Wednesday, March 8, 2023

Baramma Guruseve Maduva (ಬಾರಮ್ಮ ಗುರುಸೇವೆ ಮಾಡುವ)

Movie: Karuneye Kutumba kannu (1962)

Singer: S Janaki

Song link: Click Here


Baramma guruseve maduva

Nitya bhuri brahmananda honduva ||


Endigadaru savu tappadu

Guru hondade nijamukti dakkadu

Sundara tanuvidu nilladu

Moha bandhanadinda sukha salladu ||


Nitya guru rangana seruva

Chitta vruttigalellava aliyuva

Sacchidananda paravastuva seri

Mukti rajyadi manemaduva ||


ಚಿತ್ರಗೀತೆ 


ಬಾರಮ್ಮ ಗುರುಸೇವೆ ಮಾಡುವ 

ನಿತ್ಯ ಭೂರಿ ಬ್ರಹ್ಮಾನಂದ ಹೊಂದುವ ।।ಪ।।


ಎಂದಿಗಾದರೂ ಸಾವು ತಪ್ಪದು 

ಗುರು ಹೊಂದದೆ ನಿಜಮುಕ್ತಿ ದಕ್ಕದು ।

ಸುಂದರ ತನುವಿದು ನಿಲ್ಲದು 

ಮೋಹ ಬಂಧನದಿಂದ ಸುಖ ಸಲ್ಲದು ।।೧।।


ನಿತ್ಯ ಗುರು ರಂಗನ ಸೇರುವ 

ಚಿತ್ತ ವೃತ್ತಿಗಳೆಲ್ಲವ ಅಳಿಯುವ ।

ಸಚ್ಚಿದಾನಂದ ಪರವಸ್ತುವ ಸೇರಿ 

ಮುಕ್ತಿ ರಾಜ್ಯದಿ ಮನೆಮಾಡುವ ।।೨।।



Monday, March 6, 2023

Nagutiru Chanda Aladiru Kanda (ನಗುತಿರು ಚೆಂದ.. ಅಳದಿರು ಕಂದ)

Movie: Mahatma Kabeer (1962)

Singer: Ghantasala

Song link: Click Here


Nagutiru chanda.. aladiru kanda

Harasalu hanumanu banda ||


Mohana ramana pavana nama

Ninaganandada mangaladhama

Ninnaya bhakuti.. namada shakuti

Lokada janarige taruvudu mukuti

Nagutiru kanda.. nagu aananda

Harasalu hanumanu banda ||1||


Vishwaadhara.. veda vihara

Shubhadakara..papavidoora

Karunabharana.. pavana charana

Bhavabhaya harana.. seetaramana

Jaya jaya rama

Jaya sri rama

Jaya jaya taraka nama ||2||


ಚಿತ್ರಗೀತೆ 


ನಗುತಿರು ಚೆಂದ.. ಅಳದಿರು ಕಂದ 

ಹರಸಲು ಹನುಮನು ಬಂದ ।।ಪ।।


ಮೋಹನ ರಾಮನ ಪಾವನ ನಾಮ 

ನಿನಗಾನಂದದ ಮಂಗಳಧಾಮ 

ನಿನ್ನಯ ಭಕುತಿ .. ನಾಮದ ಶಕುತಿ 

ಲೋಕದ ಜನರಿಗೆ ತರುವುದು ಮುಕುತಿ 

ನಗುತಿರು .. ಕಂದ  ನಗು ಆನಂದ 

ಹರಸಲು ಹನುಮನು ಬಂದ ।।೧।।


ವಿಶ್ವಾಧಾರಾ  .. ವೇದ ವಿಹಾರ 

ಶುಭದಾಕಾರ .. ಪಾಪವಿದೂರ 

ಕರುಣಾಭರಣ .. ಪಾವನ ಚರಣ 

ಭವಭಯ ಹರಣ .. ಸೀತಾರಮಣ 

ಜಯ ಜಯ ರಾಮ 

ಜಯ ಶ್ರೀ ರಾಮ 

ಜಯ ಜಯ ತಾರಕ ನಾಮ ।।೨।।

                                           



Friday, March 3, 2023

Raga Ninnadu Bhava Nannadu (ರಾಗ ನಿನ್ನದು ಭಾವ ನನ್ನದು)

Movie: Kulagourava (1971)

