Saturday, October 29, 2022

Namma Bavuta (ನಮ್ಮ ಬಾವುಟ )

Padya

Sahitya: Kayyar Kinhanna Rai


Erutihudu harutihudu

Nodu namma bavuta

Torutihudu hodedu hodedu

Baninagala pata pata ||


Kesari bili hasiru mooru

Banna naduve chakravu

Satya shanti tyaga murthy

Gandhi hidida charakavu ||


Inta dwajavu namma dwajavu

Nodu harutiruvudu

Dwajada bhakti namma shakti

Nada gudiya merevudu ||


Kempu kirana tumbi gagana

Honna bannavagide

Namma nada gudiya noda

Nodiranna haegide ||


ಪದ್ಯ 


ಏರುತಿಹುದು ಹಾರುತಿಹುದು 

ನೋಡು ನಮ್ಮ ಬಾವುಟ 

ತೋರುತಿಹುದು ಹೊಡೆದು ಹೊಡೆದು 

ಬಾನಿನಗಲ ಪಟ ಪಟ ।।೧।।


ಕೇಸರಿ ಬಿಳಿ ಹಸಿರು ಮೂರು 

ಬಣ್ಣ ನಡುವೆ ಚಕ್ರವು 

ಸತ್ಯ ಶಾಂತಿ ತ್ಯಾಗ ಮೂರ್ತಿ 

ಗಾಂಧಿ ಹಿಡಿದ ಚರಕವು ।।೨।।


ಇಂತ ಧ್ವಜವು ನಮ್ಮ ಧ್ವಜವು 

ನೋಡು ಹಾರುತಿರುವುದು 

ಧ್ವಜದ ಭಕ್ತಿ ನಮ್ಮ ಶಕ್ತಿ 

ನಾಡ ಗುಡಿಯ ಮೆರೆವುದು ।।೩।।


ಕೆಂಪು ಕಿರಣ ತುಂಬಿ ಗಗನ 

ಹೊನ್ನ ಬಣ್ಣವಾಗಿದೆ 

ನಮ್ಮ ನಾಡ ಗುಡಿಯ ನೋಡ 

ನೋಡಿರಣ್ಣ ಹೇಗಿದೆ ।।೪।। 



Thursday, October 27, 2022

Nadinanda Ee Deepavali (ನಾಡಿನಂದ ಈ ದೀಪಾವಳಿ )

  • Movie: Nandadeepa(1963)
  • Singer: S Janaki, P Leela
  • Songlink: Click Here

                   

