Sunday, August 14, 2022

Nayimari Nayimari (ನಾಯಿಮರಿ ನಾಯಿಮರಿ)

 Padya

Song link: Click Here



Nayimari nayimari, tindi beke?

Tindi beku, teertha beku ella beku


Nayimari ninage tindi eke beku?

Tindu gattiyagi maneya kayabeku


Nayimari kalla bandarenu maduve

Lol lol bou endu kugi heluve


Nayimari ninage nanu tindi taruvenu

Nanu ega ninna maneya kayutiruvenu


ಪದ್ಯ 


ನಾಯಿಮರಿ ನಾಯಿಮರಿ ತಿಂಡಿ ಬೇಕೇ ?

ತಿಂಡಿ ಬೇಕು , ತೀರ್ಥ ಬೇಕು ಎಲ್ಲ ಬೇಕು 


ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ?

ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು 


ನಾಯಿಮರಿ ಕಳ್ಳ ಬಂದರೇನು ಮಾಡುವೆ 

ಲೊಳ್ ಲೊಳ್ ಬೌ ಎಂದು ಕೂಗಿ ಹೇಳುವೆ

 

ನಾಯಿಮರಿ ನಿನಗೆ ನಾನು ತಿಂಡಿ ತರುವೆನು 

ನಾನು ಈಗ ನಿನ್ನ ಮನೆಯ ಕಾಯುತಿರುವೆನು !

                             



Saturday, August 13, 2022

Tingala Belakige Bhavada Selakige (ತಿಂಗಳಾ ಬೆಳಕಿಗೆ ಭಾವದಾ ಸೆಳಕಿಗೆ )


Bhavageete

Sahitya: K V Tirumalesh

Song link: Click Here


Tingala belakige, bhavada selakige

Etako.. tumbide novina anisike


Yaru bandaru nanna balige

Yaruu illada velege

Antha nenapu indu heege

Sulivude ee teradali


Yaru nudidaru nanna jothege

Yaruu nudiyada mathanu

Antha matu mathe mathe

Kaduvude ee bharadali ||tingala||


Yava minchu ariyitendu

Yava deepa uriyito

Yentha mathu mareyitendu

Bhava loka marugito


Yava gejje kuniyitendu

Yara hejje daniyito

Yentha kannu soragitendu

Yugave hinde sariyito ||tingala||


ಭಾವಗೀತೆ 


ತಿಂಗಳಾ ಬೆಳಕಿಗೆ ಭಾವದಾ ಸೆಳಕಿಗೆ 

ಏತಕೋ.. ತುಂಬಿದೆ ನೋವಿನ ಅನಿಸಿಕೆ ।।ಪ ।।


ಯಾರು ಬಂದರು ನನ್ನ ಬಳಿಗೆ 

ಯಾರೂ ಇಲ್ಲದ ವೇಳೆಗೆ 

ಅಂಥ ನೆನಪು ಇಂದು ಹೀಗೆ 

ಸುಳಿವುದೇ ಈ ತೆರದಲಿ 


ಯಾರು ನುಡಿದರು ನನ್ನ ಜೊತೆಗೆ 

ಯಾರೂ ನುಡಿಯದ ಮಾತನು 

ಅಂಥ ಮಾತು ಮತ್ತೆ ಮತ್ತೆ 

ಕಾಡುವುದೇ ಈ ಭರದಲಿ ।।ತಿಂಗಳಾ ।।


ಯಾವ ಮಿಂಚು ಅರಿಯಿತೆಂದು 

ಯಾವ ದೀಪ ಉರಿಯಿತೊ 

ಎಂಥ ಮಾತು ಮರೆಯಿತೆಂದು 

ಭಾವ ಲೋಕ ಮರುಗಿತೊ 


ಯಾವ ಗೆಜ್ಜೆ ಕುಣಿಯಿತೆಂದು 

ಯಾರ ಹೆಜ್ಜೆ ದಣಿಯಿತೊ 

ಎಂಥ ಕಣ್ಣು ಸೊರಗಿತೆಂದು 

ಯುಗವೇ ಹಿಂದೆ ಸರಿಯಿತೊ ।।ತಿಂಗಳಾ ।।



Friday, August 12, 2022

Sarale Varasegalu- 3(ಸರಳೇ ವರಸೆಗಳು -೩)

 

Raga : Mayamalavagowla

Tala  : Aditala



3)  S R G M | S R | S R || S R G M | P D | N S' ||

      S' N D P | S' N | S' N || S' N D P | M G | R S ||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   

೩)

ಸ ರಿ ಗ ಮ । ಸ ರಿ । ಸ ರಿ ।। ಸ ರಿ ಗ ಮ  । ಪ ದ । ನಿ ಸ' ।।

ಸ ನಿ ದ ಪ । ಸ 'ನಿ ।ಸ 'ನಿ ।। ಸ 'ನಿ ದ ಪ । ಮ ಗ । ರಿ ಸ ।।



Thursday, August 11, 2022

Na Stotrava Gaive (ನಾ ಸ್ತೋತ್ರವ ಗೈವೆ)

 

