Saturday, October 22, 2022

Machli Jal Ki Rani Hai (मछली जल की रानी है)

Kavita

Song link: Click Here


Machli jal ki rani hai

Jeevan uska pani hai

Hath lagaoo tho darr jayegi

Bahar nikalo tho mar jayegi

Pani mein dalo tho tair jayegi.


कविता 


मछली जल की रानी है ,

जीवन उसका पानी है। 

हाथ लगाओ , तो डर जाएगी ,

बाहर निकालो , तो मर जाएगी ,

पानी मे डालो , तो तैर जाएगी। 

                                              



Friday, October 21, 2022

Haruta Doora Doora (ಹಾರುತ ದೂರ ದೂರ )


  • Movie: Rani Honnama (1960)
  • Singer: P Susheela, P BSrinivas
  • Song link:Click Here


Haruta doora doora

Meleruva bara bara

Navaguva chandira tara

Kaigudali svaira vihara

Sundara svaira vihara ||


Eni kalavilasa 

Eni manovilasa

Ee navya ramya kosha

Poornendu hasabhasa ||haruta||


Haaraisi tereda kanna

Koraipa nooru banna

Shringara samvidhana

Soundarya sannidhana ||haruta||


ಚಿತ್ರಗೀತೆ 


ಹಾರುತ ದೂರ ದೂರ 

ಮೇಲೇರುವ ಬಾರ ಬಾರ 

ನವಾಗುವ ಚಂದಿರ ತಾರಾ 

ಕೈಗೂಡಲಿ ಸ್ವೈರ ವಿಹಾರ 

ಸುಂದರ ಸ್ವೈರ ವಿಹಾರ ।।ಪ ।।


ಏನೀ ಕಲಾವಿಲಾಸ 

ಏನೀ ಮನೋವಿಕಾಸ 

ಈ ನವ್ಯ ರಮ್ಯ ಕೋಶ 

ಪೂರ್ಣೆ೦ದು   ಹಾಸಭಾಸ ।।೧।।


ಹಾರೈಸಿ ತೆರೆದ ಕಣ್ಣ 

ಕೋರೈಪ ನೂರು ಬಣ್ಣ 

ಶೃಂಗಾರ ಸಂವಿಧಾನ 

ಸೌಂದರ್ಯ ಸನ್ನಿಧಾನ ।।೨।।



Thursday, October 20, 2022

Hum Nanhe Nanhe Bacche Hain (हम नन्हे नन्हे बच्चे हैं )

Kavita

Rachanakar: Sohan Lal Dwivedi


Hum nanhe nanhe bacche hain

Nadaan umar ke kacche hain

Par apni dhun ke sacche hain

Janani ki jai jai gayenge

Bharat ki dwaja udayenge

Apna path kabhi na chodenge

Apna pran kabhi na todenge

Himmat se nata jodenge

Hum himgiri par chad jayenge

Bharat ki dwaja udayenge

Hum bhay se kabhi na dolenge

Apni takat ko tolenge

Janani ki jai jai bolenge

Apna sir bheint chadayenge

Bharat ki dwaja udayenge.


कविता 


हम नन्हे नन्हे बच्चे हैं ,

नादान उमर के कच्चे हैं ,

पर अपनी धुन के सच्चे हैं |

जननी की जय -जय गाएँगे ,

भारत की ध्वजा उड़ाएँगे |

अपना पथ कभी न छोड़ेंगे ,

अपना प्रण कभी न तोड़ेंगे, 

हिम्मत से नाता जोड़ेंगे |

हम हिमगिरि पर चढ़ जाएँगे ,

भारत की ध्वजा उड़ाएँगे | 

हम भय से कभी न डोलेंगे ,

अपनी ताकत को तोलेंगे ,

जननी की जय -जय बोलेंगे |

अपना सिर भेंट चढ़ाएँगे ,

भारत की ध्वजा उड़ाएँगे |
                                     
                                             



 

Wednesday, October 19, 2022

Veda Vandita Aadi Pujita (ವೇದ ವಂದಿತ ಆದಿ ಪೂಜಿತ )


Bhaktigeete

Song link:Click Here


Shloka

Agajanana padmarkam | gajanana maharnisham

Aneka dantam bhaktanam | ekadantam mupasmahe..


