Sunday, September 4, 2022

Totake Hogo Timma (ತೋಟಕೆ ಹೋಗೋ ತಿಮ್ಮ )

 Padya

Song link: Click Here


Totake hogo Timma

Tola banditamma

Hasu meiso Timma

Hasu haditamma


Ole uriso Timma

Uri sutitamma

Paata bareyo Timma

Balapa illa amma


Hoovu bidiso Timma

Havu banditamma

Kavali taro Timma

Kalu novu amma


Neeru sedo Timma

Kaiyyi novu amma

Utake baro Timma

Odi bandenamma!


ಪದ್ಯ 


ತೋಟಕೆ ಹೋಗೋ ತಿಮ್ಮ 

ತೋಳ ಬಂದೀತಮ್ಮ 

ಹಸು ಮೈಸೋ ತಿಮ್ಮ 

ಹಸು ಹಾದೀತಮ್ಮ

 

ಒಲೆ  ಉರಿಸೋ ತಿಮ್ಮ 

ಉರಿ ಸುಟ್ಟೀತಮ್ಮ 

ಪಾಠ ಬರೆಯೋ ತಿಮ್ಮ 

ಬಳಪ ಇಲ್ಲ ಅಮ್ಮ 


ಹೂವು ಬಿಡಿಸೋ ತಿಮ್ಮ 

ಹಾವು ಬಂದೀತಮ್ಮ 

ಕಾವಲಿ ತಾರೋ ತಿಮ್ಮ 

ಕಾಲು ನೋವು ಅಮ್ಮ 


ನೀರು ಸೇದೋ ತಿಮ್ಮ 

ಕೈಯಿ  ನೋವು  ಅಮ್ಮ 

ಊಟಕೆ ಬಾರೋ ತಿಮ್ಮ 

ಓಡಿ ಬಂದೇನಮ್ಮ !

       

Sarale Varasegalu -8 (ಸರಳೇ ವರಸೆಗಳು -೮)

 


Raga : Mayamalavagowla

Tala : Aditala


S R G M | P M | D P || S' N R' S'| S' N | D P ||

D N S' R' | S' N | D P || S' N D P | M G | R S ||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   


೮)

ಸ ರಿ ಗ ಮ ।ಪ ಮ ।ದ ಪ ।।ಸ' ನಿ' ರಿ' ಸ'।ಸ' ನಿ ।ದ ಪ ।।

ದ ನಿ ಸ' ರಿ'।ಸ' ನಿ ।ದ ಪ ।।ಸ' ನಿ ದ ಪ ।ಮ ಗ ।ರಿ ಸ ।।



Sarale Varasegalu - 7 (ಸರಳೇ ವರಸೆಗಳು -೭)

 


Raga : Mayamalavagowla

Tala : Aditala


7) S R G M | P M | D P || S R G M | P D | N S'||

    S N D P | M P | G M || S' N D P | M G | R S ||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   


೭)

ಸ ರಿ ಗ ಮ ।ಪ ಮ ।ದ ಪ ।।ಸ ರಿ ಗ ಮ ।ಪ ದ ।ನಿ ಸ'।।

ಸ ನಿ ದ ಪ ।ಮ ಪ ।ಗ ಮ ।।ಸ' ನಿ ದ ಪ ।ಮ ಗ ।ರಿ ಸ ।।



Sarale Varasegalu - 6 (ಸರಳೇ ವರಸೆಗಳು -೬)

 

Raga : Mayamalavagowla

Tala : Aditala



6) S R G M | P M | G R || S R G M | P D | N S'||

    S' N D P | M P | D N || S' N D P | M G | R S||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   


೬)

ಸ ರಿ ಗ ಮ ।ಪ ಮ ।ಗ ರಿ ।।ಸ ರಿ ಗ ಮ ।ಪ ದ ।ನಿ ಸ '।।

ಸ 'ನಿ ದ ಪ ।ಮ ಪ ।ದ ನಿ ।।ಸ 'ನಿ ದ ಪ ।ಮ ಗ ।ರಿ ಸ ।।



Sarale Varasegalu - 5 (ಸರಳೇ ವರಸೆಗಳು -೫)

 

Raga : Mayamalavagowla

Tala  : Aditala



5) S R G M | P, | S R || S R G M | P D | N S' ||

    S' N D P | M, | S' N || S' N D P | M G | R S ||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   



೫) 

ಸ ರಿ ಗ ಮ। ಪ ,।ಸ ರಿ ।।ಸ ರಿ ಗ ಮ।ಪ ದ ।ನಿ ಸ'।

ಸ'ನಿ ದ ಪ।ಮ ,।ಸ 'ನಿ।।ಸ 'ನಿ ದ ಪ।ಮ ಗ ।ರಿ ಸ।



Saturday, September 3, 2022

Sorutihudu Maneya Maligi (ಸೋರುತಿಹುದು ಮನೆಯ ಮಾಳಿಗಿ )