Singer: P Susheela

Song link: Click Here


Raga ninnadu bhava nannadu

Tala ninnadu natya nannadu

Raga ninnadu bhava nannadu ||


Manave yamuna maneye gokula

Nane murali neene gopala

Nutana sambrama nammaya sangama

Hrudaya veene midiye tana

Hadi naliva amara gana

Raga ninnadu bhava nannadu ||


Balina gudiyali deepava belagide

Jeevana noukege ambiga neenade

Ninnaya hoonage badada mallige

Intha prema intha preeti

Endu irali onde reeti

Raga ninnadu bhava nannadu

Tala ninnadu natya nannadu

Raga ninnadu bhava nannadu ||


ಚಿತ್ರಗೀತೆ 


ರಾಗ ನಿನ್ನದು ಭಾವ ನನ್ನದು 

ತಾಳ ನಿನ್ನದು ನಾಟ್ಯ ನನ್ನದು 

ರಾಗ ನಿನ್ನದು ಭಾವ ನನ್ನದು ।।ಪ ।।


ಮನವೆ ಯಮುನ ಮನೆಯೇ ಗೋಕುಲ 

ನಾನೇ ಮುರಳಿ ನೀನೇ ಗೋಪಾಲ 

ನೂತನ ಸಂಭ್ರಮ ನಮ್ಮಯ ಸಂಗಮ 

ಹೃದಯ ವೀಣೆ ಮಿಡಿಯೆ ತಾನ 

ಹಾಡಿ ನಲಿವ ಅಮರ ಗಾನ 

ರಾಗ ನಿನ್ನದು ಭಾವ ನನ್ನದು ।।೧।।


ಬಾಳಿನ ಗುಡಿಯಲಿ ದೀಪವ ಬೆಳಗಿದೆ 

ಜೀವನ ನೌಕೆಗೆ ಅಂಬಿಗ ನೀನಾದೆ 

ನಿನ್ನಯ ಹೂ ನಗೆ ಬಾಡದ ಮಲ್ಲಿಗೆ 

ಇಂಥ ಪ್ರೇಮ ಇಂಥ ಪ್ರೀತಿ 

ಎಂದು ಇರಲಿ ಒಂದೇ ರೀತಿ 

ರಾಗ ನಿನ್ನದು ಭಾವ ನನ್ನದು 

ತಾಳ ನಿನ್ನದು ನಾಟ್ಯ ನನ್ನದು 

ರಾಗ ನಿನ್ನದು ಭಾವ ನನ್ನದು ।।೨।।



Thursday, March 2, 2023

Sanjeya Ragake Banu Kemperide (ಸಂಜೆಯ ರಾಗಕೆ ಬಾನು ಕೆಂಪೇರಿದೆ)

Bhavageete

Sahitya: Subraya Chokkadi

Song link: Click Here


Sanjeya ragake banu kemperide

Tingalu moodi belakina kodi

Chelladide ega rangeride ||sanjeya||


Maragida nelada mele neralanu haaside

Hoogala dalagala naduve ninnade beralide ||1||


Gaaliya jateya gandhavu ninnanu savaride

Olagu horagu vyapisi yavvana keralide ||2||


Koladali moodida bimbavu hoogala mareside

Taladali entaha kanasina lokavu teredide ||3||


ಭಾವಗೀತೆ 


ಸಂಜೆಯ ರಾಗಕೆ ಬಾನು ಕೆಂಪೇರಿದೆ 

ತಿಂಗಳು ಮೂಡಿ ಬೆಳಕಿನ ಕೋಡಿ 

ಚೆಲ್ಲಾಡಿದೆ ಈಗ ರಂಗೇರಿದೆ ।।ಪ ।।


ಮರಗಿಡ ನೆಲದ ಮೇಲೆ ನೆರಳನು ಹಾಸಿದೆ 

ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ।।೧।।


ಗಾಳಿಯ ಜತೆಯ ಗಂಧವು ನಿನ್ನನು ಸವರಿದೆ 

ಒಳಗೂ ಹೊರಗೂ ವ್ಯಾಪಿಸಿ ಯವ್ವನ ಕೆರಳಿದೆ ।।೨।।


ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ 

ತಳದಲಿ ಎಂತಹ ಕನಸಿನ ಲೋಕವು ತೆರೆದಿದೆ ।।೩।।





Wednesday, March 1, 2023

Nee Amrutadhare (ನೀ ಅಮೃತಧಾರೆ)

Movie: Amrutadhare (2005)

Singers: Harish Raghavendra, Supriya Aacharya

Song link: Click Here


Nee amrutadhare koti januma jothegati

Nee amrutadhare ihaku paraku sangati

Nee illavadare na.. hege balali ||


Hae preeti huduga koti januma jothegara

Hae preeti huduga nanna bala kategara

Nee illavadare na.. hege balali

Hae preeti huduga ||


Nenapideye modala nota, nenapideye modala sparsha

Nenapideye mattanu tanda aa modala chumbana

Nenapideye modala kanasu, nenapidedeye modala munisu

Nenapideye kambani tumbi neenitta santvana

Nee illavadare na.. hege balali..

