Saturday, April 15, 2023

Nadheem Dheem Tana (ನಧೀ೦ ಧೀ೦ ತನ)

Movie: Gaalipata (2008)

Singer: K S Chitra

Song link: Click Here


Nadheem dheem tana, nadheem dheem tana

Madhura premada modala tallana dhanya alingana

Ta kita tarikita ennutide ee hrudaya mrudanga

Sundara manasa sarovaradali prema taranga

Ee kannina kavana odo o huduga..

Nadheem dheem tana, nadheem dheem tana

Madhura premada modala tallana dhanya alingana

Modala hejjege eno kampana eni romanchana ||


Premada sari gama swara talada koladalli

Haaduta teladuta jwaraverisu maleyalli

Ondooralli raja rani nooru makkala hetta kathege

Dundu mukhada rajakumara

Kote dati banda kathege

Nayaka neene, aa chanda mama kathege nayaki na

Nadheem dheem tana, nadheem dheem tana

Madhura premada modala tallana dhanya alingana

Modala hejjege eno kampana eni romanchana ||


Summane tili tili nanadada padagalanoo

Soluve prati kshana nanna manadali nanu

Nidde barada kanna mele, kaiyya mugive chumbiso omme

Nanu nachi nadugo vele, malle hoova mudiso omme

Nanu bhumi, aavaresu suriva maleyante nanna ||


ಚಿತ್ರಗೀತೆ 


ನಧೀ೦ ಧೀ೦ ತನ, ನಧೀ೦ ಧೀ೦ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯಾ ಆಲಿಂಗನ  

ತಾ ಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ 

ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ 

ಈ ಕಣ್ಣಿನ ಕವನ ಓದೋ ಓ ಹುಡುಗಾ 

ನಧೀ೦ ಧೀ೦ ತನ, ನಧೀ೦ ಧೀ೦ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯಾ ಆಲಿಂಗನ  

ಮೊದಲ ಹೆಜ್ಜೆಗೆ ಏನೋ ಕಂಪನ ಏನೀ ರೋಮಾಂಚನ ।।ಪ।।


ಪ್ರೇಮದ ಸರಿ ಗಮ ಸ್ವರ ತಾಳದ ಕೊಳದಲ್ಲಿ 

ಹಾಡುತ ತೇಲಾಡುತಾ ಜ್ವರವೇರಿಸು ಮಳೆಯಲ್ಲಿ 

ಒಂದೂರಲ್ಲಿ ರಾಜ ರಾಣಿ, ನೂರು ಮಕ್ಕಳ ಹೆತ್ತ ಕಥೆಗೆ 

ದುಂಡೂ ಮುಖದ ರಾಜಕುಮಾರ 

ಕೋಟೆ ದಾಟಿ ಬಂದಾ ಕಥೆಗೆ 

ನಾಯಕ ನೀನೇ, ಆ ಚಂದಾ ಮಾಮ ಕಥೆಗೆ ನಾಯಕಿ ನಾ 

ನಧೀ೦ ಧೀ೦ ತನ, ನಧೀ೦ ಧೀ೦ ತನ

ಮಧುರ ಪ್ರೇಮದ ಮೊದಲ ತಲ್ಲಣ ಧನ್ಯಾ ಆಲಿಂಗನ  

ಮೊದಲ ಹೆಜ್ಜೆಗೆ ಏನೋ ಕಂಪನ ಏನೀ ರೋಮಾಂಚನ ।।೧।।


ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನೂ 

ಸೋಲುವೆ ಪ್ರತಿ ಕ್ಷಣ ನನ್ನಾ ಮನದಲಿ ನಾನು 

ನಿದ್ದೆ ಬರದ ಕಣ್ಣಾ ಮೇಲೆ ಕೈಯ್ಯಾ ಮುಗಿವೆ ಚುಂಬಿಸೊ ಒಮ್ಮೆ 

ನಾನು ನಾಚಿ ನಡುಗೋ ವೇಳೆ ಮಲ್ಲೆ ಹೂವ ಮುಡಿಸೋ ಒಮ್ಮೆ 

ನಾನು ಭೂಮಿ, ಆವರೆಸು ಸುರಿವ ಮಳೆಯಂತೆ ನನ್ನ ।।೨।।





Friday, April 14, 2023

Jaji Mallige Node (ಜಾಜಿ ಮಲ್ಲಿಗೆ ನೋಡೆ)

Janapada Geete

Song link: Click Here


Jaji mallige node, sojugada hoove node

Enna myala munivaare (2)

Kamalada hoo ninna kanade iralare

Mallige maye o..