Gananatha gananatha girija suta

Karunalu prabhu nee sada poojita


Veda vandita aadi pujita 

Natya lola vinayaka

Nana jeevana sutra vidhayaka

Loka loka paripalaka ||veda||


Pada padmagala siridhuli

Hottu pavana beesuva gaali

Sati daivavadu ninagelli

Erelu lokagalalli ||veda||


Naku vedagalu hogalire ninna

Aadisheshana bhasheya munna

Ninna padagati lasya vinutana

Beragugolisitu nateshana ||veda||


Vidya buddiya siddiya taruve

Vidhi hari vandita neenagiruve

 Vidha vidha bhaktige phala nee koduve

Vigneshane pore karunaluve ||veda||


ಭಕ್ತಿಗೀತೆ 


ಶ್ಲೋಕ  

 ಅಗಜಾನನ ಪದ್ಮಾರ್ಕಂ ।ಗಜಾನನ ಮಹರ್ನಿಷ೦

 ಅನೇಕ ದಂತಂ ಭಕ್ತಾನಾಂ । ಏಕದಂತಂ ಮುಪಾಸ್ಮಹೇ 


ಗಣನಾಥ ಗಣನಾಥ ಗಿರಿಜಾ ಸುತ 

ಕರುಣಾಳು ಪ್ರಭು ನೀ ಸದಾ ಪೂಜಿತ 


ವೇದ ವಂದಿತ ಆದಿ ಪೂಜಿತ 

ನಾಟ್ಯಲೋಲ ವಿನಾಯಕ 

ನಾನಾ ಜೀವನ ಸೂತ್ರ ವಿದಾಯಕ 

ಲೋಕ ಲೋಕ ಪರಿಪಾಲಕ ।।ವೇದ ।।


ಪಾದ ಪದ್ಮಗಳ ಸಿರಿಧೂಳಿ 

ಹೂತ್ತು ಪಾವನ ಬೀಸುವ ಗಾಳಿ 

ಸಾಟಿ ದೈವವದು ನಿನಗೆಲ್ಲಿ 

ಈರೇಳು ಲೋಕಗಳಲ್ಲಿ ।।ವೇದ ।।


ನಾಕು ವೇದಗಳು ಹೊಗಳಿರೆ ನಿನ್ನಾ 

ಆದಿಶೇಷನ ಭಾಷೆಯ ಮುನ್ನ 

ನಿನ್ನ ಪದಗತಿ ಲಾಸ್ಯ ವಿನೂತನ 

ಬೆರಗುಗೊಳಿಸಿತು ನಟೇಶನ ।।ವೇದ ।।


ವಿದ್ಯಾ ಬುದ್ದಿಯ ಸಿದ್ದಿಯ ತರುವೆ 

ವಿಧಿ ಹರಿ ವಂದಿತ ನೀನಾಗಿರುವೆ 

ವಿಧ ವಿಧ ಭಕ್ತಿಗೆ ಫಲ ನೀ ಕೊಡುವೆ 

ವಿಘ್ನೇಶನೆ ಪೊರೆ ಕರುಣಾಳುವೆ ।।ವೇದ ।।



Tuesday, October 18, 2022

Kudure Savaari (ಕುದುರೆ ಸವಾರಿ )

Padya

Sahitya: G P Rajarathnam

Song link: Click Here


Cheddi giddi hakikondu

Kudure mele kulitukondu

Lagamu hididukondu

Hai! hai ! hai !


Langa ginga hakikondu

Kudure mele kulitukondu

Annana sonta hididukondu

Hai! hai ! hai !


Kandu banna namma kudure

Gali hage odoo kudure

Namma kudure! namma kudure!

Hai! hai ! hai !


Kudure mele kulitukondu

Adara benna tattikondu

Alli illi suttikondu

Hai! hai ! hai !


Kudure mele kulitukondu

Halla gilla harikondu

Manege bandu serikondu

Hai! hai ! hai !