Nee amrutadhare koti januma jothegati

Nee amrutadhare ihaku paraku sangati

Nee amrutadhare.. ||1||


Nenapideye modala sarasa, nenapideye modala virasa

Nenapideye modalu tanda sambhramada kanike

Nenapideye modala kavana, nenapideye modala payana

Nenapideye modala dinada bharavaseya aasare

Nee illavadare na.. hege balali

Hae preeti huduga koti januma jothegara

Nee amrutadhare ihaku paraku sangati

Nee illavadare na.. hege balali

Nee amrutadhare.. ||


ಚಿತ್ರಗೀತೆ 


ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ 

ನೀ ಅಮೃತಧಾರೆ ಇಹಕು ಪರಕು ಸಂಗಾತಿ 

ನೀ ಇಲ್ಲವಾದರೆ ನಾ .. ಹೇಗೆ ಬಾಳಲಿ .. ।।


ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ 

ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ 

ನೀ ಇಲ್ಲವಾದರೆ ನಾ.. ಹೇಗೆ ಬಾಳಲಿ.. 

ಹೇ ಪ್ರೀತಿ ಹುಡುಗ.. ।।


ನೆನಪಿದೆಯೆ ಮೊದಲ ನೋಟ, ನೆನಪಿದೆಯೆ ಮೊದಲ ಸ್ಪರ್ಷ 

ನೆನಪಿದೆಯೆ ಮತ್ತನು ತಂದ ಆ ಮೊದಲ ಚುಂಬನ 

ನೆನಪಿದೆಯೆ ಮೊದಲ ಕನಸು, ನೆನಪಿದೆಯೆ ಮೊದಲ ಮುನಿಸು 

ನೆನಪಿದೆಯೆ ಕಂಬನಿ ತುಂಬಿ ನೀನಿಟ್ಟ ಸಾಂತ್ವನ 

ನೀ ಇಲ್ಲವಾದರೆ ನಾ.. ಹೇಗೆ ಬಾಳಲಿ.. 

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ 

ನೀ ಅಮೃತಧಾರೆ ಇಹಕು ಪರಕು ಸಂಗಾತಿ 

ನೀ ಅಮೃತಧಾರೆ .. ।।೧।।


ನೆನಪಿದೆಯೆ ಮೊದಲ ನೋಟ, ನೆನಪಿದೆಯೆ ಮೊದಲ ಸ್ಪರ್ಷ 

ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ 

ನೆನಪಿದೆಯೆ ಮೊದಲ ಕವನ, ನೆನಪಿದೆಯೆ ಮೊದಲ ಪಯಣ 

ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ 

ನೀ ಇಲ್ಲವಾದರೆ ನಾ.. ಹೇಗೆ ಬಾಳಲಿ.. 

ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ 

ನೀ ಅಮೃತಧಾರೆ ಇಹಕು ಪರಕು ಸಂಗಾತಿ 

ನೀ ಇಲ್ಲವಾದರೆ ನಾ.. ಹೇಗೆ ಬಾಳಲಿ.. 

ನೀ ಅಮೃತಧಾರೆ .. ।।೨।।











Tuesday, February 28, 2023

Enu Ninnaya Leele (ಏನು ನಿನ್ನಯ ಲೀಲೆ)