Kedige gari ninna agali iralare

Mallige maye o.. ||


Kenne kasturi bale, rama lakumi malle

Marudda jadeyole, bistarada henne

Ellu hoovina seere, belli kalungura

Hallada neeru tarutale nana gelati

Bannada bale, nee hele, enna myala munivaare ||


Kogile dani chenda, nagara hede chenda

Premalokada padumini neenu

Munisilla nana geleya, kanasalla nambu nanna

Chennada cheluva ne kelo

Hannu holige tuppada, adigeya na madi

Battini neenitta gurutige

Battini jana, baruva dari kayo, enna myala munivaare ||


ಜನಪದ ಗೀತೆ 


ಜಾಜಿ ಮಲ್ಲಿಗೆ ನೋಡೆ ಸೋಜುಗದ ಹೂವೆ ನೋಡೆ 

ಎನ್ನ ಮ್ಯಾಲ ಮುನಿವಾರೆ (೨)

ಕಮಲದ ಹೂ ನಿನ್ನ ಕಾಣದೆ ಇರಲಾರೆ 

ಮಲ್ಲಿಗೆ ಮಾಯೆ ಓ .. 

ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ 

ಮಲ್ಲಿಗೆ ಮಾಯೆ ಓ ..  ।।ಪ।।


ಕೆನ್ನೆ ಕಸ್ತೂರಿ ಬಾಲೆ, ರಾಮ ಲಕುಮಿ ಮಲ್ಲೆ 

ಮಾರುದ್ದ ಜಡೆಯೋಳೆ, ಬಿಸ್ತರದ ಹೆಣ್ಣೆ 

ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗುರ 

ಹಳ್ಳದ ನೀರು ತರುತಾಳೆ ನನ ಗೆಳತಿ 

ಬಣ್ಣದ ಬಾಲೆ, ನೀ ಹೇಳೆ, ಎನ್ನ ಮ್ಯಾಲ  ಮುನಿವಾರೆ ।।೧।।


ಕೋಗಿಲೆ ದನಿ ಚೆಂದ, ನಾಗರ ಹೆಡೆ ಚೆಂದ 

ಪ್ರೇಮಲೋಕದ ಪದುಮಿನಿ ನೀನೂ 

ಮುನಿಸಿಲ್ಲ ನನ ಗೆಳೆಯ, ಕನಸಲ್ಲ ನಂಬು ನನ್ನ 

ಚೆನ್ನಾದ ಚೆಲುವಾ ನೀ ಕೇಳೊ 

ಹಣ್ಣು ಹೋಳಿಗೆ ತುಪ್ಪದ, ಅಡಿಗೆಯ ನಾ ಮಾಡಿ 

ಬತ್ತೀನಿ ನೀನಿಟ್ಟ ಗುರುತಿಗೆ 

ಬತ್ತೀನಿ  ಜಾಣ, ಬರುವ ದಾರಿ ಕಾಯೋ, ಎನ್ನ ಮ್ಯಾಲ ಮುನಿವಾರೆ 

।।೨।।





Thursday, April 13, 2023

Navvale Bantappa Navvale (ನವ್ವಾಲೆ ಬಂತಪ್ಪ ನವ್ವಾಲೆ)

Janapada Geete

Song link: Click Here


Navvale bantappa navvale

Sogeya bannada navvale ||


Battava meyyoodu navvale

Batta hottanna meyyoodu navvale

battava kayoru odisa bandare

Attitta oditu navvale ||


Ragiya meyyoodu navvale

Ragi hottonda meyyoodu navvale

Ragiya kayoru odisa bandare

Ragava padeetu navvale ||


Sarasati erodu navvale

Adu sasira kannina navvale

Sarasati erkondu nalidadi baruvaga

Dasara haaditu navvale ||


ಜನಪದ ಗೀತೆ 


ನವ್ವಾಲೆ ಬಂತಪ್ಪ ನವ್ವಾಲೆ 

ಸೋಗೆಯ ಬಣ್ಣದ ನವ್ವಾಲೆ ।।ಪ।।


ಬತ್ತವ ಮೆಯ್ಯೋದು ನವ್ವಾಲೆ 

ಬತ್ತ ಹೊಟ್ಟನ್ನ ಮೆಯ್ಯೋದು ನವ್ವಾಲೆ 

ಬತ್ತವ ಕಾಯೋರು ಓಡಿಸ ಬಂದರೆ 

ಅತ್ತಿತ್ತ ಓಡಿತು ನವ್ವಾಲೆ ।।೧।।


ರಾಗಿಯ ಮೆಯ್ಯೋದು ನವ್ವಾಲೆ 

ರಾಗಿ ಹೊಟ್ಟೊ೦ದ  ಮೆಯ್ಯೋದು ನವ್ವಾಲೆ 

ರಾಗಿಯ ಕಾಯೋರು ಓಡಿಸ ಬಂದರೆ 

ರಾಗವ ಪಾಡೀತು ನವ್ವಾಲೆ ।।೨।।


ಸರಸತಿ ಏರೋದು ನವ್ವಾಲೆ 

ಅದು ಸಾಸಿರ ಕಣ್ಣಿನ ನವ್ವಾಲೆ 

ಸರಸತಿ ಎರ್ಕೊಂಡು ನಲಿದಾಡಿ ಬರುವಾಗ 

ದಾಸರ ಹಾಡಿತು ನವ್ವಾಲೆ ।।೩।।



Wednesday, April 12, 2023

Cheluveya Nota Chenna (ಚೆಲುವೆಯ ನೋಟ ಚೆನ್ನ)

