Saturday, February 11, 2023

Bhala Ollevr Nam Missu (ಭಾಳ ಒಳ್ಳೇವ್ರ್ ನಮ್ ಮಿಸ್ಸು)

Padya

Song link: Click Here


Bhala ollevr namm missu

En helidru ess esssu,

Nagta nagta matadtare

Skuligella famoussu.


Janamari antare

Chocolate idre kodtare,

Bennu tatti kenne savari

Benne kanda antare!


Aatak ba antare

Aatad saman kodtare,

Gotildange aatad jothe

Patanu kalistare!


Namjothene aadtare

Kai kai hididu haadtare,

Koti karadi kathe heli

Sikka patte nagistare.  


Nam skulantha skulilla

Nam missantha missilla

Amman hage avrunu

Bit barakke manasilla.


ಪದ್ಯ 


ಭಾಳ ಒಳ್ಳೇವ್ರ್ ನಮ್ ಮಿಸ್ಸು 

ಏನ್ ಹೇಳಿದ್ರೂ ಎಸ್ಸೆಸ್ಸು,

ನಗ್ತಾ ನಗ್ತಾ ಮಾತಾಡ್ತಾರೆ 

ಸ್ಕೂಲಿಗೆಲ್ಲ ಫೇಮಸ್ಸು. 


ಜಾಣಮರಿ ಅಂತಾರೆ 

ಚಾಕ್ಲೇಟಿದ್ರೆ ಕೊಡ್ತಾರೆ,

ಬೆನ್ನು ತಟ್ಟಿ ಕೆನ್ನೆ ಸವರಿ 

ಬೆಣ್ಣೆ ಕಂದ ಅಂತಾರೆ!


ಆಟಕ್ ಬಾ ಅಂತಾರೆ 

ಆಟದ್ ಸಾಮಾನ್ ಕೊಡ್ತಾರೆ 

ಗೊತ್ತಿಲ್ದಂಗೆ ಆಟದ್ ಜೊತೆ 

ಪಾಠಾನೂ ಕಲಿಸ್ತಾರೆ!


ನಮ್ಜೊತೇನೇ  ಆಡ್ತಾರೆ 

ಕೈ ಕೈ ಹಿಡಿದು ಹಾಡ್ತಾರೆ,

ಕೋತಿ ಕರಡಿ ಕಥೆ ಹೇಳಿ 

ಸಿಕ್ಕಾ ಪಟ್ಟೆ ನಗಿಸ್ತಾರೆ. 


ನಮ್ ಸ್ಕೂಲಂಥ ಸ್ಕೂಲಿಲ್ಲ 

ನಮ್ ಮಿಸ್ಸಂಥ ಮಿಸ್ಸಿಲ್ಲ 

ಅಮ್ಮನ್ ಹಾಗೇ ಅವ್ರೂನೂ 

ಬಿಟ್ ಬರಕ್ಕೇ ಮನಸಿಲ್ಲ. 



 

Thursday, February 9, 2023

Aadona Banni Kanna Mucchale (ಆಡೋಣ ಬನ್ನಿ ಕಣ್ಣ ಮುಚ್ಚಾಲೆ)