Shishunala Shariefa Sahebara Geetegalu

Song link: Click Here


Sorutihudu maneya maligi

Ajnanadinda

Sorutihudu maneya maligi


Sorutihudu maneya maligi

Daru gatti malparilla

Kala kattaleyolage nanu

Melakkeri hogalare  ||sorutihudu||


Muruku toleyu huluku janti

Koredu saridu keela sadali

Haraku chappara jerugindi

Melakeri mettalare  ||sorutihudu||


Karaki hullu kasavu hatti

Haridu salu irabi mutti

Jalada bharadi sariye mannu

Olage horage ekavagi  ||sorutihudu||


Kantekele karunadinda

bantu kane hubbi maleyu

Ento shishunaladhisha tanu

Nintu porevanu endu nambide  ||sorutihudu||


ತತ್ವಪದ 


ಸೋರುತಿಹುದು ಮನೆಯ ಮಾಳಿಗಿ 

ಅಜ್ಞಾನದಿಂದ 

ಸೋರುತಿಹುದು ಮನೆಯ ಮಾಳಿಗಿ ।।ಪ ।।


ಸೋರುತಿಹುದು ಮನೆಯ ಮಾಳಿಗಿ 

ದಾರು ಗಟ್ಟಿ ಮಾಳ್ಪರಿಲ್ಲ 

ಕಾಳ ಕತ್ತಲೆಯೊಳಗೆ ನಾನು 

ಮೇಲಕೇರಿ  ಹೋಗಲಾರೆ  ।।೧।।


ಮುರುಕು ತೊಲೆಯು ಹುಳುಕು ಜಂತಿ 

ಕೊರೆದು ಸರಿದು ಕೀಲ ಸಡಲಿ 

ಹರಕು ಚಪ್ಪರ ಜೇರುಗಿಂಡಿ 

ಮೇಲಕೇರಿ ಮೆಟ್ಟಲಾರೆ  ।।೨।।


ಕರಕಿ  ಹುಲ್ಲು ಕಸವು ಹತ್ತಿ 

ಹರಿದು ಸಾಲು ಇರಬಿ  ಮುತ್ತಿ 

ಜಲದ ಭರದಿ ಸರಿಯೆ ಮಣ್ಣು 

ಒಳಗೆ  ಹೊರಗೆ   ಏಕವಾಗಿ  ।।೩।।


ಕಾಂತೆ ಕೇಳೆ ಕರುಣದಿಂದ 

ಬಂತು ಕಾಣೆ ಹುಬ್ಬಿ ಮಳೆಯು 

ಎಂತೊ  ಶಿಶುನಾಳಧೀಶ ತಾನು 

ನಿಂತು ಪೊರೆವನು ಎಂದು ನಂಬಿದೆ  ।।೪।।




 




Friday, September 2, 2022

Bagilanu Teredu Seveyanu Kodu Hariye (ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ )

Bhaktigeete

Kanaka Dasara Padagalu

Song link: Click Here


Bagilanu teredu seveyanu kodu hariye

Koogidaru dwani kelalillave narahariye ||


Parama padadolage vishadharana kalpadali nee

Siri sahita ksheera varidhiyoliralu

Kariraja kastadali aadi moola endu

Kareyalakshana bandu odagideyo narahariye ||1||


Khadu kopadim khalanu khadgavane pididu

Nin odeyanelliha nendu nudiye

Druda bhakutiyali shishuvu bidade ninnanu bhajise

Sadagaradi kambadindodede narahariye ||2||


Yama sutana ranige akshaya vachanavanitte

Samayadali ajamilana porede

Samaya samayavunte bhakta vatsala ninage

Kamalaksha kagi neleyadi keshavane ||3||


ಭಕ್ತಿಗೀತೆ 


ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ 

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ  ।।ಪ ।।


ಪರಮ ಪದದೊಳಗೆ ವಿಷಧರನ ಕಲ್ಪದಲಿ ನೀ 

ಸಿರಿ ಸಹಿತ ಕ್ಷೀರವಾರಿಧಿಯೊಳಿರಲು 

ಕರಿರಾಜ ಕಷ್ಟದಲಿ ಆದಿ ಮೂಲ ಎಂದು 

ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ।।೧।।


ಖಡು ಕೋಪದಿಂ ಖಳನು ಖಡ್ಗವನೆ ಪಿಡಿದು 

ನಿನ್ನೊಡೆಯನ್ನೆಲ್ಲಿಹನೆಂದು ನುಡಿಯೆ 

ದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ 

ಸಡಗರದಿ ಕಂಬದಿಂದೊಡೆದೆ ನರಹರಿಯೇ ।।೨।।


ಯಮ ಸುತನ ರಾಣಿಗೆ ಅಕ್ಷಯ ವಚನವನಿತ್ತೆ 

ಸಮಯದಲಿ ಅಜಮಿಳನ ಪೊರೆದೆ 

ಸಮಯಾ ಸಮಯವುಂಟೆ ಭಕ್ತ ವತ್ಸಲ ನಿನಗೆ 

ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ।।೩।।