Movie: Shankar Guru (1978)

Singer: Dr. Rajkumar

Song link: Click Here


Cheluveya nota chenna, olavina matu chenna

Mallige hoove ninna, naguvu innu chenna

Cheluveya nota chenna ||


Kamana billu chenna, suliva minchu chenna

Holeyuva ninna kanna, kanti innu chenna

Tannane gali chenna, hunnime chandra chenna

Ninnanu seri ninta nanna bale chenna ||1||


Jinkeya kanne chenna, havalada banna chenna

Aragili ninna roopa, chennadalli chenna

Belagina bisilu chenna, hongeya neralu chenna

Gelatiye ninna sneha, chinnakinta chenna ||2||


ಚಿತ್ರಗೀತೆ 


ಚೆಲುವೆಯ ನೋಟ ಚೆನ್ನ, ಒಲವಿನ ಮಾತೂ ಚೆನ್ನ 

ಮಲ್ಲಿಗೆ ಹೂವೆ ನಿನ್ನ, ನಗುವು ಇನ್ನೂ ಚೆನ್ನ 

ಚೆಲುವೆಯ ನೋಟ ಚೆನ್ನ।।ಪ।।


ಕಾಮನ ಬಿಲ್ಲು ಚೆನ್ನ, ಸುಳಿವ ಮಿಂಚು ಚೆನ್ನ 

ಹೊಳೆಯುವ ನಿನ್ನಾ ಕಣ್ಣ ಕಾಂತಿ ಇನ್ನೂ ಚೆನ್ನ 

ತಣ್ಣನೆ ಗಾಳಿ ಚೆನ್ನ, ಹುಣ್ಣಿಮೆ ಚಂದ್ರ ಚೆನ್ನ 

ನಿನ್ನನು ಸೇರಿ ನಿಂತ ನನ್ನ ಬಾಳೆ ಚೆನ್ನ ।।೧।।


ಜಿಂಕೆಯ ಕಣ್ಣೆ ಚೆನ್ನ, ಹವಳದ ಬಣ್ಣ ಚೆನ್ನ 

ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ 

ಬೆಳಗಿನ ಬಿಸಿಲು ಚೆನ್ನ, ಹೊಂಗೆಯ ನೆರಳು ಚೆನ್ನ 

ಗೆಳತಿಯೆ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ ।।೨।।




Tuesday, April 11, 2023

Biligiri rangayya (ಬಿಳಿಗಿರಿ ರಂಗಯ್ಯಾ)

Movie: Sharapanjara (1971)

