Saturday, July 15, 2023

Tavaroora Mane Noda Bande (ತವರೂರ ಮನೆ ನೋಡ ಬಂದೆ)

Janapada Geete

Song link: Click Here


Tavaroora mane noda bande

Tayi nenapagi kannira tande (2) ||


Hattu hadinalku varushagalinde

Hetta tayi tande preetiyinde (2)

Muttinante jopaanavagi baalide

Adu etta hodaru kanasagide ||


Baagila munde rangoli

Bagi idutidde nana taradalli (2)

Adu hege mareyali manasali

Adu mareyadu ee balinalli ||


Attige kaigombe anna

Etti muddadida tangi mareta (2)

Anna kannetti saha nodabaarade

Tangi baramma itta ennabaarade ||


Annana hendati nodi

Kanna sanne maadidalenna nodi (2)

Anna maatanadisadola serida..aa.. (2)

Tanna siriyalli tanodagudida ||


Shivane.. (3) shivane na kaimugidu beduve

Siri sampattu kodu nammannage

Tayi jagadambe kaimugidu beduve

Kayi karpooradaarati belaguve ||


ಜಾನಪದಗೀತೆ 


ತವರೂರ ಮನೆ ನೋಡ ಬಂದೆ 

ತಾಯಿ ನೆನಪಾಗಿ ಕಣ್ಣೀರ ತಂದೆ  (೨) ।।ಪ।।


ಹತ್ತು ಹದಿನಾಲ್ಕು ವರುಷಗಳಿಂದೆ 

ಹೆತ್ತ ತಾಯಿ ತಂದೆ ಪ್ರೀತಿಯಿಂದೆ (೨)

ಮುತ್ತಿನಂತೆ ಜೋಪಾನವಾಗಿ ಬಾಳಿದೆ 

ಅದು ಎತ್ತ ಹೋದರು ಕನಸಾಗಿದೆ ।।೧।।


ಬಾಗಿಲ ಮುಂದೆ ರಂಗೋಲಿ 

ಬಾಗಿ ಇಡುತಿದ್ದೆ ನಾನಾ ತರದಲ್ಲಿ (೨)

ಅದು ಹೇಗೆ ಮರೆಯಲಿ ಮನಸಲಿ 

ಅದು ಮರೆಯದು ಈ ಬಾಳಿನಲ್ಲಿ ।।೨।।


ಅತ್ತಿಗೆ ಕೈಗೊಂಬೆ ಅಣ್ಣ 

ಎತ್ತಿ ಮುದ್ದಾಡಿದ ತಂಗಿ ಮರೆತ (೨)

ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ 

ತಂಗಿ ಬಾರಮ್ಮ ಇತ್ತ ಎನ್ನಬಾರದೇ ।।೩।।


ಅಣ್ಣನ ಹೆಂಡತಿ ನೋಡಿ 

ಕಣ್ಣ ಸನ್ನೆ ಮಾಡಿದಳೆನ್ನ ನೋಡಿ (೨)

ಅಣ್ಣ ಮಾತನಾಡಿಸದೊಳ ಸೇರಿದಾ ..ಆ .. (೨)

ತನ್ನ ಸಿರಿಯಲ್ಲಿ ತಾನೊಡಗೂಡಿದ ।।೪।।


ಶಿವನೇ .. (೩) ಶಿವನೆ ನಾ ಕೈಮುಗಿದು ಬೇಡುವೆ 

ಸಿರಿ ಸಂಪತ್ತು ಕೊಡು ನಮ್ಮಣ್ಣಗೆ 

ತಾಯಿ ಜಗದಾಂಬೆ ಕೈಮುಗಿದು ಬೇಡುವೆ 

ಕಾಯಿ ಕರ್ಪೂರದಾರತಿ ಬೆಳಗುವೆ (೨) ।।೫।।







Friday, July 14, 2023

Hari Kotta Kalakke Unalilla (ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ)