Nadinanda ee deepavali

Bantu santosha tali

Nammi bala karirula

Ta neege banda shubhavela

Ee divya kanti, manadi prashanti

Honde sampreeti ||nadinanda||


Indee ullasa preeti vikasa

Jyothi ninninda hasa

Nammi aase makaranda

Ta chimmi tanda ananda

Singara, sangeeta haadi oladi kude ||nadinanda||


Sidiva matapu, midivanta kepu

Teere kannaase sompu

Tumbi baana hoobana 

Ta hommi tanda hombanna

Hosa bala sanketa, vendu sandesha tantu ||nadinanda||


Bala bangara manada mandara saere ananda dhara

Nandadeepa neleyagi ee olme endu jotheyagi

Hayada amoda neede haraisi banda ||nadinanda||


ಚಿತ್ರಗೀತೆ 


ನಾಡಿನಂದ ಈ ದೀಪಾವಳಿ 

ಬಂತು ಸಂತೋಷ ತಾಳಿ  

ನಮ್ಮಿ ಬಾಳ ಕಾರಿರುಳ 

ತಾನೀಗೆ ಬಂದಾ ಶುಭವೇಳ 

ಈ ದಿವ್ಯ ಕಾಂತಿ, ಮನದಿ ಪ್ರಶಾಂತಿ 

ಹೊಂದೆ ಸಂಪ್ರೀತಿ ।।ನಾಡಿನಂದ ।।


ಇಂದೀ ಉಲ್ಲಾಸ ಪ್ರೀತಿ ವಿಕಾಸ 

ಜ್ಯೋತಿ ನಿನ್ನಿಂದ ಹಾಸ 

ನಮ್ಮಿ ಆಸೆ ಮಕರಂದ 

ತಾ ಚಿಮ್ಮಿತಂದ ಆನಂದ 

ಸಿಂಗಾರ ಸಂಗೀತ ಹಾಡಿ ಓಲಾಡಿ ಕೂಡೆ 

।।ನಾಡಿನಂದ ।।


ಸಿಡಿವ ಮತಾಪು, ಮಿಡಿವಂತ ಕೇಪು 

ತೀರೆ ಕಣ್ಣಾಸೆ ಸೊಂಪು 

ತುಂಬಿ ಬಾನ ಹೂಬಾಣ 

ತಾ ಹೊಮ್ಮಿ ತಂದ ಹೊಂಬಣ್ಣ 

ಹೊಸ ಬಾಳ ಸಂಕೇತ, ವೆಂದು ಸಂದೇಶ ತಂತು

।।ನಾಡಿನಂದ ।।


ಬಾಳ ಬಂಗಾರ  ಮನದಾ ಮಂದಾರ ಸೇರೆ ಆನಂದಧಾರ 

ನಂದಾದೀಪ ನೆಲೆಯಾಗಿ ಈ ಓಲ್ಮೆ ಎಂದು ಜೊತೆಯಾಗಿ 

ಹಾಯಾದ ಆಮೋದ ನೀಡೆ ಹಾರೈಸಿ ಬಂದ 

।।ನಾಡಿನಂದ ।।



Tuesday, October 25, 2022

Neene Dayalo Nirmala Chitta Govinda (ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ)

Bhaktigeete

Sri Purandara Dasara Keerthanegalu

Song link: Click Here


Raga: Anandabhairavi

Tala: Atatala


Neene dayalo nirmala chitta govinda

Nigamagochara mukunda ||


Jnanigalarasa neenillade jagakinnu

Manadindali kayva doregala na kane ||


Danavantaka deena jana mandarane

Dhynipa ramana sancharane

Mounavadenu ninna dhyananandadi ega

Sanu ragadi kayo sanakadi vandhyane ||


Bage bageyali ninna tutipeno nagadhara

Khaga pati vahanane

Maguvina matendu naguta keli neenu

Begadindali kayo sagara shayanane ||


Mandaradhara aravindalochana ninna

Kandanendeniso enna

Sandehavekinnu swami mukundane

Bandenna kayo sri purandara vittalane ||


ಭಕ್ತಿಗೀತೆ 


ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ 

ನಿಗಮ ಗೋಚರ ಮುಕುಂದ ।।ಪ ।।


ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು 

ಮಾನದಿಂದಲಿ ಕಾಯ್ವ ದೊರೆಗಳ ನಾ ಕಾಣೆ ।।ಅನು।।


ದಾನವಾಂತಕ ದೀನ ಜನಮಂದಾರನೆ 

ಧ್ಯಾನಿಪರ ಮನಸಂಚಾರನೆ 

ಮೌನವಾದೆನು ನಿನ್ನ ಧ್ಯಾನಾನ೦ದದಿ ಈಗ 

ಸಾನು ರಾಗದಿ ಕಾಯೊ ಸನಕಾದಿ ವಂದ್ಯನೆ ।।೧।।


ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ 

ಖಗಪತಿ ವಾಹನನೆ 

ಮಗುವಿನ ಮಾತೆಂದು ನಗುತ ಕೇಳಿ ನೀನು 

ಬೇಗದಿಂದಲಿ ಕಾಯೊ ಸಾಗರ ಶಯನನೆ ।।೨।।


ಮಂದರಧರ ಅರವಿಂದ ಲೋಚನ ನಿನ್ನ 

ಕಂದನೆಂದೆಣಿಸೊ ಎನ್ನ 

ಸಂದೇಹವೆಕಿನ್ನು ಸ್ವಾಮಿ ಮುಕುಂದನೆ

ಬಂದೆನ್ನ ಕಾಯೊ ಶ್ರೀ ಪುರಂದರ ವಿಠ್ಠಲನೆ ।।೩।।           ಶ್ರೀ 




Sunday, October 23, 2022

Sharanu Sharanuvayya Gananaika (ಶರಣು ಶರಣುವಯ್ಯ ಗಣನಾಯ್ಕ )