Bhaktigeete

Singer: Dr Rajkumar

Song link: Click Here


Enu ninnaya leele elu bettada mele

Kane ene ninaginnu savi nenape chennu

Enu ninnaya leele elu bettada mele .. ||


Aase miti meeriralu janma savira baralu

Ninna padada renu doretarade siri innu

Berenu bekilla sannidhiye nanagella

Venkateshana bhakuti nijada mukuti ||1||


Arividirulalli ninna kanuvudelli

Moha pashavidenu bhramisiruve naninnu

Siri ramana nee nanna ede maneya aabharana

Usirinali neenade panchaprana ||2||


ಭಕ್ತಿಗೀತೆ 


ಏನು ನಿನ್ನಯ ಲೀಲೆ ಏಳು ಬೆಟ್ಟದ ಮೇಲೆ 

ಕಾಣೆ ಎಣೆ ನಿನಗಿನ್ನು ಸವಿ ನೆನಪೇ ಚೆನ್ನು 

ಏನು ನಿನ್ನಯ ಲೀಲೆ ಏಳು ಬೆಟ್ಟದ ಮೇಲೆ .. ।।ಪ ।।


ಆಸೆ ಮಿತಿ ಮೀರಿರಲು ಜನ್ಮ ಸಾವಿರ ಬರಲು 

ನಿನ್ನ ಪಾದದ ರೇಣು ದೊರೆತರದೆ ಸಿರಿ ಇನ್ನು 

ಬೇರೇನು ಬೇಕಿಲ್ಲ ಸನ್ನಿಧಿಯೇ ನನಗೆಲ್ಲ 

ವೆಂಕಟೇಶನ ಭಕುತಿ ನಿಜದ ಮುಕುತಿ ।।೧।।


ಅರಿವಿದಿರುಳಲ್ಲಿ ನಿನ್ನ ಕಾಣುವುದೆಲ್ಲಿ 

ಮೋಹ ಪಾಶವಿದೇನು ಭ್ರಮಿಸಿರುವೆ ನಾನಿನ್ನು 

ಸಿರಿ ರಮಣ ನೀ ನನ್ನ ಎದೆ ಮನೆಯ ಆಭರಣ 

ಉಸಿರಿನಲಿ ನೀನಾದೆ ಪಂಚಪ್ರಾಣ ।।೨।।




Monday, February 27, 2023

Deva Ninna Beduve (ದೇವ ನಿನ್ನ ಬೇಡುವೆ)

Prarthane

Sahitya: N S Laxminarayana Bhatta

Song link: Click Here


Deva ninna beduve

Kayo doora madade,

Shakti needu baluvante

Satya dharma meerade.


Suryanagi mele chalisi

Kattalannu harisuve,

Modavagi neeru surisi

Lokakanna unisuve,

Pranavayuvagi sulidu

Kanadante kayuve,

Tande ninna karuneya hege tane mareyuve?


Hasirinallu hoovinallu

Ninna hejjegurutide,

Koti hakki kanttadalli

Ninna stotra chimmide.

Ele eleyu ninna chitra-

Kaleya ghanate saaride,

Ellellu neene tande ninnadalladenide?


Ee loka neenu iruva

Sundara devalaya,

Olage kootu midiveyante

Idara ella nadiya.

Idara seve ninna pooje

Emba rusheevaniya,

Nambidevu harasu namma,

Navu kliva shaleya.


ಪ್ರಾರ್ಥನೆ 


ದೇವ ನಿನ್ನ ಬೇಡುವೆ 

ಕಾಯೊ ದೂರ ಮಾಡದೆ,

ಶಕ್ತಿ ನೀಡು ಬಾಳುವಂತೆ 

ಸತ್ಯ ಧರ್ಮ ಮೀರದೆ. 


ಸೂರ್ಯನಾಗಿ ಮೇಲೆ ಚಲಿಸಿ 

ಕತ್ತಲನ್ನು ಹರಿಸುವೆ,

ಮೋಡವಾಗಿ ನೀರು ಸುರಿಸಿ 

ಲೋಕಕನ್ನ ಉಣಿಸುವೆ,

ಪ್ರಾಣವಾಯುವಾಗಿ ಸುಳಿದು 

ಕಾಣದಂತೆ ಕಾಯುವೆ,

ತಂದೆ ನಿನ್ನ ಕರುಣೆಯ 

ಹೇಗೆ ತಾನೆ ಮರೆಯುವೆ?


ಹಸಿರಿನಲ್ಲು ಹೂವಿನಲ್ಲು 

ನಿನ್ನ ಹೆಜ್ಜೆ ಗುರುತಿದೆ,

ಕೋಟಿ ಹಕ್ಕಿ ಕಂಠದಲ್ಲಿ 

ನಿನ್ನ ಸ್ತೋತ್ರ ಚಿಮ್ಮಿದೆ. 

ಎಲೆ ಎಲೆಯೂ ನಿನ್ನ ಚಿತ್ರ-

ಕಲೆಯ ಘನತೆ ಸಾರಿದೆ,

ಎಲ್ಲೆಲ್ಲೂ ನೀನೆ ತಂದೆ ನಿನ್ನದಲ್ಲದೇನಿದೆ?


ಈ ಲೋಕ ನೀನು ಇರುವ 

ಸುಂದರ ದೇವಾಲಯ,

ಒಳಗೆ ಕೂತು ಮಿಡಿವೆಯಂತೆ 

ಇದರ ಎಲ್ಲ ನಾಡಿಯ. 

ಇದರ ಸೇವೆ ನಿನ್ನ ಪೂಜೆ 

ಎಂಬ ಋಷೀವಾಣಿಯ,

ನಂಬಿದೆವು ಹರಸು ನಮ್ಮ,

ನಾವು ಕಲಿವ ಶಾಲೆಯ.