Bhaktigeete

Sri Purandara Dasara Keerthanegalu

Song link: Click Here


Raga: Purvi

Tala: Jampetala


Hari kotta kalakke unalilla

Hari kodada kalakke bayi bidavyallo prani ||


Hattu savira honnu tippeli hulittu

Matte uppillade undyallo prani

Hattu savira honnu tippeli popaaga

Mruttike bayalli bittallo prani ||


Hugiyu tuppavu maneyolagiralikke

Gugguriyannava tindyallo prani

Veggalada bhagya galigeli popaaga

Buggeya hoykondu hodyallo prani ||


Nentaristaru bandu manemunde kulitiralu

Kunta suddi neenadidyallo prani

Kantaka yamanavaru kuntisuttelevaga

Nenta purandara vittalanu prani ||


ಭಕ್ತಿಗೀತೆ 


ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ 

ಹರಿ ಕೊಡದ ಕಾಲಕ್ಕೆ ಬಾಯಿ ಬಿಡವ್ಯಲ್ಲೊ ಪ್ರಾಣಿ ।।ಪ।।


ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು 

ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ 

ಹತ್ತು ಸಾವಿರ ಹೊನ್ನು ತಿಪ್ಪೇಲಿ ಪೋಪಾಗ 

ಮೃತ್ತಿಕೆ ಬಾಯಲ್ಲಿ ಬಿತ್ತಲ್ಲೊ ಪ್ರಾಣಿ ।।೧।।


ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ 

ಗುಗ್ಗುರಿಯನ್ನವ ತಿಂದ್ಯಲ್ಲೊ ಪ್ರಾಣಿ 

ವೆಗ್ಗಳದ ಭಾಗ್ಯ ಗಳಿಗೇಲಿ ಪೋಪಾಗ 

ಬುಗ್ಗೆಯ ಹೊಯ್ಕೊಂಡು ಹೋದ್ಯಲ್ಲೊ ಪ್ರಾಣಿ ।।೨।।


ನೆಂಟರಿಷ್ಟರು ಬಂದು ಮನೆಮುಂದೆ ಕುಳಿತಿರಲು 

ಕುಂಟ ಸುದ್ದಿ ನೀನಾಡಿದ್ಯಲ್ಲೊ ಪ್ರಾಣಿ 

ಕಂಟಕ ಯಮನವರು ಕುಂಠಿಸುತ್ತೆಳೆವಾಗ 

ನೆಂಟ ಪುರಂದರ ವಿಠಲನು ಪ್ರಾಣಿ ।।೩।।                  ಶ್ರೀ 



Thursday, July 13, 2023

Kanana Vaasa Kaliyuga Varada (ಕಾನನ ವಾಸ ಕಲಿಯುಗ ವರದ)

Bhaktigeete

Singer: K J Yesudas

Song link: Click Here


Kanana vaasa kaliyuga varada (2)

Kaalina bali na bande, ninna (2)

Sri keshadim paada, na kande

Kanana vaasa kaliyuga varada (2)


Nirupama bhagya nirmala darshana

Karnananda ninna naama sankeerthana

Asulabha saphalya ninna varadaana

Adakkagi avalamba ninna sannidhana ||


Kananavella omkaaraviralu (2)

Kaalada taalake naleyu baralu

Kaanada kalavu aaseya taralu

Mohavu mayeyu bhadipare ||


ಭಕ್ತಿಗೀತೆ 


ಕಾನನ ವಾಸ ಕಲಿಯುಗ ವರದ (೨)

ಕಾಲಿನ ಬಳಿ ನಾ ಬಂದೆ, ನಿನ್ನ  (೨)

ಶ್ರೀ ಕೇಶದಿಂ ಪಾದ, ನಾ ಕಂಡೆ 

ಕಾನನ ವಾಸ ಕಲಿಯುಗ ವರದ (೨) ।।ಪ।।


ನಿರುಪಮ ಭಾಗ್ಯ ನಿರ್ಮಲ ದರ್ಶನ 

ಕರ್ಣಾನಂದ ನಿನ್ನ ನಾಮ ಸಂಕೀರ್ತನ 

ಅಸುಲಭ ಸಾಫಲ್ಯ ನಿನ್ನ ವರದಾನ 

ಅದಕ್ಕಾಗಿ ಅವಲಂಬ ನಿನ್ನ ಸನ್ನಿಧಾನ ।।೧।।


ಕಾನನವೆಲ್ಲ ಓಂಕಾರವಿರಲು (೨)

ಕಾಲದ ತಾಳಕೆ ನಾಳೆಯು ಬರಲು 

ಕಾಣದ ಕಾಲವು ಆಸೆಯ ತರಲು 

ಮೋಹವು ಮಾಯೆಯು  ಭಾದಿಪರೇ ।।೨।।




Wednesday, July 12, 2023

Ambegaalikkutali Banda Govinda (ಅಂಬೆಗಾಲಿಕ್ಕುತಲಿ ಬಂದ ಗೋವಿಂದ)