Janapada Geete

Song link: Click Here


Aadona banni kanna mucchale

Tugona banni uyyale

Jeevanavondu nataka shale

Navella kuniyuva nartana shale 

Uyyale champale ||


Suttalu chellida rangu rangole

Balukuta baruvalu vanamaale

Bharadinda bandu paccheya saale

Tugadi karedavu tengina saale

Uyyale champale ||


Hakkigalinchara kareyole

Kuniyuta baruvalu navvale

Impu impina gumpu kogile

Kampanu susuva hoogala maale

Uyyale champale ||


ಜನಪದ ಗೀತೆ 


ಆಡೋಣ ಬನ್ನಿ ಕಣ್ಣ ಮುಚ್ಚಾಲೆ 

ತುಗೋಣ ಬನ್ನಿ ಉಯ್ಯಾಲೆ 

ಜೀವನವೊಂದು ನಾಟಕ ಶಾಲೆ 

ನಾವೆಲ್ಲ ಕುಣಿಯುವ ನರ್ತನ ಶಾಲೆ 

ಉಯ್ಯಾಲೆ  ಚಂಪಾಲೆ ।।ಪ ।।


ಸುತ್ತಾಲು ಚಲ್ಲಿದ ರಂಗು ರಂಗೋಲೆ 

ಬಳುಕುತ ಬರುವಳು ವನಮಾಲೆ 

ಭರದಿಂದ ಬಂದು ಪಚ್ಚೆಯ ಸಾಲೆ 

ತೂಗಾಡಿ ಕರೆದಾವು ತೆಂಗಿನ ಸಾಲೆ 

ಉಯ್ಯಾಲೆ ಚಂಪಾಲೆ ।।೧।।


ಹಕ್ಕಿಗಳಿಂಚರ ಕರೆಯೋಲೆ 

ಕುಣಿಯುತ ಬರುವಳು ನವ್ವಾಲೆ 

ಇಂಪು ಇಂಪಿನ ಗುಂಪು ಕೋಗಿಲೆ 

ಕಂಪನು ಸೂಸುವ ಹೂಗಳ ಮಾಲೆ 

ಉಯ್ಯಾಲೆ ಚಂಪಾಲೆ ।।೨।।




Tuesday, February 7, 2023

Vara Bantamma Guruvara Bantamma (ವಾರ ಬಂತಮ್ಮ ಗುರುವಾರ ಬಂತಮ್ಮ)

Bhaktigeete

Singer: Dr. Rajkumar

Song link:Click Here


Vara bantamma guruvara bantamma

Rayara neneyamma guru rayara neneyamma

Smarane matradali klesha kaledu 

Sadgatiya koduvanamma ||


Yogi baruvanamma shubha yoga baruvudamma

Raghavendra gururaya bandu bhavaroga kalevanamma ||


Manava toleyiramma bhaktiya maneya hakiramma

Dhyanadinda karedaga bandu olaganna terevanamma ||


Kopa ariyanamma yaranu doora tallanamma

Preeti matige sotu baruva maguvante kaniramma ||


Hinde baruvanamma rayara neralinante hanuma

Hanumanidedde ramaniddu nija mukthi koduvanamma ||


ಭಕ್ತಿಗೀತೆ 


ವಾರ ಬಂತಮ್ಮ ಗುರುವಾರ ಬಂತಮ್ಮ 

ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ 

ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು 

ಸದ್ಗತಿಯ ಕೊಡುವನಮ್ಮ ।।ಪ।।


ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ 

ರಾಘವೇಂದ್ರ ಗುರುರಾಯ ಬಂದು ಭವರೋಗ ಕಳೆವನಮ್ಮ 

।।೧।।


ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ 

ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ 

।।೨।।


ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ 

ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ 

।।೩।।


ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ 

ಹನುಮನಿದ್ದೆಡೆ ರಾಮನಿದ್ದು ನಿಜಮುಕ್ತಿ ಕೊಡುವನಮ್ಮ 

।।೪।।



Saturday, February 4, 2023

Snanava Madiro Jnana Teerthadali (ಸ್ನಾನವ ಮಾಡಿರೋ ಜ್ಞಾನ ತೀರ್ಥದಲಿ )