Singer: P Susheela

Song link: Click Here


Biligiri rangayya.. Neene helayya

Sri ranganayakiya chendulli cheluvayya

Biligiri rangayya.. ||


Muttugada hoovu malligeye

Attiya hannu anjurave

Chitteya chitte (2) dumbiye

Kasturi kadige kasturiye ||


Kajana kage kogileye

Bannada kembuta giri navile

Kadina maravella (2) srigandhave

Nadina mannella bangarave ||


Bettada kalgicchu deepave

Birugali kendhuli dhupave

Mohadavesha (2) bhaktiye

Saviyadudella naivedyave ||


ಚಿತ್ರಗೀತೆ 


ಬಿಳಿಗಿರಿ ರಂಗಯ್ಯಾ .. ನೀನೇ ಹೇಳಯ್ಯಾ 

ಶ್ರೀ ರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ 

ಬಿಳಿಗಿರಿ ರಂಗಯ್ಯಾ .. ।।ಪ।।


ಮುತ್ತುಗದ ಹೂವು ಮಲ್ಲಿಗೆಯೇ 

ಅತ್ತಿಯ ಹಣ್ಣು ಅಂಜೂರವೆ 

ಚಿಟ್ಟೆಯಾ ಚಿಟ್ಟೆ (೨) ದುಂಬಿಯೇ 

ಕಸ್ತೂರಿ ಕಾಡಿಗೆ ಕಸ್ತೂರಿಯೇ ।।೧।।


ಕಾಜಾಣ ಕಾಗೆ ಕೋಗಿಲೆಯೇ 

ಬಣ್ಣದ ಕೆಂಬೂತ ಗಿರಿ ನವಿಲೇ 

ಕಾಡಿನ ಮರವೆಲ್ಲ (೨) ಶ್ರೀಗಂಧವೇ 

ನಾಡಿನ ಮಣ್ಣೆಲ್ಲ ಬಂಗಾರವೇ ।।೨।।


ಬೆಟ್ಟದ ಕಾಳ್ಗಿಚ್ಚು ದೀಪವೇ 

ಬಿರುಗಾಳಿ ಕೆಂಧೂಳಿ ಧೂಪವೇ 

ಮೋಹದಾವೇಷ (೨) ಭಕ್ತಿಯೇ 

ಸವಿಯಾದುದೆಲ್ಲ ನೈವೇದ್ಯವೇ ।।೩।।



Monday, April 10, 2023

Aashavitane Ee Muka Veene (ಆಶಾವಿತಾನೆ ಈ ಮೂಕ ವೀಣೆ)

Movie: Nanna Tamma (1970)
Singer: P Susheela
Song link: Click Here


Krishna.... Krishna.... Krishna |

Aashavitane ee muka veene, kapadalento
Neenoliyade ||

Manasara paduva madhurabhilashe
Manadeno mayada maha nirase
Mane devarane mana nondiruve
Mamatamaya nee managodu swami ||1||

Ee reeti vedane ee neeti shodane
Shokanuraagave aaradhane
Innenu kanike tandilla nanu
Kannire pannira abhisheka swami ||2||

Krishna.... Krishna.... Krishna |

ಚಿತ್ರಗೀತೆ 

ಕೃಷ್ಣಾ.. ಕೃಷ್ಣಾ.. ಕೃಷ್ಣಾ.. ।

ಆಶಾವಿತಾನೆ ಈ ಮೂಕ ವೀಣೆ ಕಾಪಾಡಲೆಂತೋ 
ನೀನೊಲಿಯದೇ .. ।।ಪ।।

ಮನಸಾರ ಪಾಡುವ ಮಧುರಾಭಿಲಾಷೆ 
ಮನದೇನೊ ಮಾಯದ ಮಹಾ ನಿರಾಸೆ 
ಮನೆ ದೇವರಾಣೆ ಮನ ನೊಂದಿರುವೆ 
ಮಮತಾಮಯ ನೀ ಮನಗೊಡು ಸ್ವಾಮಿ ।।೧।।

ಈ ರೀತಿ ವೇದನೆ ಈ ನೀತಿ ಶೋಧನೆ 
ಶೋಕಾನುರಾಗವೆ ಆರಾಧನೆ 
ಇನ್ನೇನು ಕಾಣಿಕೆ ತಂದಿಲ್ಲ ನಾನು 
ಕಣ್ಣೀರೆ ಪನ್ನೀರ ಅಭಿಷೇಕ ಸ್ವಾಮಿ ।।೨।।

ಕೃಷ್ಣಾ.. ಕೃಷ್ಣಾ.. ಕೃಷ್ಣಾ.. ।






Sunday, April 9, 2023

Hoovu Cheluvella Nandenditu (ಹೂವು ಚೆಲುವೆಲ್ಲಾ ನಂದೆಂದಿತು)

Movie: Hannele Chiguridaga (1968)

Singer: P Susheela

Song link: Click Here


Hoovu cheluvella nandenditu

Hennu hoova mudidu cheluve tanenditu ||


Kogileyu ganadalli nane doreyenditu

Kolalina dani, veneya khani koralali ideyentu

Hennu, veene hidida, sharadeye hennenditu ||


Navilondu natyadalli tane modalenditu

Kedarute gari kuniyuva pari kannige sompentu

Hennu natyadarasi, parvatiye, hennenditu ||


Mugilondu baninalli tane migilenditu

Needuve male toleyuve kole samanarenagentu

Hennu, papa toleva, suragange hennenditu ||


ಚಿತ್ರಗೀತೆ 


ಹೂವು ಚೆಲುವೆಲ್ಲಾ ನಂದೆಂದಿತು 

ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ।।ಪ।।


ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು 

ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು 

ಹೆಣ್ಣು ವೀಣೆ ಹಿಡಿದ ಶಾರದೆಯೇ ಹೆಣ್ಣೆಂದಿತು ।।೧।।


ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು 

ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು 

ಹೆಣ್ಣು ನಾಟ್ಯದರಸಿ ಪಾರ್ವತಿಯೇ ಹೆಣ್ಣೆಂದಿತು ।।೨।।


ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು 

ನೀಡುವೆ ಮಳೆ ತೊಳೆಯುವೆ ಕೊಳೆ ಸಮಾನಾರೆನಗೆಂತು 

ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು ।।೩।।