Bhaktigeete

Sri Purandara Dasara Keerthanegalu

Song link: Click Here


Raga: Dhanashree

Tala: Atatala


Ambegaalikkutali banda govinda |

Ambujanabha dayadinda enna manege ||


Jalachara jalavaasa dharanidhara mrugaroopa

Nelanaledu mooradi maadi banda

Kulanasha vanavaasa navaneeta choraniva

Lalaneyara vratabhanga vahanaturanga ||


Kanna biduvanu tanna benna taggisuvanu

Mannu kedari kore baya teredu

Chinna bhargava lakshmananna benneya kalla

Manava bittu kudureya nerida ||


Neera pokkanu giriya negahi dharaniya tandu

Nara mruga balibandha koralugoyika

Sharamuridoraleledu niravani haya hatti

Purandara vitala manege ta banda ||


ಭಕ್ತಿಗೀತೆ 


ಅಂಬೆಗಾಲಿಕ್ಕುತಲಿ ಬಂದ ಗೋವಿಂದ ।।ಪ।।

ಅಂಬುಜನಾಭ ದಯದಿಂದ ಎನ್ನ ಮನೆಗೆ ।।ಅನು।।


ಜಲಚರ ಜಲವಾಸ ಧರಣಿಧರ ಮೃಗರೂಪ 

ನೆಲನಳೆದು ಮೂರಡಿ ಮಾಡಿ ಬಂದ 

ಕುಲನಾಶ ವನವಾಸ ನವನೀತ ಚೋರನಿವ 

ಲಲನೆಯರ ವ್ರತಭಂಗ ವಾಹನ ತುರಂಗ ।।೧।।


ಕಣ್ಣ ಬಿಡುವನು ತನ್ನ ಬೆನ್ನ ತಗ್ಗಿಸುವನು 

ಮಣ್ಣು ಕೆದರಿ ಕೋರೆ ಬಾಯ ತೆರೆದು 

ಚಿಣ್ಣ ಭಾರ್ಗವ ಲಕ್ಶ್ಮಣಣ್ಣ ಬೆಣ್ಣೆಯ ಕಳ್ಳ 

ಮಾನವ ಬಿಟ್ಟು ಕುದುರೆಯ ನೇರಿದ ।।೨।।


ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು 

ನರ ಮೃಗ ಬಲಿಬಂಧ ಕೊರಳುಗೊಯಿಕ 

ಶರಮುರಿದೊರಳೆಳೆದು ನಿರವಾಣಿ ಹಯ ಹತ್ತಿ 

ಪುರಂದರವಿಠಲ ಮನೆಗೆ ತಾ ಬಂದ ।।೩।।                        ಶ್ರೀ 



Monday, July 10, 2023

Hanumana Nodidira Namma (ಹನುಮನ ನೋಡಿದಿರಾ ನಮ್ಮ)