Bhaktigeete

Purandara Dasara Keerthanegalu

Song link: Click Here


Raga: Purvi

Tala: Atatala


Snanava madiro jnana teerthadali

Nanu neenemba ahankaravanu bittu ||


Tande tayigala seve ondu snana

Bhandanadavara bidisalondu snana

Mundana marga tilidarondu snana

Indireshana dhyanave gangasnana ||


Tannolu tane tilidarondu snana

Anyaya nudiyadiddare ondu snana

Anyaya madadiralu ondu snana

Chennagi hariya neneye gangasnana ||


Atte mavara seveyu ondu snana

Bhartana mata keluvudu ondu snana

Kshetra patrara sahavasa ondu snana

Parthasarathi dhyanave gangasnana ||


Veda shastrava noduvudondu snana

Bedha bhedava tilidarondu snana

Sadhu sajjanara sanga ondu snana

Purandara vittalana dhyanave gangasnana ||


ಭಕ್ತಿಗೀತೆ 


ಸ್ನಾನವ ಮಾಡಿರೋ ಜ್ಞಾನ ತೀರ್ಥದಲಿ 

ನಾನು ನೀನೆಂಬ ಅಹಂಕಾರವನು  ಬಿಟ್ಟು ।।ಪ।।


ತಂದೆ ತಾಯಿಗಳ ಸೇವೆ ಒಂದು ಸ್ನಾನ 

ಬಂಧನದವರ ಬಿಡಿಸಲೊಂದು ಸ್ನಾನ 

ಮುಂದಣ ಮಾರ್ಗ ತಿಳಿದರೊಂದು ಸ್ನಾನ 

ಇಂದಿರೇಶನ ಧ್ಯಾನವೆ ಗಂಗಾಸ್ನಾನ ।।೧।।


ತನ್ನೊಳು ತಾನೇ ತಿಳಿದರೊಂದು ಸ್ನಾನ 

ಅನ್ಯಾಯ ನುಡಿಯದಿದ್ದರೆ  ಒಂದು ಸ್ನಾನ 

ಅನ್ಯಾಯ ಮಾಡದಿರಲು ಒಂದು ಸ್ನಾನ 

ಚೆನ್ನಾಗಿ ಹರಿಯ ನೆನೆಯೆ ಗಂಗಾಸ್ನಾನ ।।೨।।


ಅತ್ತೆ ಮಾವರ ಸೇವೆಯು ಒಂದು ಸ್ನಾನ 

ಭರ್ತನ ಮಾತ ಕೇಳುವುದು ಒಂದು ಸ್ನಾನ 

ಕ್ಷೇತ್ರ ಪಾತ್ರರ ಸಹವಾಸ ಒಂದು ಸ್ನಾನ 

ಪಾರ್ಥಸಾರಥಿ ಧ್ಯಾನವೇ ಗಂಗಾಸ್ನಾನ ।।೩।।


ವೇದ ಶಾಸ್ತ್ರವ ನೋದುವುದೊಂದು ಸ್ನಾನ 

ಬೇಧಾ ಭೇದವ ತಿಳಿದರೊಂದು ಸ್ನಾನ 

ಸಾಧು ಸಜ್ಜನರ ಸಂಗ ಒಂದು ಸ್ನಾನ 

ಪುರಂದರ ವಿಠ್ಠಲನ ಧ್ಯಾನವೆ ಗಂಗಾಸ್ನಾನ ।।೪।।         ಶ್ರೀ 





Friday, February 3, 2023

Rakshisu Karnataka Devi (ರಕ್ಷಿಸು ಕರ್ನಾಟಕ ದೇವಿ)

Nadageete

Sahitya: Sakkari Balacharya (santhakavi)

Song linkClick Here


Rakshisu karnataka devi, sam 

Rakshisu karnataka devi ||


Kadambadi sampoojita charane

Gangaradhita padanakha sarane

Chalukyaruttama kanchee kirane

Rastrakoota manikanttabharane

Chalukyamshuka shobhavarane ||


Yadavamani kankanamshu sundari

Ballalara bhujabhushana bandhure

Vijayanagara mangalamani kandhare

Mysurodeyara sukeerthi mandire

Mandalikavana bharadhurandhare ||


Mata sustapaka stapita prane

Shilpakala mantapa susthane

Kavijana keerthita suyashastrane

Sadhu satkatha bhereedwane

Swetihasa neerajana rani ||


ನಾಡಗೀತೆ 


ರಕ್ಷಿಸು ಕರ್ನಾಟಕ ದೇವಿ, ಸಂ 

ರಕ್ಷಿಸು ಕರ್ನಾಟಕ ದೇವೀ  ।।ಪ ।।


ಕದಂಬಾದಿ ಸಂಪೂಜಿತ ಚರಣೆ 

ಗಂಗಾರಾಧಿತ ಪದನಖ ಸರಣೆ 

ಚಾಲುಕ್ಯರುತ್ತಮ ಕಾಂಚೀ ಕಿರಣೆ 

ರಾಷ್ಟ್ರಕೂಟ ಮಣಿಕಂಠಾಭರಣೆ 

ಚಾಲುಕ್ಯಾ೦ಶುಕ  ಶೋಭಾವರಣೆ ।।೧।।


ಯಾದವಮಣಿ  ಕಂಕಣಾ೦ಶು ಸುಂದರಿ 

ಬಲ್ಲಾಳರ ಭುಜಭೂಷಣ ಬಂಧುರೆ 

ವಿಜಯನಗರ ಮಂಗಲಮಣಿ ಕಂಧರೆ 

ಮೈಸೂರೊಡೆಯರ ಸುಕೀರ್ತಿ ಮಂದಿರೆ 

ಮಾಂಡಲಿಕಾವನ ಭಾರಧುರ೦ಧರೆ ।।೨।।


ಮತ ಸುಸ್ಥಾಪಕ ಸ್ಥಾಪಿತ ಪ್ರಾಣೆ 

ಶಿಲ್ಪಕಲಾ ಮಂಟಪ ಸುಸ್ಥಾನೆ 

ಕವಿಜನ ಕೀರ್ತಿತ ಸುಯಶಸ್ತ್ರಾಣೆ 

ಸಾಧು ಸತ್ಕಥಾ ಭೇರೀಧ್ವಾನೆ 

ಸ್ವೇತಿಹಾಸ ನೀರಾಜನ ರಾಣಿ  ।।೩।।




Thursday, February 2, 2023

Yenda yedti Kannad Padagol (ಯೆಂಡ ಯೆಡ್ತಿ ಕನ್ನಡ್ ಪದಗೊಳ್)

Bhavageete

Sahitya: G P Rajaratnam

Song link: Click Here


Ratna is the hero of this song. This song describes the three main interests in Ratna's life that are drinks, wife and kannada words.