Janapada Geete

Song link: Click Here


Sharanu sharanuvayya gananayka

Namma karunadindali kayo gananayka ||


Ellunde jenutuppa gananayka

Namage vidyava kalisayya gananayka

Usali kayikadubu gananayka

Nimge tappade oppisuve gananayka ||


Gonemegla balehannu gananayka

Nimage chigurele kalli adke gananayka

Kombemegla nimbehannu gananayka

Nimge idugayi jodugayi gananayka ||


Karpura samrani gananayka

Nimge maruga mallige jaji gananayka

Hasurangi kalgadaga gananayka

Nimge kushalada melkattu gananayka ||


Bilpatre vanadalli gananayka

Ninna dhyana madi nenedevayya gananayka

Kantaka hara neenu gananayka

Namge varavanupalisayya gananayka ||


ಜನಪದ ಗೀತೆ 


ಶರಣು ಶರಣುವಯ್ಯ ಗಣನಾಯ್ಕ 

ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ ।।ಪ ।।


ಎಳ್ಳು೦ಡೆ ಜೇನುತುಪ್ಪ ಗಣನಾಯ್ಕ 

ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ 

ಉಸಲಿ ಕಾಯಿಕಡುಬು ಗಣನಾಯ್ಕ 

ನಿಮ್ಗೆ ತಪ್ಪಾದೆ ಒಪ್ಪಿಸುವೆ ಗಣನಾಯ್ಕ ।।೧।।


ಗೂನೆಮೇಗ್ಲ ಬಾಳೆಹಣ್ಣು ಗಣನಾಯ್ಕ

ನಿಮಗೆ ಚಿಗುರೆಲೆ ಕಳ್ಳಿ ಅಡಿಕೆ ಗಣನಾಯ್ಕ

ಕೊಂಬೆಮೇಗ್ಲನಿಂಬೆಹಣ್ಣು ಗಣನಾಯ್ಕ

 ನಿಮ್ಗೆಇಡುಗಾಯಿ ಜೋಡುಗಾಯಿ ಗಣನಾಯ್ಕ।।೨।।


ಕರ್ಪುರ ಸಾ೦ಮ್ರಾಣಿ ಗಣನಾಯ್ಕ

ನಿಮಗೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ

ಹಸುರಂಗಿ ಕಾಲ್ಗಡಗ  ಗಣನಾಯ್ಕ

ನಿಮ್ಗೆ ಕುಶಲದ ಮೇಲ್ಕಟ್ಟು ಗಣನಾಯ್ಕ।।೩।।


ಬಿಲ್ಪತ್ರೆ ವನದಲ್ಲಿ ಗಣನಾಯ್ಕ

ನಿನ್ನ ಧ್ಯಾನ ಮಾಡಿ ನೆನೆದೆವಯ್ಯಾ ಗಣನಾಯ್ಕ

ಕಂಟಕ ಹರ ನೀನು ಗಣನಾಯ್ಕ

ನಮ್ಗೆ ವರವನು ಪಾಲಿಸಯ್ಯ ಗಣನಾಯ್ಕ।।೪।।




Saturday, October 22, 2022

Bangaradodave Beke (ಬಂಗಾರದೊಡವೆ ಬೇಕೆ)