Bhaktigeete

Singer: Dr. Rajkumar

Song link: Click Here


Hanumana nodidira namma hanumana nodidira

Ramachandranige preeti patranu, vayu devara premada sutanu

Hanumana nodidira avana sahasa kelidira ||


Nanu embuva maata ariyade, tannadu ennuva nudiyanaadade

Neene ennuta seveya maadi, sriramana nambi baalidanamma ||


Shaktanendu ta sokki mereyade, bhaktanendu ta dambha maadade

Ramachandrana sevegaagi, eebhuviyali janmavanettidanamma ||


Kadala haaridanu seetegaagi, setuve kattida ramanigaagi

Betta hotta lakshmananigaagi, prabu charanadi tale baagida tanagaagi ||


ಭಕ್ತಿಗೀತೆ 


ಹನುಮನ ನೋಡಿದಿರಾ ನಮ್ಮ ಹನುಮನ ನೋಡಿದಿರಾ 

ರಾಮಚಂದ್ರನಿಗೆ ಪ್ರೀತಿ ಪಾತ್ರನು, ವಾಯು ದೇವರ ಪ್ರೇಮದ ಸುತನು 

ಹನುಮನ ನೋಡಿದಿರಾ ಅವನ ಸಾಹಸ ಕೇಳಿದಿರಾ ।।ಪ।।


ನಾನು ಎಂಬುವ ಮಾತ ಅರಿಯದೆ, ತನ್ನದು ಎನ್ನುವ ನುಡಿಯನಾಡದೆ 

ನೀನೆ ಎನ್ನುತ ಸೇವೆಯ ಮಾಡಿ, ಶ್ರೀರಾಮನ ನಂಬಿ ಬಾಳಿದನಮ್ಮಾ ।।೧।।


ಶಕ್ತನೆಂದು ತಾ ಸೊಕ್ಕಿ ಮೆರೆಯದೆ, ಭಕ್ತನೆಂದು ತಾ ಡಂಭ ಮಾಡದೇ 

ರಾಮಚಂದ್ರನಾ ಸೇವೆಗಾಗಿ, ಈ ಭುವಿಯಲಿ ಜನ್ಮವನೆತ್ತಿದನಮ್ಮಾ 

।।೨।।


ಕಡಲ ಹಾರಿದನು ಸೀತೆಗಾಗಿ, ಸೇತುವೆ ಕಟ್ಟಿದ ರಾಮನಿಗಾಗಿ 

ಬೆಟ್ಟ ಹೊತ್ತ ಲಕ್ಷ್ಮಣನಿಗಾಗಿ, ಪ್ರಭು ಚರಣದಿ ತಲೆ ಬಾಗಿದ ತನಗಾಗಿ ।।೩।।



Saturday, July 8, 2023

Harivarasanam Swami Vishwamohanam (ಹರಿವರಾಸನಂ ಸ್ವಾಮಿ ವಿಶ್ವ ಮೋಹನಂ)

Bhaktigeete

Singer: K J Yesudas

Song link: Click Here


Sharanam ayyappa swami sharanam ayyappa (2)


Harivarasanam swami vishvamohanam

Haridadheeshvaram aaradhya padukam |

Arivimardhnam swami nitya narthnam

Hariharaatmajam swami devamashraye ||

Sharanam ayyappa swami sharanam ayyappa (2)


Sharana keerthnam swami shaktamanasm

Bharana lolupam swami nartanalasam |

Aruna bhasuram swami bhutanayakam

Hariharaatmajam swami devamashraye ||

Sharanam ayyappa swami sharanam ayyappa (2)


Pranaya satyakam swami prananayakam

Pranata kalpakam swami suprabhanchitam |

Pranava mandiram swami keerthanapriam

Hariharaatmajam swami devamashraye ||

Sharanam ayyappa swami sharanam ayyappa (2)


Turaga vahanam swami sundaraananam

Varagadayudham swami vedavarnitam |

Gurukrupakaram swami keerthanapriam

Hariharaatmajam swami devamashraye ||

Sharanam ayyappa swami sharanam ayyappa (2)


Tribhuvanarchitam swami devatatmakam

Trinayanam prabhum swami divyadeshikam

Tridashapujitam swami chintitapradam

Hariharaatmajam swami devamashraye ||

Sharanam ayyappa swami sharanam ayyappa (2)


Bhavabhayaapaham swami bhavukavaham

Bhuvanamohanam swami bhutibhushanam

Dhavalavahanam swami divyavaranam

Hariharaatmajam swami devamashraye ||

Sharanam ayyappa swami sharanam ayyappa (2)


Kalamrudusmitam swami sundarananam

Kalabhakomalam swami gatra mohanam

Kalabhakesari swami vaajivahanam

Hariharaatmajam swami devamashraye ||

Sharanam ayyappa swami sharanam ayyappa (2)


Shita janapriyam swami chintitapradam

Shruti vibhushanam swami sadhu jeevanam

Shruti manoharam swami geetalalasam

Hariharaatmajam swami devamashraye ||

Sharanam ayyappa swami sharanam ayyappa (2)


ಭಕ್ತಿಗೀತೆ 


ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ಹರಿವರಾಸನಂ ಸ್ವಾಮಿ ವಿಶ್ವ ಮೋಹನಂ 

ಹರಿದಧೀಶ್ವರಂ ಆರಾಧ್ಯ ಪಾದುಕಂ ।

ಅರಿವಿಮರ್ದನಂ ಸ್ವಾಮಿ ನಿತ್ಯ ನರ್ತನಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ಶರಣ ಕೀರ್ತನಂ ಸ್ವಾಮಿ ಶಕ್ತಮಾನಸಂ 

