನಸೆಳೆಯೋ ಹೊತ್ತು 

ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತು ।।೨।।



Thursday, August 10, 2023

Ninnaya Naama Sumadhura (ನಿನ್ನಯ ನಾಮ ಸುಮಧುರ)

Bhaktigeete

Singers: Dr. Rajkumar, Shamita Malnad

Song link: Click Here


Ninnaya naama sumadhura 

Ninnaya dhyana shubhakara

Aadi shaktiye ninnanu nenevevu nirantara-nirantara 

Om shakti aadishakti.. om shakti aadishakti (4) ||


Muktigu bhaktigu dari nee

Satyaku dharmaku mate nee

Naada vedagala devi nee

Divya jyotiya kantiyu nee  |ninnaya|

Om shakti aadishakti.. om shakti aadishakti (4) ||


Bangaru adigalar roopa nee

Maruvatturina moola nee

Dustarige vairiyu nee

Bhaktarige tayiyu nee  |ninnaya|

Om shakti aadishakti.. om shakti aadishakti (4) ||


Srusti stitige karana nee

Dharma rathada chalaki nee

Punya karya preraki nee

Nitya satya shodhaki nee  |ninnaya|

Om shakti aadishakti.. om shakti aadishakti (4) ||


ಭಕ್ತಿಗೀತೆ 


ನಿನ್ನಯ ನಾಮ ಸುಮಧುರ 

ನಿನ್ನಯ ಧ್ಯಾನ ಶುಭಕರ 

ಆದಿ ಶಕ್ತಿಯೆ ನಿನ್ನನು ನೆನೆವೆವು ನಿರಂತರ -ನಿರಂತರ 

ಓಂಶಕ್ತಿ ಆದಿಶಕ್ತಿ .. ಓಂಶಕ್ತಿ ಆದಿಶಕ್ತಿ .. (೪) ।।ಪ।।


ಮುಕ್ತಿಗು ಭಕ್ತಿಗು ದಾರಿ ನೀ 

ಸತ್ಯಕು ಧರ್ಮಕು ಮಾತೆ ನೀ 

ನಾದ ವೇದಗಳ ದೇವೀ ನೀ 

ದಿವ್ಯ ಜ್ಯೋತಿಯ ಕಾಂತಿಯು ನೀ   ।ನಿನ್ನಯ।

ಓಂಶಕ್ತಿ ಆದಿಶಕ್ತಿ .. ಓಂಶಕ್ತಿ ಆದಿಶಕ್ತಿ .. (೪) ।।೧।।


ಬಂಗಾರು ಅಡಿಗಳಾರ್ ರೂಪ ನೀ 

ಮರುವತ್ತೂರಿನ ಮೂಲ ನೀ 

ದುಷ್ಟರಿಗೆ ವೈರಿಯು ನೀ 

ಭಕ್ತರಿಗೆ ತಾಯಿಯು ನೀ   ನಿನ್ನಯ।

ಓಂಶಕ್ತಿ ಆದಿಶಕ್ತಿ .. ಓಂಶಕ್ತಿ ಆದಿಶಕ್ತಿ .. (೪) ।।೨।।


ಸೃಷ್ಟಿ ಸ್ಥಿತಿಗೆ ಕಾರಣ ನೀ 

ಧರ್ಮ ರಥದ ಚಾಲಕಿ ನೀ 

ಪುಣ್ಯ ಕಾರ್ಯ ಪ್ರೇರಕಿ ನೀ 

ನಿತ್ಯ ಸತ್ಯ ಶೋಧಕಿ ನೀ   ನಿನ್ನಯ।

ಓಂಶಕ್ತಿ ಆದಿಶಕ್ತಿ .. ಓಂಶಕ್ತಿ ಆದಿಶಕ್ತಿ .. (೪) ।।೩।।






Wednesday, August 9, 2023

Ellide Aa Paada (ಎಲ್ಲಿದೆ ಆ ಪಾದ)