Yenda yedti kannad padagol

Andre ratnang prana!

Bundeen etti kududbuttandre

Takko! padagol bana!


Bagavanth enra bhumig iladu

Nantak bandanth annu;

Pargireekse madtan ounu-

Baktan mel oun kannu!


'Yenda kudiyad butt butt ratna!'

Ant oun enaar andre-

Moog moor churag muruskonteeni

Devar maatg addbandre!


'Yenda butte yedteen buttbud!'

Anta oun enar andre

Kaladoit anta kunadadteeni

Dodd ond kata! tondre!


'Kannad padagol aadodnela

Nillis budabek ratna!'

Ant oun andre-devr adrr enu!

Madteen ounge kthna!


Aagne mado aigol ella

Devre aagli-ella!

Kannad suddig enra bandre

Mana vulisakilla!


Narakak ilsi nalge seelsi

Bai olisakidrune-

Moognal kannad padavadteeni!

Nan manasan ni kane!


Yenda ogli! yedti ogli!

Ella kochkond ogli!

Parpanch irotanaka munde

Kannada padgol nugli!


ಭಾವಗೀತೆ 


ಯೆಂಡ ಯೆಡ್ತಿ ಕನ್ನಡ್ ಪದಗೊಳ್ 

ಅಂದ್ರೆ ರತ್ನ೦ಗ್  ಪ್ರಾಣ !

ಬುಂಡೇನ್ ಎತ್ತಿ ಕುಡಿದ್ಬುಟ್ಟಾ೦ದ್ರೆ -

ತಕ್ಕೊ ! ಪದಗೂಳ್ ಬಾಣ !


ಭಗವಂತ್ ಏನ್ರ ಭೂಮಿಗ್ ಇಳದು 

ನನ್ ತಾಕ್ ಬಂದಾಂತ್ ಅನ್ನು;

ಪರ್ ಗಿರೀಕ್ಸೆ ಮಾಡ್ತಾನ್ ಔನು -

ಬಕ್ತನ್ ಮೇಲ್ ಔನ್ ಕಣ್ಣು !


'ಯೆಂಡ ಕುಡಿಯಾದ್ ಬುಟ್ ಬುಟ್ ರತ್ನ !'

ಅಂತ್ ಔನ್ ಏನಾರ್ ಅಂದ್ರೆ -

ಮೂಗ್ ಮೂರ್ ಚೂರಾಗ್ ಮುರುಸ್ಕೋ೦ತೀನಿ  

ದೇವರ್ ಮಾತ್ಗ್ ಅಡ್ಬಂದ್ರೆ !


'ಯೆಂಡ ಬುಟ್ಟೆ ಯೆಡ್ತೀನ್  ಬುಟ್ ಬುಡ್ !'

ಅಂತ ಔನ್ ಏನಾರ್ ಅಂದ್ರೆ 

ಕಳದೋಯ್ತ್ ಅಂತ ಕುಣದಾಡ್ತೀನಿ 

ದೊಡ್ಡ್ ಒಂದ್ ಕಾಟ !ತೊಂದ್ರೆ !'


'ಕನ್ನಡ್ ಪದಗೊಳ್ ಆಡೋದ್ನೆಲ್ಲ 

ನಿಲ್ಲೀಸ್ ಬುಡಬೇಕ್ ರತ್ನ !'

ಅಂತ್ ಔನ್ ಅಂದ್ರೆ -ದೇವ್ರ್ ಆದ್ರ್ ಏನು !

ಮಾಡ್ತೀನ್ ಔನ್ಗೆ ಖತ್ನ !


ಆಗ್ನೆ ಮಾಡೋ ಐಗೊಳ್  ಎಲ್ಲಾ 

ದೇವ್ರೆ ಆಗ್ಲಿ -ಎಲ್ಲ !

ಕನ್ನಡ್ ಸುದ್ದೀಗ್ ಏನ್ರ ಬಂದ್ರೆ 

ಮಾನ ವುಳಸಾಕಿಲ್ಲ !


ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ 

ಬಾಯ್ ಒಲಿಸಾಕಿದ್ರೂನೆ -

ಮೂಗ್ನಲ್ ಕನ್ನಡ್ ಪದವಾಡ್ತೀನಿ !