ಭರಣಲೋಲುಪಂ  ಸ್ವಾಮಿ ನರ್ತನಾಲಾಸಂ । 

ಅರುಣ ಭಾಸುರಂ ಸ್ವಾಮಿ ಭೂತನಾಯಕಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ಪ್ರಣಯ ಸತ್ಯಕಂ  ಸ್ವಾಮಿ ಪ್ರಾಣನಾಯಕಂ 

ಪ್ರಣತ ಕಲ್ಪಕಂ ಸ್ವಾಮಿ ಸುಪ್ರಭಾಂಚಿತಂ ।

ಪ್ರಣವ ಮಂದಿರಂ ಸ್ವಾಮಿ ಕೀರ್ತನಪ್ರಿಯಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ತುರಗ ವಾಹನಂ ಸ್ವಾಮಿ ಸುಂದರಾನನಂ 

ವರಗದಾಯುಧಂ ಸ್ವಾಮಿ ವೇದವರ್ಣಿತಂ ।

ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ತ್ರಿಭುವನಾರ್ಚಿತಂ  ಸ್ವಾಮಿ ದೇವತಾತ್ಮಕಂ 

ತ್ರಿನಯನಂ ಪ್ರಭು೦ ಸ್ವಾಮಿ  ದಿವ್ಯದೇಶಿಕಂ ।

ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ಭವಭಯಾಪಹಂ  ಸ್ವಾಮಿ ಭಾವುಕಾವಹಂ 

ಭುವನಮೋಹನಂ ಸ್ವಾಮಿ ಭುತಿಭೂಷಣಂ ।

ಧವಳವಾಹನಂ ಸ್ವಾಮಿ ದಿವ್ಯವಾರಣ೦ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ಕಲಮೃದುಸ್ಮಿತಂ  ಸ್ವಾಮಿ ಸುಂದರಾನನಂ 

ಕಲಭಕೋಮಲಂ ಸ್ವಾಮಿ ಗಾತ್ರ ಮೋಹನಂ ।

ಕಲಭಕೇಸರೀ ಸ್ವಾಮಿ  ವಾಜಿವಾಹನಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)


ಶ್ರಿತ ಜನಪ್ರಿಯಂ ಸ್ವಾಮಿ ಚಿಂತಿತಪ್ರದಂ 

ಶೃತಿ ವಿಭೂಷಣಂ ಸ್ವಾಮಿ ಸಾಧು ಜೀವನಂ 

ಶ್ರುತಿಮನೋಹರಂ ಸ್ವಾಮಿ ಗೀತಲಾಲಸಂ 

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ ।।

ಶರಣಂ ಅಯ್ಯಪ ಸ್ವಾಮಿ ಶರಣಂ ಅಯ್ಯಪ್ಪ (೨)








Friday, July 7, 2023

Mang Ke Sath Tumhara (माँग के साथ तुम्हारा)

Movie: Naya Daur (1957)

Singers: Mohammed Rafi, Asha Bhosle

Song link: Click Here


Mang ke sath tumhara maine mang liya sansar!

Dil kahe dildaar mila, hum kahein hamein pyar mila;

Pyar mila hamein yaar mila, ik naya sansar mila ||


Aas mili armaan mila, jeene ka saman mila

Mil gaya ek sahara, ah ha ha !


Dil javan aur rut hansi, chal yuhin chal dein kahin

Tu chahe le chal kahin, tujpe hai mujhko yakin

Jaan bhi tu hai, dil bhi tu hi, rah bhi tu, manzil bhi tuhee-

Aur tu hee aas ka tara, ah ha ha !


गाना 


माँग के साथ तुम्हारा मैंने माँग लिया संसार !

दिल कहे दिलदार मिला, हम कहें हमें प्यार मिला ;

प्यार मिला हमें यार मिला, इक नया संसार मिला। 


आस मिली अरमान मिला, जीने का सामान मिला 

मिल गया एक सहारा, अहा हा हा !


दिल जवाँ और रुत हंसी, चल यूँ ही चल दें कहीं;

तू चाहे ले चल कहीं, तुजपै है मुझको यक़ीं 

जान भी तू है, दिल भी तू ही, राह भी तू, मंज़िल भी तूही -

और तू ही आस का तारा, अहा हा हा !