Bhaktigeete

Singer: Dr. Rajkumar

song link: Click Here


Ellide aa paada, ellide aa paada

Kallige jeeva tumbida sripaada

Hanumanu nambida ramana paada ||


Baalali omme kandare saaku

Kangala tumba tumbali saaku

Kaigalu omme muttali saaku

Aa aanandave endigu saku ||


Kambaniyinda paadava toleve

Manavane mallige maadi iduve

Kannina belakali aarati maadi

Charanadi shiravanu nanidabeku ||


ಭಕ್ತಿಗೀತೆ 


ಎಲ್ಲಿದೆ ಆ ಪಾದ, ಎಲ್ಲಿದೆ ಆ ಪಾದ 

ಕಲ್ಲಿಗೆ ಜೀವ ತುಂಬಿದ ಶ್ರೀಪಾದ 

ಹನುಮನು ನಂಬಿದ ರಾಮನ ಪಾದ ।।ಪ।।


ಬಾಳಲಿ ಒಮ್ಮೆ ಕಂಡರೆ ಸಾಕು 

ಕಂಗಳ ತುಂಬ ತುಂಬಲಿ ಸಾಕು 

ಕೈಗಳು ಒಮ್ಮೆ ಮುಟ್ಟಲಿ ಸಾಕು 

ಆ ಆನಂದವೇ ಎಂದಿಗೂ ಸಾಕು ।।೧।।


ಕಂಬನಿಯಿಂದ ಪಾದವ ತೊಳೆವೆ 

ಮನವನೇ ಮಲ್ಲಿಗೆ ಮಾಡಿ ಇಡುವೆ 

ಕಣ್ಣಿನ ಬೆಳಕಲಿ ಆರತಿ ಮಾಡಿ 

ಚರಣದಿ ಶಿರವನು ನಾನಿಡಬೇಕು ।।೨।।



Tuesday, August 8, 2023

Rama Rama Endare Saku (ರಾಮ ರಾಮ ಎಂದರೆ ಸಾಕು)

 Bhaktigeete

Singer: Dr. Rajkumar

Song link: Click Here


Sri rama jaya rama, sri rama raghu rama ||


Rama rama endare saku mai navireluvadu

Rama rama endare saku manasu kuniyuvudu

Rama rama endare saku kambani tumbuvudu

Tumbida aananda talalarade kanttavu bigiyuvudu ||


Rama rama endare saku hrudayavu araluvudu

Rama rama endare saku kattalu karaguvudu

Rama rama endare saku chandrike challuvudu

Aa chandrikeyali ramachandrana hoonage kaanuvudu ||


ಭಕ್ತಿಗೀತೆ 


ಶ್ರೀರಾಮ ಜಯರಾಮ, ಶ್ರೀರಾಮ ರಘುರಾಮ ।।ಪ।।


ರಾಮ ರಾಮ ಎಂದರೆ ಸಾಕು ಮೈ ನವಿರೇಳುವದು 

ರಾಮ ರಾಮ ಎಂದರೆ ಸಾಕು ಮನಸು ಕುಣಿಯುವುದು 

ರಾಮ ರಾಮ ಎಂದರೆ ಸಾಕು ಕಂಬನಿ ತುಂಬುವುದು 

ತುಂಬಿದ ಆನಂದ ತಾಳಲಾರದೆ ಕಂಠವು ಬಿಗಿಯುವುದು ।।೧।।


ರಾಮ ರಾಮ ಎಂದರೆ ಸಾಕು ಹೃದಯವು ಅರಳುವುದು 

ರಾಮ ರಾಮ ಎಂದರೆ ಸಾಕು ಕತ್ತಲು ಕರಗುವುದು 

ರಾಮ ರಾಮ ಎಂದರೆ ಸಾಕು ಚಂದ್ರಿಕೆ ಚಲ್ಲುವುದು 

ಆ ಚಂದ್ರಿಕೆಯಲಿ ರಾಮಚಂದ್ರನ ಹೂನಗೆ ಕಾಣುವುದು ।।೨।।




Sunday, August 6, 2023

Doora Maduvarene Rangayyana (ದೂರ ಮಾಡುವರೇನೆ ರಂಗಯ್ಯನ)