Movie: Kannteredu Nodu (1961)
Singer: P B Srinivas
Song link: Click Here


Bangaradodave beke....neere 

Angane ninnanga singarakoppuva

Bangaradodave beke neere

Bangaradodave beke ||


Nillade neenodaleke.... neere

Kanmana tanisuva amrutada dhare

Angane ninnanga singarakoppuva ||


Sanjeya hombisilu suryana kempodalu

Anga sangava bayasi ninna bigidu appiralu

Entha ramyada nota node...., ninnaya odalu neere 

Angane ninnanga singarakoppuva ||


ಚಿತ್ರಗೀತೆ 


ಬಂಗಾರದೊಡವೆ ಬೇಕೆ .... ನೀರೇ 

ಅಂಗನೆ ನಿನ್ನಂಗ ಸಿಂಗಾರಕೊಪ್ಪುವ 

ಬಂಗಾರದೊಡವೆ ಬೇಕೆ ನೀರೇ 

ಬಂಗಾರದೊಡವೆ ಬೇಕೆ ||ಪ ||


ನಿಲ್ಲದೇ ನೀನೋಡಲೇಕೆ ನೀರೇ  

ಕಣ್ಮನ ತಣಿಸುವ ಅಮೃತದ ಧಾರೆ

 ಅಂಗನೆ ನಿನ್ನಂಗ ಸಿಂಗಾರಕೊಪ್ಪುವ||೧ ||


ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು 

ಅಂಗಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು 

ಎಂಥ ರಮ್ಯದ ನೋಟ ....ನೋಡೆ, ನಿನ್ನಯ ಒಡಲು ನೀರೆ 

ಅಂಗನೆ ನಿನ್ನಂಗ ಸಿಂಗಾರಕೊಪ್ಪುವ||೨||

                     


Machli Jal Ki Rani Hai (मछली जल की रानी है)

Kavita

Song link: Click Here


Machli jal ki rani hai

Jeevan uska pani hai

Hath lagaoo tho darr jayegi

Bahar nikalo tho mar jayegi

Pani mein dalo tho tair jayegi.


कविता 


मछली जल की रानी है ,

जीवन उसका पानी है। 

हाथ लगाओ , तो डर जाएगी ,

बाहर निकालो , तो मर जाएगी ,

पानी मे डालो , तो तैर जाएगी। 

                                              



Friday, October 21, 2022

Haruta Doora Doora (ಹಾರುತ ದೂರ ದೂರ )


  • Movie: Rani Honnama (1960)
  • Singer: P Susheela, P BSrinivas
  • Song link:Click Here


Haruta doora doora

Meleruva bara bara

Navaguva chandira tara

Kaigudali svaira vihara

Sundara svaira vihara ||


Eni kalavilasa 

Eni manovilasa

Ee navya ramya kosha

Poornendu hasabhasa ||haruta||


Haaraisi tereda kanna

Koraipa nooru banna

Shringara samvidhana

Soundarya sannidhana ||haruta||


ಚಿತ್ರಗೀತೆ 


ಹಾರುತ ದೂರ ದೂರ 

ಮೇಲೇರುವ ಬಾರ ಬಾರ 

ನವಾಗುವ ಚಂದಿರ ತಾರಾ 

ಕೈಗೂಡಲಿ ಸ್ವೈರ ವಿಹಾರ 

ಸುಂದರ ಸ್ವೈರ ವಿಹಾರ ।।ಪ ।।


ಏನೀ ಕಲಾವಿಲಾಸ 

ಏನೀ ಮನೋವಿಕಾಸ 

ಈ ನವ್ಯ ರಮ್ಯ ಕೋಶ 

ಪೂರ್ಣೆ೦ದು   ಹಾಸಭಾಸ ।।೧।।


ಹಾರೈಸಿ ತೆರೆದ ಕಣ್ಣ 

ಕೋರೈಪ ನೂರು ಬಣ್ಣ 

ಶೃಂಗಾರ ಸಂವಿಧಾನ 

ಸೌಂದರ್ಯ ಸನ್ನಿಧಾನ ।।೨।।