Kudure maiyya savari tatti

Huruli girali tandu kottu

Sakuvevu namma tattu

Hai! hai ! hai !


ಪದ್ಯ  


ಚೆಡ್ಡಿ ಗಿಡ್ಡಿ ಹಾಕಿಕೊಂಡು 

ಕುದುರೆ ಮೇಲೆ ಕುಳಿತುಕೊಂಡು 

ಲಗಾಮು ಹಿಡಿದುಕೊಂಡು 

ಹೈ ! ಹೈ ! ಹೈ !


ಲಂಗ ಗಿಂಗ ಹಾಕಿಕೊಂಡು 

ಕುದುರೆ ಮೇಲೆ ಕುಳಿತುಕೊಂಡು 

ಅಣ್ಣನ ಸೊಂಟ ಹಿಡಿದುಕೊಂಡು 

ಹೈ ! ಹೈ ! ಹೈ 


ಕಂದು ಬಣ್ಣ ನಮ್ಮ ಕುದುರೆ 

ಗಾಳಿ ಹಾಗೆ ಓಡೊ ಕುದುರೆ 

ನಮ್ಮ ಕುದುರೆ ! ನಮ್ಮ ಕುದುರೆ !

ಹೈ ! ಹೈ ! ಹೈ !


ಕುದುರೆ ಮೇಲೆ ಕುಳಿತುಕೊಂಡು 

ಅದರ ಬೆನ್ನ ತಟ್ಟಿಕೊಂಡು 

ಅಲ್ಲಿ ಇಲ್ಲಿ ಸುತ್ತಿಕೊಂಡು 

ಹೈ ! ಹೈ ! ಹೈ !


ಕುದುರೆ ಮೇಲೆ ಕುಳಿತುಕೊಂಡು 

ಹಳ್ಳ ಗಿಳ್ಳ ಹಾರಿಕೊಂಡು 

ಮನೆಗೆ ಬಂದು ಸೇರಿಕೊಂಡು 

ಹೈ ! ಹೈ ! ಹೈ !


ಕುದುರೆ ಮೈಯ ಸವರಿ ತಟ್ಟಿ 

ಹುರುಳಿ ಗಿರಳಿ ತಂದು ಕೊಟ್ಟು 

ಸಾಕುವೆವು ನಮ್ಮ ತಟ್ಟು 

ಹೈ ! ಹೈ ! ಹೈ !



Monday, October 17, 2022

Elegalu Nooraru Bhavada Elegalu Nooraru (ಎಲೆಗಳು ನೂರಾರು ಭಾವದ ಎಲೆಗಳು ನೂರಾರು)

Deshabhakti Geete

Sahitya: H S Venkteshmurthy

Song link: Click Here


Elegalu nooraru bhavada elegalu nooraru

Elegala banna onde hasiru

Jati bhashae pantha halavu

Avugala hinde matra onde olavu


Sagona ottige sagona

Navu neevu seri ondagi

Neegona bhinnate neegona

Savira hejje onde gurigagi ||


Kidigalu nooraru belakina kudigalu nooraru

Belakina parige onde heasaru

Surya chandra landhra hanate

Avugala hinde matra onde ghanate  


Tereyona hrudaya tereyona

Navu neevu seri ondagi

Mareyona bheda mareyona

Nadigalu kudida preetiya kadalagi ||


Padagalu nooraru badukina hadagalu nooraru

Padagala hinde onde usiru

Akkareyinda ottige balona

Bharata matege namma preeti torona


Kattona nadanu kattona

Navu neevu seri ondagi

Muttona madanu muttona

Taregale ee  nadina suragi.