ನನ್ ಮನಸನ್ ನೀ ಕಾಣೆ !


ಯೆಂಡ ಓಗ್ಲಿ !ಯೆಡ್ತಿ ಓಗ್ಲಿ !

ಎಲ್ಲಾ ಕೊಚ್ಕೊಂಡ್ ಓಗ್ಲಿ !

ಪರ್ಪ೦ಚ್  ಇರೋತನಕ ಮುಂದೆ 

ಕನ್ನಡ ಪದಗೊಳ್  ನುಗ್ಲಿ !




Wednesday, February 1, 2023

Ganesha Banda Kai Kadubu Tinda (ಗಣೇಶ ಬಂದ ಕಾಯ್ ಕಡುಬು ತಿಂದ)

Sishu Geete

Sahitya: N S Laxminarayana Bhatta

Song link: Click Here


Ganesha banda

Kai kadubu tinda

Innu beku anda

hotte biriya menda


Kai kadubin jothege

Karigadubannu barisdha

Aidu suttin chaklina

Hotteyolage turisda


Sihi hoorana tumbidda

Ondu tatte modaka

Hotte moolel ilsi

Kudida kolada panaka


Hotte bhara aghoytu

Nadiyoke aagade hoytu

Alle ondu ilee mari

Santege hogta ittu


Dollu hotte ganapa

Ilee mele kootha

Sumne irade ileege

Kotta eradu laatha!


Ileege kopa bantu

Kelakke kedavi odtu

Ganapana hotte odedu

Kadubu chelli hoitu!


Chellida kaduban etti ganapa

Hotte olage hakda

Alle malagida havannu

Hotte sutta bigida


Bhale bhale ganapa

Tindi potha tonapa!

Kadubu beka innunu

Mane hatra baappa!


ಶಿಶು ಗೀತೆ 

 

ಗಣೇಶ ಬಂದ 

ಕಾಯ್ ಕಡುಬು ತಿಂದ,

ಇನ್ನೂ ಬೇಕು ಅಂದ 

ಹೊಟ್ಟೆ ಬಿರಿಯ ಮೆಂದ 


ಕಾಯಿ ಕಡುಬಿನ್ ಜೊತೆಗೆ 

ಕರಿಗಡುಬನ್ನೂ ಬಾರಿಸ್ದ 

ಐದ್ ಸುತ್ತಿನ್ ಚಕ್ಲೀನ 

ಹೊಟ್ಟೆಯೊಳಗೆ ತೂರಿಸ್ದ 


ಸಿಹಿ ಹೂರಣ ತುಂಬಿದ್ದ 

ಒಂದು ತಟ್ಟೆ ಮೋದಕ 

ಹೊಟ್ಟೇ ಮೂಲೇಲ್ ಇಳ್ಸಿ 

ಕುಡಿದ ಕೊಳಗ ಪಾನಕ 


ಹೊಟ್ಟೆ ಭಾರ ಆಗ್ಹೋಯ್ತು

ನಡಿಯೋಕ್ ಆಗದೆ ಹೋಯ್ತು  

ಅಲ್ಲೇ ಒಂದು ಇಲೀ ಮರಿ 

ಸಂತೆಗೆ ಹೋಗ್ತಾ ಇತ್ತು. 


ಡೊಳ್ಳು ಹೊಟ್ಟೆ ಗಣಪ 

ಇಲೀ ಮೇಲೆ ಕೂತ,

ಸುಮ್ನೆ ಇರದೆ ಇಲಿಗೆ 

ಕೊಟ್ಟ ಎರಡು ಲಾತ!


ಇಲಿಗೆ  ಕೋಪ ಬಂತು 

ಕೆಳಕ್ಕೆ ಕೆಡವಿ ಓಡ್ತು,

ಗಣಪನ ಹೊಟ್ಟೆ ಒಡೆದು 

ಕಡುಬು ಚೆಲ್ಲಿಹೋಯ್ತು!


ಚೆಲ್ಲಿದ ಕಡುಬನ್ ಎತ್ತಿ ಗಣಪ 

ಹೊಟ್ಟೆ ಒಳಗೆ ಹಾಕ್ದ 

ಅಲ್ಲೇ ಮಲಗಿದ ಹಾವನ್ನು 

ಹೊಟ್ಟೆ ಸುತ್ತ ಬಿಗಿದ 


ಭಲೆ ಭಲೆ ಗಣಪ 

ತಿಂಡಿ ಪೋತ ಠೊಣಪ!

ಕಡುಬು ಬೇಕಾ ಇನ್ನುನೂ 

ಮನೆ ಹತ್ರ ಬಾಪ್ಪ!