Bhaktigeete

Purandara Dasara Keerthanegalu

Song linkClick Here


Raga: Kedaragoula

Tala: Atatala


Doora maduvarene rangayyana, dooru maduvarene |

Dooru maduvarene charu mandiyolage

Mooru lokake muddu toro rangayyana ||


Nandagokuladalli mandegovugala

Munde kolalanudi chandadi baruvana ||


Kallatanadalli gollara mane pokka

Gullumadadeyavara galla kacchidanendu ||


Kamadindali ninna kalavalatanakagi

Shyama sundara sri purandara vittalana ||


ಭಕ್ತಿಗೀತೆ 


ದೂರ ಮಾಡುವರೇನೆ ರಂಗಯ್ಯನ, ದೂರು ಮಾಡುವರೇನೆ ।।ಪ।।

ದೂರು ಮಾಡುವರೇನೆ ಚಾರು ಮಂದಿಯೊಳಗೆ 

ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ।।ಅನು।।


ನಂದಗೋಕುಲದಲ್ಲಿ ಮಂದೆಗೋವುಗಳ 

ಮುಂದೆ ಕೊಳಲನೂದಿ ಚಂದದಿ ಬರುವನ ।।೧।।


ಕಳ್ಳತನದಲ್ಲಿ ಗೊಲ್ಲರ ಮನೆ ಪೊಕ್ಕ 

ಗುಲ್ಲುಮಾಡದೆಯವರ ಗಲ್ಲ ಕಚ್ಚಿದನೆಂದು ।।೨।।


ಕಾಮದಿಂದಲಿ ನಿನ್ನ ಕಳವಳತನಕಾಗಿ 

ಶ್ಯಾಮಸುಂದರ ಶ್ರೀ ಪುರಂದರ ವಿಠ್ಠಲನ ।।೩।।              ಶ್ರೀ  



Saturday, August 5, 2023

Aaranu Jayisida Andagara (ಆರನು ಜಯಿಸಿದ ಅಂದಗಾರ)

 Bhaktigeete

Singer: Dr. Rajkumar

Song link: Click Here


Aaranu jayisida andagara

Aaru ta endira madila mandara

Arigale illada veeradhiveera

Anupama gunanidhi suguna gambhira ||


Aarara maguvada aravinda vadana

Asurara mettida asamaana

Akhilanda koti brahmaanda palana

Aadi guruvada shadanana ||


Sharavana sishuvada shanmukhana

Sharataapa taalada kaaratana

Sharanagatige unnata stana

Needida lakshisi loka kaiyana ||


ಭಕ್ತಿಗೀತೆ 


ಆರನು ಜಯಿಸಿದ ಅಂದಗಾರ 

ಆರು ತಾ ಎಂದಿರ ಮಡಿಲ ಮಂದಾರ 

ಅರಿಗಳೆ ಇಲ್ಲದಾ ವೀರಾಧಿವೀರಾ 

ಅನುಪಮ ಗುಣನಿಧಿ ಸುಗುಣ ಗಂಭೀರಾ ।।ಪ।।


ಆರರ ಮಗುವಾದ ಅರವಿಂದವದನಾ 

ಅಸುರರ ಮೆಟ್ಟಿದ ಅಸಮಾನ 

ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲನ 

ಆದಿ ಗುರುವಾದ ಷಡಾನನ ।।೧।।


ಶರವನ ಶಿಶುವಾದ ಷಣ್ಮುಖನಾ 

ಶರತಾಪ ತಾಳದಾ ಕಾರತನ 

ಶರಣಾಗತಿಗೆ ಉನ್ನತ ಸ್ಥಾನ 

ನೀಡಿದ ಲಕ್ಷಿಸಿ ಲೋಕ ಕಲ್ಯಾಣ ।।೨।।