ದೇಶಭಕ್ತಿ ಗೀತೆ 


ಎಲೆಗಳು ನೂರಾರು ಭಾವದ ಎಲೆಗಳು ನೂರಾರು 

ಎಲೆಗಳ ಬಣ್ಣ ಒಂದೇ ಹಸಿರು 

ಜಾತಿ ಭಾಷೆ ಪಂಥ ಹಲವೂ 

ಅವುಗಳ ಹಿಂದೆ ಮಾತ್ರ ಒಂದೆ  ಒಲವು 


ಸಾಗೋಣ ಒಟ್ಟಿಗೆ ಸಾಗೋಣ 

ನಾವು ನೀವು ಸೇರಿ ಒಂದಾಗಿ 

ನೀಗೋಣ ಭಿನ್ನತೆ ನೀಗೋಣ 

ಸಾವಿರ ಹೆಜ್ಜೆ ಒಂದೇ ಗುರಿಗಾಗಿ ।।


ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 

ಬೆಳಕಿನ ಪರಿಗೆ ಒಂದೇ ಹೆಸರು 

ಸೂರ್ಯ ಚಂದ್ರ ಲಾಂಧ್ರ  ಹಣತೆ 

ಅವುಗಳ ಹಿಂದೆ ಮಾತ್ರ ಒಂದೇ ಘನತೆ 


ತೆರೆಯೋಣ ಹೃದಯ ತೆರೆಯೋಣ 

ನಾವು ನೀವು ಸೇರಿ ಒಂದಾಗಿ 

ಮರೆಯೋಣ ಭೇದ ಮರೆಯೋಣ 

ನದಿಗಳು ಕೂಡಿದ ಪ್ರೀತಿಯ ಕಡಲಾಗಿ ।।


ಪದಗಳು ನೂರಾರು ಬದುಕಿನ ಹದಗಳು ನೂರಾರು 

ಪದಗಳ ಹಿಂದೆ ಒಂದೇ ಉಸಿರು 

ಅಕ್ಕರೆಯಿಂದ ಒಟ್ಟಿಗೆ ಬಾಳೋಣಾ  

ಭಾರತ ಮಾತೆಗೆ ನಮ್ಮ ಪ್ರೀತಿ ತೋರೋಣ 


ಕಟ್ಟೋಣ ನಾಡನು ಕಟ್ಟೋಣ 

ನಾವು ನೀವು ಸೇರಿ ಒಂದಾಗಿ 

ಮುಟ್ಟೋಣ ಮಾಡನು ಮುಟ್ಟೋಣ

ತಾರೆಗಳೆ ಈ ನಾಡಿನ ಸೂರಾಗಿ ।।



Sunday, October 16, 2022

Ega Tane Banditene Madhura kantta kogile (ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೆ)

Bhavageete

Sahitya: Channaveera Kanavi

Song link:Click Here


Ega tane banditene madhura kantta kogile

Jagada binada ninna mudada ganavayte ommele ||


Kempu taliru kampinalaru susutihudu mamara

Alle kulitu ella maretu uliyutiruve sumadhura ||


Gana keli mouna tali mukavaytu bhavana

Manujaloka divijanaka gaida kuhu kujana ||


Edeyu mididu tala hididu kuniyutihudu ee chana

Rasada kadalu higginodalu tarataranga bhajana ||


Rasada chilume harisi olume sudheya needu kogile

Mouna dhyana ninage una kukilu jana kogile ||


ಭಾವಗೀತೆ 


ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೆ 

ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ ।।ಪ ।।


ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರ 

ಅಲ್ಲೆ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರ ।।೧।।


ಗಾನ ಕೇಳಿ ಮೌನ ತಾಳಿ ಮೂಕವಾಯ್ತು ಭಾವನ 

ಮನುಜಲೋಕ ದಿವಿಜನಾಕ ಗೈದ ಕುಹೂ ಕೂಜನ ।।೨।।


ಎದೆಯು ಮಿಡಿದು ತಾಳ ಹಿಡಿದು ಕುಣಿಯುತಿಹುದು ಈ ಚಣ 

ರಸದ ಕಡಲು ಹಿಗ್ಗಿನೊಡಲು ತರತರಂಗ ಭಾಜನ ।।೩।।


ರಸದ ಚಿಲುಮೆ ಹರಿಸಿ ಒಲುಮೆ ಸುಧೆಯ ನೀಡು ಕೋಗಿಲೆ 

ಮೌನಧ್ಯಾನ ನಿನಗೆ ಊನ ಕುಕಿಲು  ಜಾಣ ಕೋಗಿಲೆ ।।೪।।