Bhaktigeete


Na stotrava gaive, sri sharadambeyanu

Dasanu dasaranu poreyendu beduvenu ||na||


Karadalli veeneyanu nudisutta dwani madi

Arivemba amrutavanu needu nee saraswatiye ||na||


Sarasijakshana ramani saraswatiye ninagindu

Shirabagi beduvenu needu nee sanmatiya ||na||


ಭಕ್ತಿಗೀತೆ 


ನಾ ಸ್ತೋತ್ರವ ಗೈವೆ , ಶ್ರೀ ಶಾರದಾಂಬೆಯನು 

ದಾಸನು ದಾಸರನು ಪೊರೆಯೆಂದು ಬೇಡುವೆನು ।।ನಾ ।।


ಕರದಲ್ಲಿ ವೀಣೆಯನು ನುಡಿಸುತ್ತ ಧ್ವನಿ ಮಾಡಿ 

ಅರಿವೆಂಬ ಅಮೃತವನು ನೀಡು ನೀ ಸರಸ್ವತಿಯೆ  ।।೧।।


ಸರಸಿಜಾಕ್ಷನ ರಮಣಿ ಸರಸ್ವತಿಯೆ ನಿನಗಿಂದು 

ಶಿರಬಾಗಿ ಬೇಡುವೆನು ನೀಡು ನೀ ಸನ್ಮತಿಯ ।।೨।।



Wednesday, August 10, 2022

Sarale Varasegalu -2 (ಸರಳೇ ವರಸೆಗಳು -೨)


Raga :Mayamalavagowla

Tala   : Aditala




2) S R G M | S R | G M || S R G M | P D | N S'||

     S' N D P | S N | D P || S' N D P | M G | R S||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   


೨) ಸ ರಿ ಗ ಮ । ಸ ರಿ । ಗ ಮ । ಸ ರಿ ಗ ಮ ।ಪ ದ ನಿ ಸ'।।

      ಸ'ನಿ ದ ಪ ।ಸ ನಿ ।ದ ಪ । ಸ' ನಿ ದ ಪ । ಮ ಗ ರಿ ಸ ।।



Monday, August 8, 2022

Sarale Varasegalu -1 (ಸರಳೇ ವರಸೆಗಳು -೧)

 

Raga: Mayamalavagowla

Tala: Aditala

4+2+2 = 8 Aksharagalu


1)  S R G M | P D | N S' ||

      S' N D P | M G | R S || 


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ 

೪+೨+೨ = ೮ ಅಕ್ಷರಗಳು 


೧) ಸ ರಿ ಗ ಮ  । ಪ ದ । ನಿ ಸ' ।

     ಸ' ನಿ ದ ಪ  । ಮ ಗ  । ರಿ  ಸ ।





                                 

Nagara Haave Haavolu Hoove (ನಾಗರ ಹಾವೆ !ಹಾವೊಳು ಹೂವೆ !)

Padya

Sahitya: Panje Mangesharayaru

Song link: Click Here


Nagara haave! haavolu hoove!

Bagila biladali ninnaya ttave?

Kaigala mugive, halanneeve!

Ba ba ba ba

Ba ba ba ba


Haladiya hedeyanu biccho bega!

Holahina hondale tugo naga!

Kolannuduve lalisu raga,

Ne ne ne ne

Ne ne ne ne


Ele naganna!helelo ninna

Taleyali rannaviha nijavanna,

Balu badavage kopparigeya chinna

Tha tha tha tha

Tha tha tha tha


bari mai tannage, manadali bisi hage

Eradele nalage iddaru summage

Eraguve ninage, eegale horage

Po po po po

Po po po po


ಪದ್ಯ 


ನಾಗರ ಹಾವೆ !ಹಾವೊಳು ಹೂವೆ !

ಬಾಗಿಲ ಬಿಲದಲಿ ನಿನ್ನಯ ಠಾವೆ ?

ಕೈಗಳ ಮುಗಿವೆ ,ಹಲನ್ನೀವೆ !

ಬಾ ಬಾ ಬಾ ಬಾ 

ಬಾ ಬಾ ಬಾ ಬಾ 


ಹಳದಿಯ ಹೆಡೆಯನು ಬಿಚ್ಚೋ ಬೇಗಾ !

ಹೊಳಹಿನ ಹೊಂದಲೆ ತೂಗೋ ನಾಗಾ !

ಕೊಳಲನ್ನೂದುವೆ ಲಾಲಿಸು ರಾಗಾ ,

ನೀ ನೀ ನೀ ನೀ 

ನೀ ನೀ ನೀ ನೀ 


ಎಲೆ ನಾಗಣ್ಣಾ !ಹೇಳೆಲೊ ನಿನ್ನಾ 

ತಲೆಯಲಿ ರನ್ನವಿಹ ನಿಜವನ್ನಾ ,

ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ 

ತಾ ತಾ ತಾ ತಾ 

ತಾ ತಾ ತಾ ತಾ


ಬರಿ ಮೈ ತಣ್ಣಗೆ ,ಮನದಲಿ ಬಿಸಿ ಹಗೆ 

ಎರಡೆಳೆ ನಾಲಗೆ ಇದ್ದರು ಸುಮ್ಮಗೆ 

ಎರಗುವೆ ನಿನಗೆ ,ಈಗಲೆ ಹೊರಗೆ 

ಪೋ ಪೋ ಪೋ ಪೋ 

ಪೋ ಪೋ ಪೋ ಪೋ